Thursday, May 23, 2013
Last Updated: 11:57:28 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಣವೀರ ಸೇನೆ ಮುಖ್ಯಸ್ಥನ ಹಿಂಸಾತ್ಮಕ ಅಂತ್ಯಕ್ರಿಯೆ
    • ರಣವೀರ ಸೇನೆ ಮುಖ್ಯಸ್ಥ ಬ್ರಹ್ಮ್ಹೆಶ್ವರ್ ಸಿಂಗ್‌ ಮುಖೀಯಾ ಅವರ ಅಂತಿಮ ಯಾತ್ರೆ

      • Udayavani | Jun 02, 2012

        ಪಟನಾ: ಹಿಂಸೆಯ ಮಧ್ಯೆಯೇ ರಣವೀರ ಸೇನೆ ಮುಖ್ಯಸ್ಥ ಬ್ರಹ್ಮ್ಹೆಶ್ವರ್  ಸಿಂಗ್‌ ಮುಖೀಯಾ ಅವರ ಅಂತ್ಯಕ್ರಿಯೆ ಶನಿವಾರ ಸಂಜೆ ಇಲ್ಲಿ ನೆರವೇರಿತು.



        ಬಿಹಾರದ ಆರಾದಲ್ಲಿ ಶುಕ್ರವಾರ ಬೆಳಗ್ಗೆ ಬ್ರಹ್ಮ್ಹೆಶ್ವರ್  ಅವರನ್ನು 6 ಅಪರಿಚಿತ ದುಷ್ಕರ್ಮಿಗಳು ಹತ್ಯೆಗೈದಿದ್ದರು. ಇದಾದ ನಂತರ ಶುಕ್ರವಾರ ಆರಾದಲ್ಲೇ ಪಾರ್ಥಿವ ಶರೀರವನ್ನು ದರ್ಶನಕ್ಕಿಟ್ಟು ಶನಿವಾರ ಆರಾದಿಂದ ಪಟನಾಗೆ ಶವವನ್ನು 40 ಕಿ.ಮೀ.ನಷ್ಟು ದೂರ ಮೆರವಣಿಗೆಯಲ್ಲಿ ಕರೆತರಲಾಯಿತು.

        ಈ ವೇಳೆ ಮೆರವಣಿಗೆಯಲ್ಲಿ ಪಾಲ್ಗೊಂಡ ರಾಜ್ಯ ಬಿಜೆಪಿ ಅಧ್ಯಕ್ಷ ಸಿ.ಪಿ. ಠಾಕೂರ್‌ ಅವರ ಕಾರಿನ ಮೇಲೆ ಬ್ರಹೆ¾àಶ್ವರ ಅವರ ಬೆಂಬಲಿಗರು ಕಲ್ಲು ತೂರಿದ ಪ್ರಸಂಗವೂ ನಡೆಯಿತು. ಇದಲ್ಲದೆ, ಅನೇಕ ಕಡೆಗಳಲ್ಲಿ ರಸ್ತೆ, ತಡೆ, ಕಲ್ಲುತೂರಾಟ ಪ್ರಕರಣಗಳು ನಡೆದಿವೆ. ಭಾರಿ ಪೊಲೀಸ್‌ ಬಂದೋಬಸ್ತನ್ನು ಬಿಹಾರದಲ್ಲಿ ಈ ದಿನ ಹಮ್ಮಿಕೊಳ್ಳಲಾಗಿತ್ತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus