Sunday, May 26, 2013
Last Updated: 1:25:44 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಲರ್ಜಿಕ್‌ ಕಂಜಂಕ್ಟಿವೈಟಿಸ್‌
    • ಅಲರ್ಜಿಕ್‌ ಕಂಜಂಕ್ಟಿವೈಟಿಸ್‌.

      • ಡಾ| ವಿವೇಕಾನಂದ ಯು.ನೇತ್ರ ತಜ್ಞರು, ಸುಶೀಲ ಗೋಪಾಲ ಪೈ ಸ್ಮಾರಕ ರೋಟರಿ ಕಣ್ಣಿನ ಆಸ್ಪತ್ರೆ | May 27, 2012

        ಅಲರ್ಜಿಕ್‌ ಕಂಜಂಕ್ಟಿವೈಟಿಸ್‌ ಅಲರ್ಜಿಯ ಒಂದು ಪ್ರತಿಕ್ರಿಯೆಯಾಗಿದೆ. ಪುಷ್ಪ ಪರಾಗ  ಮತ್ತು ಪ್ರಾಣಿಗಳ ಚರ್ಮದ ಹೊಟ್ಟು  ಮುಂತಾದ ಅವಶೇಷಗಳಿಂದ ಕೂಡಿದ ವಸ್ತುಗಳಿಂದ ಕಂಜಿಂಕ್ಟಿವಾದ  ಉರಿಯೂತ ಉಂಟಾದಾಗ ಇದು ಕಂಡುಬರುತ್ತದೆ. ಇದು ಸಾಮಾನ್ಯವಾಗಿ ನಿಗದಿತ ಹವಾಮಾನದಲ್ಲಿ ಬರುವಂತಹ (ಸಾಮಾನ್ಯವಾಗಿ ಬೇಸ‌ಗೆಯಲ್ಲಿ) ಕಾಯಿಲೆಯಾಗಿದೆ. ಹೆಚ್ಚಾಗಿ ಅಲರ್ಜಿ ಇರುವವರ ನಡುವೆ ಈ ತೊಂದರೆಯನ್ನು ಕಾಣಬಹುದು.  ಜನಸಂಖ್ಯೆಯ 90 % ಭಾಗದ ವಾರ್ಷಿಕ ಲೆಕ್ಕಾಚಾರದ ವಿಶ್ಲೇಷಣೆಯ ಆಧಾರದ ಮೇಲೆ ಈ ಕಾಯಿಲೆಯನ್ನು ಅಂದಾಜಿಸಲಾಗಿದೆ. ಇದರ ಅರ್ಧದಷ್ಟು ಜನರಿಗೆ ವೈಯಕ್ತಿಕ ಅಥವಾ ಕುಟುಂಬದಿಂದ ಈ ತೊಂದರೆ ಬರಬಹುದು.

        ಅಲರ್ಜಿಕಾರಕ ಕಂಜಂಕ್ಟಿವೈಟಿಸ್‌ಗೆ ಕಾರಣ 

        ಅಲರ್ಜಿನ್‌ ದೇಹದ ನಿರೋಧಕ ವ್ಯವಸ್ಥೆ ಯಾಗಿದ್ದು , ಅಲರ್ಜಿಯ ಪ್ರತಿಕ್ರಿಯೆಯನ್ನುಂಟು ಮಾಡುತ್ತದೆ. ಅಲರ್ಜಿಕಾರಕ ಕಂಜಂಕ್ಟಿವೈಟಿಸ್‌ ಏರಿಳಿತದ ಜ್ವರ, ಉಬ್ಬಸ ಮತ್ತು ತುರಿಕೆ ಮುಂತಾದ ರೋಗದ ಲಕ್ಷಣಗಳನ್ನು ಹೊಂದಿರುತ್ತದೆ. ಕಂಜಂಕ್ಟಿವೈಟಿಸ್‌ ಉಂಟುಮಾಡುವ ಅಲರ್ಜಿಕಾರಕಗಳು ಹಲವು. ಮರಗಳು, ಹುಲ್ಲು ಮತ್ತು ಅಲರ್ಜಿ ಉಂಟುಮಾಡುವ ಯಾವುದೇ ಗಿಡ, ಪ್ರಾಣಿಚರ್ಮ, ಸುಗಂಧ ದ್ರವ್ಯ, ಶೃಂಗಾರ ಸಾಧನಗಳು, ಚರ್ಮದ ಔಷಧಿಗಳು, ವಾಯು ಮಾಲಿನ್ಯ, ಹೊಗೆ, ಧೂಳು, ಕ್ರಿಮಿಗಳು, ಕಣ್ಣಿನ ಡ್ರಾಪ್ಸ್‌ ... ಮುಂತಾದವುಗಳಿಂದ ಕಂಜಂಕ್ಟಿವೈಟಿಸ್‌ ಅಲರ್ಜಿ  ಉಂಟಾಗಬಹುದು.

        ದೀರ್ಘ‌ಕಾಲಿಕ (ಶಾಶ್ವತ ಅಥವಾ ವರ್ಷಪೂರ್ತಿ ಮುಂದುವರಿಯುವ) ಕಂಜಂಕ್ಟಿವೈಟಿಸ್‌ಗೆ ಸಾಮಾನ್ಯವಾಗಿ ಮನೆಯ ಧೂಳು ಕ್ರಿಮಿ ( ಪ್ರತಿ ಮನೆಯಲ್ಲಿ  ವಾಸಿಸುವ ಒಂದು ಪುಟ್ಟ ಕೀಟದ ತರಹದ ಜೀವಿ) ಕಾರಣವಾಗಿರುತ್ತದೆ. ದೈತ್ಯ ಗುಳ್ಳೆ ಕಂಜಂಕ್ಟಿವೈಟಿಸ್‌ ಅವಶೇಷಗಳಿಂದಾಗಿ ಉಂಟಾಗುವ ಅಲರ್ಜಿಗೆ ಕಾರಣವಾಗಿರುತ್ತದೆ. ದೈತ್ಯ ಗುಳ್ಳೆ ಕಂಜಂಕ್ಟಿವೈಟಿಸ್‌ ಅವಶೇಷಗಳಿಂದಾಗಿ ಉಂಟಾಗುವ ಅಲರ್ಜಿ ಪ್ರತಿಕ್ರಿಯೆಯು ಒಂದು  ಅಪರೂಪದ ಸ್ಥಿತಿಯಾಗಿದೆ.

        ಲಕ್ಷಣಗಳು

        ಲಕ್ಷಣಗಳು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು  - ಕೆಂಪು ಕಣ್ಣುಗಳು, ತೀವ್ರ ತುರಿಕೆ ಆಥವಾ ಕಣ್ಣಿನ ಊರಿಯೂತ, ಕಣ್ಣಿನ ರೆಪ್ಪೆ ಊದುವಿಕೆ, ಕಣ್ಣಿನಲ್ಲಿ ನೀರು ಬರುವುದು, ಕಣ್ಣಿನಲ್ಲಿ ಹಿಕ್ಕು ವಿಸರ್ಜನೆ.

        ವರ್ಗೀಕರಣ
        ಕಾಲೋಚಿತ (ಋತುಮಾನದ )  (seasonal) ಅಲರ್ಜಿಕ್‌ ಕಂಜಂಕ್ಟಿವೈಟಿಸ್‌ (SAC) ಮತ್ತು  ದೀರ್ಘ‌ಕಾಲಿಕ  ಕಛಿrಛಿnnಜಿಚl ಅಲರ್ಜಿಕ್‌ ಕಂಜಿಂಕ್ಟಿವೈಟಿಸ್‌ (PAC)   
                    
        ಕಂಜಿಂಕ್ಟಿವಾ ವ್ಯಾಧಿಗೆ  ಈ ಎರಡೂ ಅಲರ್ಜಿಗಳು ಕಾರಣವಾಗಿವೆ.   ಖಅಇ ಒಂದು ಸಾಮಾನ್ಯ ಅಲರ್ಜಿಯಾಗಿದೆ. ಕಣ್ಣುಗಳಲ್ಲಿ  ತುರಿಕೆ ಮತ್ತು ಕಣ್ಣು ಗುಲಾಬಿಯಿಂದ ಕೆಂಪು ಬಣ್ಣಕ್ಕೆ ಬರುವುದು  ಈ ರೋಗದ ಸಾಮಾನ್ಯ ಲಕ್ಷಣವಾಗಿದೆ.

        ವಸಂತ ಋತುವಿನ ಕೆರಾಟೊ ಕಂಜಂಕ್ಟಿವೈಟಿಸ್‌ ( Vernal keratoconjunctivitis( VKC )  ಮತ್ತು ಅಟೋಪಿಕ್‌ ಕೆರಾಟೋ ಕಂಜಂಕ್ಟಿವೈಟಿಸ್‌ (Atopic keratoconjunctivitis(AKC).


        VKC ಮತ್ತು AKC ಎರಡು ಕೂಡ ದೀರ್ಘ‌ಕಾಲದ ಅಲರ್ಜಿಕ್‌ ಕಾಯಿಲೆಯಾಗಿವೆ.   VAC  ಒಂದು ಬಾಲ್ಯದ ರೋಗವಾಗಿದ್ದು,  ಉಷ್ಣ  ವಾತಾವರಣದಲ್ಲಿ  ವಾಸಿಸುತ್ತಿರುವ 4-15ವರ್ಷಗಳ ವಯಸ್ಸಿನವರಲ್ಲಿ ಕಂಡು ಬರುತ್ತಿದೆ. ಸಾಮಾನ್ಯವಾಗಿ ಇದರಲ್ಲಿ ಕಣ್ಣುಗಳು ಮೇಲಿನ  tarsal ಕಂಜಂಕ್ಟಿವಾವನ್ನು ಒಳಗೊಂಡಿರುತ್ತದೆ. ಇದು ಇಟ್ಟಿಗೆಯಾಕಾರದ ಗಾಯವನ್ನು  ಹೊಂದಿದ್ದು  ಗಟ್ಟಿಯಾದ ಸಮತಟ್ಟಾದ ಗುಳ್ಳೆಯ ಅಸ್ತಿತ್ವವನ್ನು  ಹೊಂದಿದೆ. ಇದರಲ್ಲಿ ಅಂಗಾಂಶದ ಜಿಲೆಟಿನ್‌ನ ದಪ್ಪದಾದ ಒಂದು ಪದರ  ಮತ್ತು  limbus ಪ್ರತ್ಯೇಕವಾದ ನಸುಬಿಳಿಯ ಬೆಳೆದ ಚುಕ್ಕೆಗಳಾಗಿ  ಕಾಣುತ್ತವೆ. ಪ್ರಥಮವಾಗಿ VKC ಕಾರ್ನಿಯಾವನ್ನು ಒಳಗೊಂಡಿರಬಹುದು ಆಥವಾ ಲಿಂಬಸ್‌ ವಿಸ್ತರಣೆಯಿಂದ ದ್ವಿತೀಯ  ಹಂತದಲ್ಲಿ ಕಾರ್ನಿಯಾ ಒಳಗಾಗಬಹುದು.

        AKC  ಸಾಮಾನ್ಯವಾಗಿ ಗಂಡಸರಲ್ಲಿ  ಕಂಡುಬರುವ ಕಾಯಿಲೆಯಾಗಿದೆ. ಚರ್ಮದ ಕಾಯಿಲೆಯಿರುವ 20-40% ವ್ಯಕ್ತಿಗಳಲ್ಲಿ ಇದನ್ನು ಕಾಣಬಹುದು  ಮತ್ತು ತುರಿಕೆ ಇರುವ 95% ಮತ್ತು ಉಬ್ಬಸ ಇರುವ 87% ಜನರಲ್ಲಿ  ಈ ಕಾಯಿಲೆಯು ಜಾಸ್ತಿಯಾಗಿ ಕಂಡುಬರುತ್ತದೆ.

        Giant papillaryಕಂಜಂಕ್ಟಿವೈಟಿಸ್‌

        Giant papillary  ಕಂಜಂಕ್ಟಿವೈಟಿಸ್‌ ಕಣ್ಣಿನ ಅಲರ್ಜಿಕ್‌  ಪ್ರತಿಕ್ರಿಯೆಯಿಂದ ಉಂಟಾಗುವ ಅಲರ್ಜಿ ಎಂದು ಹೇಳಲಾಗು ವುದಿಲ್ಲ  ಇದು ಕಂಜಂಕ್ಟೆ„ವಾದ ಯಾಂತ್ರಿಕ ತುರಿಕೆಯಿಂದ ಉಂಟಾಗುತ್ತದೆ. ಕಾಂಟಾಕ್ಟ್ ಲೆನ್ಸ್‌  ಬಳಕೆಯಿಂದಾಗಿ ಉಂಟಾಗುವ ಕಂಜಂಕ್ಟೆ„ವಾದ  ತುರಿಕೆ ಪುನರಾ ವರ್ತಿತವಾಗಲು  ಎಜಿಚnಠಿ Giant papillary ಕಂಜಂಕ್ಟಿವೈಟಿಸ್‌ ಕಾರಣವಾಗುತ್ತದೆ.

        Phlyctenular
        ಕೆರಾಟೋಕಂಜಿಂಕ್ಟಿವೈ ಟಿಸ್‌ (keratoconjunctivitis )


        ಇದು ಒಂದು ಅಲರ್ಜಿಯಾಗಿದ್ದು,  ಸೂಕ್ಷ್ಮ ಬ್ಯಾಕ್ಟೀರಿಯಾದ ಪ್ರತಿಕ್ರಿಯೆಯ ಫ‌ಲಿತಾಂಶವಾಗಿದೆ. ಸಾಮಾನ್ಯ ಕಾರಣಗಳಾಗಿ-ಸ್ಟೆಫೈಲೊಕಾಕಲ್‌ ಅರೆಯಸ್‌,  ಮೈಕೋಬ್ಯಾಕ್ಟೀರಿಯಾ ಟುಬೆರಕ್ಯುಲೋಸಿಸ್‌ (ಕ್ಷಯ ), ಕ್ಲೆಮೈಡಿಯ ಇರುತ್ತವೆ.

        ಚಿಕಿತ್ಸೆ

        ರೋಗಿಯು ತನ್ನ ತೊಂದರೆಯ ಸಂಪೂರ್ಣವಾದ ಮಾಹಿತಿಯನ್ನು  ವೈದ್ಯರಿಗೆ  ನೀಡಿದರೆ, ಅದು ಅಲರ್ಜಿ ಯಿಂದ ಬಂದಿದೆಯೊ ಅಥವಾ ಇತರ ಕಾರಣಗಳಿಂದ ಬಂದಿದೆಯೋ ಎಂದು ತಿಳಿಯಲು ಸಹಾಯವಾಗುತ್ತದೆ. ಕಂಜಂಕ್ಷೆ„ವಾವನ್ನು  ಕೆರೆದು, ಕೆರೆದ ಚೂರನ್ನು ಪ್ರಯೋಗಾಲಯಕ್ಕೆ  ಕೊಟ್ಟು, ಅದರಲ್ಲಿರುವ eosinophils ಪ್ರಮಾಣ ಕಂಡು ಹುಡುಕಿದರೆ, ಈ ಅಲರ್ಜಿಗೆ ಕಾರಣ ತಿಳಿಯಬಹುದು.
        ಸ್ವಲ್ಪ  ಪ್ರಮಾಣದಲ್ಲಿ ಅಲರ್ಜಿಕ್‌ ಲಕ್ಷಣಗಳು ಕಂಡುಬಂದರೆ, ತಣ್ಣೀರಿನ ಪಟ್ಟಿಯನ್ನು  ಉಪಯೋಗಿಸುವುದರಿಂದ  ಉಪಶಮನ ದೊರೆಯುತ್ತದೆ.

        ರೋಗಿಗೆ  ತುರಿಕೆ ಮತ್ತು ಉರಿಯುವಿಕೆ ಲಕ್ಷಣಗಳು ಇದ್ದಲ್ಲಿ, ಅದರಿಂದ ಆರಾಮವನ್ನು  ಪಡೆಯಲು, ಆಂಟಿಹಿಸ್ಟಮೈನ್‌  (Antihistamine) ಔಷಧಗಳನ್ನು  ವೈದ್ಯರು ಸೂಚಿಸುತ್ತಾರೆ.
        ತಣ್ಣೀರಿನ ಪಟ್ಟಿಯಿಂದ ಸಂಕುಚಿತ  ಗೊಂಡು ದೊಡ್ಡ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿ ಮಾಸ್ತ ಕಣಗಳ ಸ್ಥಿರಕಾರಕದಿಂದ (Mast cell stabilizers ) ಅಲರ್ಜಿಕ್‌ ಕಂಜಂಕ್ಟಿವೈಟಿಸ್‌ ಹೊಂದಿರುವ ರೋಗಿ ಬೇಗ ಗುಣಮುಖರಾಗಲು ಸಹಾಯವಾಗುತ್ತದೆ. ಅವರು ತಡವಾಗಿ ಅದರ ಉಪಯೋಗವನ್ನು  ಪಡೆಯುತ್ತಾರೆ ಇದರಿಂದ ಅಡ್ಡ  ಪರಿಣಾಮಗಳು ಕಡಿಮೆಯಾಗಿರುತ್ತವೆ.

        ಮಾಸ್ತ ಕಣಗಳ ಸ್ಥಿರಕಾರಕದಲ್ಲಿ ಮಾಸ್ತ ಜೀವಕೋಶಗಳು ರಾಸಾಯನಿಕ ಬಿಡುಗಡೆಗೊಂಡು ಉರಿಯೂತ ಮಾಡುವುದು ಕಡಿಮೆ ಮಾಡುತ್ತದೆ.

        ವೈದ್ಯರು ಇದಕ್ಕೆ  ಅಗತ್ಯವಾಗಿ  ಡಿಕಂಜಸ್ಟೆಂಟ್ಸ್‌ಎಂಬ ಔಷಧಿಯನ್ನು ಸೂಚಿಸಬಹುದು.
        ಸ್ಟೀರಾಯ್ಡ ಕಣ್ಣಿನ  ಡ್ರಾಪ್ಸ್‌ ಗಳನ್ನು ಮಿತವಾಗಿ ಮತ್ತು ಅಗತ್ಯವಿದ್ದರೆ  ಮಾತ್ರ ಬಳಸಲಾಗುತ್ತದೆ. ಕಣ್ಣಿನ ಅಲರ್ಜಿ ಹೆಚ್ಚಾದ ಸಂದರ್ಭದಲ್ಲಿ ಅಥವಾ ಇತರ ಚಿಕಿತ್ಸೆಗಳು ವಿಫ‌ಲಗೊಂಡರೆ ಸ್ಟೀರಾಯ್ಡ ಕಣ್ಣಿನ ಡ್ರಾಪ್ಸ್‌ ನ್ನು ಉಪಯೋಗಿಸಲಾಗುತ್ತದೆ. ಈ  ಡ್ರಾಪ್ಸನ್ನು  ನಿಮ್ಮ ವೈದ್ಯರ ಸಲಹೆ ಪ್ರಕಾರ ಮಾತ್ರ ಉಪಯೋಗಿಸಬೇಕು. ಆ ಚಿಕಿತ್ಸೆ ಯಲ್ಲಿ ಅಡ್ಡ ಪರಿಣಾಮಗಳು ಆಗದಂತೆ  ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಾಲಿಸುವುದು ಮುಖ್ಯ. (ಸ್ಟೀರಾಯ್ಡ ಕೆಲವು  ಇತರ ಕಣ್ಣಿನ ತೊಂದರೆಗಳನ್ನು ಜಟಿಲಗೊಳಿಸಬಹುದು).

        ಪುಷ್ಪಪರಾಗದಂತಹ ಬಾಹ್ಯ ವಸ್ತು ಗಳಿಂದ ಹೆಚ್ಚಿನ ಅಲರ್ಜಿಯನ್ನು  ಹೊಂದಿರುವ ಜನರಿಗೆ ಹೆಚ್ಚಾಗಿ ಮನೆಯೊಳಗೆ ಉಳಿಯಲು ಸಲಹೆ ಮಾಡಲಾಗುತ್ತದೆ. ಅಲರ್ಜಿಕ್‌ ಕಂಜಂಕ್ಟಿವೈಟಿಸ್‌ನ ಅಭಿವೃದ್ಧಿಯನ್ನು  ತಡೆಯಲು,  ಬೇಸಗೆ ಕಾಲದಲ್ಲಿ ತಂಪಾದ ಗಾಳಿ ಇರುವ ಅನಿಲವನ್ನು  ಬಳಸಲು  ಸಲಹೆ ಮಾಡಲಾಗುತ್ತದೆ. ಅಲರ್ಜಿಗೆ ಕಾರಣವಾಗುವ ಅಲರ್ಜಿ ನ್‌ನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು.

        ಗಮನಿಸಿ: ಒಂದು  ವೇಳೆ ನೀವು ಗರ್ಭಿಣಿಯಾಗಿದ್ದಲ್ಲಿ , ಮತ್ತು  ಎದೆ ಹಾಲು ಕೊಡುವವರಾಗಿದ್ದಲ್ಲಿ, ಕೆಲವು ಚಿಕಿತ್ಸೆಗಳು (ಕೆಲವು ಕಣ್ಣಿನ ಡ್ರಾಪ್ಸ್‌ ಸೇರಿದಂತೆ) ನಿಮಗೆ ಸಲ್ಲವು. ಹಾಗಾಗಿ ಇದನ್ನು ವೈದ್ಯರಿಗೆ ಮೊದಲೇ ತಿಳಿಸಬೇಕಾಗುತ್ತದೆ.
         
        ಕಂಜಂಕ್ಟಿವೈಟಿಸ್‌ ಚಿಕಿತ್ಸೆ :

        ಈ ರೋಗಕ್ಕೆ ಕಾಂಟಾಕ್ಟ್ ಲೆನ್ಸ್‌ ಇರುವುದು ಒಂದು ಪ್ರಮುಖವಾದ ಕಾರಣವಾಗಿದೆ. ಚಿಕಿತ್ಸೆ ಸುಸೂತ್ರವಾಗಿ ಮುಗಿಯುವ ತನಕ ರೋಗಿ ಕಾಂಟಾಕ್ಟ್ ಲೆನ್ಸ್‌ ತೆಗೆಯಬೇಕಾಗುತ್ತದೆ. ಒಮ್ಮೆ ಇಟ್ಟ ಲೆನ್ಸ್‌  ಸುಧಾರಿಸಿಕೊಳ್ಳಲು ಅಥವಾ ಲೆನ್ಸ್‌ನು°  ಬದಲಾಯಿಸುವ ರೀತಿಯನ್ನು ವೈದ್ಯರು ಸಲಹೆ ಮಾಡಬಹುದು ಆಂಟಿಹಿಸ್ಟಮೈನ್‌ ಅಥವಾ ಮೇಲೆ ವಿವರಿಸಲಾದ ಮಾಸ್ತ ಕಣಗಳ ಸ್ಥಿರಕಾರಕ ಕಣ್ಣಿನ ಡ್ರಾಪ್ಸ್‌ ಅದರ ಲಕ್ಷಣಗಳನ್ನು  ಕಡಿಮೆಗೊಳಿಸಲು ಸಹಾಯಕವಾಗುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus