Udayavani | Jun 02, 2012
ಮುಂಬಯಿ : ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ಎಂ. ಎ. ಪ್ರಥಮ ವರ್ಷ ತರಗತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 2012-2013 ನೇ ಶೈಕ್ಷಣಿಕ ಸಾಲಿನ ತರಗತಿಗಳಿಗೆ ಸೇರಬಯಸುವ ಅರ್ಹ ಅಭ್ಯರ್ಥಿಗಳು ವಿಭಾಗದ ಕಚೇರಿಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ಎರಡು ಸಾವಿರ ರೂ. ಹಾಗೂ ಕರ್ನಾಟಕ ಸಂಘ ಮುಂಬಯಿ ವಾರ್ಷಿಕ ಮೂರು ಸಾವಿರ ರೂ. ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಅರ್ಜಿಗಳನ್ನು ಅಂಚೆ ಮೂಲಕ ತರಿಸಿಕೊಳ್ಳುವ ಅಭ್ಯರ್ಥಿಗಳು Dr. G. N. Upadhya, Department of Kannada, University of Mumbai, Ranade Bhavan, Vidyanagari, santacruz (East), Mumbai-400098 (Tel : 26543530, 26543469, 26543345) Email : kannadadepartment@gmail.com <mailto:kannadadepartment@gmail.com>, University Website : www.mu.ac.in <http://www.mu.ac.in> ಈ ವಿಳಾಸಕ್ಕೆ ಸ್ವವಿಳಾಸ ಹೊಂದಿದ ಹತ್ತು ರೂ. ಗಳ ಸ್ಟಾಂಪ್ ಹಚ್ಚಿದ ಕವರುಗಳನ್ನು ಲಗತ್ತಿಸಿ ವ್ಯವಹರಿಸಬೇಕು. ತುಂಬಿದ ಅರ್ಜಿಯನ್ನು ಜುಲೈ 20 ರ ಒಳಗೆ ತಲುಪುವಂತೆ ಕಳುಹಿಸಿಕೊಡಬೇಕಾಗಿ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.