ಹೊಸದಿಲ್ಲಿ: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮಾಜಿ ಹಾಕಿ ಪಟುಗಳಿಗೆ ಒಂದು ಸಲದ ಸಹಾಯರ್ಥ ಯೋಜನೆಯಡಿ ಹಾಕಿ ಇಂಡಿಯಾ ರವಿವಾರ ತಲಾ 2 ಲಕ್ಷ ರೂಪಾಯಿ ನೀಡಿ ಗೌರವಿಸಿತು. ಭಾರತೀಯ ಹಾಕಿ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ಪುರಸ್ಕಾರ ನೀಡಿರುವುದು ಇದೇ ಮೊದಲು.ಲಂಡನ್ ಒಲಿಂಪಿಕ್‌ಗೆ ತೆರಳುತ್ತಿರುವ ಭಾರತ ತಂಡಕ್ಕೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಕಿ ಇಂಡಿಯಾ ಮಾಜಿ ಒಲಿಂಪಿಯನ್ ಆಟಗಾರರನ್ನು° ಸಮ್ಮಾನಿಸಿತು. ಬದುಕುಳಿದ 34 ಹಾಕಿ ಪಟುಗಳ ಪೈಕಿ 26 ಮಂದಿ ಹಾಜರಿದ್ದರು.1948 (ಲಂಡನ್), 1952 (ಹೆಲ್ಸಂಕಿ) ಮತ್ತು 1956 (ಮೆಲ್ಬರ್ನ್) ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದ ಲೆಸ್ಲೆ ಕೌÉಡಿಯಸ್, 1948 ಮತ್ತು 1952ರ ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡಿದ್ದ ಕೇಶವ್ ದತ್, ಜಸ್ವಂತ್ ರಾಜ್‌ಪುತ್ (1948, 1956), ಹರ್‌ಪಾಲ್ ಕೌಶಿಕ್ (1956, 1964, 1960 ರೋಮ್‌ನಲ್ಲಿ ಬೆಳ್ಳಿ) ಹಾಕಿ ಇಂಡಿಯಾದ ಸಹಾಯ ಪಡೆದ ಪ್ರಮುಖರು.ಇದೇ ವೇಳೆ ಏಶ್ಯನ್ ಕಪ್ ಮತ್ತು ವಿಶ್ವಕಪ್ ಗೆದ್ದ ಇತರ ಆಟಗಾರರನ್ನು ಸಮ್ಮಾನಿಸಲಾಯಿತು. ಸಮಾರಂಭದಲ್ಲಿ ಕ್ರೀಡಾ ಸಚಿವ ಅಜಯ್ ಮಾಕೆನ್, ಭಾರತೀಯ ಒಲಿಂಪಿಕ್ ಸಂಸ್ಥೆ ಹಂಗಾಮಿ ಅಧ್ಯಕ್ಷ ವಿ.ಕೆ. ಮಲ್ಹೋತ್ರ, ಹಾಕಿ ಇಂಡಿಯಾ ಕಾರ್ಯದರ್ಶಿ ನರೇಂದ್ರ ಬಾತ್ರ, ಬಿಜೆಪಿ ಮುಖಂಡ ಅರುಣ್ ಜೇತ್ಲಿ ಮುಂತಾದವರು ಭಾಗವಹಿಸಿದ್ದರು.