'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.
ನೆರಳುನನ್ನದೇನೆರಳುಕಿರಿದಾಗುತ್ತಿದ್ದಂತೆಏಕಾಂಗಿಯಾದೆನೋಎಂಬ ಭಯ;ನನ್ನದೇನೆರಳುಬೆಳೆಯುತ್ತಿದ್ದಂತೆನನ್ನನ್ನೇಆವರಿಸಿ ಬಿಡುವುದೇನೋಎಂಬ ಭಯ..
ಕಾದೆನಿನಗಾಗಿಕಾದೆಕಾದೆನಿಜಕ್ಕಾದರೆಕಾವಲಿಯಲೇಕಾದೆ!
ವಾಸ್ತವಬರಬೇಕಾದವರುಬರಲಿಲ್ಲಬಾಗಿಲು ತೆರೆದಿತ್ತುಬಂದವರುಬರಬೇಕಾದವರಾಗಿರಲಿಲ್ಲಬಾಗಿಲು ಮುಚ್ಚಿತ್ತು.
ಕವನಹೂವು ಹಾಸಿಗೆಚಂದ್ರಚಂದನಅಡಿಗಡಿಗೆನೆನಪುಅಡಿಗರ ಕವನಬಾನಲ್ಲೆ ಬೇಗಹಾಡೋಣ ಈಗಬಾಹುಬಂಧನಚುಂಬನ!
ಸೋಲುನೆನಪಿನಲ್ಲೇಉಳಿಯಬೇಕಿತ್ತು,ಉಳಿಯಲಿಲ್ಲ;ಮರೆಯಬೇಕಿತ್ತುಮರೆಯಲಾಗಲೇ ಇಲ್ಲ.
ಕಟ್ಟುಕವನಕಟ್ಟಲು ಹೊರಟೆ,ಕವನವೇಕಟ್ಟಿದೆ !
ಒಂದುಎಲ್ಲರೊಳಗೆಒಂದಾಗಿದ್ದೇನೆನಾನು;ಎಲ್ಲರೊಳಗಿದ್ದೂಒಂದೇಆಗಿದ್ದೇನೆ..
ಅನಂತಪ್ರಶ್ನೆಗೆದೊರೆಯಿತು ಉತ್ತರಮರುಕ್ಷಣ ಬಂತುಇನ್ನೊಂದು ಪ್ರಶ್ನೆ!
ಪ್ರಶ್ನೆಹೇಗೆ ಬಂದಿರಿ ?ಅವರೆಂದರು-ನಿಮ್ಮ ಹಾಗೆ.ಏಕೆ ಬಂದಿರಿ ?ಅವರೆಂದರುನಿಮ್ಮ ಹಾಗೆ.ಎಲ್ಲಿಂದ ಬಂದಿರಿ ?ಅವರೆಂದರು-ನೀವೆಲ್ಲಿಂದ ಬಂದಿರಿ ?
ಸತ್ಯಅಳುತಡೆಯಲಾರದೆನಕ್ಕೆ;ನಗುತಡೆಯಲಾರದೆಅಳುತ್ತಿದ್ದೇನೆ..
ಚಿತ್ರಗಳು :ಅಂತರ್ಜಾಲ
'Neralu' is simply superb !!!
Simple words giving complex and different meanings......Beauty of words and thought ..