ಅನಂತ ಶಾಸ್ತ್ರಿ | May 22, 2012
ಮುಖ್ಯವಾಗಿ ಮನೆಯ ಎದುರಿನ ಭಾಗದಲ್ಲಿ ಸುಂದರವಾದ, ಗಟ್ಟಿ ಗಾಜಿನ ಪಟ್ಟಿಗಳು, ಅಲಂಕಾರಿಕ ಚಚ್ಚೌಕ ಗಾಜಿನ ಫಲಕಗಳು ಅಡಕಗೊಂಡಿರುವುದು ಲೇಸು. ಈ ಕನ್ನಡಿಯ ಗಾಜುಗಳು, ಕೇವಲ ಕನ್ನಡಿಯಂತೆ ಇರಬಾರದು. ಮನೆಯ ಅಂದವನ್ನು ಹೆಚ್ಚಿಸುವ ಕೆಲವು ಸಸ್ಯ, ಮೀನು, ನವಿಲು, ಗಿಳಿಗಳ ಅಚ್ಚು ಕಾಣಿಸುವ ಪಟ್ಟಿಗಳ್ಳೋ, ತುಂಡುಗಳ್ಳೋ ಆಗಿ ಹಸಿರು, ನೀಲಿ, ನಸು ಗುಲಾಬಿ, ನಿಂಬೆ ಹಳದಿ, ನಸುಗೆಂಪು ಬಣ್ಣಗಳೊಂದಿಗೆ ಕೂಡಿದ್ದರೆ ಒಳ್ಳೆಯದು.
ಈಗ ನಗರಗಳಲ್ಲಂತೂ ಎದುರು ಬದುರಾಗಿ ಮನೆಗಳು ಇದ್ದೇ ಇರುತ್ತವೆ. ಯಾರು ಎಷ್ಟೇ ಎಚ್ಚರಿಕೆ ಹಾಗೂ ಕ್ರಮಬದ್ಧತೆಗಳೊಡನೆ ಮನೆ ಕಟ್ಟಿಸಿದರೂ ಎದುರುನ ದಿಕ್ಕಿನ ಸ್ಪಂದನಗಳನ್ನು ಭಿನ್ನ ವಿಭಿನ್ನ ಕಾರಣಗಳಿಗಾಗಿ ಒಂದು ಮನೆಯ ಮೇಲೆ ಧನಾತ್ಮಕವಲ್ಲದ ಪರಿಣಾಮಗಳನ್ನು ಕೊಡ ಹತ್ತುತ್ತವೆ. ಮುಖ್ಯವಾಗಿ ನಗರಗಳಲ್ಲಿ ಎಲ್ಲ ರೀತಿಯ ವಾಸ್ತು ಸಂವಿಧಾನಗಳನ್ನು ಕ್ರಮಬದ್ಧವಾಗಿ ಅಳವಡಿಸಿಕೊಳ್ಳುವುದು ತುಂಬಾ ಕಷ್ಟ.
ಮುಖ್ಯ ಸಮಸ್ಯೆ ಟಾಯ್ಲೆಟ್‌ಗಳು
ವಾಸ್ತುವಿನ ಪ್ರಕಾರ ನಿಯಮಗಳು ಉಲ್ಲೇಖೀಸುವುದು, ಮನೆಯ ಆವರಣಗಳಿಂದ ಕಕ್ಕಸು ನಿರ್ದಿಷ್ಟವಾಗಿ ಇಷ್ಟೇ ದೂರದಲ್ಲಿ ಇರಬೇಕು ಎಂಬ ವಾದವನ್ನ. ಸುಮಾರು 50 ಗಜಗಳಷ್ಟು ದೂರದಲ್ಲಿ ಟಾಯ್ಲೆಟ್‌ನ ನಿರ್ಮಾಣ ನಿಯಮ ಬದ್ಧವಾದುದು. ಆದರೆ ಬೆಂಗಳೂರಿನಂಥ ನಗರಗಳಲ್ಲಿ ಪಕ್ಕದ ಮನೆಯವರ ಟಾಯ್ಲೆಟ್ ಕೂಡ ಅವಶ್ಯಕವಾದ 50 ಗಜಗಳಿಗಿಂತ ಸಮೀಪದಲ್ಲಿ ಇರುತ್ತವೆ. ಇನ್ನು ಸ್ವಂತ ಮನೆಯಲ್ಲೇ ಮಲಗುವ ಕೋಣೆಯೊಂದಿಗೆ ಟಾಯ್ಲೆಟ್‌ನ ರಚನೆಯಾಗಿರುತ್ತದೆ. ಪಕ್ಕದ ಅಥವಾ ಎದುರಿನ ಮನೆಯ ಟಾಯ್ಲೆಟ್‌ನ ತಾಪತ್ರಯದಾಯಕ ಸ್ವಂದನಗಳು, ಸ್ವಗೃಹದ ಟಾಯ್ಲೆಟ್‌ನ ತಾಪತ್ರಯದಾಯಕ ಸ್ವಂದನಗಳಿಗಿಂತ ಹೆಚ್ಚು ವಿಷಮ ಪರಿಣಾಮಗಳನ್ನು, ಒಬ್ಬನಿಗೆ ಕೊಡಬಹುದಾಗಿದೆ. ಇದು ಬಹುದೊಡ್ಡ ತಲೆ ನೋವಿನ ವಿಷಯವಾಗುತ್ತದೆ. ಮೇಲ್ನೋಟಕ್ಕೆ ಸುಂದರವೆನಿಸುವ ಮನೆಯೊಳಗೆ ಸುಖವಿರಲಾರದು. ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿರುತ್ತದೆ. ಮನೆಯ ಯಜಮಾನನ ಜಾತಕದೊಳಗಿನ ಅನೇಕ ಒಳ್ಳೆಯ ಯೋಗಗಳಿಗೂ ಅಗಾಧ ಪ್ರಮಾಣದಲ್ಲಿ ಅಡೆತಡೆಗಳನ್ನು ನಿರ್ಮಿಸುವಂತಾಗುತ್ತದೆ ಮನೆಯ ವೈಷಮ್ಯಪೂರ್ಣ ರಚನೆಗಳು.
ಮುಖ್ಯವಾಗಿ ಮನೆಯ ಎದುರಿನ ಭಾಗದಲ್ಲಿ ಸುಂದರವಾದ, ಗಟ್ಟಿ ಗಾಜಿನ ಪಟ್ಟಿಗಳು, ಅಲಂಕಾರಿಕ ಚಚ್ಚೌಕ ಗಾಜಿನ ಫಲಕಗಳು ಅಡಕಗೊಂಡಿರುವುದು ಲೇಸು. ಈ ಕನ್ನಡಿಯ ಗಾಜುಗಳು, ಕೇವಲ ಕನ್ನಡಿಯಂತೆ ಇರಬಾರದು. ಮನೆಯ ಅಂದವನ್ನು ಹೆಚ್ಚಿಸುವ ಕೆಲವು ಸಸ್ಯ, ಮೀನು, ನವಿಲು, ಗಿಳಿಗಳ ಅಚ್ಚು ಕಾಣಿಸುವ ಪಟ್ಟಿಗಳ್ಳೋ, ತುಂಡುಗಳ್ಳೋ ಆಗಿ ಹಸಿರು, ನೀಲಿ, ನಸು ಗುಲಾಬಿ, ನಿಂಬೆ ಹಳದಿ, ನಸುಗೆಂಪು ಬಣ್ಣಗಳೊಂದಿಗೆ ಕೂಡಿದ್ದರೆ ಒಳ್ಳೆಯದು. ಮನೆಯ ಹಿಂಭಾಗ, ಅಕ್ಕಪಕ್ಕದ ಕಿಟಕಿಗಳೂ ಈ ಮಾದರಿಯ ಗಾಜುಗಳು ಸೂಕ್ತವಾದ ರೀತಿಯಲ್ಲಿ ಅಡಕಗೊಳ್ಳುವುದೂ ಕೂಡ ಅಪೇಕ್ಷಣೀಯ. ಈ ರೀತಿಯ ಗಾಜು ಅಥವಾ ಕನ್ನಡಿಗಳಿಂದ, ಎದುರು ದಿಕ್ಕಿನಿಂದ ಸುತ್ತಮುತ್ತಲಿಂದ ಚಿಮ್ಮಿ ಬರುವ ಧನಾತ್ಮಕವಲ್ಲದ ಅನ್ಯ, ವಿಷಯ ಸ್ಪಂದನಗಳನ್ನು ಕ್ರಿಯಾ ಶೂನ್ಯಗೊಳಿಸಿಕೊಳ್ಳಬಹುದು. ಈ ಕನ್ನಡಿಗಳ, ಗಾಜುಗಳ ಗುಣ ಪ್ರತಿಫಲನ ಕ್ರಿಯೆಯಾದುದರಿಂದ, ಅವು ಸ್ವೀಕರಿಸಿದ್ದನ್ನು ವಾಪಸು ಅವು ಹಿಂತಿರುಗಿ ತಳ್ಳುತ್ತವೆ. ಈ ಶಕ್ತಿ ಒಂದು ಮನೆಯನ್ನು ಯುಕ್ತವಾದ ರೀತಿಯಲ್ಲಿ ಈ ಆವರಣಗಳಿಂದ ಗಮನಾರ್ಹವಾಗಿ, ಮನೆಯ ಯಜಮಾನನ ಜಾತಕದಲ್ಲಿ ಇರುವ ಯಾವುದೇ ಗ್ರಹದ ಅಸ್ತಂಗತ ದೋಷಕ್ಕೂ ಇದು ಶಮನಕಾರಿಯಾಗಿರುತ್ತದೆ. ಎದುರು ಮನೆಯ, ಮನೆಯ ಸುತ್ತಲ ಅನಪೇಕ್ಷಿತ ಸ್ಪಂದನಗಳ ನಿವಾರಣೆಗೆ ಬುಧ ಅಷ್ಟೋತ್ತರ ಶತನಾಮಾವಳಿಯನ್ನು ಪ್ರತಿ ನಿತ್ಯ ಬೆಳಗ್ಗೆ ಹಾಗೂ ಮಲಗುವ ಮುನ್ನ ಪಠಿಸುವುದೂ ದೋಷ ನಿವಾರಣೆಗೆ ಸರಳ ಕ್ರಮವಾಗಿದೆ.