ಶಿರ್ವ : ಸೂಡಾ - ನಂದಳಿಕೆಯ ಪಡುಬೆಟ್ಟುವಿನ ಜಾಯ್ ಸ್ಟೋನ್ ಕ್ರಶರ್‌ನಲ್ಲಿ ಮಂಗಳವಾರ ಸಂಜೆ ಸಂಭವಿಸಿದ ನ್ಪೋಟದಿಂದಾಗಿ ಮೃತಪಟ್ಟ ಉತ್ತರ ಕರ್ನಾಟಕ ಮೂಲದ ಮಲ್ಲವ್ವ (35) ಮತ್ತು ಅಂಬಿಕಾ (24) ಅವರ ಛಿದ್ರವಾಗಿದ್ದ ಮೃತದೇಹಗಳನ್ನು ಬುಧವಾರ ಮಣಿಪಾಲದಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ಮೃತರ ಸಂಬಂದಿಗಳಿಗೆ ಹಸ್ತಾಂತರಿಸಲಾಗಿದೆ.ಮಂಗಳವಾರ ಸಂಜೆ ಸೂಡಾ ಪಡುಬೆಟ್ಟುವಿನ ಜಾಯ್ ಕ್ರಶರ್‌ನಲ್ಲಿ ಕಪ್ಪು ಕಲ್ಲಿನ ನ್ಪೋಟಕ್ಕೆ ಸಿದ್ಧತೆಗಳನ್ನು ನಡೆಸುತ್ತಿದ್ದ ವೇಳೆ ಮಳೆ ಮತ್ತು ಮಿಂಚು ಬಂದ ಕಾರಣ ನ್ಪೋಟಕಗಳನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ತಗಡಿನ ಶೆಡ್‌ನೊಳಗೆ ಇರಿಸಲಾಗಿತ್ತು. ನ್ಪೋಟಕಗಳನ್ನು ಶೆಡ್‌ನಲ್ಲಿರಿಸಿದ್ದ ವಿಚಾರ ತಿಳಿಯದೇ ಮಹಿಳಾ ಕಾರ್ಮಿಕರು ವಿಶ್ರಾಂತಿಗಾಗಿ ಶೆಡ್‌ನ ಒಳಗೆ ಕಾಲಿಟ್ಟ ವೇಳೆ ನ್ಪೋಟ ಸಂಭವಿಸಿದ ಪರಿಣಾಮ ಮಲ್ಲವ್ವ ಮತ್ತು ಅಂಬಿಕಾ ಮೃತ ಪಟ್ಟಿದ್ದರು.ಮೂವರ ವಿರುದ್ಧ ಕೇಸು ದಾಖಲು : ಜಾಯ್ ಜಲ್ಲಿ ಕ್ರಶರ್‌ನಲ್ಲಿ ಸಂಭವಿಸಿದ ನ್ಪೋಟಕ್ಕೆ ಸಂಬಂದಿಸಿದಂತೆ ಕೋರೆ ಮಾಲಕ ಕಿರಣ್ ಕುಮಾರ್, ಮೆನೇಜರ್ ಅನೀಶ್, ನ್ಪೋಟಕಗಳ ಉಸ್ತುವಾರಿ ಶಿವಣ್ಣ ಅವರ ವಿರುದ್ಧ ಮೃತ ಕಾರ್ಮಿಕೆ ಅಂಬಿಕಾ ಅವರ ಪತಿ, ಕೋರೆಯ ಕಾರ್ಮಿಕ ಮಲ್ಲೇಶ ನೀಡಿರುವ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿ ಮೆನೇಜರ್ ಅನೀಶ್, ನ್ಪೋಟಕಗಳ ಉಸ್ತುವಾರಿ ಶಿವಣ್ಣ ಅವರನ್ನು ವಶಪಡಿಸಿಕೊಂಡಿದ್ದಾರೆ.ಕ್ರಶರ್‌ನ ಲೈಸೆನ್ಸ್ ರದ್ಧಿಗೆ ಜೆಡಿಎಸ್ ಆಗ್ರಹ : ಇಬ್ಬರು ಬಡ ಕೂಲಿ ಕಾರ್ಮಿಕರ ಸಾವಿಗೆ ಕಾರಣವಾದ ಜಾಯ್ ಜಲ್ಲಿ ಕ್ರಶರ್‌ನಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ನಡೆಸದಿರುವುದೇ ಘಟನೆಗೆ ಮೂಲ ಕಾರಣ ಎಂಬ ಮಾಹಿತಿಗಳು ಲಭ್ಯವಾಗಿರುವ ಹಿನ್ನೆಲೆಯಲ್ಲಿ ಕ್ರಶರ್‌ನ ಲೈಸೆನ್ಸನ್ನು ಕೂಡಲೇ ರದ್ಧುಗೊಳಿಸುವಂತೆ ಉಡುಪಿ ಜಿಲ್ಲಾ ಜೆಡಿಎಸ್‌ನ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.ಕೋರೆಯ ಮಾಲಕ ಜಾಯ್ ಅವರ ಬೇರೆ ಕ್ರಶರ್‌ನಲ್ಲಿ ಈ ಹಿಂದೆಯೂ ಇದೇ ತೆರನಾದ ಘಟನೆಗಳು ಸಂಭವಿಸಿದ್ದು ಇಲ್ಲಿನ ಸ್ಥಳೀಯರ ಭಾವನೆಗಳಿಗೆ ವಿರುದ್ಧವಾಗಿ ಈ ಕ್ರಶರ್‌ಗೆ ಪರವಾನಿಗೆ ನೀಡಲಾಗಿತ್ತು. ಜಿಲ್ಲಾಡಳಿತ ಕ್ರಶರ್‌ನ್ನು ಬಂದ್ ಮಾಡಲು ಹಿಂಜರಿದಲ್ಲಿ ಜೆಡಿಎಸ್‌ನ ನೇತೃತ್ವದಲ್ಲಿ ಕ್ರಶರ್‌ಗೆ ಬೀಗ ಜಡಿಯಲಾಗುವುದು ಎಂದವರು ಹೇಳಿದ್ದಾರೆ.ಕ್ರಶರ್‌ನಿಂದಾಗಿ ಸ್ಥಳೀಯರಿಗೂ ತೊಂದರೆ : ಮಂಗಳವಾರ ಸಂಭವಿಸಿದ ನ್ಪೋಟದ ತೀವ್ರತೆಯಿಂದಾಗಿ ಶೆಡ್‌ನ ಕಲ್ಲುಗಳು ಮತ್ತು ತಗಡು ಶೀಟುಗಳು ಸುತ್ತಲಿನ ನೂರು ಮೀಟರ್ ವ್ಯಾಪ್ತಿಯವರೆಗೂ ಹರಡಿ ಕೊಂಡಿದ್ದು ಗ್ರಾಮದಲ್ಲಿ ಭಾರೀ ನ್ಪೋಟದ ಸದ್ದು ಕೇಳಿ ಬಂದಿತ್ತು. ಸೂಡಾ - ನಂದಳಿಕೆ ಬಾರ್ಡರ್‌ನ ಕ್ರಶರ್ ತುತ್ತ ತುದಿಯಲ್ಲಿದ್ದು, ಯಾವುದೇ ನ್ಪೋಟದ ಸಂದರ್ಭದಲ್ಲಿ ಬೆಟ್ಟದ ಕೆಳಗಿರುವ ಮನೆಗಳ ಮೇಲೆ ಬಂಡೆಯ ಚೂರುಗಳು ಹಾರಿ ಬೀಳುತ್ತವೆ. ದೂರು ನೀಡಿದರೂ ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಜನಪ್ರತಿನಿದಿಗಳು ಮತ್ತು ಅದಿಕಾರಿಗಳು ಈ ಕುರಿತಾಗಿ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಜಯಂತ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಾರ್ಕಳ ವೃತ್ತ ನಿರೀಕ್ಷಕ ವೆಲೈಂಟಿನ್ ಡಿ. ಸೋಜ ಮತ್ತು ಕಾರ್ಕಳ ಗ್ರಾಮಾಂತರ ಠಾಣೆಯ ಠಾಣಾದಿಕಾರಿ ಅಜ್ಮತ್ ಅಲಿ ಪ್ರಕರಣದ ಕುರಿತಾಗಿ ತನಿಖೆ ಮುಂದುವರಿಸಿದ್ದಾರೆ.