Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಾತೃ ದಿನದ ನೆನಪಿಗೆ ಕ್ಲೌಡ್‌ನೈನ್‌ ಕಾರ್ನಿವಲ್‌ ಕಾರ್ಯಕ್ರಮ
    • ಮಾತೃ ದಿನವನ್ನು ವಿಶೇಷಗಾಗಿ ಕ್ಲೌಡ್‌ನೈನ್‌ ಕಾರ್ನಿವಲ್‌'' ಕಾರ್ಯಕ್ರಮ ಏರ್ಪಡಿಲಾಯಿತು.

      • Udayavani | May 13, 2012

        ಬೆಂಗಳೂರು: ಗರ್ಭಿಣಿಯರು ಮತ್ತು ಯುವ ಪೋಷಕರಿಗಾಗಿ ಕ್ಲೌಡ್‌ನೈನ್‌ ಹೆರಿಗೆ ಮತ್ತು ನವಜಾತ ಶಿಶು ಚಿಕಿತ್ಸಾ ಸಂಸ್ಥೆಯು ವಿವಿಧ ಮನರಂಜನೆ, ಫ್ಯಾಷನ್‌ ಪ್ರದರ್ಶನ ಮತ್ತು ಸ್ಪರ್ಧೆಗಳನ್ನು ಒಳಗೊಂಡ 'ಕೌÉಡ್‌ನೈನ್‌ ಕಾರ್ನಿವಲ್‌' ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಾತೃ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಿತು.

        ಇದೇ ಸಂದರ್ಭದಲ್ಲಿ ತಾಯ್ತನದ ನಿರೀಕ್ಷೆಯಲ್ಲಿರುವ 12 ಮಂದಿ ಗರ್ಭಿಣಿಯರ ಚಿತ್ರಗಳನ್ನು ಒಳಗೊಂಡ ವಿಶೇಷ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು. ಈ ಕ್ಯಾಲೆಂಡರ್‌ ರೂಪಿಸಲೆಂದೇ ಜನವರಿಯಲ್ಲಿ ರೂಪದರ್ಶಿಯರನ್ನು ಆಯ್ಕೆ ಮಾಡಿ ಫೋಟೋ ಸೆಷನ್‌ ನಡೆಸಲಾಗಿತ್ತು.

        ಅಲ್ಲದೇ, ತಾಯಿಯಾಗುವ ಹೊಂಗನಸು ಹೊತ್ತ ಗರ್ಭಿಣಿಯರಿಗಾಗಿ ಫ್ಯಾಷನ್‌ ಪ್ರದರ್ಶನ ಏರ್ಪಡಿಸಲಾಗಿತ್ತು. 20ಕ್ಕೂ ಹೆಚ್ಚು ಗರ್ಭಿಣಿಯರು ಫ್ಯಾಷನ್‌ ಪ್ರದರ್ಶನದಲ್ಲಿ ಪಾಲ್ಗೊಂಡು, ಗರ್ಭಿಣಿಯರು ಧರಿಸಬಹುದಾದ ಮತ್ತು ಮಾಜಿ ಮಿಸ್‌ ಇಂಡಿಯಾ-2004 ಶೃತಕೀರ್ತಿ ವಿನ್ಯಾಸಗೊಳಿಸಿದ ಉಡುಗೆಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೌÉಡ್‌ನೈನ್‌ ವ್ಯವಸ್ಥಾಪಕ ನಿರ್ದೇಶಕ ಡಾ| ಕಿಶೋರ್‌ ಕುಮಾರ್‌ ಮಾತನಾಡಿ, ಈ ಕಾರ್ಯಕ್ರಮ 'ನಿಮ್ಮ ಕನಸುಗಳ ಹೆರಿಗೆ' ಎಂಬ ಗುರಿಯೊಂದಿಗೆ ರೂಪಿತವಾಗಿದೆ ಎಂದು ಹೇಳಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus