ಈ ಹಿಂದಿನ ಕಾಲಂನಲ್ಲಿ ನಾನು ಹೇಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒತ್ತಡದಲ್ಲಿ ಚೆನ್ನಾಗಿ ಆಡುವ ಕಲೆ ತಿಳಿದಿದೆ ಮತ್ತು ಅದನ್ನು ಬೆಂಗಳೂರಿನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಮಾಡಿ ತೋರಿಸಿದೆ. ಮುಂಬೈ ಕೂಟದುದ್ದಕ್ಕೂ ಉತ್ತಮ ರೀತಿಯಲ್ಲಿ ರನ್ ಬೆಂಬತ್ತಿದ ಸಾಧನೆ ಮಾಡಿದೆ ಆದರೆ ಇಂತಹ ನಾಕೌಟ್ ಹಂತದಲ್ಲಿ ಒತ್ತಡವೂ ಹೆಚ್ಚಿರುವ ಸಂದರ್ಭದಲ್ಲಿ ಮುಂಬೈ ಮೊದಲು ಬ್ಯಾಟಿಂಗ್ ಮಾಡಿದ್ದರೆ ಉತ್ತಮವಾಗಿತ್ತು ಎಂಬುದು ನನ್ನ ಅನಿಸಿಕೆ. ಉತ್ತಮ ಮೊತ್ತ ಪೇರಿಸುವ ಮೂಲಕ ಲಸಿತ ಮಾಲಿಂಗ ನೇತೃತ್ವದಲ್ಲಿ ಚೆನ್ನೈ ಮೇಲೆ ಆಕ್ರಮಣ ಮಾಡುವುದು ಒಳ್ಳೆಯದಿತ್ತು.ಒಂದು ಹಂತದಲ್ಲಿ ಒಂದು ರನ್ನಿಗೆ ಎರಡು ವಿಕೆಟ್ ಉರುಳಿದ ಸನ್ನಿವೇಶದಿಂದ 187 ರನ್ ಪೇರಿಸಿರುವುದು ಚೆನ್ನೈ ತಂಡದ ಅಸಾಮಾನ್ಯ ಪ್ರಯತ್ನವಾಗಿದೆ. ಪ್ರಮುಖ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡುವ ಮೂಲಕ ನಾಯಕ ಎಂ. ಎಸ್. ಧೋನಿ ತಂಡವನ್ನು ಆಗಾಗ್ಗೆ ಪಾರು ಮಾಡುತ್ತಿದ್ದಾರೆ. ಬುಧವಾರವೂ ಅಂತಹ ಸಂದರ್ಭಗಳಲ್ಲಿ ಒಂದಾಗಿದೆ. ಹೊಡೆತಗಳನ್ನು ಹೊಡೆಯಲು ಹೋದಾಗ ಅವರೊಬ್ಬ ಬೇರೇಯೆ ಆಟಗಾರ ಆಗಿರುತ್ತಾರೆ ಮತ್ತು ಮುಂಬೈ ವಿರುದ್ಧ ಅಮೋಘ ಆಟದ ಪ್ರದರ್ಶನ ನೀಡಿದ್ದಾರೆ. ಮಾಲಿಂಗ ಎಸೆತವನ್ನು ಡೀಪ್ ಮಿಡ್ ವಿಕೆಟ್ ಮೇಲಿನಿಂದ ಸಿಕ್ಸರ್‌ಗೆ ಆಟ್ಟಿರುವುದು ಅಸಾಮಾನ್ಯ ಸಾಧನೆಯೆಂದೇ ಹೇಳಬಹುದು. ಸ್ವಲ್ಪ ಸಮಯದ ಬಳಿಕ ಡ್ವೇಯ್ನ ಬ್ರಾವೊ ಎಕ್ಸ್‌ಟ್ರಾ ಕವರ್ ಮೇಲಿನಿಂದ ಸಿಕ್ಸರ್ ಎತ್ತಿರುವುದು ಅದ್ಭುತವಾಗಿದೆ. ಧೋನಿ ಮತ್ತು ಬ್ರಾವೊ ಅವರ ಬ್ಯಾಟಿಂಗ್ ಪ್ರದರ್ಶನ ವೈಭವದಿಂದ ಕೂಡಿತ್ತು ಮತ್ತು ಇದೇ ವೇಳೆ ಆರಂಭದಲ್ಲಿ ಬದರೀನಾಥ್ ಮತ್ತು ಮೈಕ್ ಹಸ್ಸಿ ಅವರ ಕೊಡುಗೆಯನ್ನು ಮರೆಯಬಾರದು.ರನ್ ಬೆಂಬತ್ತುವಷ್ಟು ಬ್ಯಾಟಿಂಗ್ ಶಕ್ತಿಯನ್ನು ಮುಂಬೈ ಹೊಂದಿತ್ತು. ಆದರೆ ಇಂತಹ ಒತ್ತಡದ ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡುವುದು ಅಷ್ಟೊಂದು ಸುಲಭವಲ್ಲ ಮತ್ತು ಚೆನ್ನೈ ನಿರಂತರವಾಗಿ ಬಿಗು ದಾಳಿ ಸಂಘಟಿಸಿ ಒತ್ತಡ ಹೇರಲು ಪ್ರಯತ್ನಿಸುತ್ತಿತ್ತು. ಬ್ರಾವೊ ಅವರ ದಾಳಿ ನಿರ್ಣಾಯಕವಾಗಿತ್ತು. ಡ್ವೇಯ್ನ ಸ್ಮಿತ್ ಅವರನ್ನು ಹೊರತುಪಡಿಸಿದರೆ ಮುಂಬೈಯ ಉಳಿದ ಯಾವುದೇ ಆಟಗಾರ ಛಲದಿಂದ ಆಡಿಲ್ಲ.ಚೆನ್ನೈ ಇನ್ನು ತವರಿನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ಸವಾಲನ್ನು ಎದುರಿಸಲಿದೆ. ಕೋಲ್ಕತಾ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದೆ. ಸ್ಪಿನ್ ದಾಳಿಗೆ ಯೋಗ್ಯವಾದ ಪರಿಸ್ಥಿತಿಯಲ್ಲಿ ಡೆಲ್ಲಿ ವೇಗದ ದಾಳಿಗೆ ಮಹತ್ವ ನೀಡಿತ್ತು. ಬ್ಯಾಟಿಂಗ್ ಪಡೆ ಉತ್ತಮವಾಗಿದ್ದರಿಂದ ಮತ್ತು ಯಾವುದೇ ಮೊತ್ತ ಲಭಿಸಿದರೂ ರನ್ ಬೆಂಬತ್ತುವ ವಿಶ್ವಾಸ ಇದ್ದ ಕಾರಣ ಡೆಲ್ಲಿ ಈ ರೀತಿ ಮಾಡಿರಬಹುದು. ಆದರೆ ಇದು ಹೌದಾದರೆ ರಾಸ್ ಟಯ್ಲರ್ ಕೆಳಗಿನ ಕ್ರಮಾಂಕದಲ್ಲಿ ಬಂದಿರುವುದು ತಪ್ಪು ಮತ್ತು ಆ ಸಮಯದಲ್ಲಿ ಡೆಲ್ಲಿಯ ಸೋಲು ಬಹುತೇಕ ಖಚಿತವಾಗಿತ್ತು.ಕೋಲ್ಕತಾ ವಿರುದ್ಧ ಸೋಲುವ ಮೂಲಕ ಡೆಲ್ಲಿ ಫೈನಲಿಗೇರುವ ಅವಕಾಶ ಕಳೆದುಕೊಂಡಿತು. ಇದೀಗ ಅಪಾಯಕಾರಿ ಚೆನ್ನೈ ವಿರುದ್ದ ಗೆದ್ದರೆ ಮಾತ್ರ ಡೆಲ್ಲಿಗೆ ಫೈನಲಿಗೇರುವ ಅವಕಾಶವಿದೆ. ಇದೇ ತಾಣದಲ್ಲಿ ಈ ಹಿಂದೆ ನಡೆದ ಎರಡು ಪಂದ್ಯಗಳಲ್ಲಿ ಚೆನ್ನೈ ಡೆಲ್ಲಿ ತಂಡವನ್ನು ಸುಲಭವಾಗಿ ಸೋಲಿಸಿತ್ತು. ತವರಿನಲ್ಲಿ ಆಡುವ ಕಾರಣ ಮತ್ತು ಒತ್ತಡವನ್ನು ಹೇರುವ ಚೆನ್ನೈ ನಾಲ್ಕನೇ ಬಾರಿ ಫೈನಲಿಗೇರುವ ಗುರಿಯನ್ನು ಇಟ್ಟುಕೊಂಡಿದೆ. ಕೂಟದುದ್ದಕ್ಕೂ ಡೆಲ್ಲಿ ಉತ್ತಮ ಕ್ರಿಕೆಟ್ ಆಡಿದೆ ಮತ್ತು ಸೆಹವಾಗ್, ಡೇವಿಡ್ ವಾರ್ನರ್ ಮತ್ತು ಟಯ್ಲರ್ ಅವರಂತಹ ಆಟಗಾರರು ಪಂದ್ಯವನ್ನು ಯಾವುದೇ ಕ್ಷಣ ಬದಲಿಸಲು ಸಮರ್ಥರಾಗಿದ್ದಾರೆ. ಹಾಗಾಗಿ ಇನ್ನೊಂದು ಒಳ್ಳೆಯ ಪಂದ್ಯವನ್ನು ನಾವು ನೋಡಬಹುದಾಗಿದೆ.