ಅನಂತಶಾಸ್ತ್ರಿ | May 29, 2012
ಕರಿಯಾದ ಶಿಲೆಯಲ್ಲಿ ಕಡೆದ ಗಣೇಶನ ಕೊರಳಲ್ಲಿ ಬಿಳಿ ಹೂವಿನ ಮಾಲೆಯೊಂದು ಪ್ರತಿದಿನ ಹೊಸ ಹೊಸದಾಗಿ ಧರಿಸಲ್ಪಟ್ಟಿರಲಿ. ಕಚೇರಿಯ ಅಥವಾ ಕೆಲಸದ ಸ್ಥಳದ ಪ್ರಧಾನವಾದ ಬಾಗಿಲ ಮೂಲಕ ಒಳಪ್ರವೇಶಿಸುವ ಎಲ್ಲರಿಗೂ ಒಳ ಬರುತ್ತಿರುವಂತೆಯೇ ಗಣೇಶನ ವಿಗ್ರಹ ಪ್ರಧಾನವಾಗಿ ಕಾಣುವಂತಿರಬೇಕು.
ನಮ್ಮ ವಾಸದ ಮನೆಗಳ ವಾಸ್ತು ವಿಷಯಗಳೇ ಬೇರೆ. ಸ್ವಂತ ಕೆಲಸದ ಕಚೇರಿ, ಕೈಗಾರಿಕಾ ಘಟಕಗಳು ಅಥವಾ ಇನ್ನೇನ್ನೋ ಒಂದು ವಿಚಾರಗಳಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಬಯಸುತ್ತಾ ವಾಸ್ತುವಿನ ವಿಚಾರಗಳು ವಾಸದ ಮನೆಗಳಿಗಿಂತ ಭಿನ್ನವಾಗಿ ಇನ್ನೊಂದು ರೀತಿಯ ನಿಯಮಗಳನ್ನು ನಿರೀಕ್ಷಿಸುತ್ತಿರುತ್ತವೆ. ಯಾಕೆಂದರೆ ವಾಸದ ಮನೆಗಿಂತ ಹೆಚ್ಚು ಭಿನ್ನ ಸ್ವರೂಪರ ಅಪರಿಚಿತ ಜನರು, ಭಿನ್ನ ಸ್ವರೂಪದ ಆಶಯಗಳೊಂದಿಗಿನ ಜನರು ಬರುತ್ತಿರುತ್ತಾರೆ. ಹೀಗಾಗಿ ಹತ್ತು ಹದಿನೆಂಟು ರೀತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಕೆಲಸದ ಕಚೇರಿಯ, ಕೈಗಾರಿಕೆ ಅಥವಾ ಇನ್ನೇನ್ನೋ ರೀತಿಯ ಉದ್ಯಮದ ಚೌಕಟ್ಟುಗಳನ್ನು ನಿಯಂತ್ರಿಸಲು, ಗೆಲುವನ್ನು ಕೆಡಿಸಲು ಹೆಣಗಾಡುತ್ತಿರುತ್ತವೆ. ಹೀಗಾಗಿ ಕಚೇರಿಯ, ಕೆಲಸದ ಹೊರವಲಯದ ಅತಿಥಿಗಳು ಬಂದು ಕೂರುವ ಲಾಂಜ್‌ನಲ್ಲಿ ವಿಶೇಷವಾಗಿ ಕರಿ ಶಿಲೆಯ ಗಣೇಶನ ವಿಗ್ರಹವಿದ್ದರೆ ಸೂಕ್ತವಾಗಿರುತ್ತದೆ.
ಕರಿಯಾದ ಶಿಲೆಯಲ್ಲಿ ಕಡೆದ ಗಣೇಶನ ಕೊರಳಲ್ಲಿ ಬಿಳಿ ಹೂವಿನ ಮಾಲೆಯೊಂದು ಪ್ರತಿದಿನ ಹೊಸ ಹೊಸದಾಗಿ ಧರಿಸಲ್ಪಟ್ಟಿರಲಿ. ಕಚೇರಿಯ ಅಥವಾ ಕೆಲಸದ ಸ್ಥಳದ ಪ್ರಧಾನವಾದ ಬಾಗಿಲ ಮೂಲಕ ಒಳಪ್ರವೇಶಿಸುವ ಎಲ್ಲರಿಗೂ ಒಳ ಬರುತ್ತಿರುವಂತೆಯೇ ಗಣೇಶನ ವಿಗ್ರಹ ಪ್ರಧಾನವಾಗಿ ಕಾಣುವಂತಿರಬೇಕು. ಕಟ್ಟಡದ ಭವ್ಯತೆಯ ಕುರಿತು ದುಷ್ಟ ದೃಷ್ಟಿಯ ನಕಾರಾತ್ಮಕ ಪ್ರಚೋದನೆಗಳು ಹೀಗಾಗಿ ಗಣೇಶನ ನೇರ ದೃಷ್ಟಿಗಳಿಂದಾಗಿ ಹೊರದಬ್ಬಲ್ಪಡುತ್ತವೆಂಬುದು ಇಲ್ಲಿ ಗಮನಾರ್ಹ ಅಂಶವಾಗಿದೆ.
ಆಫೀಸಿನ ಮುಖ್ಯ ಸ್ಥಳ ವ್ಯವಹಾರ ಕುದು ರುವ ದೃಷ್ಟಿಯಿಂದ ಸದಾ ಲಾಭದಲ್ಲಿರಲು ಅನುಕೂಲ ವಾಗುವಂತೆ ಈಶಾನ್ಯ ದಿಕ್ಕಿನಲ್ಲಿ ಸಮಾವೇಶಗೊಳ್ಳುವುದು ಅತ್ಯಂತ ಹೆಚ್ಚು ಪ್ರಶಾಂತವಾಗಿದೆ. ಈ ರೀತಿಯ ಈಶಾನ್ಯ ದಿಕ್ಕಿಗೆ ನಿಯೋಜನೆಗೊಂಡ ಆಫೀಸಿನ ಬಾಗಿಲು ಉತ್ತರದ ದಿಕ್ಕಿನಲ್ಲಿ ಇಡಲ್ಪಡಲಿ. ಸುರಕ್ಷಿತವಾದ ಭದ್ರತಾ ಕೋಶಗಳು, ಫೈಲು, ಕಾಗದ ಪತ್ರ, ಲೆಕ್ಕದ ಕಡತಗಳು ಉತ್ತರ ದಿಕ್ಕಿನಲ್ಲಿ ಇರಲಿ. ಉತ್ತರದಲ್ಲೇ ಅತಿಥಿಗಳು ಕುಳಿತಿರುವ, ಅವರಿಗೆದುರಾಗಿ ಆಫೀಸಿನ ಸಿಬ್ಬಂದಿ ಇರುವ ಹಾಗೆ ಕುಳಿತುಕೊಳ್ಳುವ ವಿಚಾರ ರಚನೆಗೊಂಡಿರಲಿ. ಆಗ್ನೇಯ ದಿಕ್ಕಿನಲ್ಲಿ ವಿದ್ಯುತ್ ಉಪಕರಣಗಳು ಗುಂಪುಗೊಂಡಿರಲಿ. ಬಳಸಲು ಬೇಕಾದ ಅನಿವಾರ್ಯತೆ ಎದ್ದಾಗ ಗ್ಯಾಸ್ ಅಥವಾ ವಿದ್ಯುತ್ ಆದಿಯಾಗಿ ಎಂಥದೇ ಒಲೆಗಳು ಆಗ್ನೇಯ ದಿಕ್ಕಿನಲ್ಲಿ ಇಡಲ್ಪಟ್ಟಿರಲಿ.
ಉತ್ತರ ದಿಕ್ಕಿನಲ್ಲಿ ಇಡಿಸಬೇಕಾದ ಹಣದ ಕೋಶಿಕೆಗಳು ತಮ್ಮೊಳಗೆ ಕುಬೇರ ಯಂತ್ರವನ್ನು ಹೊಂದಿದ್ದರೆ ಬಹಳ ಸೂಕ್ತವಾಗಿದೆ. ವಿಶಿಷ್ಟ ಸಾಧಕರು ಕುಬೇರ ಯಂತ್ರವನ್ನು ರೂಪಿಸಲು ಸಮರ್ಥರಾಗಿರುತ್ತಾರೆ. ಸೂಕ್ತವಾದವರು ಸಿಗದಿರುವಾಗ, ಯಂತ್ರವೆಂದು ಎಂಥದೋ ನಿರರ್ಥಕ ಪದಾರ್ಥ ಕುಬೇರ ಯಂತ್ರವೆಂದು ಆಕ್ರಮಿಸದಿರಲಿ. ಯಂತ್ರದ ಬದಲು ಕುಬೇರ ಅಷ್ಟೋತ್ತರ, ಲಕ್ಷಿ$¾à ಅಷ್ಟೋತ್ತರ ಹಾಗೂ ಶುಕ್ರ ಗ್ರಹ ಅಷ್ಟೋತ್ತರಗಳು ಪಠಿಸಲ್ಪಡಲಿ.
ನೈರುತ್ಯದಲ್ಲಿ ಮುಖ್ಯ ನಿರ್ವಹಣಾಧಿಕಾರಿ ಅಥವಾ ಕಚೇರಿಯ ಮುಖ್ಯಸ್ಥನ ಸ್ಥಳ ಒದಗಿ ಬರಲಿ. ಪಶ್ಚಿಮ ಅಥವಾ ದಕ್ಷಿಣ ದಿಕ್ಕಾದರೂ ಸೂಕ್ತವೇ. ಕೈಕೆಳಗಿನ ಸಹ ಅಥವಾ ಉಪಅಧಿಕಾರಿಗಳ ಕೆಲಸದ ಅಥವಾ ಕೂರುವ ಸ್ಥಳ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿರಲಿ. ಆಗ್ನೇಯದಲ್ಲಿ ಸ್ವಾಗತಕೋರುವ ಸ್ವಾಗತಕಾರ ಅಥವಾ ಸ್ವಾಗತಕಾರಣಿಯ ಕುಳಿತುಕೊಳ್ಳುವ ಆವರಣ ರೂಪುಗೊಳ್ಳದಿರಲಿ. ಇದಕ್ಕೆ ಈಶಾನ್ಯ ದಿಕ್ಕು ಸೂಕ್ತವಾಗಿದೆ. ಒಟ್ಟಿನಲ್ಲಿ ಎಲ್ಲವೂ ಸೂಕ್ತ ನೆಲೆಯಲ್ಲಿ ಸ್ಥಾಯಿಗೊಂಡಿದ್ದಲ್ಲಿ ಲಾಭ ಹಾಗೂ ಯಶಸ್ಸು ಸಾಧ್ಯ. ಹೀಗಾಗಿ ಆಫೀಸಿನ ಆವರಣ ಅಚ್ಚುಕಟ್ಟಾಗಿರಲಿ. ವಾಸ್ತು ಅಂಶಗಳು ವ್ಯವಸ್ಥಿತವಾಗಿ ಅಡಕವಾಗಿರಲಿ.