Saturday, May 25, 2013
Last Updated: 9:23:04 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಹಸ್ಯ ಕೋರ್ಟ್‌ ಕಲಾಪ
    • ತಿವಾರಿ ಮನವಿಗೆ ಸುಪ್ರೀಂ ಕೋರ್ಟ್‌ ನಕಾರ
      • Udayavani | May 28, 2012

        ಹೊಸದಿಲ್ಲಿ: ಪಿತೃತ್ವ ನಿರ್ಧಾರದ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ಕಲಾಪಗಳನ್ನು ರಹಸ್ಯವಾಗಿ ಇರಿಸಬೇಕೆಂಬ ಹಿರಿಯ ಕಾಂಗ್ರೆಸ್‌ ನಾಯಕ ಎನ್‌.ಡಿ. ತಿವಾರಿ ಅವರ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದೆ.

        ತಿವಾರಿ ತನ್ನ ನೈಜ ತಂದೆ ಎಂದು ಪ್ರತಿಪಾದಿಸಿ ಪಿತೃತ್ವ ಖಟ್ಲೆ ಹೂಡಿರುವ ರೋಹಿತ್‌ ಶೇಖರ್‌ ಅವರು ನ್ಯಾಯಾಲಯದ ಕಲಾಪಗಳ ಕುರಿತಂತೆ ಗೋಪ್ಯತೆ ಕಾಪಾಡುತ್ತಿಲ್ಲ. ಅವರು ಪ್ರತಿ ವಿಚಾರಣೆ ಬಳಿಕ ಮಾಧ್ಯಮಕ್ಕೆ ಮಾಹಿತಿ ನೀಡುತ್ತಿರುವರೆಂದು ತಿವಾರಿ ಪರ ವಕೀಲರು ಆಕ್ಷೇಪಿಸಿದರು.

        ನ್ಯಾಯಮೂರ್ತಿಗಳಾದ ಜಿ.ಎಸ್‌. ಸಿಂ Ì ಮತ್ತು ಎಸ್‌.ಜೆ. ಮುಖ್ಯೋಪಾಧ್ಯಾಯಅವರ ರಜಾ ಕಾಲದ ಪೀಠವು ಆಕ್ಷೇಪಣೆಯನ್ನು ತಿರಸ್ಕರಿಸಿತು. ಮಾಧ್ಯಮದೊಂದಿಗೆ ಮಾತನಾಡದಂತೆ ತಾನು ಯಾರನ್ನೂ ನಿರ್ಬಂಧಿಸಲಾರೆ. ಡಿಎನ್‌ಎ ಪರೀಕ್ಷೆಗೆ ಸಂಬಂಧಿಸಿದ ವರದಿ ಕುರಿತಂತೆ ಮಾತ್ರವೇ ಗೋಪ್ಯತೆ ಕಾಯ್ದುಕೊಳ್ಳಬೇಕು, ನ್ಯಾಯಾಲಯದ ಕಲಾಪಗಳ ಕುರಿತು ಅಲ್ಲ ಎಂದಿತು.

        ಪಿತೃತ್ವ ಖಟ್ಲೆ ಕುರಿತಂತೆ ರಕ್ತದ ಮಾದರಿಯನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಈ ಹಿಂದೆ ಮೇ 24ರಂದು 88ರ ಪ್ರಾಯದ ತಿವಾರಿ ಅವರಿಗೆ ನಿರ್ದೇಶ ನೀಡಿತ್ತು. ವ್ಯಕ್ತಿ ಪ್ರತಿಷ್ಠಿತನೆಂದು ನ್ಯಾಯಾಲಯದ ಆದೇಶವನ್ನು ಉಲ್ಲಂ ಸಲಾಗದು ಎಂದು ಹೇಳಿತ್ತು.

        ರಕ್ತದ ಮಾದರಿ ನೀಡಲು ತನಗೆ ತುಂಬಾ ಪ್ರಾಯವಾಗಿದೆ ಎಂಬ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು ಮತ್ತು ಅವರಿಗೆ ಪ್ರಾಯವಾಗಿದೆ ಎಂದರೆ ಅವರ ಮೈಯಲ್ಲಿ ರಕ್ತ ಹರಿಯುತ್ತಿಲ್ಲವೇ ಎಂದು ಕೇಳಿತ್ತು. ರಕ್ತದ ಮಾದರಿಯನ್ನು ನೀಡಲು ಅವರು ಡೆಹ್ರಾಡೂನಿನ ತನ್ನ ನಿವಾಸದಲ್ಲಿ ಮೇ 29ರಂದು ಲಭ್ಯರಿರಬೇಕು ಎಂದು ಆದೇಶ ನೀಡಿತ್ತು.

        ತಿವಾರಿ ತನ್ನ ನೈಜ ತಂದೆ ಎಂದು ಘೋಷಿಸಲು ನಿರ್ದೇಶ ನೀಡುವಂತೆ ಕೋರಿ 32ರ ಹರೆಯದ ಶೇಖರ್‌ ಅವರು 2008ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪಿತೃತ್ವ ಖಟ್ಲೆಯನ್ನು ಹೂಡಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus