ಮಂಗಳೂರು : ರಾಜ್ಯದ ಮಕ್ಕಳು ಕೇವಲ ಕನ್ನಡ ಮಾತ್ರ ಕಲಿತು ಕರ್ನಾಟಕದಲ್ಲಿಯೇ ಇರಲು ಸಾಧ್ಯವಿಲ್ಲ. ಜಗತ್ತು ಸುತ್ತಬೇಕು. ಈ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಶಾಲೆಗಳಲ್ಲೂ ಇಂಗ್ಲಿಷನ್ನು ಒಂದನೇ ತರಗತಿಯಿಂದಲೇ ಕಲಿಸಲು ಪ್ರಾರಂಭಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಪುನರುಚ್ಚರಿಸಿದ್ದಾರೆ.ಅಕ್ಷರಾಭ್ಯಾಸ ಕಲಿಸುವ ನಿಟ್ಟಿನಲ್ಲಿ ತರಗತಿಗೆ ಒಬ್ಬ ಅಧ್ಯಾಪಕರಿಲ್ಲದ ಕನ್ನಡ ಶಾಲೆಗೆ ಮಕ್ಕಳನ್ನು ದಯಮಾಡಿ ಕಳುಹಿಸಬೇಡಿ. ನಮ್ಮ ಮಕ್ಕಳ ಭವಿಷ್ಯವನ್ನು ಈ ಮೂಲಕ ಹಾಳುಗೆಡಹಬೇಡಿ. ತೀರಾ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಕನ್ನಡ ಶಾಲೆ, ಹಣ ಇದ್ದವರಿಗೆ ಇತರ ಮಾಧ್ಯಮ ಆದಾಗ, ಇತರ ಮಾದ್ಯಮ ಬಡವರ ಮಕ್ಕಳು ಸ್ಥಿತಿವಂತರಾಗಬೇಡವೇ ಎಂದು ಅವರು ಪ್ರಶ್ನಿಸಿದ್ದಾರೆ.ಸರಕಾರ ಒಂದೆಡೆ ಉಚಿತ ಊಟ, ಬಟ್ಟೆ, ಪುಸ್ತಕ, ಸೈಕಲ್ ನೀಡುತ್ತಿದೆ. ಇನ್ನೊಂದೆಡೆ ಸರಕಾರಿ ಶಾಲೆ ಮತ್ತು ಅನುದಾನಿತ ಶಾಲೆಗಳಿಗೆ ತಾರತಮ್ಯ ಅನುಸರಿಸುತ್ತಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಕ್ಷರಷ ಸತ್ಯ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ಬೇಕೇ ಬೇಕು ಇದು ನಮ್ಮ ಹಕ್ಕು.......