Wednesday, May 22, 2013
Last Updated: 11:35:47 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಚಾಲಿ ಅಡಿಕೆ ಧಾರಣೆ ಚೇತರಿಕೆ
      • Udayavani | Jun 29, 2012

        ಪುತ್ತೂರು : ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಶುಕ್ರವಾರ ಚೇತರಿಕೆ ಕಂಡಿದೆ. ಹಳೆ ಅಡಿಕೆ ಕೆ.ಜಿ.ಗೆ 235 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಗೆ 166 ರೂ.ಗಳಿಗೆ ವಿಟ್ಲ, ಪುತ್ತೂರು, ಪಾಣಾಜೆ ಮಾರುಕಟ್ಟೆಗಳಲ್ಲಿ ಖರೀದಿಗೊಂಡಿದೆ ಎಂದು ಅಡಿಕೆ ಬೆಳೆಗಾರರು ಮಾಹಿತಿ ನೀಡಿದ್ದಾರೆ.

        ಪ್ರತಿಷ್ಠಿತ ಸಹಕಾರ ಸಂಸ್ಥೆ ಕ್ಯಾಂಪ್ಕೋ ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಹಳೆ ಅಡಿಕೆಯ ಧಾರಣೆಯನ್ನು ಕೆ.ಜಿ.ಗೆ 222 ರೂ.ಗಳಿಂದ 225 ರೂ.ಗೆ ಏರಿಸಿದೆ. ಹೊಸ ಅಡಿಕೆಯ ಧಾರಣೆ ಮಾತ್ರ ಕೆ.ಜಿ.ಗೆ 160 ರೂ.ಗಳಲ್ಲೇ ಮುಂದುವರಿದಿದೆ. ಆದರೆ ಹೊಸ ಅಡಿಕೆ ಮಾರುಕಟ್ಟೆಗೆ ಅವಕ ಪ್ರಮಾಣ ಕಡಿಮೆ ಇತ್ತು.

        ಹಳೆ ಅಡಿಕೆಯ ಧಾರಣೆಯಲ್ಲಿ ಸರಾಸರಿ 230 ರೂ.ಗಳಿಂದ 235ರ ತನಕ ಖರೀದಿ ನಡೆದಿದ್ದರೂ, ವಿಟ್ಲ, ಅಡ್ಯನಡ್ಕ, ಬಾಯಾರು ಪ್ರದೇಶದ 'ದಿ. ಬೆಸ್ಟ್‌' ಗುಣಮಟ್ಟದ ಅಡಿಕೆ ಶುಕ್ರವಾರ ಕೆ.ಜಿ.ಗೆ 237 ರೂ.ಗೆ ಖರೀದಿಯಾಗಿದೆ. ಬಳಕೆದಾರ ಪ್ರದೇಶದ ವರ್ತಕರ ಪ್ರತಿನಿಧಿಗಳು ಸಾಲ ನೀಡಿದರೆ ಹೊಸ ಅಡಿಕೆಯನ್ನು ಕೆ.ಜಿ.ಗೆ 170 ರೂ.ಗೆ ಖರೀದಿಸುವುದಾಗಿ ಬೆಳೆಗಾರರಿಗೆ ಭರವಸೆ ನೀಡುತ್ತಿದ್ದು, ಹೊಸ ಅಡಿಕೆಯ ಧಾರಣೆ ಏರಿಕೆಯ ಮುನ್ಸೂಚನೆ ಇದು ಎಂದು ಬೆಳೆಗಾರರು ಅಭಿಪ್ರಾಯಿಸಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus