Wednesday, May 22, 2013
Last Updated: 6:07:02 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಐಪಿಎಲ್‌ಗೆ ಧರ್ಮಶಾಲಾ ರೆಡಿ
    • ಹಿಮಾಚಲ ಪ್ರದೇಶದ ಧರ್ಮಶಾಲಾ ಐಪಿಎಲ್‌ ಆತಿಥ್ಯಕ್ಕೆ ಅಣಿಯಾಗಿದೆ.

      • Udayavani | May 12, 2012

        ಧರ್ಮಶಾಲಾ: ಹಿಮಾಚಲ ಪ್ರದೇಶದ ಧರ್ಮಶಾಲಾ ಐಪಿಎಲ್‌ ಆತಿಥ್ಯಕ್ಕೆ ಅಣಿಯಾಗಿದೆ. 5ನೇ ಐಪಿಎಲ್‌ನ 2 ಪಂದ್ಯಗಳು ಇಲ್ಲಿ ಸಾಗಲಿವೆ.

        ಮೇ 17ರಂದು ಪಂಜಾಬ್‌-ಚೆನ್ನೈಹಾಗೂ ಮೇ 19ರಂದು ಪಂಜಾಬ್‌-ಡೆಲ್ಲಿ ನಡುವಿನ ಪಂದ್ಯಗಳನ್ನು ಇಲ್ಲಿನ ಎಚ್‌.ಪಿ.ಸಿ.ಎ. ಸ್ಟೇಡಿಯಂ ಆಯೋಜಿಸಲಿದೆ.

        ಆದರೆ ಧರ್ಮಶಾಲಾ ಸ್ಟೇಡಿಯಂಗೆ ಇದಕ್ಕಿಂತ ಹೆಚ್ಚಿನ ನಿರೀಕ್ಷೆ ಇರುವುದು ಮುಂದಿನ ಜನವರಿಯಲ್ಲಿ ಸಾಗಲಿರುವ ಭಾರತ-ಇಂಗ್ಲಂಡ್‌ ನಡುವಿನ ಏಕದಿನ ಪಂದ್ಯದ ಮೇಲೆ. ಈ ಅಂತಾರಾಷ್ಟ್ರೀಯ ಮುಖಾಮುಖೀಗೆ ಧರ್ಮಶಾಲಾ ಅರ್ಹ ಎಂಬುದಾಗಿ ಇತ್ತೀಚೆಗಷ್ಟೇ ಐಸಿಸಿ ಹಸಿರು ನಿಶಾನೆ ನೀಡಿತ್ತು. ಭಾರತ-ಇಂಗ್ಲಂಡ್‌ ನಡುವಿನ ಪಂದ್ಯ ಯಶಸ್ವಿಯಾಗಿ ಸಾಗಬೇಕಾದರೆ ಐಪಿಎಲ್‌ನ ಎರಡು ಪಂದ್ಯಗಳ ಯಶಸ್ಸು ನಿರ್ಣಾಯಕವೆನಿಸಲಿದೆ.

        'ನಾವೀಗ ಐಪಿಎಲ್‌ ಆತಿಥ್ಯಕ್ಕೆ ಸಿದ್ಧರಾಗಿದ್ದೇವೆ. ಆದರೆ ನಮ್ಮ ಮುಖ್ಯ ಗುರಿ ಭಾರತ-ಇಂಗ್ಲಂಡ್‌ ನಡುವಿನ ಏಕದಿನ ಪಂದ್ಯ ಯಶಸ್ವಿಯಾಗುವುದು. ಇದರತ್ತ ಹೆಚ್ಚಿನ ಗಮನ ನೀಡುತ್ತಿದ್ದೇವೆ' ಎಂದು ಎಚ್‌.ಪಿ.ಸಿ.ಎ. ಅಧ್ಯಕ್ಷ ಅನುರಾಗ್‌ ಠಾಕುರ್‌ ಹೇಳಿದ್ದಾರೆ.

        ಧರ್ಮಶಾಲಾ ಕಳೆದೆರಡು ವರ್ಷಗಳಲ್ಲಿ ಸಾಕಷ್ಟು ಐಪಿಎಲ್‌ ಪಂದ್ಯಗಳನ್ನು ಆಯೋಜಿಸಿದೆ. ಇದು ಪಂಜಾಬ್‌ ಫ್ರಾಂಚೈಸಿಯ ಎರಡನೇ ಮನೆ. ಪಂಜಾಬ್‌-ಡೆಲ್ಲಿ ನಡುವಿನ ಪಂದ್ಯದ ಟಿಕೆಟ್‌ಗಳು ಪೂರ್ತಿ ಮಾರಾಟಗೊಂಡಿವೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus