Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಾಗ ಬದಲಿಸಿದ ಪೀಟರ್‌ಸನ್‌
    • ಟಿ-20 ವಿಶ್ವಕಪ್‌ ಆಡುವ ಬಯಕೆ!
    • ಸೀಮಿತ ಓವರ್‌ಗಳ ಕ್ರಿಕೆಟಿಗೆ ವಿದಾಯ ಹೇಳಿದ್ದ ಇಂಗ್ಲಂಡಿನ ಬ್ಯಾಟ್ಸ್‌ಮನ್‌ ಕೆವಿನ್‌ ಪೀಟರ್‌ಸನ್‌ ಈಗ ರಾಗ ಬದಲಿಸಿದ್ದಾರ

      • Udayavani | Jun 11, 2012

        ಬರ್ಮಿಂಗಂ : ಕೆಲವು ದಿನಗಳ ಹಿಂದಷ್ಟೇ ಸೀಮಿತ ಓವರ್‌ಗಳ ಕ್ರಿಕೆಟಿಗೆ ವಿದಾಯ ಹೇಳಿದ್ದ ಇಂಗ್ಲಂಡಿನ ಬ್ಯಾಟ್ಸ್‌ಮನ್‌ ಕೆವಿನ್‌ ಪೀಟರ್‌ಸನ್‌ ಈಗ ರಾಗ ಬದಲಿಸಿದ್ದಾರೆ. ಸೆಪ್ಟಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಇಂಗ್ಲಂಡಿಗೆ ಪ್ರಶಸ್ತಿ ಉಳಿಸಿಕೊಳ್ಳಲು ನೆರವಾಗುವ ಬಯಕೆ ವ್ಯಕ್ತಪಡಿಸಿ ಅಚ್ಚರಿ ಹುಟ್ಟಿಸಿದ್ದಾರೆ.

        ದಕ್ಷಿಣ ಆಫ್ರಿಕಾ ಮೂಲದ ಕೆವಿನ್‌ ಪೀಟರ್‌ಸನ್‌ 2 ವರ್ಷಗಳ ಹಿಂದೆ ವೆಸ್ಟ್‌ ಇಂಡೀಸ್‌ನಲ್ಲಿ ನಡೆದ ಟಿ-20 ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠರಾಗಿ ಮೂಡಿಬಂದಿದ್ದರು. ಅಂದು ಇಂಗ್ಲಂಡ್‌ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು.

        ಪೀಟರ್‌ಸನ್‌ ಒಂದು ವಾರದ ಹಿಂದಷ್ಟೇ ಏಕದಿನ ಹಾಗೂ ಟಿ-20 ಕ್ರಿಕೆಟಿಗೆ ವಿದಾಯ ಘೋಷಿಸಿದ್ದರು. ಆದರೆ ನಿವೃತ್ತಿ ವಿಚಾರದಲ್ಲಿ ಯಾವುದೇ ಬೇಸರವಿಲ್ಲ, ಟಿ-20 ಪಂದ್ಯಗಳಲ್ಲಷ್ಟೇ ಆಡಲು ಬಯಸುವುದಾಗಿ ಹೇಳಿದ್ದಾರೆ.

        ತಮ್ಮ ಒಪ್ಪಂದದ ಬಗ್ಗೆ ಇಸಿಬಿ ರಾಜಿ ಒಪ್ಪಂದ ಮಾಡಿಕೊಳ್ಳುವ ಭರವಸೆ ಪೀಟರ್‌ಸನ್‌ ಅವರದು. 'ಒಂದು ವೇಳೆ ಟಿ-20 ವಿಶ್ವಕಪ್‌ನಲ್ಲಿ ಆಡಬೇಕೆಂದು ಬಯಸಿದರೆ ನಾನು ಆಡಲಿದ್ದೇನೆ. ಆದರೆ ಒಪ್ಪಂದಗಳೆಲ್ಲ ಒಪ್ಪಂದವೇ ಆಗಿದ್ದು, ಇದನ್ನು ಮಂಡಳಿಯೇ ನಿರ್ಧರಿಸಬೇಕು' ಎಂದು ಪೀಟರ್‌ಸನ್‌ ಹೇಳಿದ್ದಾರೆ.

        ಕಳೆದ ಐಪಿಎಲ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ಪರ ಆಡಿದ್ದ ಪೀಟರ್‌ಸನ್‌ ಪ್ರಚಂಡ ಫಾರ್ಮ್ ತೋರ್ಪಡಿಸಿದ್ದರು; ಒಂದು ಶತಕ ಕೂಡ ಸಿಡಿಸಿದ್ದರು. ಆದರೆ ಎಲ್ಲ ಪ್ರಕಾರದ ಕ್ರಿಕೆಟ್‌ನಲ್ಲಿ ಮುಂದುವರಿಯುವುದು, ಫಾರ್ಮ್ ಕಾಯ್ದುಕೊಂಡು ಸ್ಥಿರ ಪ್ರದರ್ಶನ ನೀಡುವುದು ಸಾಧ್ಯವಿಲ್ಲ ಎಂದಿದ್ದರು. ಈ ಹೇಳಿಕೆ ನೀಡಿದ ಬೆನ್ನಲ್ಲೇ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಾತ್ರ ಆಡುವ ನಿರ್ಧಾರಕ್ಕೆ ಬಂದರು.

        'ನಾನು ಮಹೇಂದ್ರ ಸಿಂಗ್‌ ಧೋನಿ ಹೊರತುಪಡಿಸಿದರೆ ಕಳೆದ 7 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಧಿಕ ದಿನಗಳನ್ನು ಕಳೆದ ಆಟಗಾರ. ತನ್ನ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನಿಸಿ ಕೆಲವು ಪ್ರಕಾರದ ಕ್ರಿಕೆಟ್‌ನಿಂದ ದೂರ ಸರಿಯಬೇಕೆಂಬ ನಿರ್ಧಾರಕ್ಕೆ ಬಂದೆ. ಇದರಲ್ಲಿ ಪ್ರಮುಖವಾದುದು ಏಕದಿನ ಕ್ರಿಕೆಟ್‌. ನನಗೆ ವಿರಾಮದ ಅವಕಾಶಗಳೂ ಒದಗಿ ಬಂದವು. ಆದರೆ ಇಂಗ್ಲಂಡ್‌ ಪರ ಆಡುವಾಗ ಇಂಥ ಅವಕಾಶಗಳನ್ನು ಕಳೆದುಕೊಳ್ಳಲು ನನ್ನ ಮನಸ್ಸು ಒಪ್ಪುತ್ತಿರಲಿಲ್ಲ. ಇದು ಕ್ರಿಕೆಟ್‌ ಮೇಲಿನ ಪ್ರೀತಿ. ಒಟ್ಟಾರೆ 35ರ ತನಕ ಆಡುವ ನಿರ್ಧಾರ ನನ್ನದು...' ಎಂದು 31ರ ಹರೆಯದ ಪೀಟರ್‌ಸನ್‌ ಹೇಳಿದರು.

        ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದ 4ನೇ ದಿನದಾಟದ ಬಳಿಕ ಪೀಟರ್‌ಸನ್‌ ಮಾತಾಡುತ್ತಿದ್ದರು. ಇದೇ ವೇಳೆ ಟಿ-20 ಪಂದ್ಯಗಳು 50 ಓವರ್‌ಗಳ ಪಂದ್ಯಗಳನ್ನು ಹಿಂದಿಕ್ಕಲಿವೆ ಎಂಬ ಭವಿಷ್ಯವನ್ನೂ ನುಡಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲಾ ಪೊಲೀಸ್‌ ಸಶಸ್ತ್ರ ಮೀಸಲು ಪಡೆಯ ಸಿಬಂದಿ ಶಂಕರ ಪೂಜಾರಿಯವರು ರಾಜ್ಯವನ್ನು ಪ್ರತಿನಿಧಿಸಿ 4 ಪದಕಗಳನ್ನು ಪಡೆದಿದ್ದಾರೆ..
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus