Thursday, May 23, 2013
Last Updated: 1:03:06 AM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿತ್ಯಾನಂದ ಬಂಧನಕ್ಕೆ ಆದೇಶ
    • ಆಶ್ರಮಕ್ಕೆ ಬೀಗಮುದ್ರೆಗೆ ಸೂಚನೆ- ಸಿಎಂ
    • ಆಶ್ರಮದಿಂದ ನಾಪತ್ತೆಯಾಗಿರುವ ನಿತ್ಯಾನಂದಸ್ವಾಮಿ ಶೋಧನೆಗೆ ಸರ್ಚ್‌ ವಾರಂಟ್‌...

      • Udayavani | Jun 12, 2012

        ಬೆಂಗಳೂರು: ಆಶ್ರಮದಲ್ಲಿ ಅನೈತಿಕ ಚಟುವಟಿಕೆ, ಮಹಿಳೆಯರ ದುರುಪಯೋಗ ಹಿನ್ನೆಲೆಯಲ್ಲಿ ವಿವಾದಿತ ಸ್ವಾಮೀಜಿ ನಿತ್ಯಾನಂದ ಅವರನ್ನು ಬಂಧಿಸಲು ಆದೇಶಿಸಿರುವ ರಾಜ್ಯ ಸರ್ಕಾರ, ಬಿಡದಿ ನಿತ್ಯಾನಂದ ಆಶ್ರಮಕ್ಕೆ ಬೀಗಮುದ್ರೆ ಹಾಕಲು ಸೂಚನೆ ನೀಡಿದೆ.

        ಆಶ್ರಮದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಚಟುವಟಿಕೆಗಳ ಬಗ್ಗೆ ವಿಭಾಗೀಯ ಆಯುಕ್ತರಿಂದ ಸಮಗ್ರ ತನಿಖೆ ನಡೆಸುವುದು. ನಂತರ ಆಶ್ರಮವನ್ನು ಸ್ವಾಧೀನಪಡಿಸಿಕೊಂಡು ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆಯೂ ನಿರ್ಧರಿಸಲಾಗಿದೆ.

        ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

        ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಆಶ್ರಮದಿಂದ ನಾಪತ್ತೆಯಾಗಿರುವ ನಿತ್ಯಾನಂದಸ್ವಾಮಿ ಶೋಧನೆಗೆ ಸರ್ಚ್‌ ವಾರಂಟ್‌ ಹೊರಡಿಸಲಾಗುವುದು. ನಂತರ ಅವರಿಗಿರುವ ಜಾಮೀನು ರದ್ದುಪಡಿಸಲು ಕಾನೂನು ತಜ್ಞರ ಜತೆ ಸಮಾಲೋಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

        ನಿತ್ಯಾನಂದ ಆಶ್ರಮದಲ್ಲಿ ಕಳೆದ ಒಂದು ವಾರದಿಂದ ನಡೆದ ವಿದ್ಯಮಾನಗಳ ಕುರಿತು ರಾಮನಗರ ಜಿÇÉಾಧಿಕಾರಿ ಶ್ರೀರಾಮರೆಡ್ಡಿ ಹಾಗೂ ಅನೂಪ್‌ ಅಗರ್‌ವಾಲ್‌ ನೀಡಿದ ವರದಿ ಆಧಾರದ ಮೇಲೆ ತಕ್ಷಣವೇ ಇಡೀ ಆಶ್ರವನ್ನು ಕೂಲಂಕುಶವಾಗಿ ತಪಾಸಣೆ ಮಾಡಿ ಬೀಗ ಮುದ್ರೆ ಜಡಿಯಲು ಆದೇಶಿಸಲಾಗಿದೆ. ತನಿಖೆಯ ನಂತರ ಆಶ್ರಮವನ್ನು ಸರ್ಕಾರವೇ ವಶಪಡಿಸಿಕೊಳ್ಳುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

        ನಿತ್ಯಾನಂದ ಆಶ್ರಮದಲ್ಲಿ ಅನೇಕ ಮಹಿಳೆಯರನ್ನು ದುರುಪಯೋಗ ಮಾಡಿಸಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಸರ್ಕಾರಕ್ಕೆ ಬಂದಿವೆ. ಅಲ್ಲದೆ ಇದು ಅನೈತಿಕ ಚಟುವಟಿಕೆ ಕೇಂದ್ರವಾಗಿರುವುದು ನಮ್ಮಲ್ಲಿ ದಾಖಲೆಗಳಿವೆ. ಜಿÇÉಾ ಆಡಳಿತ ನೀಡಿದ ವರದಿ ಆಧರಿಸಿ, ಇಂತಹ ಕಠಿಣಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

        ವಿಧಾನ ಸೌಧದ ಸಮ್ಮೇಳನ ಸಬಾಂಗಣದಲ್ಲಿ ನಡೆದ ಸಬೆಯಲ್ಲಿ ಮುಖ್ಯಮಂತ್ರಿಯವರಲ್ಲದೆ ಗೃಹ ಸಚಿವ ಆರ್‌. ಅಶೋಕ್‌, ನಗರಾಭಿವೃದ್ಧಿ ಮತ್ತು ಕಾನೂನು ಸಚಿವ ಸುರೇಶ್‌ಕುಮಾರ್‌ ಜಿÇÉಾ ಉಸ್ತುವಾರಿ ಸಚಿವ ಸಿ.ಪಿ. ಯೋಗೇಶ್ವರ್‌ ಹಾಗೂ ಗೃಹ, ಕಾನೂನು, ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

        ಅತ್ಯಾಚಾರ ಪ್ರಕರಣಕ್ಕೆ ಆರೋಪಕ್ಕ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಲು ನಿತ್ಯಾನಂದಸ್ವಾಮಿ ಕರೆದಿದ್ದ ಪತ್ರಿಕಾಗೋಷ್ಠಿ ಸಂದರ್ಭದಲ್ಲಿ ಅವರ ಶಿಷ್ಯರು ಹಾಗೂ ಮಾಧ್ಯಮದವರ ನಡುವೆ ಜಟಾಪಟಿ ನಡೆದಿತ್ತು. ನಿತ್ಯಾನಂದ ಶಿಷ್ಯರ ವರ್ತನೆ ಖಂಡಿಸಿ ತೀವ್ರ ಪ್ರತಿಭಟನೆ ನಡೆದು, ಆಶ್ರಮದಲ್ಲಿ ಅವ್ಯವಹಾರಗಳು ನಿರಂತರವಾಗಿ ನಡೆಯುತ್ತಿದ್ದು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ನಾನಾ ಸಂಘಟನೆಗಳು ಒತ್ತಾಯ ಮಾಡಿದ್ದವು.

        ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ರಾಮನಗರ ಜಿÇÉಾಧಿಕಾರಿ ಶ್ರೀರಾಮರೆಡ್ಡಿ ಅವರಿಗೆ ಕೂಡಲೇ ತುರ್ತು ವರದಿ ನೀಡುವಂತೆ ಸೂಚಿಸಿತ್ತು. ಈ ಸಂಬಂಧ ರಾಮನಗರ ಜಿÇÉಾಧಿಕಾರಿ ಶ್ರೀರಾಮರೆಡ್ಡಿ ಸರ್ಕಾರಕ್ಕೆ ಸೋಮವಾರ ಬೆಳಿಗ್ಗೆ ಗುಪ್ತ ವರದಿ ಸಲ್ಲಿಸಿದ್ದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus