Sunday, December 21, 2014
Last Updated: 12:43:40 AM IST
 • ನಾನೆಲ್ಲಿರುವೆ:
 • ಮುಖಪುಟ ಅಭಿಪ್ರಾಯ ಬ್ಲಾಗ್ ಮನೋಹರ ಪ್ರಸಾದ್‌
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
image
 • Imageಮನೋಹರ ಪ್ರಸಾದ್‌, ಸುದ್ದಿವಿಭಾಗದ ಮುಖ್ಯಸ್ಥರು

  'ಉದಯವಾಣಿ' ದಿನಪತ್ರಿಕೆಯ ಮಂಗಳೂರು ಸುದ್ದಿವಿಭಾಗದ ಮುಖ್ಯಸ್ಥರು. ಮಾನವೀಯ ಮತ್ತು ಸಾಮಾಜಿಕ ಪ್ರಸ್ತುತಿಯ ವರದಿಗಾರಿಕೆಯಿಂದ ಗಮನ ಸೆಳೆದವರು, ಕತೆಗಾರ ಕೂಡಾ. 2005ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2007ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಅವರ 2500ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ.

Oct 12, 2012 | Comments 10 | ShareShare
------------------------------------------------------------------------------------
ಅಲ್ಲಿ ಶಿಲಾಶಿಖರ- ಇಲ್ಲಿ ಕೋಟೆಕೊತ್ತಲ


ಈ ಬಾರಿಯ ಕಡಲ ಒಡಲು ಬ್ಲಾಗ್‌ನಲ್ಲಿ ಒಂದಿಷ್ಟು ಹೊಸ ಪ್ರಯೋಗದ ಪ್ರಯತ್ನ ಮಾಡಿದ್ದೇನೆ. ನನ್ನ ಸಹೋದ್ಯೋಗಿ- ಮಾರುಕಟ್ಟೆ ವಿಭಾಗದ ಉಪಪ್ರಬಂಧಕ ಸತೀಶ್‌ ಮಂಜೇಶ್ವರ್‌ ಅವರು ತಮ್ಮ ಸಂಗ್ರಹದಿಂದ ಅತ್ಯಾಕರ್ಷಕ ಫೋಟೋಗಳನ್ನು ತೋರಿಸಿದರು. ಅದು ಉತ್ತರ ಕನ್ನಡದ ಜಗತ್ಪ್ರಸಿದ್ಧ ಸಾಹಸಿಕ ಪ್ರವಾಸೀ ತಾಣ-ಯಾಣ- ಮತ್ತು ಸಮೀಪದ ಐತಿಹಾಸಿಕ ಮಿರ್ಜಾನ್‌ ಕೋಟೆಯದ್ದಾಗಿತ್ತು. ರಜಾದಿನದಂದು ತನ್ನ ಸ್ನೇಹಿತರ ಜತೆ ಇಲ್ಲಿಗೆ ತೆರಳಿದ್ದ ಸ.ಮಂ. ಅವರು ವಿಶಿಷ್ಠ ಅನುಭವಗಳನ್ನು ಹಂಚಿಕೊಂಡರು. ವಿವಿಧ ಮೂಲಗಳಿಂದ ಪೂರಕ ಮಾಹಿತಿಯನ್ನು ಒದಗಿಸಿಕೊಟ್ಟರು. ಈ ವಿವರಗಳನ್ನೂ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಯಾಣ:

ಅತ್ಯಾಕರ್ಷಕ ಮತ್ತು ಅತ್ಯಪರೂಪದ ಶಿಲೆಗಳಿಂದ ಯಾಣ ಜಗತ್ಪ್ರಸಿದ್ಧ . ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಯಾಣ ಕಾರವಾರದಿಂದ 60 ಕಿ.ಮೀ., ಶಿರಸಿಯಿಂದ 40 ಕಿ.ಮೀ., ಕುಮಟಾದಿಂದ 20 ಕಿ.ಮೀ. ಅಂತರದಲ್ಲಿದೆ.

ಸಮೀಪದ ರಸ್ತೆಯಿಂದ ಕಿಲೋ ಮೀಟರ್‌ನಷ್ಟು ಅಂತರವನ್ನು ದಟ್ಟ ಅರಣ್ಯದೊಳಗೆ ಪುಟ್ಟ ಟ್ರೆಕಿಂಗ್‌ ರೂಪದಲ್ಲಿ ಕ್ರಮಿಸಬೇಕು. (ಹಾದಿಯದ್ದಕ್ಕೂ ವಿವಿಶ್ರಾಂತಿ ಪಡೆಯಬಹುದು. ಪ್ರವಾಸಿಗಳು ನೀರು, ಆಹಾರ ಸಹಿತ ಅಗತ್ಯ ವಸ್ತುಗಳನ್ನು ಹೊಂದಿರಬೇಕು). ಜೇನ್ನೊಣ, ಜಿಗಣೆಗಳ ದಾಳಿ ಎದುರಿಸಲು ಸಿದ್ಧರಾಗಿರಬೇಕು!


ಯಾಣದ ಆಕರ್ಷಣೆ ಎರಡು ಬೃಹತ್‌ ಶಿಲಾರಚನೆಗಳು. ಹೆಸರು: ಭೈರಮೇಶ್ವರ ಶಿಖರ ಮತ್ತು ಮೋಹಿನಿ ಶಿಖರ. ಈ ಶಿಲೆಗಳು ಕಪ್ಪುವರ್ಣದ ಕ್ರಿಸ್ಟಲೈನ್‌ ಲೈಮ್‌ಸ್ಟೋನ್‌ನಿಂದ ರಚನೆಯಾಗಿವೆ. ಭೈರಮೇಶ್ವರ ಶಿಖರ 390 ಅಡಿ; ಮೋಹಿನಿ ಶಿಖರ 300 ಅಡಿ ಎತ್ತರವಿದೆ.

ಈ ಶಿಖರದಲ್ಲಿ 9.8 ಅಡಿಗಳಷ್ಟು ತೆರೆದುಕೊಂಡಿರುವ ಪ್ರದೇಶ ಗುಹೆಯೆಡೆಗೆ ತಲುಪುತ್ತದೆ. ಈ ಗುಹೆಯೊಳಗೆ ದುರ್ಗೆಯ ಅವತಾರ ಚಂಡಿಕೆಯ ಕಂಚಿನ ಪ್ರತಿಮೆ ಇದೆ. ಈ ಗುಹೆಯಲ್ಲಿ ಸ್ವಯಂಭೂ ಶಿವಲಿಂಗವಿದೆ. ಆದ್ದರಿಂದ ಈ ಪ್ರದೇಶ ಪವಿತ್ರ ತೀರ್ಥಯಾತ್ರಾ ಕ್ಷೇತ್ರವಾಗಿದೆ. ಈ ಶಿವಲಿಂಗದ ಮೇಲೆ ಒಸರು ನೀರ ಹನಿಗಳ ಅಭಿಷೇಕವಾಗುತ್ತದೆ. ಈ ಒಸರು ಚಂಡಿ ಹೊಳೆಯಾಗಿ ಹರಿದು ಉಪ್ಪಿನ ಪಟ್ಟಣದಲ್ಲಿ ಅಘನಾಶಿನಿ ನದಿಯೊಂದಿಗೆ ಸಂಗಮವಾಗುತ್ತದೆ. ಶಿವಲಿಂಗವಿರುವ ಗುಹೆಯ ಸಮೀಪದಲ್ಲಿ ವಿಭೂತಿ ಜಲಪಾತವಿದೆ. ಯಾಣಕ್ಷೇತ್ರವು ಪುರಾಣದಲ್ಲಿ ಮೋಹಿನಿ ಭಸ್ಮಾಸುರ ಕಥಾನಕದೊಂದಿಗೆ ಬೆಸೆದುಕೊಂಡಿದೆ. ಸಮೀಪದಲ್ಲೇ ಗಣೇಶ ದೇವಸ್ಥಾನವಿದೆ.


ಸತೀಶ್‌ ಮಂಜೇಶ್ವರ್‌ ಹೇಳುತ್ತಾರೆ: ಯಾಣ ಅನ್ನುವುದೇ ಅದ್ಭುತ ಅನುಭವ. ಇದು ಪ್ರಕೃತಿಯೊಂದಿಗಿನ ಆತ್ಮೀಯ ಅನುಸಂಧಾನ. ಪುಟ್ಟ ಹಾದಿಯಾದರೂ ನಡಿಗೆ ಸಲೀಸು ಎಂಬಂತಿಲ್ಲ. ಆದರೆ, ಆ ಹಾದಿಯನ್ನು ಕ್ರಮಿಸುವುದು ಕೂಡಾ ಆಹ್ಲಾದಕರ ಅನುಭವ. ನಾವು ನಡೆಯುತ್ತಿರುವಾಗ ತುಂತುರು ಮಳೆಯೂ ನಮ್ಮ ಸಂಗಾತಿಯಾಗಿತ್ತು. ತಟ್ಟನೆ ಕವಿಯುವ ಮಂಜು. ಮೋಡಗಳ ಜತೆ ಸರಸ. ಆದರೆ, ಹೆಜ್ಜೆಹೆಜ್ಜೆಗೂ ಜಾಗೃತರಾಗಿರಬೇಕು.

ಏಕೆಂದರೆ, ಮಿಂಚನ ವೇಗದಲ್ಲಿ ಜಿಗಣೆಗಳು ಕಾಲನ್ನು ಆವರಿಸಿಕೊಳ್ಳುವ ಅಪಾಯವಿರುತ್ತದೆ. ಶಿಬಿರದಿಂದ ಕಾಣಿಸುವ ಪ್ರಕೃತಿ ಸೌಂದರ್ಯವನ್ನು ಶಬ್ದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಅದ್ಭುತ ಅನುಭೂತಿ. ನೀಲಿ ಸೆರಗಿನ ಹಸಿರು ಸೀರೆಯನ್ನುಟ್ಟ ಪ್ರಕೃತಿ ಮಾತೆ! ಓಹ್‌.. ಇನ್ನೊಮ್ಮೆ ಯಾಣಕ್ಕೆ ಯಾನ ಕೈಗೊಳ್ಳಬೇಕು!

ಮಿರ್ಜಾನ್‌ ಕೋಟೆ:

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ತೀರ್ಥಯಾತ್ರಾ ಕ್ಷೇತ್ರ ಗೋಕರ್ಣದಿಂದ 11 ಕಿ.ಮೀ. ಮತ್ತು ರಾಷ್ಟ್ರೀಯ ಹೆದ್ದಾರಿಯಿಂದ ಅರ್ಧ ಕಿ.ಮೀ. ಅಂತರದಲ್ಲಿರುವ ಇತಿಹಾಸ ಮತ್ತು ವಾಸ್ತುಶಿಲ್ಪ ಖ್ಯಾತಿಯ ಮಿರ್ಜಾನ್‌ (ಮೀರ್ಜನ್‌) ಕೋಟೆ ಅನೇಕಾನೇಕ ಕದನಗಳಿಗೆ ಸಾಕ್ಷಿಯಾಗಿದೆ.


ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ 16ನೇ ಶತಮಾನದಲ್ಲಿ ಈ ಕೋಟೆಯನ್ನು ಕಟ್ಟಿಸಿದಳೆಂದು ಪ್ರತೀತಿ. ಈ ಕೋಟೆಯಲ್ಲಿದ್ದು ಆಕೆ 54 ವರ್ಷ ರಾಜ್ಯಭಾರ ನಡೆಸಿದ್ದರು. ಆಕೆಯ ರಾಜ್ಯ ಮೆಣಸಿಗೆ ಪ್ರಸಿದ್ಧವಾಗಿತ್ತು. ಪೋರ್ಚುಗೀಸರು ಆಕೆಯನ್ನು ದ ಪೆಪ್ಪರ್‌ ಕ್ವೀನ್‌- ಮೆಣಸಿನ ರಾಣಿ ಎಂದು ಉಲ್ಲೇಖೀಸುತ್ತಿದ್ದರು. ಆಕೆ ತುಳುವ- ಸಾಲ್ವ ವಂಶದವಳಾಗಿದ್ದಳು (ಇನ್ನೊಂದು ಉಲ್ಲೇಖದ ಪ್ರಕಾರ: ಬಿಜಾಪುರದ ರಾಜ ಶೆರೀಫ್‌-ಉಲ್‌ ಮುಲ್ಕ್ ಈ ಕೋಟೆ ಕಟ್ಟಿಸಿದ). ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ಬಿಜಾಪುರದ ಸುಲ್ತಾನರು ಈ ಕೋಟೆ ವಶಪಡಿಸಿಕೊಂಡರು. 1676ರಲ್ಲಿ ಕೆಳದಿ ಚೆನ್ನಮ್ಮ, 1757ರಲ್ಲಿ ಮರಾಠರು, 1783ರಲ್ಲಿ ಬ್ರಿಟಿಷರು ವಶಪಡಿಸಿಕೊಂಡಿದ್ದರು.


ಒಂದು ಕಾಲಕ್ಕೆ ಮಿರ್ಜಾನ್‌ ಪ್ರಸಿದ್ಧ ಬಂದರು ಆಗಿತ್ತು. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮೆಣಸು ಸಹಿತ ಸಾಂಬಾರ ಪದಾರ್ಥಗಳನ್ನು ಇಲ್ಲಿಂದ ರಫ್ತು ಮಾಡುತ್ತಿದ್ದರು. ಬ್ರಿಟಿಷರ ಕಾಲಕ್ಕೆ ಇಲ್ಲಿ ಬೃಹತ್‌ ಗೋದಾಮು ನಿರ್ಮಾಣಗೊಂಡಿದೆ. ಅಡಿಕೆ, ಜಾಯಿಕಾಯಿ, ದಾಲಿcನ್ನಿ, ಪೊಟಾಶಿಯಂ ನೈಟ್ರೇಟ್‌ ಇಲ್ಲಿಂದ ರಫ್ತಾಗುತ್ತಿತ್ತು. ಬೆಲ್ಲ, ತೆಂಗಿನಕಾಯಿ, ಎಣ್ಣೆ, ಅಕ್ಕಿ ಇತ್ಯಾದಿ ಆಂತರಿಕ ವ್ಯಾಪಾರವೂ ನಡೆಯುತ್ತಿತ್ತು.


ಈಗ ಕೇವಲ ಹನ್ನೆರಡು ಎಕರೆಗಳಷ್ಟು ಪ್ರದೇಶ ಮಾತ್ರ ಕೋಟೆಯಾಗಿ ಉಳಿದಿದೆ. ಕೋಟೆಯ ವಿನ್ಯಾಸದಲ್ಲಿ ಇಸ್ಲಾಮೀಯ ಮತ್ತು ಪೋರ್ಚುಗೀಸ್‌ ಪ್ರಭಾವವಿದೆ. ದಕ್ಷಿಣದ ಗೋಡೆಯ ಬಳಿ ಚೌಕಾಕಾರದ ಎತ್ತರದ ಕಾವಲು ಗೋಪುರವಿದೆ. ಇಲ್ಲಿನ ಕೊತ್ತಳಗಳಿಂದ ಸೈನಿಕರು ಶತ್ರುಗಳ ಮೇಲೆ ಗುಂಡು ಹಾರಿಸಲು ಸಾಧ್ಯವಿತ್ತು.

ಇಲ್ಲಿನ ಮೊಗಸಾಲೆಯಂತಹ ಮುಂಭಾಗಗಳಿಂದ ಸೈನಿಕರು ಕೆಳಗಡೆ ಇದ್ದ ಶತ್ರುಗಳ ಮೇಲೆ ಬಂಡೆ ಮುಂತಾದವುಗಳನ್ನು ಎತ್ತಿ ಹಾಕುತ್ತಿದ್ದರೆಂಬ ಮಾಹಿತಿಗಳು ದಾಖಲೆಯ ಸ್ವರೂಪದಲ್ಲಿ ಲಭ್ಯವಿದೆ. ಬಹುಬಗೆಯ ವಿನ್ಯಾಸಗಳ ಸಹಿತವಾಗಿ, ಪರಿಪೂರ್ಣ ರೀತಿಯ ದಾಳಿ ಮತ್ತು ಸ್ವರಕ್ಷಣೆ ವ್ಯವಸ್ಥೆಯ ಅತೀ ವಿರಳವಾದ ಶೈಲಿಯ ಕೋಟೆ ಮಿರ್ಜಾನ.

ಚಿತ್ರಗಳು: ಸತೀಶ್‌ ಮಂಜೇಶ್ವರ್‌, ಕಿರಣ್‌ ಕರ್ನೇಲಿಯೊ

 

 • Other Blogs By ಮನೋಹರ ಪ್ರಸಾದ್‌
 • POSTED COMMENTS
 • pic

 • Dec 16, 2012
  Author: amtoorsdigitalstudio@gmail.com

  very nice artical sir

 •  
 • pic
 • kote kotthala....
  Oct 25, 2012
  Author: dineshira@gmail.com

  sr.. soundharya raashiya binnanada varnane sppr...

 •  
 • pic
 • shilaa shikara...
  Oct 25, 2012
  Author: sathishira@gmail.com

  sir best aticle and photos

 •  
 • pic

 • Oct 23, 2012
  Author: minchupk@gmail.com

  I had seen Yana in "edakallu Guddada mele " film.But this article tempting me to visit.Should we take any concerned authority's permission to visit Yana?Its in spiring article sir,good work.

 •  
 • pic

 • Oct 18, 2012
  Author: julietdsouza46@yahoo.com

  nimma kavna veey nice

 •  
 • pic
 • ಅಲ್ಲಿ ಶಿಲಾ ಶಿಖರ ..ಇಲ್ಲಿ ಕೋಟೆ ಕೊತ್ತಲ
  Oct 17, 2012
  Author: hkdivakar@yahoo.co.in

  ಯಾಣದ ಕೋಟೆಯ ಬಗ್ಗೆ ಹೆಚ್ಚು ತಿಳಿಯದ ನಮಗೆ ನಿಮ್ಮ ಮಾಹಿತಿಗಳು ತುಂಬ ಖುಷಿ ಆಯಿತು ,ಅಲ್ಲದೆ ಫೋಟೋಗ್ರಫಿ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ

 •  
 • pic
 • ಅಲ್ಲಿ ಶಿಲಾ ಶಿಖರ ..ಇಲ್ಲಿ ಕೋಟೆ ಕೊತ್ತಲ
  Oct 16, 2012
  Author: hkdivakar@yahoo.co.in

  ಯಾಣದ ಕೋಟೆಯ ಬಗ್ಗೆ ಹೆಚ್ಚು ತಿಳಿಯದ ನಮಗೆ ನಿಮ್ಮ ಮಾಹಿತಿಗಳು ತುಂಬ ಖುಷಿ ಆಯಿತು ,ಅಲ್ಲದೆ ಫೋಟೋಗ್ರಫಿ ಕೂಡ ಬಹಳ ಚೆನ್ನಾಗಿ ಮೂಡಿ ಬಂದಿದೆ

 •  
 • pic

 • Oct 13, 2012
  Author: swetha86@gmail.com

  very informative article,and nice photos....

 •  
 • pic
 • Natures Beauty
  Oct 13, 2012
  Author: vishookiran@gmail.com

  i had been to this place 15 years back when there was no proper roads and we had to trek for more than 10 kms....and the swamiji at the top said "kasu iddre gokarna trana iddare yaana"!!!!yes beautiful place

 •  
 • pic

 • Oct 12, 2012
  Author: amtoorsdigitalstudio@gmail.com

  nimma lekana very nice

 • Blog Archive
Keywords:   
From:
To:
 • POST YOUR COMMENTS
 • Name *
 •  
 • Subject
 • Email ID *
 •  
 • Comment *
 • Comments are moderated and will not be posted if found irrelevant or offensive.
 • Copyright @ 2009 Udayavani.All rights reserved.
 • Designed & Hosted By 4cplus