ಮುಂಬಯಿ: ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಭಾರತ ನೇರ ಸಾಗರೋತ್ತರ ಹೂಡಿಕೆ ಆಕರ್ಷಿಸಲಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಉದ್ಯಮ ಸಚಿವ ಆನಂದ್ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಜಾಗತಿಕ ಆರ್ಥಿಕ ಅಸ್ಥಿರತೆಯ ಹೊರತೂ ಕಳೆದ ವರ್ಷ ನಾವು 50 ಬಿಲಿಯನ್ ಅಮೆರಿಕನ್ ಡಾಲರ್ ಗರಿಷ್ಠ ಎಫ್‌ಡಿಐ ಸ್ವೀಕರಿಸಿದ್ದೆವು ಎಂದು ಮಗ್ಗ ಉದ್ಯಮದ ಸಮಾರಂಭವೊಂದರ ಪಾರ್ಶ್ವದಲ್ಲಿ ಸುದ್ದಿಗಾರರಿಗೆ ಶರ್ಮಾ ತಿಳಿಸಿದರು.ಕಳೆದ ಹಣಕಾಸು ಸಾಲಿನಲ್ಲಿ ಕೈರ್ನ್-ವೇದಾಂತ ಮತ್ತು ರಿಲಯನ್ಸ್-ಬ್ರಿಟಿಷ್‌ನಂಥ ದೊಡ್ಡ ಮಟ್ಟದ ವ್ಯವಹಾರಗಳು ನಡೆದಿದ್ದರಿಂದ ದಾಖಲೆಮಟ್ಟದಲ್ಲಿ ಎಫ್‌ಡಿಐ ಹರಿದು ಬಂದಿದೆ. ಷೇರುಗಳ ಮೌಲ್ಯ ಕುಸಿದಾಗ ವಿದೇಶಿ ಹೂಡಿಕೆದಾರರು ದೇಶಿಯ ಕಂಪೆನಿಗಳ ಶೇರುಗಳನ್ನು ಖರೀದಿಸಲು ಮುಂದಾಗುತ್ತಾರೆ ಎಂದರು.