Udayavani | May 30, 2012
ಪಡುಬಿದ್ರಿ : ಅಂಬಲಪಾಡಿಯ ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್ ಹಾಗೂ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ 'ಶ್ರೀ ಮಹಾಲಕ್ಷಿ$¾à ಸಮಾಜ ಭವನ'ದಲ್ಲಿ ಬುಧವಾರದ ಕರ್ಕಾಟಕ ಲಗ್ನ ಸುಮುಹೂರ್ತದಲ್ಲಿ ನಡೆದ ಉಚಿತ ಸಾಮೂಹಿಕ ವಿವಾಹ ವೇದಿಕೆಯಲ್ಲಿ 10 ಜೋಡಿ ವಧೂ-ವರರು ಹಸೆಮಣೆ ಏರಿದರು.
ಮೊಗವೀರ ಸಮಾಜದಲ್ಲಿ ಇತಿಹಾಸ ನಿರ್ಮಿಸಿರುವ ಈ ಉಚಿತ ಸಾಮೂಹಿಕ ವಿವಾಹ ಸತತ ನಾಲ್ಕನೇ ಬಾರಿಗೆ ನಡೆಯುತ್ತಿದ್ದು, ಇದುವರೆಗೆ ಒಟ್ಟು 105 ಜೋಡಿಗಳು ವರದಕ್ಷಿಣೆ ರಹಿತವಾಗಿ ಸರಳ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಮೊಗವೀರ ಸಮಾಜದ ನೂತನ ಸಭಾಭವನದಲ್ಲಿ ನಡೆದ ಈ ವಿವಾಹ ಸಮಾರಂಭದ ಪೌರೋಹಿತ್ಯವನ್ನು ಉಚ್ಚಿಲ ಶ್ರೀ ಮಹಾಲಕ್ಷಿ$¾à ದೇವಳದ ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ ನೆರವೇರಿಸಿದರು. ಸಂಪ್ರದಾಯದಂತೆ ಸಂಕಲ್ಪ, ಹಾರ ವಿನಿಮಯ, ಧಾರೆಯೆರೆದು ಕನ್ಯಾದಾನ ವಿಧಿ, ಲಾಜ ಹೋಮ, ಸಪ್ತಪದಿ, ಮಾಂಗಲ್ಯ ಧಾರಣೆ, ಮುತ್ತೈದೆಯರಿಂದ ಮಂಗಳಾರತಿ, ಮಹಾಲಕ್ಷಿ$¾à ದರ್ಶನ, ಅರಕ್ಷತೆಗಳು ಸಮಾಜದ ಗಣ್ಯರು ಹಾಗೂ ಗುರಿಕಾರರ ಉಪಸ್ಥಿತಿಯಲ್ಲಿ ಜರಗಿತು.
* ಮುಂದಿನ ವರ್ಷ ರಾಜ್ಯದೆಲ್ಲೆಡೆಗೆ ವಿಸ್ತರಣೆ
ಈ ಸಂದರ್ಭದಲ್ಲಿ ಮಾತಾಡಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ, ನಾಡೋಜ ಡಾ| ಜಿ. ಶಂಕರ್, ಸಮಾಜದ ವರದಕ್ಷಿಣೆ ಪಿಡುಗನ್ನು ನಿವಾರಿಸುವ ನಿಟ್ಟಿನಲ್ಲಿ ಇಂತಹಾ ಸರಳ ಹಾಗೂ ವರದಕ್ಷಿಣೆ ರಹಿತ ವಿವಾಹಗಳನ್ನು ನಡೆಸಲಾಗುತ್ತಿದೆ. ಸಮಾಜದ ಬಡ ವಧೂವರರ ಮನೆಗೆ ತೆರಳಿ ಮಾಹಿತಿ ಕಲೆಹಾಕಲಾಗಿದೆ. ಪ್ರತೀ ಬಾರಿ ನಡೆಯುತ್ತಿರುವ ಈ ಉಚಿತ ಸಾಮೂಹಿಕ ವಿವಾಹವನ್ನು ಮುಂದಿನ ವರ್ಷ ಸಮಾಜ ಬಾಂಧವರ ಅನುಕೂಲಕ್ಕಾಗಿ ರಾಜ್ಯದೆಲ್ಲೆಡೆ ನಡೆಸಲಾಗುವುದು. ಮುಂದಿನ ಎಪ್ರಿಲ್ ತಿಂಗಳಲ್ಲಿ ಸಮಾಜದ ಬಡಕುಟುಂಬಗಳ 101 ಜೋಡಿಗೆ ಉಡುಪಿಯ ಶ್ಯಾಮಿಲಿ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದರು.
*ವಿವಾಹ ನೋಂದಣಿಗೆ ಸಹಕಾರ
ಈ ಸಂದರ್ಭದಲ್ಲಿ ಮಾತಾಡಿದ ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ಜಯ ಸಿ. ಕೋಟ್ಯಾನ್, ನೂತನ ವಧೂವರರಿಗೆ ಸರಕಾರದಿಂದ ದೊರೆಯಲಿರುವ 10,000ರೂ., ಪ್ರೋತ್ಸಾಹ ಧನ ದೊರಕಿಸಿಕೊಡಲು ಹಾಗೂ ಕಡ್ಡಾಯ ವಿವಾಹ ನೋಂದಣಿ ಮಾಡಲು ಯುವ ಸಂಘಟನೆ ಸಹಕರಿಸುವುದಾಗಿ ತಿಳಿಸಿದರು.
* ಗಣ್ಯರ ಉಪಸ್ಥಿತಿ
ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ಯು. ಆರ್. ಸಭಾಪತಿ, ಶಾಲಿನಿ ಶಂಕರ್, ಶ್ಯಾಮಿಲಿ ಶಂಕರ್, ದ.ಕ., ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಮಿತಿಯ ಅಧ್ಯಕ್ಷ ಎಂ.ಎಂ. ಸುವರ್ಣ, ಮೊಗವೀರ ಸಮಾಜದ ಮುಖಂಡರಾದ ಆನಂದ ಪಿ. ಸುವರ್ಣ ಕೊಡವೂರು, ಯತೀಶ್ ಬೈಕಂಪಾಡಿ, ಡಿ. ಮಂಜುನಾಥಯ್ಯ, ಅಪ್ಪಣ್ಣ ಶಿವಮೊಗ್ಗ, ಮಹಾಬಲ ರಾವ್ ಶಿವಮೊಗ್ಗ, ಆನಂದ ಮರಕಾಲ ಸಾಗರ, ರವೀಂದ್ರ ಬಜೆ ಮೇಲ್ಸಾಲ್, ಮೊಗವೀರ ಯುವಸಂಘಟನೆಯ ಪದಾಧಿಕಾರಿಗಳಾದ ಗಣೇಶ್ ಕಾಂಚನ್, ದೀಪಕ್‌ರಾಜ್ ಕಡೆಕಾರ್, ಶೈಲೇಶ್, ಶಿವರಾಮ ಕೆ, ಅಶೋಕ್ ಕುಂದರ್ ಮಂದಾರ್ತಿ, ದಯಾನಂದ ತಿಂಗಳಾಯ, ಸತೀಶ್ ನಾಯಕ್, ಸಂಜೀವ ಮತ್ತಿತರರು ಉಪಸ್ಥಿತರಿದ್ದರು.
*ಸಮ್ಮಾನ - ಗೌರವ
ಈ ವಿವಾಹ ಸಮಾರಂಭದ ಯಶಸ್ಸಿಗೆ ಕಾರಣಕರ್ತರಾದ ದ.ಕ., ಮೊಗವೀರ ಮಹಾಜನ ಸಂಘದ ಸುದಾಕರ ಕರ್ಕೇರರನ್ನು ಸಮ್ಮಾನಿಸಲಾಯಿತು. ವಿವಿಧ ಗ್ರಾಮ ಸಭೆಗಳ 40 ಗುರಿಕಾರರಿಗೆ ಡಾ| ಜಿ. ಶಂಕರ್ ತಾಂಬೂಲ ನೀಡಿ ಗೌರವಿಸಿದರು. ಈ ವಿವಾಹ ಸಮಾರಂಭಕ್ಕಾಗಿ ಸುರತ್ಕಲ್ ಮೊಗವೀರ ವ್ಯವಸ್ಥಾಪನಾ ಸಮಿತಿಯ ವತಿಯಿಂದ 1ಲಕ್ಷರೂ.ಸಹಾಯಧನವನ್ನು ಸಮಿತಿಯ ಅಧ್ಯಕ್ಷ ಯತೀಶ್ ಬೈಕಂಪಾಡಿ ಹಸ್ತಾಂತರಿಸಿದರು.
ಈ ಉಚಿತ ವಿವಾಹದಲ್ಲಿ ವರನಿಗೆ ಕುರ್ತಾ ಪೈಜಾಮ, ಪೇಟ, ವಧುವಿಗೆ ಸೀರೆ, ರವಿಕೆ, ಬೆಳ್ಳಿಯ ಕಾಲುಂಗರ, 2ಪವನ್ ತೂಕದ ಕರಿಮಣಿ ಸರ ಹಾಗೂ ಪ್ರತೀ ಜೋಡಿಯೊಂದಿಗೆ ಸುಮಾರು 100ಜನ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರತೀ ವಧೂವರರಿಗಾಗಿ ಸುಮಾರು 85,000ರೂ.ಗಳನ್ನು ಇತರರಿಗೆ ಮಾದರಿಯಾಗುವಂತೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಹಾಗೂ ಮೊಗವೀರ ಯುವ ಸಂಘಟನೆಗಳು ಭರಿಸಿವೆ.
* ವಿವಾಹ ಬಂಧನಕ್ಕೊಳಗಾದ ಜೋಡಿಗಳು
ಪ್ರಶಾಂತ್ ಕಾಂಚನ್ ಕುಕ್ಕಿಕಟ್ಟೆ - ದೀಪಿಕಾ ಹನೆಹಳ್ಳಿ ಗ್ರಾಮ, ಸೋಮನಾಥ ಆರ್. ಬಂಗೇರ ಎರ್ಮಾಳು - ಪ್ರಪುಲ್ಲ ಶ್ರೀಯಾನ್ ಕಾಪು ಪಡು, ರವಿಚಂದ್ರ ತಗ್ಗರ್ಸೆ ಬೈಂದೂರು - ಗಂಗಾ ಬಂಕೇಶ್ವರ ಬೈಂದೂರು, ಉಮೇಶ್ ತಿಂಗಳಾಯ ಮೂಡುತೋನ್ಸೆ - ಲಕ್ಷಿ$¾à ಕುಂದರ್ ಮೂಡುತೋನ್ಸೆ, ಶ್ರೀಧರ ಕೋಟ್ಯಾನ್ ಕುಕ್ಕೆಹಳ್ಳಿ - ಆಶಾ ಕುಂದರ್ ಬೆಳ್ಳಂಪಳ್ಳಿ, ಚಂದ್ರಕಾಂತ್ ಕೊರವಾಡಿ ಕುಂಭಾಶಿ - ಶಾಂತಾ ಕೊರವಾಡಿ ಕುಂಭಾಶಿ, ಜಿ. ಉಮೇಶ್ ಹೇರೂರು - ಲಲಿತಾ ಕೋಡಿಬೇಂಗ್ರೆ, ಮಹೇಶ್ ಪೆಜಮಂಗೂರು ಕೊಕ್ಕರ್ಣೆ - ಶ್ಯಾಮಲಾ ಹೊಸಬಡಾಕೇರಿ ಕೋಟೇಶ್ವರ, ಸತೀಶ್ ಮೊಗವೀರ ತೆಕ್ಕಟ್ಟೆ - ರತ್ನಾ ಮೊವೀರಿ ಕುಂಭಾಶಿ, ರವಿ ಅಂಬಿಗಾ ಮಸೂರು ಕುಮಟಾ - ಅಖೀಲಾ ಬೈತಕೋಲ ಕಾರವಾರ.