Wednesday, May 22, 2013
Last Updated: 8:20:40 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹಲ್ಲುಗಳು ಹಾಗೂ ವಿಜ್ಞಾನ
    • ಹಲ್ಲುಗಳು ಹಾಗೂ ವಿಜ್ಞಾನ

      • ಡಾ| ಝಾರ್ಮಿನ್‌ ಆಸಿಯಾ , ದಂತ ತಜ್ಞರು, ಕೆ.ಎಂ.ಸಿ ಆಸ್ಪತ್ರೆ | May 14, 2012

        ಹಲ್ಲಿನ  ಬಗ್ಗೆ ನಿಮಗೆ ತಿಳಿದಿದೆಯೇ?

        ಕ್ರೀಡೆಗಳಲ್ಲಿ ಉಪಯೋಗಿಸುವ ತಂಪು ಪಾನೀಯಗಳು, ಆಸಿಡಿಟಿ ಹಾಗೂ ಹಲ್ಲುಗಳ ಮೇಲೆ ಅವುಗಳ ಪ್ರಭಾವ:

        ಹೆಚ್ಚಿನ ತಂಪು ಪಾನೀಯಗಳು ಅಮ್ಲಿàಯವಾಗಿದ್ದು  ( pH 3-4), ಇವುಗಳನ್ನು  ಅಧಿಕ ಪ್ರಮಾಣದಲ್ಲಿ ಉಪಯೋಗಿಸಿದಲ್ಲಿ , ಹಲ್ಲುಗಳು  ಸವೆಯುವ ಹಾಗೂ ಖನಿಜರಹಿತ  ವಾಗುವ ಸಾಧ್ಯತೆಗಳಿವೆ. ಒಂದು ಅಧ್ಯಯನದ ಪ್ರಕಾರ, 11ರಿಂದ 14 ವಯಸ್ಸಿನ  ನಡುವಿನ 57% ಮಕ್ಕಳಿಗೆ ಹಲ್ಲುಗಳು ಸವೆಯುವ ಸಮಸ್ಯೆ ಇದೆ.

        ಮಕ್ಕಳಲ್ಲಿ ಹೆಚ್ಚುತ್ತಿರುವ ದಂತಕುಳಿಗಳ ಪ್ರಮಾಣ; ಇದಕ್ಕೆ ಕಾರಣವಾಗುತ್ತಿರುವ ಅಂಶಗಳು:

        1, ಪ್ರಾಥಮಿಕ ಆರೈಕೆದಾರರಲ್ಲಿರುವ ಹಲ್ಲಿನ ಹುಳುಕು.

        2. ಸಾಮಾಜಿಕ-ಆರ್ಥಿಕ ಮಟ್ಟ .

        3. ಹಲ್ಲುಗಳ ಐಕ್ಯು.

        4. ವೈದ್ಯಕೀಯ ಹಿನ್ನಲೆ.

        5. ಆಹಾರ ಕ್ರಮಗಳು.

        ಪರೋಕ್ಷ ಧೂಮಪಾನ ಹಾಗೂ
        ಹುಳುಕು ಹಲ್ಲು


        ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುತ್ತಿರುವ ಮಕ್ಕಳು ಹಾಗೂ ಒಡ್ಡಿಕೊಳ್ಳದ ಮಕ್ಕಳ ನಡುವಿನ ಹೋಲಿಕೆಯ ಅಧ್ಯಯನದ  ಪರಿಶೀಲನೆಗಳ ಪ್ರಕಾರ-

        1. ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವ ಮಕ್ಕಳಲ್ಲಿ  ದಂತಕುಳಿಗಳ ಸಮಸ್ಯೆ ಹೆಚ್ಚು .

        2.ಪರೋಕ್ಷ ಧೂಮಪಾನಕ್ಕೆ  ಒಡ್ಡಿಕೊಳ್ಳುವ ಮಕ್ಕಳಲ್ಲಿ  ಹಲ್ಲು ಸವೆಯುವ, ಹಲ್ಲು ಕಿತ್ತುಬರುವ ಹಾಗೂ  ಫಿಲ್ಲಿಂಗ್‌ ಪ್ರಮಾಣವು ಎರಡು ಪಟ್ಟು ಹೆಚ್ಚು.

        3, ಈ  ಮಕ್ಕಳಲ್ಲಿ ಮ್ಯೂಟಾನ್‌ ಹಾಗೂ ಲ್ಯಾಕ್ಟೋಬ್ಯಾಸಿಲ್ಲಿಗಳ ಸಂಖ್ಯೆಯೂ ಹೆಚ್ಚು.

        4. ಪರೋಕ್ಷ ಧೂಮಪಾನಕ್ಕೆ ಒಡ್ಡಿಕೊಳ್ಳುವ ಮಕ್ಕಳ ಲಾಲಾರಸದ ಪಿ.ಎಚ್‌ ಪ್ರಮಾಣವು ಕಡಿಮೆ ಇದ್ದು , ಅದರ ಹರಿವಿನ ಪ್ರಮಾಣ ಹಾಗೂ ಅದರ ಪ್ರತಿರೋಧಕ ಸಾಮರ್ಥಯವು ಸಹ ಕಡಿಮೆ ಇರುತ್ತದೆ.

        ಅಧಿಕ ಫ್ಲೋರೈಡ್‌ಯುಕ್ತ ಟೂತ್‌ಪೇಸ್ಟ್‌ ಹಾಗೂ ದಂತಕುಳಿ ನಿವಾರಣೆ :

        ಅಧಿಕ  ಫ್ಲೋರೈಡ್‌ ಯುಕ್ತ ಟೂತ್‌ಪೇಸ್ಟ್‌ (5000 ಟಟಞ) ಉಪಯೋಗಿಸುವುದರಿಂದ, ಸುಮಾರು 76% ದಷ್ಟು ಹಲ್ಲಿನ ಸವೆತ ಇರುವ ಹಾಗೂ ರೋಗ ಲಕ್ಷಣ ಇರುವ ಹಲ್ಲುಗಳ  ಬೇರನ್ನು ಮತ್ತೆ ಗಟ್ಟಿಗೊಳಿಸಬಹುದು. ಇದಕ್ಕೆ  ವ್ಯತಿರಿಕ್ತವಾಗಿ, ಕಡಿಮೆ  ಫ್ಲೋರೈಡ್‌ ಯುಕ್ತ ಟೂತ್‌ ಪೇಸ್ಟ್‌  (1100 ಟಟಞ) ಉಪಯೋಗಿಸಿದರೆ, ಕೇವಲ 35 %ನಷ್ಟು ರೋಗ ಲಕ್ಷಣಗಳು ಮಾತ್ರವೇ ಮರೆಯಾಗಿ, ಹಲ್ಲುಗಳು ದೃಢವಾಗಬಹುದು.

        ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್‌ ಹಾಗೂ ಹಲ್ಲಿನ ಆಳ ಕುಳಿಯನ್ನು   ತುಂಬುವುದು

        ಹಲ್ಲಿನ ಕೆಲವು ಕುಳಿಗಳು ಬಹಳ  ಆಳವಿದ್ದು, ಹಲ್ಲಿನ ಬುಡದ ನರವನ್ನು ತಲುಪಿರುತ್ತವೆ. ಈ ಸಂದರ್ಭಗಳಲ್ಲಿ ರೂಟ್‌ ಕೆನಾಲ್‌ ಚಿಕಿತ್ಸೆ  ಆವಶ್ಯಕ. ಆಗ ದಂತವೈದ್ಯರು ಹಲ್ಲಿನ ಸ್ವಲ್ಪ ಭಾಗವನ್ನು  ಉಳಿಸಿಕೊಂಡು, ಅದರ ತುದಿಗೆ ಸಣ್ಣದಾದ ಕ್ಯಾಲ್ಸಿಯಂ ಹೈಡ್ರಾಕ್ಸೆ„ಡ್‌ ಟೋಪಿಯನ್ನು ಅಳಪಡಿಸಿ,  ಮುಚ್ಚುವಂತಹ ಸುರಕ್ಷಾ ವಿಧಾನದ ಮೂಲಕ ಹಲ್ಲನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಸಾಧಾರಣವಾಗಿ ಇದು ಹಲ್ಲನ್ನು  ಉಳಿಸಿಕೊಳ್ಳುವ ಯಶಸ್ವಿ ವಿಧಾನವೆನಿಸಿದೆ . ಸುಮಾರು 14  ಅಧ್ಯಯನಗಳ ಸಮೀಕ್ಷೆಯಲ್ಲಿ 90% ದಷ್ಟು ಪ್ರಮಾಣದಲ್ಲಿ ಈ  ಚಿಕಿತ್ಸೆಯ ಯಶಸ್ಸಾಗಿರುವುದು ಕಂಡುಬರುತ್ತದೆ.

        ಹಲ್ಲಿನ ಮಾಂಸಲ ಭಾಗ ಅಥವಾ
        ಪಲ್ಪ್ಗೆ ಯಶಸ್ವಿಯಾಗಿ ಕ್ಯಾಪ್‌
        ಅಳವಡಿಸುವುದು.

        ಹಲ್ಲಿನ ಸವೆತ, ಜಖಂ ಅಥವಾ ಹಲ್ಲಿನ ರಚನೆಯಲ್ಲಿರುವ ವಕ್ರತೆಯ ಕಾರಣದಿಂದಾಗಿ ಹಲ್ಲಿನ ಮಾಂಸಲ ಭಾಗವು ಹೊರಚಾಚಿಕೊಂಡು, ಅದು ತೀವ್ರ ನೋವು ಹಾಗೂ ಉರಿಯೂತಕ್ಕೆ ಕಾರಣವಾಗಬಹುದು. ಇದಕ್ಕೆ ಚಿಕಿತ್ಸೆ  ನೀಡುವಲ್ಲಿ , ಹಲ್ಲಿನ ಪ್ರಸ್ತುತ ರೋಗ ಕಾರಣದ ಹಿನ್ನೆಲೆಯು ಪ್ರಮುಖ ಅಂಶವಾಗಿದ್ದು , ಹಲ್ಲನ್ನು  ಶಾಶ್ವತವಾಗಿ ತೆಗೆದು ಹಾಕುವುದು ಅಥವಾ ರೂಟ್‌ ಕೆನಾಲ್‌ ಚಿಕಿತ್ಸೆಯ ಮೂಲಕ ಸಮಸ್ಯೆಯನ್ನು  ಪರಿಹರಿಸಲು ಸಾಧ್ಯವಿದೆ. ರೋಗಗ್ರಸ್ತ ಹಲ್ಲನ್ನು   ತೆಗೆದು ಹೊಸ ಹಲ್ಲನ್ನು ಕೂರಿಸುವುದಿದ್ದರೂ, ಅನೇಕ ಸಲ ವೈದ್ಯರನ್ನು  ಭೇಟಿ ಮಾಡುವುದು ಅನಿವಾರ್ಯ; ಇದು ವೆಚ್ಚದಾಯಕವೂ ಆಗಿದೆ. ಹಲ್ಲನ್ನು ಕೀಳುವುದು ಅಥವಾ  ಎಂಡೋಡಾಂಟಿಕ್‌ ಚಿಕಿತ್ಸೆಗೆ  ಪರ್ಯಾಯವಾಗಿರುವ ಮತ್ತೂಂದು  ಚಿಕಿತ್ಸೆ ಎಂದರೆ ಹಲ್ಲಿನ ಮಾಂಸಲ ಭಾಗಕ್ಕೆ ಕ್ಯಾಪ್‌ ಅಳವಡಿಸುವುದು. ಇದರಲ್ಲಿ  ಹೊರಚಾಚಿರುವ  ಹಲ್ಲಿನ  ಮೇಲ್ಭಾಗಕ್ಕೆ ನೇರವಾಗಿ (ಪ್ರತ್ಯಕ್ಷ ಪಲ್ಪ್ ಕ್ಯಾಪ್‌) ಕ್ಯಾಪನ್ನು ಅಳವಡಿಸುತ್ತಾರೆ ಆಥವಾ ಸವೆದಿರುವ  ಭಾಗಕ್ಕೆ ಬಂಧಕವನ್ನು ಹಚ್ಚಿ, ಅದರ ಮೇಲೆ ಕ್ಯಾಪನ್ನು ಅಳವಡಿಸುತ್ತಾರೆ (ಪರೋಕ್ಷ ಪಲ್ಪ್ ಕ್ಯಾಪ್‌ ). ಆ ಮೂಲಕ, ಹಲ್ಲಿನ ಮಾಂಸಲ ಭಾಗವನ್ನು ಸಂಪೂರ್ಣ ಉಳಿಸಿಕೊಂಡು, ಹಲ್ಲು  ನಷ್ಟವಾಗುವುದನ್ನು ಅಥವಾ ಎಂಡೋಡಾಂಟಿಕ್‌  ಚಿಕಿತ್ಸೆಯನ್ನು  ತಪ್ಪಿಸುತ್ತಾರೆ. ಪ್ರತ್ಯಕ್ಷ  ಹಾಗೂ ಪರೋಕ್ಷ ಪಲ್ಪ್ ಕ್ಯಾಪ್‌ ಅಳವಡಿಕೆ ಚಿಕಿತ್ಸೆಯು ಯಶಸ್ವಿಯಾಗುವುದರಲ್ಲಿ  ಅನೇಕ ಅಂಶಗಳು ಪ್ರಭಾವ ಬೀರುತ್ತವೆ.

        ಪಲ್ಪ್ನ ಹಿಸ್ಟಲಾಜಿಕಲ್‌ ಅನಾಲಿಸಿಸ್‌ನಿಂದ ಹಲ್ಲಿನ ರೋಗಚಿಹ್ನೆ ಹಾಗೂ ಲಕ್ಷಣಗಳನ್ನು  ನಿರ್ಧರಿಸುವುದು ಅಸಾಧ್ಯ        
                      
        ಊತಕ ವಿಶ್ಲೇಷಣೆ ಅಥವಾ ಹಿಸ್ಟಾಲಾಜಿಕಲ್‌ ಅನಾಲಿಸಿಸ್‌  ಮೂಲಕ ಹಲ್ಲಿನ ಮಾಂಸಲ ಭಾಗದ ಆರೋಗ್ಯವನ್ನು  ಅಂದಾಜು ಮಾಡಲಾಗುತ್ತದೆ. ಆದರೆ ದುರದೃಷ್ಟವಶಾತ್‌ ಹಲ್ಲಿನ  ಆ ಭಾಗದ ಆರೋಗ್ಯ ಅಥವಾ  ರೋಗ ಕಾರಣಗಳನ್ನು , ಲಕ್ಷಣ ಅಥವಾ ವಿಕಿರಣ ಅಧ್ಯಯನಗಳಿಂದ ವಿಶ್ಲೇಷಿಸಲು  ಸಾಧ್ಯವಾಗುವುದಿಲ್ಲ. ವಿಶ್ಲೇಷಕರು ಬಿಸಿ ಹಾಗೂ ತಂಪಿಗೆ ಹಲ್ಲು ಸ್ಪಂದಿಸುವ ರೀತಿ, ಸ್ಪರ್ಷಕ್ಕೆ ಹಲ್ಲು  ಸ್ಪಂದಿಸುವ ರೀತಿ,  ಸಂಬಂಧಿಸಿದ ಮೃದು ಅಂಗಾಂಶಗಳ ಸ್ಥಿತಿ  ಹಾಗೂ ರೋಗಿಯು ಹೇಳುವ ಲಕ್ಷಣಗಳು... ಇತ್ಯಾದಿಗಳ ಆಧಾರದಿಂದ ಕಚ್ಚಾ  ವರದಿಯೊಂದನ್ನು  ನೀಡುತ್ತಾರೆ. ಹಾಗಿದ್ದರೂ, ಊತಕ ವಿಶ್ಲೇಷಣೆಯೂ ಸೇರಿದಂತೆ , ಅನೇಕ ಅಧ್ಯಯನಗಳಲ್ಲಿ , ದೀರ್ಘ‌ಕಾಲ ಉರಿಯೂತವಿದ್ದ ಹಲ್ಲಿನ ಮಾಂಸಲ ಭಾಗದಲ್ಲಿ, ವಿಕಿರಣ ಅಧ್ಯಯನದ  ಫಲಿತಾಂಶದ ಖಚಿತತೆಯು ಕಡಿಮೆ ಅವಧಿಯದ್ದು ; ಅಂದರೆ ಎರಡರಿಂದ ನಾಲ್ಕು ತಿಂಗಳಿನ ಅವಧಿಯದ್ದು ಎಂಬುದನ್ನು ನಾವು ಮರೆಯಬಾರದು.

        ಹಲ್ಲಿನ ಮಾಂಸಲ  ಭಾಗಕ್ಕೆ ಯಾವುದು ಹೆಚ್ಚು ಹಾನಿ ಉಂಟು ಮಾಡುತ್ತದೆ; ಹಲ್ಲಿಗೆ ಅಳವಡಿಸುವ ಅಂಶಗಳಿಂದಲೇ ಹಾನಿಯಾಗುತ್ತಿದೆಯೇ  ಅಥವಾ ಬ್ಯಾಕ್ಟೀರಿಯಾ ಇತ್ಯಾದಿ ರೋಗಾಣುಗಳಿಂದಾಗಿ ಹಲ್ಲಿಗೆ ಹಾನಿಯಾಗುತ್ತಿದೆಯೇ  ಎಂಬ ಬಗ್ಗೆ  ಭಿನ್ನಾಭಿಪ್ರಾಯಗಳಿವೆ. ಹಲ್ಲಿಗೆ ಅಳವಡಿಸುವ ಕೆಲವು ಹಾನಿಕಾರಕ ಅಂಶಗಳಿಂದ ಹಲ್ಲಿನ ಮಾಂಸಲ  ಭಾಗ ನಾಶವಾಗುತ್ತದೆ.  ಎಂಬ ಭಾವನೆ ವೈದ್ಯರಲ್ಲಿ  ಕೆಲವು  ದಶಕಗಳ ಹಿಂದೆಯೇ   ಇತ್ತು . ಆದರೆ, 1970ರ ನಡುವಿನ ಕೆಲವು ಸಂಶೋಧನೆಗಳು, ಬ್ಯಾಕ್ಟೀರಿಯಾ ಹಾಗೂ ರೋಗಾಣುಗಳನ್ನು ಮಾಂಸಲ ಭಾಗದಿಂದ ತೆಗೆದು ಹಾಕಿದರೆ, ಅಲ್ಲಿ ಅಳವಡಿಸುವ ಸಂರಕ್ಷಣಾ ಅಂಶಗಳಿಗೆ ಮಾಂಸಲ ಭಾಗವು ಕೆಲವು ಸಮಯಗಳ ಬಳಿಕ ಯಾವುದೇ ತೊಂದರೆ ಇಲ್ಲದೆ ಒಗ್ಗಿಕೊಳ್ಳುತ್ತದೆ  ಎಂಬುದನ್ನು  ತೋರಿಸಿಕೊಟ್ಟವು. ಹಲ್ಲಿನ ಮಧ್ಯೆ  ಅಳವಡಿಸುವ ಆ ಸಂರಕ್ಷಣಾ ಅಂಶವು  ಯಾವ ರೂಪದ್ದು , ಅದು ಹಲ್ಲಿನ ಮಾಂಸಲ ಭಾಗವನ್ನು ನೇರವಾಗಿ ಸಂಪರ್ಕಿಸುತ್ತದೆಯೇ  ಅಥವಾ ಅವೆರಡರ ಮಧ್ಯ ಬೇರೆ ಯಾವುದಾದರೂ ಪದರಗಳಿವೆಯೇ ಎಂಬ ಅಂಶಗಳೂ  ಸಹ ಪ್ರಮುಖ ವಾದವು. ಬ್ಯಾಕ್ಟೀರಿಯಾವು ಒಂದು ಸಲ ಹಲ್ಲಿನ ಭಾಗಕ್ಕೆ ದಾಳಿ ಇಟ್ಟಿತು ಎಂದರೆ , ಪರಿಸ್ಥಿತಿ ಗಂಭೀರವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ, ಕ್ಯಾಪ್‌ ಅಳವಡಿಸಿದ ನಂತರ, ಹಲ್ಲಿನ ಮಾಂಸಲ  ಭಾಗದ ಸಂರಕ್ಷಣೆಯಲ್ಲಿ, ಹಲ್ಲಿನ ಸಂದುಗಳ ನಡುವೆ ಜಾಗವಿರದಂತೆ  ಸಮರ್ಪಕವಾಗಿ ಮುಚ್ಚಿ  ಹಾಕುವುದು ಅತ್ಯವಶ್ಯಕ.

        ದೇಹದ ಇತರ ಅಂಗಾಂಶಗಳ ರೀತಿಯಲ್ಲಿಯೇ, ಹಲ್ಲಿನ ಮಾಂಸಲ ಭಾಗ  ಎಂದರೆ, ಅದೊಂದು ಮೃದು ಅಂಗಾಂಶ ಎಂಬುದನ್ನು ನಾವು ಮರೆಯಬಾರದು. ಸಣ್ಣ ಪ್ರಚೋದ ನೆಗೂ ಅದು ಸಂವೇದನಾಶೀಲತೆಯಿಂದ ಪ್ರತಿಕ್ರಿಯಿಸುತ್ತದೆ, ಸೈಟೋಟಾಕ್ಸಿಸಿಟಿ ಹಾಗೂ  ಇಮ್ಯುನೋಸಪ್ರಷನ್‌ ನಿಂದ ಕೂಡಿದ ಹಲ್ಲಿನ ಮಾಂಸಲ ಭಾಗಕ್ಕೆ ಹೊಂದಿಸುವ ಅನೇಕ ಸಾಧನಗಳು  ಇಂದು ಲಭ್ಯ ಇವೆ. ಇವುಗಳು ಮೊದಲನೆಯದಾಗಿ ಮಾಂಸಲ ಭಾಗದ ಸ್ಪಂದನೆಯನ್ನು  ನಾಶಗೊಳಿಸಿ, ಆಮೇಲೆ, ಆ ಭಾಗವು ರೋಗಾಣುಗಳ ದಾಳಿಗೆ ಸ್ಪಂದಿಸುವುದನ್ನು  ತಗ್ಗಿಸುತ್ತವೆ. ಕೆಲವು ಸಾಧನಗಳನ್ನು ಹಲ್ಲುಗಳಿಗೆ ಅಳವಡಿಸುವುದಕ್ಕೆ ಮೊದಲು, ಪಾಲಿಮರೈಸೇಷನ್‌ ಪ್ರಕ್ರಿಯೆಗೆ ಒಳಪಡಿಸಬೇಕಾಗುತ್ತದೆ. ಉರಿಯೂತದ ಇರುವಿಕೆಗೂ  ಕ್ಯಾಪ್‌ ಅಳವಡಿಕೆಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಕೆಲವು ಆಧ್ಯಯನಗಳು ಹೇಳುತ್ತವೆ. ಅಂದರೆ, ಕೆಲವು ಸಾಧನಗಳನ್ನು  ನೇರವಾಗಿ ಹಲ್ಲಿನ ಮಾಂಸಲ ಭಾಗಕ್ಕೆ  ಅಳವಡಿಸುವ ಕಾರಣಕ್ಕಾಗಿ   ಮಾಂಸಲ ಭಾಗದ ಅಂಗಾಂಶಗಳಲ್ಲಿ ಉರಿಯೂತ ಕಂಡು ಬರುತ್ತದೆ ಎಂಬುದು ಈ ಅಧ್ಯಯನಗಳ ಅಭಿಪ್ರಾಯ.

        ಹಲ್ಲುಗಳ ಸವೆತವಿದ್ದರೂ ಸಹ, ಹಲ್ಲುಗಳ ಮಾಂಸಲ ಭಾಗವು ಹೊರಚಾಚುವುದನ್ನು ತಡೆಯಿರಿ. ರೋಗಲಕ್ಷಣ ರಹಿತವಾಗಿದ್ದು   ಬುಡಕ್ಕೆ ಸಮರ್ಪಕ  ರೀತಿಯಲ್ಲಿ ಸೇರಿಕೊಂಡಿದ್ದರೆ ಹಲ್ಲುಗಳ ಬಾಳಿಕೆ ಹಾಗೂ ಆರೋಗ್ಯ ಹೆಚ್ಚುತ್ತದೆ.

        ನಿಮ್ಮ ಹಲ್ಲು ನಿಮ್ಮ ವ್ಯಕ್ತಿತ್ವವನ್ನು 
        ಬಿಂಬಿಸುತ್ತದೆ

        ನಗುವು ಮನಸ್ಸಿನ ಕನ್ನಡಿ ಇದ್ದಂತೆ, ಸ್ವತ್ಛ ಹಾಗೂ ಸುಂದರ ನಗುವು ಮನಸ್ಸನ್ನು ಅರಳಿಸಿದಂತೆ, ಹಲ್ಲಿನ ವಕ್ರತೆಯು  ನಗುವಿನ ಸೌಂದರ್ಯವನ್ನು ಕುಂದಿಸಬಹುದು.

        ನೀವು  ಹಲ್ಲು
        ಕಡಿಯುತ್ತಿರುವಿರಾ?


        ಹಗಲು ಅಥವಾ ರಾತ್ರಿಯ ಹೊತ್ತಿ ನಲ್ಲಿ   ನಿಮಗೆ ಹಲ್ಲು ಕಡಿಯುವ ಅಭ್ಯಾಸವಿದ್ದರೆ, ಅದಕ್ಕೆ ಚಿಕಿತ್ಸೆ  ನೀಡಲು ಹಲವಾರು ತಜ್ಞರು  ಇಂದು ಲಭ್ಯರಿದ್ದಾರೆ.

        ಹಲವಾರು ರೀತಿಯ  ಮಾನಸಿಕ ಕಾಯಿಲೆಗಳು, ಜೀವನ ಶೈಲಿ ಮೂಲದ ಹಾಗೂ ವ್ಯಕ್ತಿತ್ವದ ತೊಂದರೆಗಳು ಹಲ್ಲು ಕಡಿಯುವ ರೂಪದಲ್ಲಿ ಕಾಣಿಸಿಕೊಳ್ಳಬಹುದು.

        ಹಲ್ಲುಗಳು ಸ್ವತ್ಛವಾಗಿರಬೇಕಾದುದು ಅತ್ಯಗತ್ಯ. ನಮ್ಮ ಅಂಗಿಕ ಭಾಷೆಯೇ ಬಹಳಷ್ಟು  ಸಂದರ್ಭಗಳಲ್ಲಿ  ಸಮರ್ಥ ಸಂವಹನದ ಕಾರ್ಯವನ್ನು ನಿಭಾಯಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ . ಹಾಗಾಗಿ,  ನಗುವು ಹರಡಿಕೊಳ್ಳಲು ಹಲ್ಲುಗಳು ಆರೋಗ್ಯವಾಗಿರುವುದು  ಆವಶ್ಯಕ.

        ನಿಮ್ಮ ಅಮೂಲ್ಯ ನಗುವಿನ
        ಸುರಕ್ಷತೆಗಾಗಿ :


        1. ದಿನಕ್ಕೆ 2 ಸಲ, ಕನಿಷ್ಠ 2 ನಿಮಿಷಗಳವರೆಗೆ ಬ್ರಷ್‌ ಮಾಡಿ..... ನಿಮ್ಮ ಬಾಯಿಯ ಒಳಗಿನ ಬಹಳಷ್ಟು  ಭಾಗಗಳನ್ನು ಸ್ವತ್ಛಗೊಳಿಸಲು ಕನಿಷ್ಠ ಇಷ್ಟು ಅವಧಿ ಬೇಕೇ ಬೇಕು.

        2. ಫ್ಲಾಸ್‌.... ಮಾಡದೇ ಇದ್ದರೆ 40%ದಷ್ಟು  ಹಲ್ಲಿನ  ಭಾಗವು ಸ್ವತ್ಛವಾಗಲಿಲ್ಲ  ಎಂದರ್ಥ. ನೀವು ಫ್ಲಾಸ್‌ ಮಾಡಲಿಲ್ಲ  ಎಂದರೆ, ಹಲ್ಲಿನ ಈ ಸಂದುಗಳಲ್ಲಿ ದಂತಕುಳಿಗಳು ಕಾಣಿಸಿಕೊಳ್ಳುತ್ತವೆ.

        3. ನಿಮ್ಮ ನಾಲಗೆಯನ್ನು ಸ್ವತ್ಛಗೊಳಿಸಿಕೊಳ್ಳಿ: ಒಂದೆರಡು ಸಲ ನಾಲಗೆಯನ್ನು  ಬ್ರಷ್‌ನಿಂದ ತಿಕ್ಕಿ ಸ್ವತ್ಛಗೊಳಿಸಿಕೊಂಡರೆ ಸಾಕು.

        4. ಸಿಹಿತಿಂಡಿ/ ಚಾಕೋಲೇಟುಗಳನ್ನು ಕಡಿಮೆ ಸೇವಿಸಿ : ಇದರಿಂದ ದಂತಕುಳಿ ಕಡಿಮೆಯಾಗುತ್ತದೆ. ದೇಹದ ತೂಕವನ್ನು ಹಾಗೂ ರಕ್ತದ ಸಕ್ಕರೆ ಪ್ರಮಾಣವನ್ನು  ಸುಧಾರಿಸಿಕೊಳ್ಳಲು ಇದು ಸಹಾಯಕ.

        5. ಯಥೇತ್ಛವಾಗಿ ನೀರು ಕುಡಿಯಿರಿ: ವಿಶೇಷವಾಗಿ ಕಾಫಿ, ಟೀ , ವೈನ್‌ ಇತ್ಯಾದಿಗಳನ್ನು ಸೇವಿಸಿದ ನಂತರ  ಸಾಕಷ್ಟು  ನೀರು ಸೇವಿಸಿ.

        6. ಹಲ್ಲುಗಳ ಬಗ್ಗೆ  ನಿರಂತರವಾಗಿ ಕಾಳಜಿ ವಹಿಸಿ : ಕಾಲಕಾಲಕ್ಕೆ  ದಂತವೈದ್ಯರನ್ನು ಕಂಡು, ದಂತ ಕಿಟ್ಟವನ್ನು ಆಗಾಗ ತೆಗೆದು ಸ್ವತ್ಛಗೊಳಿಸುವುದು ನಿಜವಾದ ದಂತ ಆರೈಕೆ. ಮುಂಜಾಗ್ರ ತೆಯು ಯಾವಾಗಲೂ ಉತ್ತಮ ಆಯ್ಕೆ.

        7. ವಿಷಯಗಳು  ಸಣ್ಣದಿರುವಾಗಲೇ  ನಿವಾರಿಸಿಕೊಳ್ಳಿ : ಅವುಗಳನ್ನು ನಾಳೆ ನೋಡಬಹುದೆಂದು ಮುಂದಕ್ಕೆ ಹಾಕಬೇಡಿ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus