Sunday, May 19, 2013
Last Updated: 11:59:33 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಳಿಯ ಹೆಸರಲ್ಲಿ ಬಿಯರ್‌: ಕ್ಷಮೆ ಕೋರಿದ ಕಂಪನಿ
      • Udayavani | May 15, 2012

        ನವದೆಹಲಿ: ಭಾರತೀಯ ದೇವತೆಗಳ ಹೆಸರನ್ನು ಅಶ್ಲೀಲವಾಗಿ ಬಳಸುವ ಸಂಪ್ರದಾಯವನ್ನು ಮುಂದುವರೆಸಿರುವ ಅಮೆರಿಕದ ಕಂಪನಿಗಳು ಇದೀಗ ಕಾಳಿ ದೇವಿಯ ಹೆಸರಿನಲ್ಲಿ ಬಿಯರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

        ಜೊತೆಗೆ ಬಿಯರ್‌ನ ಜಾಹೀರಾತಿನಲ್ಲಿ 'ಬನ್ನಿ ಕಾಳಿಯನ್ನು ಆರಾಧಿಸೋಣ' ಎಂಬ ಒಕ್ಕಣಿಕೆಯನ್ನೂ ಸೇರಿಸಲಾಗಿದೆ. ಪೋರ್ಟ್‌ಲ್ಯಾಂಡ್‌ ಮೂಲದ ಬರ್ನ್ಸೈಡ್‌ ಬ್ರೂವಿಂಗ್‌ ಎಂಬ ಕಂಪನಿ ಈ ಬಿಯರ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

        ಈ ವಿಷಯವನ್ನು ಮಂಗಳವಾರ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ಇದೊಂದು ಗಂಭೀರವಾದ ವಿಷಯ. ಅಮೆರಿಕದ ಕಂಪನಿಗಳು ಪದೇ ಪದೇ ಭಾರತೀಯ ದೇವತೆಯನ್ನು ಅವಮಾನ ಮಾಡುವ ಕೆಲಸ ಮಾಡುತ್ತಿವೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಭಾರತದಲ್ಲಿನ ಅಮೆರಿಕದ ರಾಯಭಾರಿಯನ್ನು ಕರೆಸಿ ಈ ಬಗ್ಗೆ ಸ್ಪಷ್ಟನೆ ಕೇಳಬೇಕು ಎಂದು ಒತ್ತಾಯಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಸಂಸದೀಯ ಖಾತೆ ರಾಜ್ಯ ಸಚಿವ ರಾಜೀವ್‌ ಶುಕ್ಲಾ, ಈ ವಿಷಯವನ್ನು ವಿದೇಶಾಂಗ ಇಲಾಖೆಗೆ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

        ಅಮೆರಿಕದ ಕಂಪನಿಯ ಈ ಹೆಸರಿನ ಕುರಿತು ವಿವಿಧ ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಬಿಯರ್‌ಗೆ ದೇವತೆ ಹೆಸರಿಟ್ಟ ಕುರಿತು ಕಂಪನಿ ಕ್ಷಮೆಯಾಚಿಸಿದೆ. ಅಲ್ಲದೆ ಬಿಯರ್‌ನ ಹೆಸರನ್ನು ಬದಲಾಯಿಸಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
        ಈ ಹಿಂದೆ ಅಮೆರಿಕದ ಕಂಪನಿಗಳು ಲಕ್ಷ್ಮೀಯನ್ನು ಟಾಯ್ಲೆಟ್‌ನಲ್ಲಿ, ಗಣೇಶನನ್ನು ಲೈಂಗಿಕ ವಿಷಯವಾಗಿ
        ಹೀಗೆ ಹಲವು ರೀತಿಯಲ್ಲಿ ಅವಮಾನಕರವಾಗಿ ಬಳಸಿಕೊಂಡಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus