Udayavani | May 30, 2012
ಸುಳ್ಯ : ಭಾರತ್ ಬಂದ್ ವೇಳೆ ಬಲಾತ್ಕಾರದ ಬಂದ್ ನಡೆಸದಂತೆ, ಒಂದೊಮ್ಮೆ ಅಹಿತಕರ ಘಟನೆ ನಡೆದರೆ ಇದಕ್ಕೆ ಬಂದ್ ಕರೆ ನೀಡಿದವರನ್ನೇ ಹೊಣೆ ಮಾಡಬೇಕೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಮನವಿ ಮಾಡಿದೆ.
ನಿಯೋಗದ ಮೂಲಕ ಸುಳ್ಯ ಠಾಣೆಗೆ ತೆರಳಿ ಮನವಿಯನ್ನು ಸುಳ್ಯ ಠಾಣಾಧಿಕಾರಿ ಅವರಿಗೆ ನೀಡಿ, ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಎನ್. ಜಯಪ್ರಕಾಶ್ ರೈ, ಪಿ.ಎಸ್. ಗಂಗಾಧರ್, ಕೆ.ಎಂ. ಮುಸ್ತಾಫ, ಡಾ| ರಘು, ದಿನೇಶ್ ಅಂಬೆಕಲ್ಲು, ಜಯರಾಮ ಬೆಟ್ಟ, ಆರ್.ಕೆ. ಮಹಮ್ಮದ್, ಜಿ.ಕೆ. ಹಮೀದ್, ಸುಧೀರ್ ರೈ ಮೇನಾಲ, ಹರಿಪ್ರಸಾದ್ ಕೆ.ಕೆ. ಮೊದಲಾದವರು ಭಾಗವಹಿಸಿದ್ದರು.