Saturday, May 18, 2013
Last Updated: 1:39:40 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮೇ 31ರಂದು ಭಾರತ ಬಂದ್‌ಗೆ ಬಿಜೆಪಿ ಬೆಂಬಲ
    • ಶುಭಕಾರ್ಯ ವಾಹನಗಳಿಗೆ ವಿನಾಯತಿ
      • Udayavani | May 28, 2012

        ಮಂಗಳೂರು : ಪೆಟ್ರೋಲ್‌ ದರ ಏರಿಕೆ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಮೇ 31 ರಂದು ಕರೆ ನೀಡಿರುವ ಸ್ವಯಂ ಪ್ರೇರಿತ ಭಾರತ ಬಂದ್‌ಗೆ ದ.ಕ. ಜಿಲ್ಲಾ ಬಿಜೆಪಿ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆದರೆ ಅಂದು ಹೆಚ್ಚಿನ ಪ್ರಮಾಣದಲ್ಲಿ ಶುಭಕಾರ್ಯಗಳು ನಡೆಯಲಿರುವುದರಿಂದ ಈ ಸಂಬಂಧ ತೆರಳುವ ವಾಹನಗಳಿಗೆ ಬಂದ್‌ನಿಂದ ವಿನಾಯತಿ ನೀಡಲಾಗುವುದು ಎಂದು ಬಿಜೆಪಿ ತಿಳಿಸಿದೆ.

        ಮೇ 31ರಂದು ಕರೆ ನೀಡಲಾಗಿರುವ ಸ್ವಯಂಪ್ರೇರಿತ ಭಾರತ ಬಂದ್‌ಗೆ ಜಿಲ್ಲಾ ಬಿಜೆಪಿ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅಂದು ಅತ್ಯಧಿಕ ಪ್ರಮಾಣದಲ್ಲಿ ಶುಭಕಾರ್ಯಗಳು ನಡೆಯಲಿರುವುದರಿಂದ ಈ ಸಂಬಂಧ ತೆರಳುವ ವಾಹನಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ವಿನಾಯತಿ ನೀಡಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬಂದ್‌ ನಡೆಸುವ ಮೂಲಕ ಕೇಂದ್ರ ಸರಕಾರದ ಪೆಟ್ರೋಲ್‌ ಬೆಲೆ ಏರಿಕೆ ನಿರ್ಧಾರವನ್ನು ಖಂಡಿಸಬೇಕು ಎಂದು ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

        3 ವರ್ಷದಲ್ಲಿ 7 ಬಾರಿ ಏರಿಕೆ

        ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಕೇವಲ 3 ವರ್ಷಗಳ ಅವಧಿಯಲ್ಲಿ 7 ಬಾರಿ ಪೆಟ್ರೋಲ್‌ ದರವನ್ನು ಏರಿಸಿದೆ. ಈ ಬಾರಿ 7.54 ರೂ. ಏರಿಕೆ ಮಾಡಿದೆ. ಶೇ. 100ರಷ್ಟು ಪೆಟ್ರೋಲ್‌ ದರವನ್ನು ಏರಿಸುವ ಮೂಲಕ ದೇಶದ ಜನಸಾಮಾನ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಜೀವನ ನಿರ್ವಹಣೆೆ ಜನಸಾಮಾನ್ಯರಿಗೆ ದುಸ್ತರವಾಗಿ ಪರಿಣಾಮಿಸಿದೆ. ಇದೀಗ ತೀರಾ ಅವೈಜ್ಞಾನಿಕವಾಗಿ ಪೆಟ್ರೋಲ್‌ ದರವನ್ನು ದೊಡ್ಡ ಪ್ರಮಾಣದಲ್ಲಿ ಏರಿಸಿರುವುದು ಖಂಡನೀಯ ಎಂದವರು ಹೇಳಿದರು.

        ಕೇಂದ್ರ ಸರಕಾರದ ತಪ್ಪು ಅರ್ಥಿಕ ನೀತಿಯಿಂದಾಗಿ ಈ ಪರಿಸ್ಥಿತಿ ಬಂದಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್‌ ದರ ಏರಿಕೆಯಾಗಿರುವುದು ಸರ್ವಥಾ ಸಮರ್ಥನೀಯವಲ್ಲ. ಈ ಅಸಮರ್ಥನೀಯ ಪೆಟ್ರೋಲ್‌ ದರ ಏರಿಕೆಯನ್ನು ಕೇಂದ್ರ ಸರಕಾರ ಕೂಡಲೇ ಹಿಂದೆಗೆದುಕೊಳ್ಳ ಬೇಕು ಎಂದವರು ಆಗ್ರಹಿಸಿದರು. ಕರ್ನಾಟಕದಲ್ಲಿ ಪೆಟ್ರೋಲ್‌ ಮೇಲಿನ ಸುಂಕವನ್ನು ಕಡಿತಗೊಳಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದು ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದವರು ತಿಳಿಸಿದರು.

        ಪ್ರ.ಕಾರ್ಯದರ್ಶಿ ಸಂಜೀವ ಮಟಂದೂರು, ಸುಧೀರ್‌ ಶೆಟ್ಟಿ ಅವರು ಉಪಸ್ಥಿತರಿದ್ದರು.

        ಶುಭಕಾರ್ಯದ ಭಿತ್ತಿಪತ್ರ ಅಂಟಿಸಿ

        ಮೇ 31ರಂದು ಶುಭಕಾರ್ಯಗಳಿಗೆ ತೆರಳುವ ವಾಹನಗಳಿಗೆ ಯಾವುದೇ ತಡೆಯೊಡ್ಡಬಾರದು ಎಂದು ಬಿಜೆಪಿ ವಿನಂತಿಸಿಕೊಳ್ಳುತ್ತಿದೆ. ಶುಭ ಸಮಾರಂಭಗಳಿಗೆ ತೆರಳುವ ವಾಹನಗಳೆಂದು ಗುರುತಿಸಿಕೊಳ್ಳಲು ಸಾರ್ವಜನಿಕರು ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ವಾಹನಗಳನ್ನು ಹೂವು , ತೋರಣಗಳಿಂದ ಅಲಂಕರಿಸುವುದು ಇಲ್ಲವೆ ಮದುವೆ ಸಮಾರಂಭ, ಗೃಹಪ್ರವೇಶ ಅಥವಾ ಅಂದು ನಿಗದಿತಗೊಂಡಿರುವ ಇತರ ಶುಭಸಮಾರಂಭವನ್ನು ನಮೂದಿಸಿರುವ ಭಿತ್ತಪತ್ರವನ್ನು ವಾಹನಗಳಿಗೆ ಅಂಟಿಸಬೇಕು. ಇದರಿಂದ ಅವುಗಳು ಶುಭ ಕಾರ್ಯಗಳಿಗೆ ಹೋಗುವ ವಾಹನವೆಂದು ಗುರುತಿಸಲು ಸಾಧ್ಯವಾಗುತ್ತದೆ. ಕೇಸರಿ ಧ್ವಜವನ್ನು ಕೂಡ ಹಾಕಬಹುದು ಎಂದು ಪದ್ಮನಾಭ ಕೊಟ್ಟಾರಿ ಅವರು ವಿವರಿಸಿದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus