ಉಡುಪಿ : ಸಿಬಿಐ ಮಾಜಿ ನಿರ್ದೇಶಕ ಸರ್ದಾರ್ ಜೋಗಿಂದರ್ ಸಿಂಗ್ ನೇತೃತ್ವದ ಗ್ಲೋಬಲ್ ಅಚೀವರ್ ಫೌಂಡೇಶನ್ ವತಿಯಿಂದ ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉಡುಪಿಯ ಬಹುರಾಜ್ಯ ಸಹಕಾರಿ ಸಂಸ್ಥೆ ಜನರಲ್ ಇನ್ಶೂರೆನ್ಸ್ ಕೋ-ಅಪರೇಟಿವ್ ಸೊಸೈಟಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಸಂಘದ ಸ್ಥಾಪಕ ಹಾಗೂ ಅಧ್ಯಕ್ಷ ಎಂ. ಗೋಪಿಕೃಷ್ಣ ರಾವ್ ಅವರು ಭಾರತ ಸರಕಾರದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಹರೀಶ್ ರಾವತ್ ಅವರಿಂದ ಪ್ರಶಸ್ತಿ ಹಾಗೂ ಪ್ರಶಂಸಾ ಪತ್ರವನ್ನು ಸ್ವೀಕರಿಸಿದರು.ಸೀಷೆಲ್ಸ್‌ನ ಹೈಕಮಿಷನರ್ ವೇವನ್ ವಿಲಿಯಂ, ಯುನೆಸ್ಕೋ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಸ್.ಎಸ್. ಭಕ್ರಿ, ಮೇಜರ್ ವೇದಪ್ರಕಾಶ್, ಜೋಗಿಂದರ್ ಸಿಂಗ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.