Wednesday, May 22, 2013
Last Updated: 7:45:14 PM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವ್ಯವಸ್ಥಾಪನಾ ಸಮಿತಿ
    • ಸುಬ್ರಹ್ಮಣ್ಯ ಪಾನಗೋಷ್ಠಿ ನಿರತರ ಮೇಲೆ ಸೂಕ್ತಕ್ರಮ
      • Udayavani | Jun 29, 2012

        ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿರುವ ವಸತಿಗೃಹವೊಂದರ ಹಿಂಭಾಗದಲ್ಲಿ ಗುರುವಾರ ಸಂಜೆ ಪಾನಗೋಷ್ಠಿ ನಿರತರಾದವರ ಮೇಲೆ ಸೂಕ್ತಕ್ರಮಕೈಗೊಳ್ಳಲಾಗುವುದೆಂದು ದೇವಳದ ವ್ಯವಸ್ಥಾಪನಾ ಸಮಿತಿ ಕೃಷ್ಣಪ್ರಸಾದ್‌ ಮಡ್ತಿಲ ತಿಳಿಸಿದ್ದಾರೆ.

        ಘಟನೆ ಹಿನ್ನೆಲೆ

        ಸುಬ್ರಹ್ಮಣ್ಯ ದೇವಸ್ಥಾನದ ಆರು ಮಂದಿ ಸಿಬಂದಿಗಳು ಆಶ್ಲೇಷಾ ವಸತಿಗೃಹದ ಹಿಂಭಾಗದಲ್ಲಿರುವ ಲಾಂಡ್ರಿ ಘಟಕದಲ್ಲಿ ಗುರುವಾರ ಸಂಜೆ ಪಾನಗೋಷ್ಠಿ ನಡೆಸಿದರು. ಖಚಿತ ಮಾಹಿತಿ ಮೇರೆಗೆ ದೇವಳದ ಅಧಿಕಾರಿಗಳು ಹಾಗೂ ವ್ಯವಸ್ಥಾಪನಾ ಸಮಿತಯವರು ಅಲ್ಲಿಗೆ ತೆರಳಿದಾಗ ಅಲ್ಲಿ ಮದ್ಯದ ಬಾಟಲಿಗಳು ಹಾಗೂ ಮದ್ಯ ತುಂಬಿದ ಆರು ಗ್ಲಾಸುಗಳು ಪತ್ತೆಯಾದುವು. ಅಲ್ಲಿದ್ದ 6 ಮಂದಿಯಲ್ಲಿ ಇಬ್ಬರು ಪರಾರಿಯಾದರು. ನಾಲ್ಕು ಮಂದಿ ಸಿಕ್ಕಿಬಿದ್ದರು. ಕರ್ತವ್ಯದ ಮದ್ಯಪಾನ ಮಾಡಿದ ಈ ಎಲ್ಲಾ ಸಿಬಂದಿಗಳನ್ನು ತನಿಖೆಗೆ ಒಳಪಡಿಸಿ ದೇವಳದ ಆಡಳಿತ ಮಂಡಳಿ ಸೂಕ್ತ ಕ್ರಮಕೈಗೊಳ್ಳಲಿದೆ ಎಂದ ಕೃಷ್ಣ ಪ್ರಸಾದ್‌ ಮಡ್ತಿಲ ಅವರು ದೇವಸ್ಥಾನ ಎಂಬುದು ಶ್ರದ್ಧೆಯ ಆರಾಧನಾ ಕೇಂದ್ರ. ಕ್ಷೇತ್ರದ ಪಾವಿತ್ರÂದ ದೃಷ್ಟಿಯಿಂದ ದೇವಳದ ಒಳಗೆ , ಛತ್ರ ಹಾಗೂ ವಸತಿಗೃಹಗಳಲ್ಲಿ ಹಿಂದಿನಿಂದಲೂ ನಡೆಯುತ್ತಾ ಬಂದಿರುವ ಇಂತಹ ವೈಫಲ್ಯವನ್ನು ಸರಿಪಡಿಸಲು ನೂತನ ವ್ಯವಸ್ಥಾಪನಾ ಸಮಿತಿ ಈಗಾಗಲೇ ಕ್ರಮಕೈಗೊಂಡಿದ್ದು ಮದ್ಯಪಾನ ತಪಾಸಣಾ ಯಂತ್ರ ಖರೀದಿಸಲು ಟೆಂಡರ್‌ ಆಗಿರುತ್ತದೆ. ಅಲ್ಲದೆ ಕರ್ತವ್ಯದ ಅವಧಿಯಲ್ಲಿ ಮದ್ಯಪಾನ ಮಾಡಿದ ಸಿಬಂದಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಕೃಷ್ಣಪ್ರಸಾದ್‌ ಮಡ್ತಿಲ ಹೇಳಿದರು.

        ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕಿಶೋರ್‌ ಶಿರಾಡಿ, ಸುಬ್ರಹ್ಮಣ್ಯ ಭಟ್‌,ವನಜಾ ವಿ.ಭಟ್‌ ಮತ್ತು ಮೋನಪ್ಪ ಮಾನಾಡು ಉಪಸ್ಥಿತರಿದ್ದರು.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus