ನಾಗಪುರ: ಈ ವರ್ಷದ ಮೇ ತಿಂಗಳಲ್ಲಿ ಸೆಂಟ್ರಲ್ ರೈಲ್ವೇಯ ನಾಗಪುರ ವಿಭಾಗದಲ್ಲಿ 209.63 ಕೋ. ರೂ. ಆದಾಯ ಗಳಿಸಿದ್ದು, ಇದರೊಂದಿಗೆ ಆದಾಯದಲ್ಲಿ ಶೇ. 53 ರಷ್ಟು ಹೆಚ್ಚಳವಾಗಿದೆ ಎಂದು ಅಧಿಕೃತ ಪ್ರಕಟನೆಯಲ್ಲಿ ತಿಳಿಸಲಾಗಿದೆ.ಕಳೆದ ವರ್ಷ ಈ ಅವಧಿಯಲ್ಲಿ 136.52 ಕೋ. ರೂ. ಆದಾಯ ಗಳಿಸಿತ್ತು. ಸರಕು ಸಾಗಾಟದಲ್ಲಿ ಕಳೆದ ವರ್ಷ 110.07 ಕೋ. ರೂ. ಗಳಿಸಿದ್ದು, ಈ ವರ್ಷ ಅದೇ ಅವಧಿಯಲ್ಲಿ 178.90 ಕೋ. ರೂ. ಗಳಿಸಿದೆ. ಇದರೊಂದಿಗೆ ದಾಖಲೆಯ ಶೇ. 63 ರಷ್ಟು ಆದಾಯದಲ್ಲಿ ಹೆಚ್ಚಳವಾಗಿದೆ.ಶೇ. 15 ರಷ್ಟು ಏರಿಕೆಯೊಂದಿಗೆ ನಾಗಪುರ ವಿಭಾಗದ ಒಟ್ಟು ಪ್ರಯಾಣದ ಆದಾಯವು 26.51 ಕೋ. ರೂ. ಆಗಿದೆ.ಕಳೆದ ವರ್ಷ ಎಪ್ರಿಲ್-ಮೇ ತಿಂಗಳಲ್ಲಿ 45.51 ಕೋ. ರೂ. ಆಗಿದ್ದು, ಈ ವರ್ಷ ಅದೇ ಅವಧಿಯಲ್ಲಿ 51.35 ಕೋ. ರೂ. ತಲುಪಿದ್ದು, ಇದರೊಂದಿಗೆ ಆದಾಯದಲ್ಲಿ ಶೇ. 13 ರಷ್ಟು ಬೆಳವಣಿಗೆಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.