Thursday, May 23, 2013
Last Updated: 6:02:24 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಂಗಕ್ಕರ ಹೊಸ ವಿಶ್ವದಾಖಲೆ
    • ಕಡಿಮೆ ಇನ್ನಿಂಗ್ಸ್‌ ಮೂಲಕ ಪಾಕಿಸ್ಥಾನ ವಿರುದ್ಧ 2 ಸಾವಿರ ರನ್‌ ಪೂರ್ತಿಗೊಳಿಸಿದ ಸಂಗಕ್ಕರ ಈ ದಾಖಲೆ ಮಾಡಿದ್ದಾರೆ.

      • Udayavani | Jun 24, 2012

        ಕೊಲಂಬೊ: ಪಾಕಿಸ್ಥಾನ ವಿರುದ್ಧ ಸಾಗುತ್ತಿರುವ ಮೊದಲ ಟೆಸ್ಟ್‌ ಪಂದ್ಯದ ವೇಳೆ ಶ್ರೀಲಂಕಾದ ಕುಮಾರ ಸಂಗಕ್ಕರ ಅವರು ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಕಡಿಮೆ ಇನ್ನಿಂಗ್ಸ್‌ ಮೂಲಕ ಪಾಕಿಸ್ಥಾನ ವಿರುದ್ಧ 2 ಸಾವಿರ ರನ್‌ ಪೂರ್ತಿಗೊಳಿಸಿದ ಸಂಗಕ್ಕರ ಈ ದಾಖಲೆ ಮಾಡಿದ್ದಾರೆ.

        ಈ ದಾಖಲೆ ಸ್ಥಾಪಿಸಲು ಸಂಗಕ್ಕರ ಅವರಿಗೆ ಕೇವಲ 26 ಇನ್ನಿಂಗ್ಸ್‌ಗಳು ಸಾಕಾದವು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಎದುರಾಳಿ ತಂಡದೆದುರು 2 ಸಾವಿರ ರನ್‌ ಪೂರ್ತಿಗೊಳಿಸಲು ತೆಗೆದುಕೊಂಡ ಕಡಿಮೆ ಸಂಖ್ಯೆ ಇನ್ನಿಂಗ್ಸ್‌ ಆಗಿದೆ. ಈ ಮೊದಲಿನ ದಾಖಲೆ ಸುನೀಲ್‌ ಗಾವಸ್ಕರ್‌ ಮತ್ತು ವೆಸ್ಟ್‌ಇಂಡೀಸ್‌ನ ಬ್ರ್ಯಾನ್‌ ಲಾರಾ ಅವರ ಹೆಸರಲ್ಲಿದೆ. ಗಾವಸ್ಕರ್‌ ಅವರು ವೆಸ್ಟ್‌ಇಂಡೀಸ್‌ ವಿರುದ್ಧ ಮತ್ತು ಲಾರಾ ಇಂಗ್ಲಂಡ್‌ ವಿರುದ್ಧ 2 ಸಾವಿರ ರನ್‌ ಪೂರ್ತಿಗೊಳಿಸಲು 28 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

        ಸಂಗಕ್ಕರ ಅವರು 15 ಬಾರಿ 150ಕ್ಕಿಂತ ಹೆಚ್ಚಿನ ರನ್‌ ಗಳಿಸಿ ಪಾಂಟಿಂಗ್‌ ಜತೆಗೂಡಿದ್ದಾರೆ. ತೆಂಡುಲ್ಕರ್‌ 20, ಲಾರ 19 ಮತ್ತು ಡಾನ್‌ ಬ್ರಾಡ್‌ಮನ್‌ 18 ಬಾರಿ 150 ಮತ್ತು ಅದಕ್ಕಿಂತ ಹೆಚ್ಚಿನ ರನ್‌ ಗಳಿಸಿದ್ದಾರೆ.

        ಅತೀ ವೇಗದ 2 ಸಾವಿರ ರನ್‌ ಗಳಿಸಿದ ಆಟಗಾರರು

        ಬ್ಯಾಟ್ಸ್‌ಮನ್‌ ಇನ್ನಿಂಗ್ಸ್‌ ವಿರುದ್ಧ

        ಕುಮಾರ ಸಂಗಕ್ಕರ 26 ಪಾಕಿಸ್ಥಾನ

        ಸುನೀಲ್‌ ಗಾವಸ್ಕರ್‌ 28 ವೆಸ್ಟ್‌ಇಂಡೀಸ್‌

        ಬ್ರ್ಯಾನ್‌ ಲಾರಾ 28 ಇಂಗ್ಲಂಡ್‌

        ಡಾನ್‌ ಬ್ರಾಡ್‌ಮನ್‌ 29 ಇಂಗ್ಲಂಡ್‌

        ವಿವಿಯನ್‌ ರಿಚರ್ಡ್ಸ್‌ 30 ಇಂಗ್ಲಂಡ್‌

        ಸಟ್‌ಕ್ಲಿಫ್ 31 ಆಸ್ಟ್ರೇಲಿಯ

        ಲೆನ್‌ ಹಟನ್‌ 34 ಆಸ್ಟ್ರೇಲಿಯ

        ಗ್ಯಾರಿ ಸೋಬರ್ಸ್‌ 34 ಇಂಗ್ಲಂಡ್‌

        ಜಾವೆದ್‌ ಮಿಯಾದಾದ್‌ 35 ಭಾರತ





      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus