ರಾಂಚಿ : ಬುಧವಾರ ರಾಂಚಿಯಲ್ಲಿ ಸಂಭವಿಸಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಾರ್ಖಂಡ್ ಮುಖ್ಯಮಂತ್ರಿ ಅರ್ಜುನ್ ಮುಂಡ ಹಾಗೂ ಅವರ ಪತ್ನಿಯ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಪೊಲೋ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.ಅಪೋಲೋ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪಿ.ಡಿ. ಸಿನ್ಹಾ ಅವರು ಮುಖ್ಯಮಂತ್ರಿಗಳ ಆರೋಗ್ಯದ ಬಗೆಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಮುಖ್ಯಮಂತ್ರಿಯಾದಿಯಾಗಿ ಗಾಯಾಳುಗಳೆಲ್ಲರನ್ನು ಸಿಟಿ ಸ್ಕ್ಯಾನ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಯಾವುದೇ ಅಪಾಯವಿಲ್ಲ ಎಂದರು.ಅಪಘಾತದ ವೇಳೆ ಗಾಯಗೊಂಡಿದ್ದ ಅರ್ಜುನ್ ಮುಂಡ ಅವರ ಪತ್ನಿ ಮೀರಾ, ಹೆಲಿಕಾಪ್ಟರ್‌ನ ಪೈಲೆಟ್‌ಗಳಾದ ಜೆ.ಪಿ.ಎಸ್. ಕೌಶಿಕ್ ಹಾಗೂ ವಿಪುಲ್ ಕುಮಾರ್ ಸಿಂಗ್ ಮತ್ತು ಸುರಕ್ಷಾ ಸಿಬಂದಿ ಮನೋಜ್ ಸಿಂಗ್ ಅವರ ಆರೋಗ್ಯವೂ ಸುಧಾರಿಸುತ್ತಿದೆ ಎಂದವರು ತಿಳಿಸಿದರು.