Sunday, May 26, 2013
Last Updated: 2:20:45 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಅಲೊನ್ಸೊ ಆಟ: ಫ್ರಾನ್ಸ್‌ಗೆ ಆಘಾತ
    • ಸ್ಪೇಯ್ನ-ಫ್ರಾನ್ಸ್‌ ತಂಡದ ನಡುವಣ ಕ್ವಾರ್ಟರ್‌ಫೈನಲ್‌ ಪಂದ್ಯದ ಕ್ಷಣ.

      • Udayavani | Jun 24, 2012

        ಡಾನೆಟ್‌ಸ್ಕ್ (ಉಕ್ರೇನ್‌): ಫ್ರಾನ್ಸ್‌ ತಂಡದ ವಿರುದ್ಧ ಅಧಿಕಾರಯುತ ಗೆಲುವು ದಾಖಲಿಸಿದ ಹಾಲಿ ಚಾಂಪಿಯನ್‌ ಸ್ಪೇಯ್ನ ತಂಡ ಯುರೋಪಿಯನ್‌ ಫ‌ುಟ್ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಸೆಮಿಫೈನಲ್‌ಗೆ ಜಿಗಿದಿದ್ದು, ಪ್ರಶಸ್ತಿ ಉಳಿಸಿಕೊಳ್ಳುವತ್ತ ಮತ್ತೂಂದು ದಿಟ್ಟ ಹೆಜ್ಜೆ ಇಟ್ಟಿದೆ.

        ವಿಶ್ವ ಚಾಂಪಿಯನ್‌ ಸ್ಪೇಯ್ನ ಪರ ನೂರನೇ ಪಂದ್ಯ ಆಡಿದ ಕ್ಸೆಬಿ ಅಲೊನ್ಸೊ (19 ಮತ್ತು 90+1ನೇ ನಿಮಿಷ)ಎರಡು ಅವಧಿಯ ಆಟದಲ್ಲಿ ತಲಾ ಒಂದು ಗೋಲು ಬಾರಿಸಿ ಮಿಂಚಿದರು. ಬುಧವಾರ ನಡೆಯಲಿರುವ ಸೆಮಿಫೈನಲ್‌ನಲ್ಲಿ ಪೋರ್ಚುಗಲ್‌ ತಂಡವನ್ನು ಸ್ಪೇಯ್ನ ಎದುರಿಸಲಿದೆ.

        ಫ್ರಾನ್ಸ್‌ ವಿರುದ್ಧದ ಕಳೆದ 7 ಮುಖಾಮುಖೀಯಲ್ಲಿ ಸ್ಪೇಯ್ನಗೆ ದೊರೆತ ಮೊದಲ ಗೆಲುವು ಇದಾಗಿದೆ. 2006 ವಿಶ್ವಕಪ್‌ ಫೈನಲ್‌ ತಲುಪಿದ ಅನಂತರ ಸ್ಪೇಯ್ನ ಮೇಲೆ ಅಧಿಕಾರ ಸ್ಥಾಪಿಸಿದ ಫ್ರಾನ್ಸ್‌ಗೆ ದೊಡ್ಡ ಆಘಾತವಾಗಿದೆ.

        ಇದೊಂದು ಏಕಪಕ್ಷೀಯ ಪಂದ್ಯ ಎಂಬುದನ್ನು ಒಪ್ಪದ ಸ್ಪೇಯ್ನ ಕೋಚ್‌ ವಿಸೆಂಟ್‌ ಡೆಲ್‌ ಬಾಸ್ಕ್, ಅವರಿಗೂ ಗೋಲು ಗಳಿಸುವ ಹಲವಾರು ಅವಕಾಶಗಳು ಲಭಿಸಿದ್ದವು. ಆದರೆ ನಾವು ಪಂದ್ಯದ ಮೇಲಿನ ಹಿಡಿತ ಕಳೆದುಕೊಳ್ಳಲಿಲ್ಲ ಎಂದರು.

        ಕ್ವಾರ್ಟರ್‌ ಫೈನಲ್‌ ತಲುಪುವ ಗುರಿಯೊಂದಿಗೆ ಕಣಕ್ಕಿಳಿದಿದ್ದ ಫ್ರಾನ್ಸ್‌ ತಮ್ಮ ಗುರಿ ಈಡೇರಿದ ಸಮಾಧಾನದೊಂದಿಗೆ ಟೂರ್ನಿಯಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತು.

        ಪಂದ್ಯದ ಆರಂಭದಿಂದಲೇ ಸ್ಪೇಯ್ನ ಆಕ್ರಮಣಕಾರಿ ಆಟಕ್ಕೆ ಇಳಿಯಿತು. ಇದರಿಂದ ಪಂದ್ಯದ 19ನೇ ನಿಮಿಷದಲ್ಲೇ ಯಶಸ್ಸು ದೊರೆಯಿತು. ಆ್ಯಂಡ್ರೆಸ್‌ ಇನಿಯೆಸ್ಟ ಕ್ರಾಸ್‌ನಿಂದ ನೀಡಿದ ಪಾಸ್‌ ಪಡೆದ ಜೊಡ್ರಿ ಅಲಾº ಬಾರಿಸಿದ ಚೆಂಡನ್ನು ಅಲೊನ್ಸೊ ಹೆಡ್‌ ಮಾಡಿ ಮೊದಲ ಗೋಲು ಬಾರಿಸಿದರು.

        ಇದರಿಂದ ಸ್ಫೂರ್ತಿ ಪಡೆದ ಸ್ಪೇಯ್ನ ಉತ್ತಮ ಪಾಸ್‌ಗಳ ಮೂಲಕ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಎರಡನೇ ಅವಧಿಯ ಆಟದಲ್ಲಿ ಕೂಡ ಪ್ರಾಬಲ್ಯ ಮೆರೆದ ಸ್ಪೇಯ್ನ ಪಂದ್ಯ ಮುಕ್ತಾಯದ ಕೊನೆ ನಿಮಿಷ ಬಾಕಿ ಇರುವಾಗ ಎರಡನೇ ಗೋಲು ದಾಖಲಿಸಿ ಸ್ಪಷ್ಟ ಗೆಲುವು ದಾಖಲಿಸಿತು. ಹೆಚ್ಚುವರಿ ಆಟದ ಮೊದಲ ನಿಮಿಷದಲ್ಲಿ ಪೆನಾಲ್ಟಿ ರೂಪದಲ್ಲಿ ಲಭಿಸಿದ ಅವಕಾಶವನ್ನು ಅಲೊನ್ಸೊ ಗೋಲಾಗಿ ಪರಿವರ್ತಿಸಿದರು.





      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus