Tuesday, May 21, 2013
Last Updated: 11:46:35 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹೊಸೂರು: ಇಸ್ರೇಲ್‌ ಧರ್ಮ ಗುರು ಅಂತ್ಯಕ್ರಿಯೆ
      • Udayavani | May 30, 2012

        ಗೋಣಿಕೊಪ್ಪಲು : ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದ ಇಸ್ರೇಲಿನ ಸೇಜ್‌ ನಾರದ ಮುನಿಗಳ (ಇಟಾಮರ್‌ ಓರೇನೊ) ಅಂತ್ಯಸಂಸ್ಕಾರವು ಗೊಣಿಕೊಪ್ಪಲು ಸಮೀಪದ ಹೊಸೂರು ಗ್ರಾಮದ ಕಾಫಿ ಬೆಳೆಗಾರರಾದ ಕುಪ್ಪಂಡ ವಿ. ರಾಜಪ್ಪ ಅವರ ಅಡಿಕೆ ತೋಟದಲ್ಲಿ ಬುಧವಾರ ಬೆಳಗ್ಗಿನ ಜಾವ ನಡೆಸಲಾಯಿತು. ಯಹೂದಿ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದ ಅವÃ ಅಂತ್ಯಸಂಸ್ಕಾರ ಹಿತೈಷಿ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಹಿಂದೂ ಧರ್ಮದ ವಿಧಿ ವಿಧಾನಗಳೊಂದಿಗೆ ನೆರವೇರಿಲಾಯಿತು. ತಿಂಗಳ ಹಿಂದೆಯೇ ಇಸ್ರೇಲಿನಲ್ಲಿ ನಿಧನ ಹೊಂದಿದ್ದ ಅವರ ಶರೀರವನ್ನು ಅವರ ಇಚ್ಚೆಯ ಅನುಸಾರ ಕರ್ನಾಟಕದಲ್ಲಿ ಮಣ್ಣು ಮಾಡಲಾಗಿದೆ.ಬೆಳಗ್ಗೆ 5 ಗಂಟೆ ಸೂಕ್ತ ಸಮಯವಾಗಿದ್ದರಿಂದ ಮೈಸೂರು ಅರ್ಚಕರ ಮಾರ್ಗದರ್ಶಶನದಲ್ಲಿ ನಾರದ ಅವರ ಅಣ್ಣನ ಮಗಳು ಸಂಸ್ಕಾರ ನೆರವೇರಿಸಿದರು.

        ಶವ ಸಂಸ್ಕಾರದಲ್ಲಿ 13 ಮಹಿಳೆಯರು ಸಹಿತ ಇಸ್ರೇಲಿನ 15 ಮಂದಿ ಭಾಗವಹಿಸಿದ್ದು ಸ್ಥಳೀಯ ದಾನಿಗಳಾದ ಕುಪ್ಪಂಡ ರಾಜಪ್ಪ, ಪತ್ನಿ ಛಾಯಾ ರಾಜಪ್ಪ$, ತಾಯಿ ದೇವಮ್ಮ ಹಾಗೂ ಸ್ಥಳೀಯ ಗ್ರಾ.ಪಂ.ನ ಕೆಲವು ಸದಸ್ಯರು ಸಾಕ್ಷಿಯಾಗಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picನಗರವೂ ಸೇರಿದಂತೆ ಪರಿಸರದ ಗ್ರಾಮಗಳ ಜನರಿಗೆ ತಾಜಾ ತರಕಾರಿ ಸಿಗುವ ಸ್ಥಳ. ಆದ ಕಾರಣ ಪುತ್ತೂರು ಸಂತೆಗೆ ಗ್ರಾಹಕರು ಕಡಿಮೆಯಾಗುವುದಿಲ್ಲ....
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus