Saturday, May 25, 2013
Last Updated: 8:34:44 PM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರವಿವಾರ ಯೂರೋ ಕಪ್‌ ಫೈನಲ್‌
    • ಜಾರಿಬಿದ್ದ ಜರ್ಮನಿ ಫೈನಲ್‌ಗೆ ಜಿಗಿದ ಇಟಲಿ
    • ಸ್ಪೇಯ್ನ-ಇಟಲಿ ಮುಖಾಮುಖೀ
    • ಜರ್ಮನಿ ವಿರುದ್ಧ ಸದಾ ಮೇಲುಗೈ ಸಾಧಿಸುತ್ತ ಬಂದಿರುವ ಇಟಲಿ ಯುರೋ ಕಪ್‌ ಸೆಮಿಫೈನಲ್‌ನಲ್ಲೂ ತನ್ನ ಘನತೆಯನ್ನು ಕಾಪಾಡಿಕೊಂ

      • Udayavani | Jun 29, 2012

        ವಾರ್ಸಾ (ಪೋಲಂಡ್‌) : ಪ್ರಮುಖ ಘಟ್ಟದಲ್ಲಿ ಜರ್ಮನಿ ವಿರುದ್ಧ ಸದಾ ಮೇಲುಗೈ ಸಾಧಿಸುತ್ತ ಬಂದಿರುವ ಇಟಲಿ ಯುರೋ ಕಪ್‌ ಸೆಮಿಫೈನಲ್‌ನಲ್ಲೂ ತನ್ನ ಘನತೆಯನ್ನು ಕಾಪಾಡಿಕೊಂಡಿತು. ಇದರೊಂದಿಗೆ ರವಿವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಕದನದಲ್ಲಿ ಹಾಲಿ ಚಾಂಪಿಯನ್‌ ಸ್ಪೇಯ್ನ ತಂಡವನ್ನು ಎದುರಿಸುವ ಅರ್ಹತೆ ಪಡೆಯಿತು.



        ಗುರುವಾರ ತಡರಾತ್ರಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಟಲಿ ಸ್ಟಾರ್‌ ಆಟಗಾರ ಮಾರಿಯೊ ಬಲೊಟೆಲ್ಲಿ ಅವರ ಮಿಂಚಿನ ಆಟದಿಂದ ಜರ್ಮನಿಯನ್ನು 2-1 ಗೋಲುಗಳಿಂದ ಬಗ್ಗುಬಡಿಯಿತು. ರವಿವಾರ ತಡರಾತ್ರಿ ನಡೆಯಲಿರುವ ಫೈನಲ್‌ನಲ್ಲಿ ಚಾಂಪಿಯನ್‌ ಕೂಡ ಆಗಿರುವ ಸ್ಪೇಯ್ನಗೆ ಇಟಲಿ ಯಾವ ರೀತಿಯ ಸವಾಲು ಒಡ್ಡೀತು ಎಂಬುದನ್ನು ಕಾಣಲು ಫ‌ುಟ್ಬಾಲ್‌ ವಿಶ್ವವೇ ಕಾತರದಿಂದ ಕಾಯುತ್ತಿದೆ.



        ಮ್ಯಾಂಚೆಸ್ಟರ್‌ ಸಿಟಿ ತಂಡದ ಮುನ್ಪಡೆ ಆಟಗಾರ ಬಲೊಟೆಲ್ಲಿ ಮೊದಲ ಅವಧಿಯಲ್ಲೇ (20ನೇ ಮತ್ತು 36ನೇ ನಿಮಿಷ) 2 ಗೋಲು ಸಿಡಿಸಿ ತಂಡಕ್ಕೆ ಮೇಲುಗೈ ಒದಗಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ (90+2ನೇ ನಿಮಿಷ) ಜರ್ಮನಿ ಪರ ಮೆಸುಟ್‌ ಒಜಿಲ್‌ ಪೆನಾಲ್ಟಿ ಕಾರ್ನರ್‌ ಅನ್ನು ಗೋಲಾಗಿ ಪರಿವರ್ತಿಸಿದರು. ಆದರೆ ಇದರಿಂದ ತಂಡದ ಫ‌ಲಿತಾಂಶದ ಮೇಲೆ ಯಾವುದೇ ಪರಿಣಾಮ ಉಂಟಾಗಲಿಲ್ಲ.



        ಪಂದ್ಯದ 20ನೇ ನಿಮಿಷದಲ್ಲಿ ಜರ್ಮನಿ ತಂಡದ ರಕ್ಷಣೆಯನ್ನು ಭೇದಿಸಿದ ಜಾರ್ಜಿಯಾ ಚೈಲ್ಲಿನಿ ನೀಡಿದ ಪಾಸ್‌ನಲ್ಲಿ ಅನಟೊನಿಯೊ ಕಾಸೆನೊ ಎಡಭಾಗದ ಕಾರ್ನರ್‌ನಿಂದ ಬಾರಿಸಿದ ಚೆಂಡನ್ನು ಗೋಲು ಬಲೆಯ ಸಮೀಪ ಇದ್ದ ಬಲೊಟೆಲ್ಲಿ ಅದ್ಭುತವಾಗಿ ಹೆಡ್‌ ಮಾಡಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

        ಇದರಿಂದ ಸ್ಫೂರ್ತಿ ಪಡೆದ ಇಟಲಿ ದಾಳಿಯನ್ನು ಮತ್ತಷ್ಟು ಚುರುಕುಗೊಳಿಸಿ ಜರ್ಮನಿ ಪಾಳಯದ ಮೇಲೆ ಮುಗಿಬಿದ್ದಿತು. ಇದರಿಂದ 36ನೇ ನಿಮಿಷದಲ್ಲಿ ಮತ್ತೂಂದು ಯಶಸ್ಸು ಪಡೆಯಿತು. ರಿಕಾರ್ಡೊ ಮಂಟೊಲಿವೊಸ್‌ ನೀಡಿದ ದೂರದ ಪಾಸ್‌ನಲ್ಲಿ ಮಿಂಚಿನಂತೆ ಏಕಾಂಗಿಯಾಗಿ ನುಗ್ಗಿದ ಬಲೊಟೆಲ್ಲಿ ಬಾರಿಸಿದ ಚೆಂಡು ಬಲಭಾಗದ ಕಂಬಕ್ಕೆ ಬಡಿದು ಜರ್ಮನಿ ಪಾಳಯದ ಗೋಲಿನ ಬಲೆಯೊಳಗೆ ನುಗ್ಗಿತು.



        ಇದರಿಂದ ಎದೆಗುಂದದ ಜರ್ಮನಿ ತಂಡದ ಸತತ ದಾಳಿ ಸಂಘಟಿಸಿದರೂ ಗೋಲಾಗಿ ಪರಿವರ್ತಿಸಲು ವಿಫ‌ಲವಾಯಿತು. ಅದರಲ್ಲೂ ಎರಡನೇ ಅವಧಿಯ ಆಟದಲ್ಲಿ ಹಲವಾರು ಅವಕಾಶಗಳನ್ನು ಹಾಳು ಮಾಡಿಕೊಂಡಿತು. ಪಂದ್ಯದ ನಿಗದಿತ ಅವಧಿ ಮುಗಿದು 4 ನಿಮಿಷಗಳ ಹೆಚ್ಚುವರಿ ಆಟದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ನಲ್ಲಿ ಒಜೆಲ್‌ ಯಾವುದೇ ತಪ್ಪು ಮಾಡದೇ ತಂಡದ ಪರ ಏಕೈಕ ಗೋಲು ಬಾರಿಸಿದರು. ಈ ಸೋಲಿನೊಂದಿಗೆ ಇಟಲಿ ವಿರುದ್ಧ ನಾಕೌಟ್‌ ಹಂತದ ಪಂದ್ಯಗಳಲ್ಲಿ ಸೋಲುವ ಸಂಪ್ರದಾಯ ಮುಂದುವರಿಸಿತು. ಅಲ್ಲದೇ ಸತತ 15 ಪಂದ್ಯಗಳ ಗೆಲುವಿನ ಕೊಂಡಿ ತುಂಡಾಯಿತು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus