Monday, May 20, 2013
Last Updated: 8:50:18 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಟ್ರಾಫಿಕ್‌ ನಿರ್ವಹಣೆಗೆ ಲಂಡನ್‌ ಸಿದ್ಧತೆ
      • Udayavani | Jun 24, 2012

        ಲಂಡನ್‌: ಲಂಡನ್‌ ಒಲಿಂಪಿಕ್ಸ್‌ ವೇಳೆ ಟ್ರಾಫಿಕ್‌ನಿಂದ ಆಗುವ ಸಮಸ್ಯೆಗಳನ್ನು ಎದುರಿಸಲು ಲಂಡನ್‌ ಭರದ ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಯೋಜನೆಯನ್ನು ರೂಪಿಸುತ್ತಿದೆ.

        ಜುಲೈ 27ರಿಂದ ಆರಂಭವಾಗುವ ಒಲಿಂಪಿಕ್ಸ್‌ಗೆ ಜಗತ್ತಿನಾದ್ಯಂತ ಅಭಿಮಾನಿಗಳು ಹಾಗೂ ಕ್ರೀಡಾಪಟುಗಳು ಹರಿದು ಬರಲಿದ್ದಾರೆ. ವಾಹನದಟ್ಟಣೆಯಿಂದ ಆಗುವ ವಿವಿಧ ರೀತಿ ಸಮಸ್ಯೆಗಳನ್ನು ಎದುರಿಸಲು ಲಂಡನ್‌ ಸಿದ್ಧತೆ ನಡೆಸಿದೆ.

        ಒಲಿಂಪಿಕ್‌ ಗ್ರಾಮಕ್ಕೆ ಆಗಮಿಸುವ ಮುನ್ನ ವೆಬ್‌ಸೈಟ್‌ನಲ್ಲಿ ಸಂಚಾರ ಮಾರ್ಗ ಹಾಗೂ ಪರ್ಯಾಯ ಮಾರ್ಗಗಳ ಬಗ್ಗೆ ನೀಡಲಾಗುವ ನಕ್ಷೆಯನ್ನು ಗಮನಿಸಬೇಕು. ಅಲ್ಲದೇ ನಿರ್ದಿಷ್ಟ ಸಮಯದಲ್ಲಿ ಆಗುವ ವಾಹನ ದಟ್ಟಣೆ ತಪ್ಪಿಸಲು ಇರುವ ಮಾರ್ಗಗಳ ಬಗ್ಗೆಯೂ ವಿವರ ಪಡೆಯುವಂತೆ ಸೂಚಿಸಿದೆ.

        ಸರಕಾರ ಪ್ರಕಟಿಸಿದ ವಿಶೇಷ ಯೋಜನೆ ಪ್ರಕಾರ, ಸಾವಿರಾರು ಸಂಖ್ಯೆಯ ಸ್ವಯಂ ಸೇವಕರು ಜುಲೈ 21ರಿಂದ ಸೆಪ್ಟೆಂಬರ್‌ 9ರವರೆಗಿನ 7 ವಾರಗಳ ಕಾಲ ಟ್ರಾಫಿಕ್‌ ನಿಭಾಯಿಸಲು ನೆರವಾಗಲಿದ್ದಾರೆ. ಅಲ್ಲದೇ ಈ ವೇಳೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಸ್ವಯಂ ಸೇವಕರ ಸಹಾಯ ಪಡೆಯಲು ಅನುಕೂಲವಾಗಿದೆ.

        ಒಲಿಂಪಿಕ್ಸ್‌ ವೇಳೆ ಸಾಮಾನ್ಯಕ್ಕಿಂತ ಸುಮಾರು 30 ಲಕ್ಷ ಅಧಿಕ ಜನರು ಸಂಚರಿಸಲಿದ್ದಾರೆ. ಇದರಿಂದ ಲಂಡನ್‌ವೊಂದರಲ್ಲೇ ಸುಮಾರು 1.5 ಕೋಟಿ ಜನರು ಸಂಚರಿಸುವ ನಿರೀಕ್ಷೆ ಹೊಂದಲಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      ಮೈಸೂರು ಫ್ರೆಂಡ್ಸ್‌ ಬಾಲ್‌ ಬ್ಯಾಡ್‌ಮಿಂಟನ್‌ ಕ್ಲಬ್‌ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಆಹ್ವಾನಿತ ಪುರುಷರ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ತೆರೆಬಿದ್ದಿದ್ದು...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus