Sunday, May 19, 2013
Last Updated: 6:33:48 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಲೇರಿಯಾ: ಕೆಲವು ಮಾಹಿತಿಗಳು
    • ಮಲೇರಿಯಾ ಹರಡುವಿಕೆ ಚಕ್ರ.

      • ಡಾ| ಅಬುಲ್‌ ಫಝಿಲ್‌ ,ಅಸಿಸ್ಟಂಟ್‌ ಪ್ರೊಫೆಸರ್‌, ಮೆಡಿಸಿನ್‌ ವಿಭಾಗ | May 27, 2012

        ಮಲೇರಿಯಾ ಎಂದರೇನು?

        ಮಲೇರಿಯಾ  ಎಂಬುದು ಪರೋಪ  ಜೀವಿಯ ಸೋಂಕಿನಿಂದ  ಬರುವ ಕಾಯಿಲೆ. ಪ್ಲಾಸ್ಮೋಡಿಯಂ  ಎಂಬ  ಪ್ರೊಟೊಜೋವಾದಿಂದ ಈ ಕಾಯಿಲೆ  ಬರುತ್ತದೆ. ಪ್ರತೀ ವರ್ಷವೂ ಈ ಕಾಯಿಲೆಯು ಸಮಾರು 650 ಮಿಲಿಯ ಜನರನ್ನು   ಬಾಧಿಸುತ್ತದೆ ಹಾಗೂ  ಒಂದರಿಂದ ಮೂರು ಮಿಲಿಯನ್‌ ಜನರ  ಸಾವಿಗೆ ಕಾರಣವಾಗುತ್ತಿದೆ. ಇವರಲ್ಲಿ  ಹೆಚ್ಚಿನವರು  ಚಿಕ್ಕ  ಪ್ರಾಯದ ಮಕ್ಕಳು. ಬಡತನಕ್ಕೂ  ಮಲೇರಿಯಾಕ್ಕೂ  ಹತ್ತಿರದ ಸಂಬಂಧವಿದೆ. ಬಡತನದ ಕಾರಣದಿಂದಲೇ  ಮಲೇರಿಯಾ ಬಾಧಿಸುತ್ತದೆಯಾದರೂ, ಆರ್ಥಿಕ ಹಿನ್ನಡೆಗೂ ಮಲೇರಿಯಾವೇ ಕಾರಣವಾಗಬಹುದು. ಹೆಚ್ಚಾಗಿ  ಪ್ಲಾಸ್ಮೋಡಿಯಂ  ಫಾಲ್ಸಿಫಾರಮ್‌  (plasmodium falciparum)  ಎಂಬ ಪರೋಪಜೀವಿಯು  ಈ ರೋಗವನ್ನು  ಹರಡುತ್ತದೆ.
        ಸಮಾಜದ ಜನತೆಯ ಆರೋಗ್ಯದ ಸಮಸ್ಯೆಗೆ  ಕಾರಣವಾಗುತ್ತಿರುವ ಮಲೇರಿಯಾವು ಇಂದು  ಬಹುವಾಗಿ ಬಾಧಿಸುತ್ತಿರುವ  ಅಂಟುರೋಗವೆನಿಸಿದೆ. ಪ್ಲಾಸ್ಮೋಡಿಯಂ  ಜಾತಿಗೆ ಸೇರಿದ  ಪ್ರೊಟೊಜೋವಾ ಪರೋಪಜೀವಿಯು  ಈ ರೋಗವನ್ನು  ಹರಡುತ್ತದೆ. ಪ್ಲಾಸ್ಮೋಡಿಯಂ  ಫಾಲ್ಸಿಫಾರಮ್‌ ಹಾಗೂ ಪ್ಲಾಸ್ಮೋಡಿಯಂ ವೈವ್ಯಾಕ್ಸ್‌ (plasmodium vivax) ಪರೋಪಜೀವಿಗಳು, ಬಹಳ ತೀವ್ರ ರೂಪದ ಮಲೇರಿಯಾವನ್ನು  ಹರಡುತ್ತವೆ. ಆದರೆ ಈ ಜಾತಿಯ ಇತರ ಪರೋಪಜೀವಿಗಳೂ (ಪ್ಲಾಸ್ಮೋಡಿಯಂ ಓವೇಲ್‌- (plasmodium ovale),  ಪ್ಲಾಸ್ಮೋಡಿಯಂ ಮಲೇರಿಯೇ - (plasmodium malariae),  ಹಾಗೂ ಕೆಲವು  ಸಲ  ಪ್ಲಾಸ್ಮೋಡಿಯಂ ನೋಲೆಸಿ - (asmodium knowlesi)  ಸಹ ಮನುಷ್ಯನಿಗೆ ಮಲೇರಿಯಾ ಸೋಂಕನ್ನು ಉಂಟು ಮಾಡುತ್ತವೆ. ಮನುಷ್ಯರಿಗೆ ರೋಗ ಹರಡುವ  ಈ  ಗುಂಪಿನ  ಪ್ಲಾಸ್ಮೋಡಿಯಂಗಳಿಗೆ ಮಲೇರಿಯಾ ಪರೋಪಜೀವಿಗಳು ಎಂದು ಕರೆಯುತ್ತಾರೆ.

        ಮಲೇರಿಯಾ   ಪರೋಪಜೀವಿಯು  ನೇರವಾಗಿ ರೋಗವನ್ನು  ಹರಡದೆ, ರೋಗವಾಹಕ ಸೋಂಕುಕಾರಕಗಳ ಮೂಲಕ ಈ ರೋಗವು  ಹರಡುತ್ತದೆ. ಹೆಚ್ಚಾಗಿ ಮಲೇರಿಯಾ ಪರೋಪಜೀವಿಗಳು  ಅನಾಫಿಲೀಸ್‌ ಸೊಳ್ಳೆಗಳ ಮೂಲಕ ಹರಡುತ್ತವೆ. ಪರೋಪಜೀವಿಗಳು ರಕ್ತದಲ್ಲಿ ಸೋಂಕನ್ನು ಉಂಟುಮಾಡಿ, ಕೆಂಪು ರಕ್ತಕಣದಲ್ಲಿ ದ್ವಿಗುಣಗೊಂಡು, ರಕ್ತಹೀನತೆಯೇ ಮೊದಲಾದ (ತಲೆ ಭಾರವಾಗುವುದು, ಉಸಿರು ಕಟ್ಟುವುದು, ಹೃದಯ ತೀವ್ರವಾಗಿ  ಬಡಿದುಕೊಳ್ಳುವುದು...   ಇತ್ಯಾದಿ) ಮಲೇರಿಯಾ  ರೋಗ ಲಕ್ಷಣಗಳನ್ನು ಉಂಟುಮಾಡುತ್ತವೆ. ಇಷ್ಟೇ  ಅಲ್ಲದೆ,  ಇನ್ನಿತರ  ಸಾಮಾನ್ಯ ಲಕ್ಷಣಗಳಾದ  ಜ್ವರ, ಚಳಿ, ವಾಕರಿಕೆ, ಫ್ಲೂ - ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕಾಯಿಲೆಯು ತೀವ್ರವಾದರೆ, ಕೋಮಾಸ್ಥಿತಿ ಅಂದರೆ  ಪ್ರಜ್ಞಾಹೀನತೆ ಅಥವಾ  ಮರಣ ಸಂಭವಿಸಬಹುದು. ಮಲೇರಿಯಾದಲ್ಲಿ  ಜ್ವರ, ಚಳಿ, ಮೂಳೆಗಳಲ್ಲಿ ಅಥವಾ ಸಂ—ಗಳಲ್ಲಿ ನೋವು, ವಾಂತಿ, ರಕ್ತ ಹೀನತೆ, ಮೂತ್ರದಲ್ಲಿ ಅಸಜವಾಗಿ ಹೆಚ್ಚು ಹೆಮೊಗ್ಲೋಬಿನ್‌ ವಿಸರ್ಜನೆ, ಹಾಗೂ ಸೆಳವು ಇತ್ಯಾದಿ ಲಕ್ಷಣಗಳೂ ಇರುತ್ತವೆ. ಪ್ಲಾಸ್ಮೋಡಿಯಂ ಫಾಲ್ಸಿಫಾರಂ ಪರೋಪಜೀವಿಯು ಮಲೇರಿಯಾ ಹರಡಿದ್ದರೆ, ಚರ್ಮದಲ್ಲಿ ಜುಮುಗುಡುವ ಅಥವಾ ಇರುವೆ ಹರಿದಾಡಿದಂತಹ ಸಂವೇದನೆ ಇರಬಹುದು.  ಮಲೇರಿಯಾ ಕಾಯಿಲೆಯಲ್ಲಿ  ಇರುವಂತಹ ಗಮನಾರ್ಹ ಲಕ್ಷಣ   ಅಂದರೆ ಒಂದು ಆವರ್ತದಲ್ಲಿ  ಕ್ರಮವಾಗಿ ಕಾಣಿಸಿಕೊಳ್ಳುವ ಹಠಾತ್‌ ಚಳಿ, ನಡುಕ   ಹಾಗೂ  ಜ್ವರ, ಆ ಮೇಲಿನ  ನಾಲ್ಕರಿಂದ ಅರು ಗಂಟೆಯೊಳಗೆ  ಬೆವರುವುದು, ಮಲೇರಿಯಾವು ಪ್ಲಾಸ್ಮೋಡಿಯಂ ವೈವ್ಯಾಕ್ಸ್‌  ಅಥವಾ  ಪ್ಲಾಸ್ಮೋಡಿಯಂ ಓವೇಲ್‌  ರೋಗಾಣುಗಳಿಂದ ಹರಡಿದ್ದರೆ, ಈ  ಲಕ್ಷಣಗಳು  ಎರಡು  ದಿನಗಳಿಗೊಮ್ಮೆ   ಕಾಣಿಸಿಕೊಳ್ಳುತ್ತವೆ. ಪ್ಲಾಸ್ಮೋಡಿಯಂ  ಮಲೇರಿಯೇ ರೋಗಾಣುವಿನಿಂದ ಮಲೇರಿಯಾ ಆಗಿದ್ದರೆ, ಇದೇ ಲಕ್ಷಣಗಳು ಮೂರು ದಿನಗಳಿಗೊಮ್ಮೆ  ಕಾಣಿಸಿಕೊಳ್ಳುತ್ತವೆ. ಪ್ಲಾಸ್ಮೋಡಿಯಂ ಫಾಲ್ಸಿಫಾರಂನಿಂದ ಹರಡಿರುವ ಮಲೇರಿಯಾದಲ್ಲಿ  ಪ್ರತೀ 36-48 ಗಂಟೆಗಳೊಳಗೆ ಮತ್ತೆ ಮತ್ತೆ ಜ್ವರ ಮರುಕಳಿಸುತ್ತದೆ ಅಥವಾ ಜ್ವರ ಹಾಗೆಯೇ  ನಿರಂತರವಾಗಿ ಮುಂದುವರಿಯುತ್ತಿರುತ್ತದೆ. ರೋಗಾಣು ಪರೋಪಜೀವಿಯು  ಬೆಳೆದಂತೆಲ್ಲಾ, ಅದು ಯಾವ ಕೆಂಪು ರಕ್ತ ಕಣದಲ್ಲಿ   ಬೆಳೆಯುತ್ತಿದೆಯೋ, ಅದು ಒಡೆದು ಜಾಂಡೀಸ್‌ (ಚರ್ಮ ಹಾಗೂ ಕಣ್ಣಿನ ಬಿಳಿಯ  ಭಾಗವು  ಹಳದಿಯಾಗುವುದು) ಆಗಿ, ಇದರ ಜೊತೆಗೆ ರಕ್ತಹೀನತೆ  ಸಹ ಕಾಣಿಸಿಕೊಳ್ಳಬಹುದು.

        ಸೊಳ್ಳೆಗಳಲ್ಲಿ ಸುಮಾರು 400 ವರ್ಗಗಳಿದ್ದು, ಇವುಗಳಲ್ಲಿ  35 ಜಾತಿಯವುಗಳು  ಪ್ಲಾಸೋ¾ಡಿಯಂ ಪರೋಪಜೀವಿಯನ್ನು  ಮನುಷ್ಯರಿಗೆ ಹರಡಬಲ್ಲವು. ಈ ಅನಾಫಿಲೀಸ್‌ ಸೊಳ್ಳೆಗಳಲ್ಲೆಲ್ಲಾ  ಅನಾಫಿಲೀಸ್‌  ಗ್ಯಾಂಬಿಯ  ಎಂಬುದು ಬಹಳ ಪ್ರಸಿದ್ದವಾದುದು. ಯಾಕೆಂದರೆ ಇದು  ತನ್ನ ಮೂಲಕ ಪ್ಲಾಸ್ಮೋಡಿಯಂ ಫಾಲ್ಸಿಫಾರಂ  ಎಂಬ   ಪರೋಪಜೀವಿಯನ್ನು  ಮನುಷ್ಯನಿಗೆ ಹರಡಿ, ಬಹಳ ತೀವ್ರ ರೂಪದ ಹಾಗೂ ಮಾರಕ ಮಲೇರಿಯಾ ಉಂಟು ಮಾಡುತ್ತದೆ. ಕೇವಲ  ಹೆಣ್ಣು  ಅನಾಫಿಲಿಸ್‌ ಮಾತ್ರವೇ  ಮಲೇರಿಯಾವನ್ನು  ಹರಡುತ್ತವೆ. ಮಕರಂದ ಹಾಗೂ ಸಿಹಿ ಪದಾರ್ಥಗಳನ್ನು  ಸೇವಿಸಿ  ಜೀವಿಸುವ ಗಂಡು ಅನಾಫಿಲಿಸ್‌  ಒಂದು ವಾರ ಮಾತ್ರವೇ ಬದುಕುತ್ತದೆ. ಹೆಣ್ಣು ಅನಾಫಿಲಿಸ್‌ ಶಕ್ತಿಯನ್ನು  ಪಡೆಯಲು,  ಸಿಹಿ ಅಂಶವನ್ನು  ಸೇವಿಸುತ್ತದೆಯಾದರೂ, ಅದರ ಮೊಟ್ಟೆಗಳ  ಬೆಳವಣಿಗೆಗೆ , ರಕ್ತ ಸೇವನೆ  ಆವಶ್ಯಕ. ಹೊಟ್ಟೆ  ಭರ್ತಿಯಾಗುವಂತೆ  ರಕ್ತವನ್ನು ಹೀರಿದ ನಂತರ,  ಸೊಳ್ಳೆಯು ಕೆಲವು  ದಿನಗಳವರೆಗೆ ವಿಶ್ರಾಂತಿಯನ್ನು  ತೆಗೆದುಕೊಂಡು, ರಕ್ತವನ್ನು  ಜೀರ್ಣಿಸಿಕೊಂಡು, ಮೊಟ್ಟೆಯನ್ನು  ಬೆಳೆಸುತ್ತದೆ. ಈ ಪ್ರಕ್ರಿಯೆಯು 2-3 ದಿನ ತೆಗೆದುಕೊಳ್ಳುತ್ತದೆಯಾದರೂ, ಇದು  ಉಷ್ಣತೆಯನ್ನು  ಆಧರಿಸಿರುವ  ಪ್ರಕ್ರಿಯೆಯಾಗಿದೆ. ನಂತರ  ಈ  ಸೊಳ್ಳೆಯು ಮೊಟ್ಟೆ  ಇಡುತ್ತದೆ. ಹೆಣ್ಣು ಸೊಳ್ಳೆಯು ಮಲೇರಿಯ ಬಾಧಿತನ ರಕ್ತವನ್ನು  ಹೀರಿದರೆ, ಆಗ ಪರೋಪ ಜೀವಿಯು ಆ ಹೆಣ್ಣು ಸೊಳ್ಳೆಯ  ದೇಹದಲ್ಲೇ ಬೆಳೆದು,  ಅದನ್ನೇ  ರೋಗವಾಹಕವನ್ನಾಗಿ  ಬಳಸುತ್ತದೆ.

        ಪ್ಲಾಸ್ಮೋಡಿಯಂ  ಪರೋಪಜೀವಿಗಳಲ್ಲಿ   ಎರಡು ವಿಧಗಳು : ಗಂಡು  (ಮೈಕ್ರೋಗ್ಯಾಮೆಟೋಸೈಟ್ಸ್‌ ) ಹಾಗೂ ಹೆಣ್ಣು  (ಮ್ಯಾಕ್ರೋಗ್ಯಾಮೆಟೋಸೈಟ್ಸ್‌), ಅನಾಫಿಲಿಸ್‌ ಸೊಳ್ಳೆಗಳು  ರಕ್ತವನ್ನು  ಹೀರುವಾಗ  ಈ  ಪರೋಪಜೀವಿಗಳನ್ನೂ  ಸಹ ತಮ್ಮೊಳಗೆ ಹೀರಿಕೊಳ್ಳುತ್ತವೆ. ಸೊಳ್ಳೆಯ ಹೊಟ್ಟೆಯನ್ನು  ಸೇರಿದ ಹೆಣ್ಣು ಹಾಗೂ ಗಂಡು  ಪರೋಪಜೀವಿಗಳು ಅಲ್ಲಿ  ಸಂಯೋಜನೆಗೊಂಡು, ಝೈಗೋಟ್‌ಗಳನ್ನು ಉತ್ಪಾದಿಸುತ್ತವೆ. ಈ  ಝೈಗೋಟ್‌ಗಳು ಉದ್ದನೆಯ , ಚಲನಶೀಲ ಕಣಗಳಾಗಿದ್ದು, ಊಸೈಟ್‌ಗಳಾಗಿ ಬೆಳೆಯುತ್ತವೆ. ಊಸೈಟ್‌ಗಳು  ಬೆಳೆದು ,  ನ್ಪೋರೋಝೈಟ್‌  ಬಿಡುಗಡೆ  ಮಾಡುತ್ತವೆ,  ಇವು ಸೊಳ್ಳೆಯ  ಲಾಲಾರಸ  ಗ್ರಂಥಿಯನ್ನು  ಸೇರಿಕೊಳ್ಳುತ್ತವೆ. ಸೊಳ್ಳೆಯು ಒಬ್ಬ  ಮನುಷ್ಯನನ್ನು  ಕಚ್ಚಿದಾಗ, ಅದರ ಲಾಲಾರಸ ಗ್ರಂಥಿಯಲ್ಲಿರುವ  ನ್ಪೋರೋಝೈಟ್‌ಗಳು, ಆ ಮನುಷ್ಯನ ದೇಹವನ್ನು  ಸೇರಿ, ಮಲೇರಿಯಾದ ಜೀವನಚಕ್ರ ಆರಂಭವಾಗುತ್ತದೆ.

        ರಕ್ತವನ್ನು  ಹೀರುವ ಸಂದರ್ಭದಲ್ಲಿ  ಅನಾಫಿಲಿಸ್‌  ಸೊಳ್ಳೆಯು ನ್ಪೋರೋಸೈಟ್‌ಗಳನ್ನು  ಮನುಷ್ಯನ ದೇಹದ ಒಳಕ್ಕೆ  ಚುಚ್ಚುತ್ತವೆ. ಈ  ಸ್ಟೋರೋಸೈಟ್‌ಗಳು ಪಿತ್ತಜನಕಾಂಗದ ಕೋಶಗಳಿಗೆ  ಸೋಂಕು ತಗಲಿಸಿ, ಅಲ್ಲೇ ಝಿಝೋಂಟ್‌ಗಳಾಗಿ ಬೆಳೆಯುತ್ತವೆ. ಈ   ಝಝೋಂಟ್‌ಗಳು  ಒಡೆದು ಮೆರೋಝಾಯಿಟ್‌ ಗಳು ಹೊರ ಬರುತ್ತವೆ (ಪ್ಲಾಸ್ಮೋಡಿಯಂ  ವೈವ್ಯಾಕ್ಸ್‌, ಪ್ಲಾಸ್ಮೋಡಿಯಂ ಒವೇಲ್‌ಗ‌ಳ ಸೋಂಕು  ತಗಲಿದ್ದರೆ, ಹಿಪೊಝಾಯಿಟ್‌ ಎಂಬ ಒಂದು ಹೆಚ್ಚುವರಿ  ಹಂತವಿರುತ್ತದೆ. ಸೋಂಕು  ತಗಲಿದ ಒಂದು ವಾರ ಅಥವಾ ಒಂದು  ವರ್ಷದ  ನಂತರ ರಕ್ತ ಪರಿಚಲನೆಯಲ್ಲಿ ರೋಗ ಲಕ್ಷಣಗಳು ಹರಡುತ್ತವೆ.) ಪಿತ್ತಜನಕಾಂಗದಲ್ಲಿ   ಈ  ರೀತಿಯಲ್ಲಿ  ವರ್ಧಿಸಿದ  ನಂತರ, ಪರೋಪಜೀವಿಯು  ಛಿryಠಿಜrಟcyಠಿಛಿs ನಲ್ಲಿ  ನಿರ್ಲಿಂಗಿ ಬಹುಸಂಖ್ಯಾತವಾಗುತ್ತವೆ ಮೆರೋಝಾಯಿಟ್‌ ಗಳು ಕೆಂಪು ರಕ್ತ ಕಣಗಳಿಗೆ  ಹಾನಿ ಉಂಟು  ಮಾಡುತ್ತವೆ. ಉಂಗುರದ ಹಂತದಲ್ಲಿರುವ ಟ್ರೋಪೋಝಾಯಿಟ್‌ಗಳು, ಸ್ಕಿಝೋಂಟ್‌ಗಳಾಗಿ ಪರಿವರ್ತನೆಯಾಗುತ್ತವೆ, ಇವುಗಳು ಒಡೆದು  ಮೆರೋಝಾಯಿಟ್‌ಗಳು ಹೊರಬರುತ್ತವೆ. ಕೆಲವು  ಪರೋಪಜೀವಿಗಳು  ಲಿಂಗೀಯ ಎರಿತ್ರೋಸೈಟಿಕ್‌  ಹಂತವನ್ನು  (ಜಚಞಛಿಠಿಟcyಠಿಛಿs) ಪಡೆಯುವುದಿದೆ. ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಲು  ರಕ್ತದ ಹಂತದ ಪರೋಪಜೀವಿಗಳು ಕಾರಣ.
        ಒಬ್ಬ  ಮನುಷ್ಯನ  ಪಿತ್ತಜನಕಾಂಗದಲ್ಲಿ  ಈ ಗಾಗಲೇ ಮಲೇರಿಯಾ ನ್ಪೋರೋಸೈಟ್‌ಗಳು  ಸುಪ್ತ  ರೀತಿಯಲ್ಲಿ ಇದ್ದು , ಆತನಿಗೆ  ಮಲೇರಿಯಾ ಸೋಂಕು  ಉಂಟಾದರೆ, ಆದರಲ್ಲೂ  ಪ್ಲಾಸ್ಮೋಡಿಯಂ  ಫಾಲ್ಸಿಫಾರಂ ಪರೋಪಜೀವಿಯ ಸೋಂಕು  ಉಂಟಾದರೆ, ಅಗ ಅದು ಮಾರಣಾಂತಿಕವಾಗುವ  ಅಪಾಯವು 1:10 ರಷ್ಟು  ಇರುತ್ತದೆ. ಒಂದು  ವೇಳೆ ಮಕ್ಕಳಲ್ಲಿ  ಈ ರೀತಿಯ ಸೋಂಕು ಆದರೆ, ಪರೋಪಜೀವಿಗಳು  ಹಾಗೂ ಹಾನಿಗೊಳಗಾದ ಕೆಂಪು  ರಕ್ತ ಕಣಗಳು  ಮಗುವಿನ ಬೆಳೆಯುತ್ತಿರುವ  ಮೆದುಳಿಗೆ ಹಾನಿಯುಂಟು ಮಾಡುತ್ತವೆ, ಗರ್ಭಿಣಿ  ಸ್ತ್ರೀಗೆ  ಮಲೇರಿಯಾ ಸೋಂಕು  ಉಂಟಾಗುವುದೂ  ಸಹ ಬಹಳ ಅಪಾಯಕಾರಿ . ಈ ಕಾರಣದಿಂದಾಗಿ  ಆಗಾಗ ಗರ್ಭಪಾತವಾಗಬಹುದು.

        ಸೋಂಕಿನ ಕಾರಣದಿಂದ
        ಉಂಟಾಗುವ ಕಾಯಿಲೆ

        ಮಲೇರಿಯಾ ಒಂದು ಸೋಂಕು ರೋಗ. ಪ್ಲಾಸ್ಮೋಡಿಯಂ ಪರೋಪಜೀವಿಯು ಕೆಂಪು ರಕ್ತ  ಕಣಗಳ ಮೇಲೆ ದಾಳಿ  ಮಾಡಿ ಈ  ಕಾಯಿಲೆಯನ್ನು ಹರಡುತ್ತದೆ. ಮಲೇರಿಯಾದ     ವಿಶೇಷ ಲಕ್ಷಣಗಳೆಂದರೆ, ಚಳಿ, ಜ್ವರ, ಸಂಧಿ ನೋವು  ಹಾಗೂ  ಬೆವರುವುದು. ಚಾರಿತ್ರಿಕವಾಗಿ, ಮನುಷ್ಯನ ಸೃಷ್ಟಿಯ ಆದಿಯಿಂದಲೂ ಮಲೇರಿಯಾ ರೋಗ ಇತ್ತು ಎನ್ನಬಹುದು. ಅಗಿನಿಂದಲೂ, ಪ್ಲಾಸ್ಮೋಡಿಯಂ  ಫಾಲ್ಸಿಫಾರಂ, ಪ್ಲಾಸ್ಮೋಡಿಯಂ ವೈವ್ಯಾಕ್ಸ್‌ , ಪ್ಲಾಸ್ಮೋಡಿಯಂ ಓವೇಲ್‌, ಪ್ಲಾಸ್ಮೋಡಿಯಂ ಮಲೇರಿಯೇ ಎಂಬ ನಾಲ್ಕು ವಿಧದ ಪರೋಪಜೀವಿಗಳು ಮನುಷ್ಯರಿಗೆ ಮಲೇರಿಯಾವನ್ನು ಹರಡುವಲ್ಲಿ ಸಕ್ರಿಯವಾಗಿವೆ. ಇವುಗಳಲ್ಲಿ  ಪ್ಲಾಸ್ಮೋಡಿಯಂ  ಫಾಲ್ಸಿಫಾರಂ ಎಂಬುದು ಬಹಳ ಅಪಾಯಕಾರಿ ಹಾಗೂ ಮಾರಕವಾದುದಾಗಿದೆ.

        ಯಾವ ರೀತಿಯಲ್ಲೆಲ್ಲಾ
        ಮನುಷ್ಯನಿಗೆ ಮಲೇರಿಯಾ
        ಸೋಂಕು ತಗಲಬಹುದು?

        ಪರೋಪಜೀವಿಗಳನ್ನು ಹರಡುವ ಪ್ರಕ್ರಿಯೆಯು ಅನೇಕ ಹಂತಗಳನ್ನು  ಹೊಂದಿದ್ದು , ಬಹಳ ಸಂಕೀರ್ಣವಾದುದಾಗಿದೆ. ಅನಾಫಿಲಿಸ್‌ ಸೊಳ್ಳೆಯ ಹಂತದಿಂದ ಆರಂಭವಾಗಿ, ಮನುಷ್ಯನ ದೇಹದಲ್ಲಿ ಪರೋಪ ಜೀವಿಯ ಇರುವಿಕೆ ಇದು ನಂತರದ ಹಂತ. ಮೊದಲು ಬಾಧಿತನಾಗುವ ಮನುಷ್ಯನಲ್ಲಿ  ಮಲೇರಿಯಾ ಪರೋಪಜೀವಿಯು ಸ್ಟೋರೋಝಿಟ್‌ ರೂಪದಲ್ಲಿರುತ್ತದೆ. ನಂತರ ಈ ಸ್ಟೋರೋಝಿಟ್‌ ರಕ್ತ  ಪರಿಚಲನೆಯ ಮೂಲಕ ಪಿತ್ತಜನಕಾಂಗಕ್ಕೆ ಸಾಗಿ, ಅಲ್ಲಿ ಬೆಳೆಯುತ್ತದೆ; ಬೆಳೆದು ಆ ಮನುಷ್ಯನ ಕೆಂಪು ರಕ್ತ ಕಣಗಳನ್ನು ಬಾಧಿಸುತ್ತದೆ. ಆಗ ಮಲೇರಿಯಾ ಲಕ್ಷಣಗಳು ಕಾಣಿಸಿಕೊಳ್ಳಲು ಅರಂಭವಾಗುತ್ತದೆ. ಇದೀಗ ಈ ಮನುಷ್ಯನನ್ನು ಅನಾಫಿಲಿಸ್‌ ಸೊಳ್ಳೆಯು  ಕಚ್ಚಿದರೆ, ಅವನಿಂದ ಮತ್ತೆ ಆ ಸೊಳ್ಳೆಯನ್ನು ಸೇರುವ ಪರೋಪಜೀವಿಯು, ಅಲ್ಲಿ ದ್ವಿಗುಣವಾಗುತ್ತದೆ. ಇದೊಂದು ವಿಷವರ್ತುಲದ ರೀತಿಯಲ್ಲಿ ಹೀಗೆಯೇ ಮುಂದುವರಿಯುತ್ತದೆ.

        ಮಲೇರಿಯಾದ ಚಿಹ್ನೆ ಹಾಗೂ
        ಲಕ್ಷಣಗಳು ಯಾವುವು?

        ಮಲೇರಿಯಾದ ಲಕ್ಷಣಗಳು ಮಾಮೂಲಿ ಫ್ಲೂ-ಜ್ವರದ ಲಕ್ಷಣಗಳ ರೀತಿಯಲ್ಲಿಯೇ -ಚಳಿ, ಜ್ವರ, ಸಂಧಿನೋವು, ಸ್ನಾಯುಗಳಲ್ಲಿ  ನೋವು ಹಾಗೂ ತಲೆನೋವು... ಇತ್ಯಾದಿ ಲಕ್ಷಣಗಳಿರುತ್ತವೆ, ಕೆಲವು ರೋಗಿಗಳಲ್ಲಿ, ವಾಕರಿಕೆ, ವಾಂತಿ, ಕೆಮ್ಮು ಹಾಗೂ ಅತಿಸಾರ... ಇತ್ಯಾದಿ ಲಕ್ಷಣಗಳೂ ಸಹ ಕಂಡು ಬರುತ್ತವೆ, ಮಲೇರಿಯದಲ್ಲಿ ಕಂಡು ಬರುವ ವಿಶಿಷ್ಟವಾದ ಲಕ್ಷಣ ಅಂದರೆ, ಚಳಿ, ಜ್ವರ ಹಾಗೂ ಬೆವರುವುದು. ಈ ಲಕ್ಷಣಗಳು, ಒಂದೇ ಕ್ರಮದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಪ್ರತಿ ದಿನ, ಎರಡು ದಿನಗಳಿಗೊಂದು ಸಲ, ಅಥವಾ ಮೂರು ದಿನಗಳಿಗೊಂದು ಸಲ, ಲಕ್ಷಣಗಳು ಬಹಳ ಸಲ ಪುನರಾವರ್ತನೆಯಾಗುತ್ತವೆ. ಇನ್ನಿತರ ಲಕ್ಷಣಗಳು ಅಂದರೆ, ಕೆಂಪು ರಕ್ತ ಕಣಗಳು ಹಾಗೂ ಪಿತ್ತಜನಕಾಂಗದ ಕಣಗಳು ಒಡೆದು ಹೋಗುವುದರಿಂದ ಚರ್ಮವು ಹಳದಿಯಾಗುವುದು. ಪ್ಲಾಸ್ಮೋಡಿಯಂ  ಫಾಲ್ಸಿಫಾರಂನಿಂದ ಮಲೇರಿಯಾ ಬಂದಿದ್ದರೆ, ಆಗ ತೀವ್ರ ರಕ್ತ ಸಾವ್ರ, ಆಘಾತ, ಪಿತ್ತ ಜನಕಾಂಗ ಅಥವಾ ಮೂತ್ರ ಪಿಂಡದ ವೈಫಲ್ಯ, ಕೇಂದ್ರೀಯ ನರವ್ಯೂಹದ ತೊಂದರೆಗಳು, ಪ್ರಜ್ಞಾಹೀನತೆ ಹಾಗೂ ಮರಣ... ಇತ್ಯಾದಿ ತೊಂದರೆಗಳು ಉಂಟಾಗುತ್ತವೆ. ಒಂದುವೇಳೆ ಮೆದುಳಿಗೆ ಮಲೇರಿಯಾ ಆಘಾತ  ಉಂಟಾದರೆ ಸೆಳವು ಹಾಗೂ ಪ್ರಜ್ಞಾಹೀನತೆಯಂತಹ ಲಕ್ಷಣಗಳು ಕಂಡು ಬರುತ್ತವೆ. ಇದಕ್ಕೆ ಚಿಕಿತ್ಸೆ ಕೊಡಿಸಿದರೂ ಸಹ, 15%-20% ಸಂದರ್ಭಗಳಲ್ಲಿ  ಮರಣವುಂಟಾಗುವ ಗರಿಷ್ಠ ಸಾಧ್ಯತೆ ಇದ್ದೇ ಇದೆ.

        ಮಲೇರಿಯಾಕ್ಕೆ 
        ಚಿಕಿತ್ಸೆ ಹೇಗೆ?

        ಮಲೇರಿಯಾಕ್ಕೆ ಚಿಕಿತ್ಸೆ  ನೀಡುವಾಗ ಮೂರು ಅಂಶಗಳನ್ನು  ಗಮನಿಸಲಾಗುತ್ತದೆ. ಮಲೇರಿಯಾ ಸೋಂಕು ಉಂಟು ಮಾಡಿರುವ  ಪ್ಲಾಸ್ಮೋಡಿಯಂ ಪರೋಪಜೀವಿಯ ಜಾತಿ, ರೋಗಿಯ  ಸ್ಥಿತಿ (ಪ್ರಾಯ ಹಾಗೂ ಗರ್ಭಧಾರಣೆ ಸಾಧ್ಯತೆ), ಪ್ಲಾಸ್ಮೋಡಿಯಂಗೆ ಸೂಕ್ತವಾಗುವ ರೀತಿಯ ಔಷಧಿ ಇದು ಯಾಕೆಂದರೆ, ಕೆಲವು ಪ್ರದೇಶಗಳಲ್ಲಿ ಪ್ಲಾಸ್ಮೋಡಿಯಂಗೆ ಕೆಲವು ಔಷಧಿಗಳ ವಿರುದ್ಧ ನಿರೋಧಕತೆ ಇರುತ್ತದೆ. ಆಗ ಚಿಕಿತ್ಸೆಯು ಪರಿಣಾಮಕಾರಿಯಾಗುವುದಿಲ್ಲ.ಹಾಗಾಗಿ, ಈ ಸಂದ‌ರ್ಭದಲ್ಲಿ  ಸೂಕ್ತ ಚಿಕಿತ್ಸೆ ಒದಗಿಸಲು ಒಬ್ಬ ಅನುಭವೀ ವೈದ್ಯರ ಚಿಕಿತ್ಸೆ ಆವಶ್ಯಕ. ಮಲೇರಿಯಾವು ಹೆಚ್ಚು ತೀವ್ರವಾಗಿಲ್ಲದಿದ್ದರೆ, ಬಾಯಿಯ ಮೂಲಕ ಸೇವಿಸಲು ಔಷಧಿಯನ್ನು ಕೊಡುತ್ತಾರೆ. ಒಂದುವೇಳೆ  ಮಲೇರಿಯಾವು ತೀವ್ರವಾಗಿದ್ದರೆ, ಅಂದರೆ, ರಕ್ತಸ್ರಾವದಂತಹ ಲಕ್ಷಣಗಳಿದ್ದರೆ, ರೋಗಿಯನ್ನು  ಆಸ್ಪತ್ರೆಗೆ ಸೇರಿಸಿ, ರಕ್ತನಾಳಕ್ಕೆ ಔಷಧಿಯನ್ನು ಸೇರಿಸುವ ಚಿಕಿತ್ಸೆ ನೀಡಬೇಕಾಗುತ್ತದೆ.

        ಸರಿಯಾದ ಚಿಕಿತ್ಸೆಯಿಂದ ಒಬ್ಬ ಮಲೇರಿಯಾ ರೋಗಿಯು ಸಂಪೂರ್ಣವಾಗಿ ಗುಣಮುಖನಾಗಬಲ್ಲ. ಮಲೇರಿಯಾ ಚಿಕಿತ್ಸೆಯು, ಕಾಯಿಲೆಯ ತೀವ್ರತೆಯನ್ನು  ಅವಲಂಬಿಸಿದೆ. ವೈದ್ಯರ ಅನುಭವ ಹಾಗೂ ವಿಶ್ಲೇಷಣೆಯನ್ನು  ಆಧರಿಸಿಕೊಂಡು  ಸೇವನೆಗೆ ಔಷಧಿ ಅಥವಾ ಆಸ್ಪತ್ರೆಗೆ ಸೇರಿಸಲು ಹೇಳ ಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿನ  ಪ್ರಕಾರ, ಅತ್ಯಂತ ತೀವ್ರ ರೀತಿಯ ಪ್ಲಾಸ್ಮೋಡಿಯಂ  ಫಾಲ್ಸಿಫಾರಂ ಪರೋಪಜೀವಿಯಿಂದ ಬಾಧಿತ ಮಲೇರಿಯಾ ಅಗಿದ್ದರೆ,  ಅರ್ಟೆಮಿಸಿನಿನ್ಸ್‌ ಔಷಧಿಯನ್ನು ಆಂಟಿಮಲೇರಿಯಲ್ಸ್‌ ಜೊತೆ ಜಂಟಿಯಾಗಿ ಸೇವಿಸಬೇಕು. ಅರ್ಟೆಮಿಸಿನಿನ್ಸ್‌  ಔಷಧಿಗಳ ವಿರುದ್ಧ ಪರೋಪಜೀವಿಯ ಪ್ರತಿರೋಧಕತೆಯನ್ನು ತಗ್ಗಿಸಲು ಅಇಖನ್ನು  ಶಿಫಾರಸು ಮಾಡುತ್ತಾರೆ.
        ತೀವ್ರರೂಪದ ಮಲೇರಿಯಾಕ್ಕೆ ರಕ್ತನಾಳಗ ಮೂಲಕ  ಮಲೇರಿಯಾ ನಿರೋಧಕ ಔಷಧಿಗಳನ್ನು  ಕೊಡುತ್ತಾರೆ. ಇತ್ತೀಚಿನವರೆಗೂ ತೀವ್ರ ರೂಪದ ಮಲೇರಿಯಾಕ್ಕೆ ಕ್ವಿನೈನ್‌ನ್ನು  ಕೊಡುತ್ತಿದ್ದರು. ಆದರೆ ಹಿರಿಯರು ಹಾಗೂ ಮಕ್ಕಳಲ್ಲಿ , ಅರೆrಸುÂನೇಟ್‌  ಔಷಧಿಯು ಕ್ವಿನೈನ್‌ಗಿಂತಲೂ ಹೆಚುj ಪರಿಣಾಮಕಾರಿಯಾಗಿದೆ. ತೀವ್ರ ರೂಪದ ಮಲೇರಿಯಾಕ್ಕೆ ಚಿಕಿತ್ಸೆ ನೀಡುವಾಗ ಉತ್ತೇಜನ  ನೀಡುವ ಅಂಶಗಳೂ ಸಹ ಆವಶ್ಯಕ.

        ಸಾಮಾನ್ಯವಾಗಿ ಪ್ಲಾಸ್ಮೋಡಿಯಂ ವೈವಾಕ್ಸ್‌, ಪ್ಲಾಸ್ಮೋಡಿಯಂ ಒವೇಲ್‌, ಪ್ಲಾಸ್ಮೋಡಿಯಂ ಮಲೇರಿಯಾ ಸೋಂಕಾಗಿದ್ದರೆ ಹೊರರೋಗಿಗಳ ನೆಲೆಯಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ಪ್ಲಾಸ್ಮೋಡಿಯಂ ವೈವಾಕ್ಸ್‌ ಸೋಂಕಿಗೆ ರಕ್ತದ ಹಂತಗಳ ಚಿಕಿತ್ಸೆ (ಕ್ಲೋರೋಕ್ವಿನ್‌ ಅಥವಾ ಆಕ್ಟ್ ಔಷಧಿಗಳಿಂದ) ಹಾಗೂ ಪ್ರೈಮಾಕ್ವಿನ್‌  ಔಷಧಿ ಮೂಲಕ ನೀಡುವ ಕ್ಲಯರೆನ್ಸ್‌ ಚಿಕಿತ್ಸೆಯೂ ಆವಶ್ಯಕ.

        ಮಲೇರಿಯಾ ಚಿಕಿತ್ಸೆಗಾಗಿ ಉಪಯೋಗಿಸುವ ಹೆಚ್ಚಿನ ಔಷಧಿಗಳನ್ನು ಮಲೇರಿಯಾ ಬರದಂತೆ ತಡೆಯಲು ಸಹ ಉಪಯೋಗಿಸಬಹುದು. ಪರೋಪಜೀವಿಯು ಇನ್ನೂ  ಕ್ರಿಯಾಶೀಲವಾಗಿದ್ದರೆ, ಕ್ಲೋರೋಕ್ವಿನ್‌ನ್ನು  ತೆಗೆದುಕೊಳ್ಳಬಹುದು. ನಿರೋಧಕತೆಗೆ ಈ ಮೂರರಲ್ಲಿ ಒಂದು ಔಷಧಿಯನ್ನು  ತೆಗೆದು ಕೊಳ್ಳಬಹುದು. ಮೆಫ್ಲೋಕ್ವಿನ್‌ (ಲ್ಯಾರಿಯಂ), ಡಾಕ್ಸಿಸೈಕ್ಲಿನ್‌ ಹಾಗೂ ಜಂಟಿಯಾಗಿ ಅಟೋವಾಕ್ಯುವೋನ್‌ ಹಾಗೂ ಪ್ರೊಕ್ವಾನಿಲ್‌ ಹೈಡ್ರೊಕ್ಲೋರೈಡ್‌ (ಮಲಾರೋನ್‌). ಡಾಕ್ಸಿಸೈಕ್ಲಿನ್‌, ಅಟೋವಾ ಕ್ಯುವೋನ್‌ ಮತ್ತು ಪ್ರಾಗ್ವಾನಿಲ್‌ ಜಂಟಿಯಾಗಿ  ಉತ್ತಮ ಆಯ್ಕೆಯೆನಿಸಿದೆ. ಇವುಗಳ ಜೊತೆಗೆ ಮೆಫ್ಲೋಕ್ವಿನ್‌ ಸೇವನೆಯಿಂದ ಹಲವು ರೀತಿಯ ನರಸಂಬಂಧಿ ಹಾಗೂ ಮಾನಸಿಕ ವೈಪರೀತ್ಯದ ಲಕ್ಷಣಗಳು ಗೋಚರಿಸಬಹುದು. ಔಷಧಿಸೇವಿಸಿದ ಕೂಡಲೇ, ಪ್ರಾಪಿಲ್ಯಾಕ್ಟಿಕ್‌ ಪರಿಣಾಮವು ಅರಂಭವಾಗುವುದಿಲ್ಲವಾದ ಕಾರಣ, ತಾತ್ಕಾಲಿಕವಾಗಿ ಮಲೇರಿಯಾ ಪೀಡಿತಪ್ರದೇಶಗಳಿಗೆ ಭೇಟಿಕೊಡುವವರು, ಅಲ್ಲಿಗೆ ಹೋಗುವುದಕ್ಕೆ ಒಂದರಿಂದ ಎರಡು  ವಾರಕ್ಕೆ ಮೊದಲು ತಡೆಕಾರಕ ಔಷಧಿಯನ್ನು ತೆಗೆದುಕೊಳ್ಳಬೇಕು ಹಾಗೂ ಅಲ್ಲಿಂದ ಹಿಂತಿರುಗಿದ 4 ವಾರಗಳ ವರೆಗೆ ಔಷಧಿಯನ್ನು ಮುಂದುವರಿಸಬೇಕು (ಅಟೋವಾಕ್ಯುವೋನ್‌ ಔಷಧಿಯನ್ನು ಪ್ರಯಾಣದ 2 ದಿನಕ್ಕೆ ಮೊದಲು ಆರಂಭಿಸಿ, ಹಿಂತಿರುಗಿದ 7 ದಿನಗಳವರೆಗೆ ತೆಗೆದುಕೊಳ್ಳಬಹುದು). ಬಾಧಿತರಾಗಿಲ್ಲದವರು ಮುಂಜಾಗ್ರತೆಗಾಗಿ, ಈ ಔಷಧಿಗಳನ್ನು ಪ್ರತಿದಿನ ಅಥವಾ ಪ್ರತಿವಾರವೂ, ನಿಜವಾಗಿ ಮಲೇರಿಯಾ ಬಾಧಿತರಾದ ವರಿಗಿಂತಲೂ ಸಣ್ಣ ಪ್ರಮಾಣದಲ್ಲಿ ತೆಗೆದು ಕೊಳ್ಳಬೇಕಾಗುತ್ತದೆ. ಮಲೇರಿಯಾ ಬಾಧಿತ  ಪ್ರದೇಶದಲ್ಲಿ ನೆಲೆಸಿರುವವರು ಮುನ್ನೆಚ್ಚರಿಕೆ ಔಷಧಿಗಳನ್ನು ಉಪಯೋಗಿಸುವುದು ವಿರಳ, ಮಾತ್ರವಲ್ಲ ಆ ಪ್ರದೇಶಕ್ಕೆ ತಾತ್ಕಾಲಿಕವಾಗಿ ಭೇಟಿಕೊಡುವವರೂ ಸಹ ಔಷಧಿಗಳ ಬಳಕೆಯಲ್ಲಿ ನಿರ್ಬಂಧವಿದೆ. ಔಷಧಿಗಳ ದುಬಾರಿ ವೆಚ್ಚ, ಅಡ್ಡ ಪರಿಣಾಮ ಇಲ್ಲದಿರುವಿಕೆ, ಇತ್ಯಾದಿಗಳ ಕಾರಣದಿಂದಾಗಿ ಕೆಲವು ಶ್ರೀಮಂತ  ರಾಷ್ಟ್ರಗಳ  ಹೊರತಾಗಿ, ಉಳಿದೆಡೆ ಈ ಔಷಧಿಗಳು ದೊರಕುವುದು ದುರ್ಲಭವಾಗಿದೆ.

        ಕ್ವಿನೈನ್‌ ಬಹಳ ಹಿಂದಿನಿಂದಲೂ ಉಪಯೋಗಿಸುತ್ತಿದ್ದ ಔಷಧಿ. ಆದರೆ ಇದಕ್ಕೆ ಬದಲಿಯಾಗಿ, 20 ನೇ ಶತಮಾನದಲ್ಲಿ  ಕ್ವಿನ್ಯಾಕ್ರಿನ್‌, ಕ್ಲೋರೋಕ್ವಿನ್‌ ಹಾಗೂ ಪ್ರೈಮಾಕ್ವಿನ್‌ಗಳನ್ನು ಉಪಯೋಗಿಸುತ್ತಿದ್ದು , ಪ್ರಾಪಿಲ್ಯಾಕ್ಸಿಕ್‌ ಕ್ವಿನೈನ್‌ನ ಬಳಕೆ ಕಡಿಮೆಯಾಗಿದೆ. ಮಲೇರಿಯಾ ಉಂಟು ಮಾಡುವ ಸೊಳ್ಳೆಗಳ ವಿರುದ್ಧ ಬಳಸುವ ಪ್ರಾಪಿಲ್ಯಾಕ್ಟಿಕ್‌ ಔಷಧಿಗಳು ಮಲೇರಿಯಾ ವಿರುದ್ಧ  ಭಾಗಶ: ರೋಗ ನಿರೋಧಕತೆಯನ್ನು  ಬೆಳೆಸುವಲ್ಲಿ ಸಹಾಯಕವಾಗಿವೆ.

        ಮಲೇರಿಯಾ ಸೋಂಕನ್ನು
        ಹೇಗೆ ತಡೆಯಬಹುದು?

        ನಿಮಗೆ ಮಲೇರಿಯಾ ಪೀಡಿತ ಪ್ರದೇಶಕ್ಕೆ ಹೋಗುವ ಯೋಜನೆ ಇದ್ದರೆ, ಹೋಗುವ ಮೊದಲು ವೈದ್ಯರನ್ನು ಭೇಟಿಯಾಗಿ, ಮಲೇರಿಯಾವನ್ನು  ತಡೆಯುವ ಔಷಧಿಯನ್ನು ಪಡೆಯಬೇಕು. ಇದುವರೆಗೂ  ಮಲೇರಿಯಾಕ್ಕೆ  ಒಂದು ಒಳ್ಳೆಯ ಲಸಿಕೆ ಲಭ್ಯವಾಗಿಲ್ಲ , ಆದರೆ ಈ ನಿಟ್ಟಿನಲ್ಲಿ ಸಂಶೋಧನೆಗಳು ಸಾಗಿವೆ. ಅನಿವಾರ್ಯ ಅಲ್ಲದಿದ್ದರೆ, ಮಲೇರಿಯಾ ಪೀಡಿತ ಪ್ರದೇಶಕ್ಕೆ  ಪ್ರಯಾಣಿಸುವುದನ್ನು ತಪ್ಪಿಸಿಕೊಳ್ಳಿ. ವಿಶೇಷವಾಗಿ ಮುಂಜಾನೆ ಹಾಗೂ ಸಂಜೆಯ ಹೊತ್ತು  ಸೊಳ್ಳೆಗಳ ಕಡಿತವನ್ನು ತಪ್ಪಿಸಿಕೊಳ್ಳಿ. ಸೊಳ್ಳೆಗಳ ಕಡಿತದಿಂದ ರಕ್ಷಣೆ ಒದಗಿಸುವಂತಹ ಬಟ್ಟೆಗಳನ್ನು ಧರಿಸಿ. ನಿದ್ದೆ ಮಾಡುವ ಮೊದಲು ಸೊಳ್ಳೆ ನಿರೋಧಕ ದ್ರಾವಣ ಅಥವಾ ನಿರೋಧಕಗಳನ್ನು ಬಳಸಿ. ನೀವು ಮಲಗುವ ಕೋಣೆ, ಮಂಚ, ಹಾಗೂ ಗಾಳಿಕಿಂಡಿಗಳನ್ನು  ಸೊಳ್ಳೆ ಪರದೆಗಳಿಂದ ಮುಚ್ಚಿ , ಮಲೇರಿಯಾ ತಡೆ ಹಾಗೂ ನಿಯಂತ್ರಣಕ್ಕಾಗಿ , ಸೊಳ್ಳೆ ಪರದೆಗಳಿಗೆ ಉಪಯೋಗಿಸುವ ಬಟ್ಟೆಗಳಿಗೆ ಅನಾಫಿಲಿಸ್‌ಸೊಳ್ಳೆಯ ಕೀಟನಾಶಕವನ್ನು  ಉಪಯೋಗಿಸಬಹುದು.

         

         

         

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus