ಹರಾರೆ: ನಾಯಕ ಬ್ರೆಂಡನ್ ಟಯ್ಲರ್ ಮತ್ತು ಹ್ಯಾಮಿಲ್ಟನ್ ಮಸಕಝ ಅವರ ಅರ್ಧಶತಕ ಹಾಗೂ ಅವರಿಬ್ಬರ ಉತ್ತಮ ಜತೆಯಾಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್‌ಗಳ ಭಾರೀ ಅಂತರದಿಂದ ಬಗ್ಗುಬಡಿದ ಜಿಂಬಾಬ್ವೆ ತಂಡ ತ್ರಿಕೋನ ಟ್ವೆಂಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ.ರವಿವಾರ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಅಫ್ರಿಕಾ ಫಾಫ್ ಡು ಪ್ಲೆಸಿಸ್ ಅವರ ಅರ್ಧಶತಕದ (66) ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 ರನ್ ಗಳಿಸಿತು.ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಜಿಂಬಾಬ್ವೆ ತಂಡ ಸಿಬಾಂಡ (23) ಅವರ ಏಕಮಾತ್ರ ವಿಕೆಟ್ ಕಳೆದುಕೊಂಡು 17 ಎಸೆತಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತು. ಜಿಂಬಾಬ್ವೆ ಪರ ಮಸಕಝ (58) ಮತ್ತು ಬ್ರೆಂಡನ್ ಟಯ್ಲರ್ (59) ವೈಯಕ್ತಿಕ ಅರ್ಧಶತಕಗಳನ್ನು ಬಾರಿಸಿದ್ದೂ ಅಲ್ಲದೇ ಮುರಿಯದ ಎರಡನೇ ವಿಕೆಟ್‌ಗೆ 114 ರನ್ ಪೇರಿಸಿದರು.ಸಂಕ್ಷಿಪ್ತ ಸ್ಕೋರು: ದಕ್ಷಿಣ ಅಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 146 (ಪ್ಲೆಸಿಸ್ 66, ಅಲ್ಬಿ ಮಾರ್ಕೆಲ್ ಅಜೇಯ 34, ಜಾರ್ವಿಸ್ 22ಕ್ಕೆ 2). ಜಿಂಬಾಬ್ವೆ 17.1 ಓವರ್‌ಗಳಲ್ಲಿ 1 ವಿಕೆಟ್‌ಗೆ 150 (ಟಯ್ಲರ್ ಔಟಾಗದೆ 59, ಮಸಕಝ ಔಟಾಗದೆ 58, ಸಿಬಾಂಡ 23).