Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಪ್ಲೈಓವರ್‌ ಕಾಮಗಾರಿ
    • ಕುಂದಾಪುಕ್ಕೆ ಇಂದು ತಜ್ಞರ ಸಮಿತಿ ಭೇಟಿ
    • ಕುಂದಾಪುಕ್ಕೆ ಇಂದು ತಜ್ಞರ ಸಮಿತಿ ಭೇಟಿ

      • Udayavani | May 10, 2012

        ಕುಂದಾಪುರ : ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಗೆ ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್‌ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಎಂಬ್ಯಾಕ್‌ವೆಂಟ್‌ ರಚನೆಯ ಬದಲಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಮೇ 11ರಂದು ಹೊಸದಿಲ್ಲಿಯಲ್ಲಿ ನಡೆದ ಸಭೆಗೆ ಪೂರಕವಾಗಿ ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿ ಎ.ಎ. ಮಾಥುರ್‌ ಅವರ ನೇತೃತ್ವದ ಅಧಿಕಾರಿಗಳ ತಂಡ ಆಗಮಿಸಲಿದೆ.

        ಬೆಳಗ್ಗೆ ಕುಂದಾಪುರದಿಂದ ತಂಡದ ಪರಿಶೀಲನಾ ಕಾರ್ಯ ಪ್ರಾರಂಭವಾಗಲಿದೆ. ಅಧಿಕಾರಿಗಳ ಭೇಟಿ ಹಾಗೂ ಪರಿಶೀಲನೆಯ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರಾದ ಆಸ್ಕರ್‌ ಫೆರ್ನಾಂಡಿಸ್‌ ಹಾಗೂ ಸಂಸದ ಕೆ. ಜಯಪ್ರಕಾಶ ಹೆಗ್ಡೆ ಹಾಜರಿದ್ದು, ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸುವ ಜತೆಗೆ ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸೂಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.¬

        ದಿಲ್ಲಿಯಲ್ಲಿ ಸಭೆ

        ರಾ.ಹೆ 66ರ ಚತುಷ್ಪಥ‌ ಕಾಮಗಾರಿ ಯೋಜನೆಯಲ್ಲಿ ಕುಂದಾಪುರ‌ ನಗರದ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ನಿರ್ಮಾಣ ಮಾಡಲು ಉದ್ದೇಶಿತ ಎಂಬ್ಯಾಕ್‌ವೆಂಟ್‌ ರಚನೆಯ ಬದಲಿಗೆ ಮೇಲ್ಸೇತುವೆ ಹಾಗೂ ಉಡುಪಿಯ ಅಂಬಲಪಾಡಿ ಜಂಕ್ಷನ್‌ನಿಂದ ಕರಾವಳಿ ಜಂಕ್ಷನ್‌ ವರೆಗಿನ ನಡುವೆ ವಿಸ್ತರಣೆ‌ ಮಿತಿಯನ್ನು ಕಡಿಮೆಗೊಳಿಸುವಂತೆ ಸ್ಥಳೀಯರು ನಡೆಸುತ್ತಿರುವ ಹೋರಾಟಗಳ ಕುರಿತು ಇತ್ತೀಚೆಗೆ ರಾಜ್ಯಸಭಾ ಸದಸ್ಯ ಆಸ್ಕರ್‌ ಫೆರ್ನಾಂಡಿಸ್‌ ಆವರ ಹೊಸದಿಲ್ಲಿಯ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿತ್ತು.

        ಸಭೆಯಲ್ಲಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚೆ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫೆರ್ನಾಂಡಿಸ್‌ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರು ಉಡುಪಿ, ಕುಂದಾಪುರ, ಪಡುಬಿದ್ರಿ, ಬ್ರಹ್ಮಾವರ, ಮಂಗಳೂರಿನ ನಂತೂರು ಸೇರಿದಂತೆ ರಾ.ಹೆ 66ರಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಹಾಗೂ ಸ್ಥಳೀಯರ ಬೇಡಿಕೆಗಳ ಕುರಿತು ವಿವರವಾಗಿ ವಿವರಿಸಿದರು.

        ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಎಂಬ್ಯಾಕ್‌ವೆುಂಟ್‌ ರಚನೆಯ ಮಾಡುವುದರಿಂದ ಕರಾವಳಿ ಭಾಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರವೊಂದನ್ನು ಇಬ್ಭಾಗ ಮಾಡಿದಂತಾಗುತ್ತದೆ ಎನ್ನುವ ಸ್ಥಳೀಯರ ಆತಂಕಗಳನ್ನು ಅಧಿಧಿಕಾರಿಗಳ ಗಮನಕ್ಕೆ ತರಲಾಯಿತು. ಉಡುಪಿ ಜಿಲ್ಲಾ ಕೇಂದ್ರವಾಗಿರುವುದರಿಂದ ಹಾಗೂ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಎರಡು ಭಾಗಗಳಲ್ಲಿಯೂ ನಗರ ಪ್ರದೇಶಗಳು ಬೆಳೆದಿರುವುದರಿಂದ ಜಿಲ್ಲೆಯ ಉಳಿದ ಭಾಗಗಳಲ್ಲಿ ರಸ್ತೆಯ ವಿಸ್ತರಣೆಯನ್ನು ಮಿತಿಗೊಳಿಸಿರುವಂತೆ ಅಂಬಲಪಾಡಿ ಜಂಕ್ಷನಿಂದ ಕರಾವಳಿ ಜಂಕ್ಷನ್‌ ವರೆಗಿನ ರಸ್ತೆಯ ವಿಸ್ತರಣೆಯನ್ನು ಮಿತಿಗೊಳಿಸಬೇಕು ಎನ್ನುವ ಸ್ಥಳೀಯರ ಬೇಡಿಕೆಗಳ ಬಗ್ಗೆ ಗಮನ ಸೆಳೆಯಲಾಯಿತು.

        ಸಂಸದರು ಗಮನ ಸೆಳೆದ ಸ್ಥಳೀಯರ ಬೇಡಿಕೆಗಳ ಕುರಿತು ಹಾಗೂ ಹೆದ್ದಾರಿ ಕಾಮಗಾರಿಯ ಪ್ರಗತಿಯ ಕುರಿತು ವಿವರವಾದ ಮಾಹಿತಿಗಳನ್ನು ನೀಡಿದ ಪ್ರಾಧಿಧಿಕಾರದ ಅಧಿಧಿಕಾರಿಗಳು, ಕಾನೂನು ಹಾಗೂ ಪ್ರಾಧಿಕಾರದ ನಿಯಮದ ಇತಿ ಮಿತಿಯೊಳಗೆ ಬೇಡಿಕೆ ಹಾಗೂ ಸಮಸ್ಯೆಯನ್ನು ಬಗೆ ಹರಿಸುವ ಕುರಿತು ಭರವಸೆ ನೀಡಿದರು.

        ಅಧಿಕಾರಿಗಳ ಪ್ರತಿಸ್ಪಂದನಕ್ಕೆ ಉತ್ತರಿಸಿದ ಆಸ್ಕರ್‌ ಫೆರ್ನಾಂಡಿಸ್‌ ಹಾಗೂ ಕೆ. ಜಯಪ್ರಕಾಶ ಹೆಗ್ಡೆಯವರು ರಾ.ಹೆ. 66 ಚತುಷ್ಪಧಿಥ ಕಾಮಗಾರಿಯ ಹಂತದಲ್ಲಿ ತಲೆದೋರಿರುವ ಸಮಸ್ಯೆ ಹಾಗೂ ಸ್ಥಳೀಯರ ಬೇಡಿಕೆಗಳನ್ನು ಈಗಾಗಲೆ ಕೇಂದ್ರ ಭೂ ಸಾರಿಗೆ ಸಚಿವರ ಗಮನಕ್ಕೂ ತರಲಾಗಿದೆ. ಸಮಸ್ಯೆ ಹಾಗೂ ಬೇಡಿಕೆಗಳ ಅಗತ್ಯತೆಯ ಕುರಿತು ಮನವರಿಕೆಯಾಗಬೇಕಾದರೆ ಸಮಸ್ಯೆ ಇರುವ ಕಡೆಗೆ ತೆರಳಿ ಪರಿಶೀಲನೆ ನಡೆಸಬೇಕು. ಇಲಾಖಾ ಅಧಿಕಾರಿಗಳು ಕೂಡಲೆ ಈ ಕುರಿತು ಗಮನ ಹರಿಸುವಂತೆ ತಾಕೀತು ಮಾಡಿದರಲ್ಲದೆ, ಪರಿಶೀಲನೆಯ ಸಂದರ್ಭದಲ್ಲಿ ತಾವುಗಳು ಖುದ್ದು ಸ್ಥಳದಲ್ಲಿ ಇರುವುದಾಗಿ ತಿಳಿಸಿದ್ದರು.

        ಸಭೆಯಲ್ಲಿ ರಾಷ್ಟ್ರೀಯ ವೃತ್ತಿ ಶಿಕ್ಷಣ ಮಂಡಳಿಯ ತಜ್ಞ ರಾಜೇಶ್‌ ಕೆ.ಸಿ, ಹಿರಿಯ ಕಾಂಗ್ರೆಸ್‌ ಮುಖಂಡ ತಿಪ್ಪಣ್ಣ, ಹೆದ್ದಾರಿ ಪ್ರಾಧಿಕಾರದ ಬಿ.ಎನ್‌ ಸಿಂಗ್‌, ಎ.ಎ. ಮಾಥುರ್‌ ಮುಂತಾದವರಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus