ಮುಂಬಯಿ: ತನ್ನನ್ನು ಮದುವೆಯಾಗುವಂತೆ ಪ್ರಸ್ತಾವ ಮಾಡುವ ವ್ಯಕ್ತಿಯೊಬ್ಬನಿಗಾಗಿ ನಾನು ಇನ್ನೂ ಕಾಯುತ್ತಿದ್ದೇನೆ ಎಂದು ಚಿತ್ರನಟಿ ಕತ್ರಿನಾ ಕೈಫ್ ಹೇಳಿದ್ದಾರೆ.ಯಾರಾದರೂ ಮದುವೆಯಾಗ ಬೇಕಾದರೆ ಮದುವೆಯಾಗುವಂತೆ ಹೇಳಬೇಕಾಗುತ್ತದೆ. ನಾನು ಹೇಳಿದಾಗ ನಿಮಗೂ ಗೊತ್ತಾಗುತ್ತದೆ. ಯಾರಿಗಾಗಿ ನಾನು ಕಾಯುತ್ತಿದ್ದೇನೆ ಎಂದು ಗೊತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.ನಕ್ಷತ್ರ ಜ್ಯುವೆಲ್ಲರಿ ಬ್ರಾಂಡ್‌ನ ನೂತನ ಲಾಂಭನ ಅನಾವರಣದ ಪಾರ್ಶ್ವದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.ಕತ್ರಿನಾ ಕೈಫ್ ಅವರು ಚಿತ್ರನಟ ಸಲ್ಮಾನ್ ಖಾನ್ ಜತೆ ಕೆಲವು ಕಾಲ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಇಬ್ಬರೂ ದೂರವಾಗಿದ್ದಾರೆ. ಬಳಿಕ ಕತ್ರಿನಾ ಕೈಫ್ ಅವರು ರಣಬೀರ್ ಕಪೂರ್ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇಬ್ಬರೂ ಜತೆಗೂಡಿ ಎರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ರಣಬೀರ್ ಕಪೂರ್ ಅವರನ್ನು ಮದುವೆಯಾಗಲು ಕಾಯುತ್ತಿದ್ದೀರಾ ಎಂದು ಸುದ್ದಿಗಾರರು ಕೇಳಿದಾಗ, ನೀವು ಬೇರೆ ಯಾರದ್ದಾದರೂ ಹೆಸರು ಹೇಳುತ್ತೀರಾ ಎಂದು ಭಾವಿಸಿದ್ದೆ. ನಿಮ್ಮ ಪ್ರಶ್ನೆ ನನಗೆ ನಿರಾಶೆಯುಂಟು ಮಾಡಿತು ಎಂದು ಕೈಫ್ ಛೇಡಿಸಿದರು.