Saturday, May 18, 2013
Last Updated: 2:41:10 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಅಂಕಣ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಸು-ಕುಡಿಕೆ
    • ಶೇರುಯ್ನಾಲೆಯ ಸೂಚಕಗಳು (Stoch,RSI,SAR)
    • ಒಂದು ಟ್ರೆಂಡ್‌ ಯಾವಾಗ ರೂಪುಗೊಳ್ಳುತ್ತದೆ ಮತ್ತು ಯಾವಾಗ ರಿವರ್ಸ್‌ ಆಗುತ್ತದೆ?
    • ಒಂದು ಶೇರು ಓವರ್‌ಬಾಟ್‌ ಮತ್ತು ಓವರ್‌ಸೋಲ್ಡ್‌ ಹಂತಗಳ ನಡುವೆ ಉಯ್ನಾಲೆಯಾಡುತ್ತಾ ಇರುತ್ತದೆ.

      • ಜಯದೇವ ಪ್ರಸಾದ ಮೊಳೆಯಾರ | Jul 02, 2012

        ಒಂದು ಶೇರು ಓವರ್‌ಬಾಟ್‌ ಮತ್ತು ಓವರ್‌ಸೋಲ್ಡ್‌ ಹಂತಗಳ ನಡುವೆ ಉಯ್ನಾಲೆಯಾಡುತ್ತಾ ಇರುತ್ತದೆ. ಈ ಟ್ರೆಂಡುಗಳನ್ನು ಮತ್ತು ಟ್ರೆಂಡ್‌ ಬದಲಾಗುವ ಸ್ಥಾನಗಳನ್ನು ಗುರುತಿಸಲು ಕೆಲವು ತಂತ್ರಗಳಿವೆ. ಈ ರೀತಿ ಉಯ್ನಾಲೆಯಾಡುವ ಸೂಚಕಗಳಿಗೆ Oscillators ಎಂದು ಹೆಸರು. ಮೊದಲೇ ಹೇಳಿದಂತೆ ಇವು ಲೀಡಿಂಗ್‌ ಇಂಡಿಕೇಟರ್ಸ್‌ ಅಂದರೆ, ಒಂದು ಟ್ರೆಂಡ್‌ ಆರಂಭವಾಗುವ ಮೊದಲೇ ಸೂಚನೆ ನೀಡುವ ಸೂಚಕಗಳು.

        ಒಂದು ಶೇರನ್ನು ಯಾವಾಗ ಕೊಳ್ಳಬೇಕು ಮತ್ತು ಯಾವಾಗ ಮಾರಬೇಕು? ಇದು ಅತ್ಯಂತ ಸರಳ ಆದರೆ ಮಹತ್ವಪೂರ್ಣ ಪ್ರಶ್ನೆ. ಇದೊಂದೇ ಒಂದು ವಿಷಯ ತಿಳಿಯಲು ಶೇರು ಪ್ರಭೃತಿಗಳು ಹಗಲಿರುಳೂ ಕಷ್ಟ ಪಡುತ್ತಾರೆ. ಇದ್ದ ಶೇರು ಪತ್ರಿಕೆಗಳನ್ನೆಲ್ಲಾ ಜಾಲಾಡುತ್ತಾರೆ. ಟೀವಿಯಲ್ಲಿ ಬರುವ ಕೋಟೆಡ್‌ ಜೋಯಿಸರ ಕೋಟೇಬಲ್‌ ಕೋಟ್ಸ್‌ಗಳನ್ನೆಲ್ಲಾ ಉರುಹೊಡೆಯುತ್ತಾರೆ. ಆದರೂ ಈ ಚಂಚಲೆ ಯಾರಿಗೂ ಒಲಿಯುವುದಿಲ್ಲ. ಅದನ್ನು ಅರಿಯಲು ಏನಾದರೂ ಸೂತ್ರಗಳಿವೆಯೇ? ಯಾವಾಗ ಒಂದು ಶೇರು ಖರೀದಿಸಲು ಯೋಗ್ಯವಾದ ಬೆಲೆಗೆ ಬಂದು ನಿಲ್ಲುತ್ತದೆ ಮತ್ತು ಯಾವಾಗ ಅದು ಬೆಲೆ ಮೀರಿ ಮಾರಲುತ್ತಮವಾಗುತ್ತದೆ? ಯಾವಾಗ ಒಂದು ಟ್ರೆಂಡ್‌ ರೂಪುಗೊಳ್ಳುತ್ತದೆ ಮತ್ತು ಯಾವಾಗ ಅದು ರಿವರ್ಸ್‌ ಆಗುತ್ತದೆ?

        ಹೌದು. ಟೆಕ್ನಿಕಲ್‌ ಅನಾಲಿಸಿಸ್‌ ಪ್ರಕಾರ ಇದಕ್ಕೂ ಒಂದೆರಡು ಮುಖ್ಯ ತಂತ್ರಗಳಿವೆ. ಒಂದು ಟ್ರೆಂಡ್‌ ಆರಂಭವಾಗುವ ಮೊದಲೇ ಸೂಚನೆ ನೀಡುವ ಕೆಲವು ತಂತ್ರಗಳಿಗೆ Leading Indicators ಎಂದು ಕರೆಯುತ್ತಾರೆ ಮತ್ತು ಟ್ರೆಂಡ್‌ ಆರಂಭವಾದ ಬಳಿಕ ಸೂಚನೆ ನೀಡುವ ತಂತ್ರಗಳಿಗೆ Lagging Indicators ಎಂದು ಕರೆಯುತ್ತಾರೆ.
        ಕಳೆದ ವಾರಗಳಲ್ಲಿ ಚರ್ಚಿಸಿದ ಮೂವಿಂಗ್‌ ಅವರೇಜು ಆಧಾರಿತ ಸೂಚಕಗಳು ಚಾರಿತ್ರಿಕ ಸರಾಸರಿಯನ್ನು ಉಪಯೋಗಿಸಿಕೊಳ್ಳುವ ಕಾರಣ ಅವು ಟ್ರೆಂಡ್‌ ಬದಲಾವಣೆ ಆದ ಬಳಿಕ ಸೂಚನೆ ನೀಡುವಂತಹ ಲ್ಯಾಗಿಂಗ್‌ ಇಂಡಿಕೇಟರ್ಸ್‌. ಅವುಗಳನ್ನು ಮೊಮೆಂಟಮ್‌ ಇಂಡಿಕೇಟರ್ಸ್‌ ಅಂತಲೂ ಕರೆಯುತ್ತಾರೆ. ಈ ಬಾರಿ ಕೆಲವು ಲೀಡಿಂಗ್‌ ಇಂಡಿಕೇಟರ್ಸ್‌ ಅಥವಾ ಆಸಿಲೇಟರ್ಸ್‌ ಬಗ್ಗೆ ತಿಳಿಯೋಣ:

        ಒಂದು ಶೇರು ಅತಿಯಾಗಿ ಖರೀದಿಸಲ್ಪಟ್ಟು ಬೆಲೆ ಮಿತಿಮೀರಿದಾಗ ಅದು ಓವರ್‌ಬಾಟ್‌ ಹಂತದಲ್ಲಿದೆ ಎನ್ನಬಹುದು. ಅದು ಸೇಲ್‌ ಮಾಡಲು ಒಳ್ಳೆಯ ಹಂತ. ಅದೇ ರೀತಿ ಒಂದು ಶೇರು ಮಿತಿಮೀರಿ ಬಿಕರಿಯಾಗಿ ಬೆಲೆ ತೀರಾ ಇಳಿದಾಗ ಓವರ್‌ಸೋಲ್ಡ್‌ ಹಂತದಲ್ಲಿದೆ ಎನ್ನಬಹುದು. ಅದು ಶೇರನ್ನು ಬೈ ಮಾಡಲು ಒಳ್ಳೆಯ ಹಂತ. ಒಂದು ಶೇರು ಓವರ್‌ಬಾಟ್‌ ಮತ್ತು ಓವರ್‌ಸೋಲ್ಡ್‌ ಹಂತಗಳ ನಡುವೆ ಉಯ್ನಾಲೆಯಾಡುತ್ತಾ ಇರುತ್ತದೆ. ಈ ಟ್ರೆಂಡುಗಳನ್ನು ಮತ್ತು ಟ್ರೆಂಡ್‌ ಬದಲಾಗುವ ಸ್ಥಾನಗಳನ್ನು ಗುರುತಿಸಲು ಕೆಲವು ತಂತ್ರಗಳಿವೆ. ಈ ರೀತಿ ಉಯ್ನಾಲೆಯಾಡುವ ಸೂಚಕಗಳಿಗೆ Oscillators ಎಂದು ಹೆಸರು. ಮೊದಲೇ ಹೇಳಿದಂತೆ ಇವು ಲೀಡಿಂಗ್‌ ಇಂಡಿಕೇಟರ್ಸ್‌ ಅಂದರೆ, ಒಂದು ಟ್ರೆಂಡ್‌ ಆರಂಭವಾಗುವ ಮೊದಲೇ ಸೂಚನೆ ನೀಡುವ ಸೂಚಕಗಳು.
        ಶೇರು ಮಾರುಕಟ್ಟೆಯಲ್ಲಿ ಮುಖ್ಯವಾಗಿ ಮೂರು Oscillatorsಗಳನ್ನು ಬಳಸಲಾಗುತ್ತದೆ:

        1. ಸ್ಟೊಕಾಸ್ಟಿಕ್‌ ಟೆಕ್ನಿಕ್‌

        ಎಪ್ಪತ್ತರ ದಶಕದಲ್ಲಿ ಜಾರ್ಜ್‌ ಲೇನ್‌ ಎಂಬವರು ಈ ತಂತ್ರವನ್ನು ರೂಪಿಸಿದರು. ಈ ಪರಿಕಲ್ಪನೆಯ ಪ್ರಕಾರ ಒಂದು ಏರು ಮಾರುಕಟ್ಟೆಯಲ್ಲಿ ಬೆಲೆಯು ಒಂದು ರೇಂಜಿನ ಮೇಲ್ಮಟ್ಟದಲ್ಲಿ ಕ್ಲೋಸ್‌ ಆಗುತ್ತದೆ ಹಾಗೂ ಒಂದು ಇಳಿಮುಖದ ಮಾರುಕಟ್ಟೆಯಲ್ಲಿ ಬೆಲೆಯು ರೇಂಜಿನ ಕೆಳಮಟ್ಟದಲ್ಲಿ ಕ್ಲೋಸ್‌ ಆಗುತ್ತದೆ. ಅಲ್ಲದೆ ರೇಂಜಿನ ಮೇಲ್ಮಟ್ಟದಲ್ಲಿದ್ದರೆ ಓವರ್‌ಬಾಟ್‌ ಎಂದೂ ಕೆಳಮಟ್ಟದಲ್ಲಿದ್ದರೆ ಓವರ್‌ಸೋಲ್ಡ್‌ ಎಂದೂ ತಿಳಿಯಲಾಗುತ್ತದೆ.
        ರೇಂಜ್‌ ಅನ್ನು 0ದಿಂದ 100 ಎಂದು ತೆಗೆದುಕೊಂಡು, ಪ್ರತೀ ಬಾರಿಯೂ ಬೆಲೆಯು ಒಟ್ಟು ರೇಂಜಿನ ಎಷ್ಟು ಶೇಕಡಾ ಸ್ಥಾನದಲ್ಲಿದೆ ಎಂಬುದನ್ನು %K ಗೆರೆಯ ಮೂಲಕ ಸೂಚಿಸಲಾಗುತ್ತದೆ. %Kಯು ರೇಂಜಿನ 80% ಮೇಲೆ ಇದ್ದರೆ ಅದನ್ನು ಓವರ್‌ಬಾಟ್‌ ಸ್ಥಿತಿಯೆಂದೂ 20% ಕೆಳಗೆ ಇದ್ದರೆ ಓವರ್‌ಸೋಲ್ಡ್‌ ಸ್ಥಿತಿ ಎಂದೂ ಪರಿಗಣಿಸಲಾಗುತ್ತದೆ.
        ಸ್ಟೋಕಾಸ್ಟಿಕ್‌ ಚಾರ್ಟಿನಲ್ಲಿ ವೇಗವಾಗಿ ಚಲಿಸುವ %K ಗೆರೆ ಅಲ್ಲದೆ ಇನ್ನೊಂದು ನಿಧಾನವಾಗಿ ಚಲಿಸುವ %D ಗೆರೆಯನ್ನೂ ಕಾಣಬಹುದು. ಈ ಇನ್ನೊಂದು ಗೆರೆ %D ಕೂಡ %K ಗೆರೆಯ ಮೂರು ಅವಧಿಯ ಮೂವಿಂಗ್‌ ಅವರೇಜೇ ಆಗಿದೆ. ಹಾಗಾಗಿ ಇವೆರಡು ಗೆರೆಗಳನ್ನೂ ಒಟ್ಟಿಗೆ ಸಮಗ್ರವಾಗಿ ಮೂವಿಂಗ್‌ ಅವರೇಜ್‌ ಪರಿಕಲ್ಪನೆಯ ದೃಷ್ಟಿಯಿಂದಲೂ ನೋಡಲು ಸಾಧ್ಯ. ಅಂದರೆ ವೇಗವಾದ %K ಗೆರೆಯು ನಿಧಾನವಾದ %D ಗೆರೆಯನ್ನು ಭೇದಿಸಿ ಮೇಲಕ್ಕೆ ಏರುವಾಗ ಬೈ ಸಿಗ್ನಲ್‌ ಎಂದು ತಿಳಿಯತಕ್ಕದ್ದು ಮತ್ತು ಇದು ಓವರ್‌ಸೋಲ್ಡ್‌ ಸ್ಥಾನದಲ್ಲಿ ನಡೆದರೆ ಬೈ ಸಿಗ್ನಲ್‌ ಅನ್ನು ಇನ್ನಷ್ಟು ಖಚಿತವೆಂದು ತಿಳಿಯಬೇಕು. ಅಲ್ಲದೆ ವೇಗದ %K ಗೆರೆಯು ನಿಧಾನದ %D ಗೆರೆಯನ್ನು  ಮೇಲಿನಿಂದ ಭೇದಿಸಿ ಕೆಳಕ್ಕೆ ಇಳಿದಾಗ ಸೆಲ್‌ ಸಿಗ್ನಲ್‌ ಎಂದೂ ಅರ್ಥೈಸತಕ್ಕದ್ದು ಮತ್ತು ಇದು ಓವರ್‌ಬಾಟ್‌ ಸ್ಥಾನದಲ್ಲಿ ನಡೆದರೆ ಸೆಲ್‌ ಸಿಗ್ನಲ್‌ ಅನ್ನು ಇನ್ನಷ್ಟು ಖಚಿತವೆಂದು ಅರ್ಥೈಸತಕ್ಕದ್ದು. 

        2. RSI (Relative Strength Index)

        ಆರ್‌ಎಸ್‌ಐ ಕೂಡ ಸ್ಟೊಕಾಸ್ಟಿಕ್‌ನಂತೆಯೇ ಓವರ್‌ಬಾಟ್‌ ಮತ್ತು ಓವರ್‌ಸೋಲ್ಡ್‌ ಪ್ರದೇಶಗಳನ್ನು ಸೂಚಿಸಿ ಕೊಡು-ಕೊಳ್ಳುವ ಸಂದರ್ಭಗಳನ್ನು ಸೂಚಿಸುತ್ತದೆ. ಇದೂ ಕೂಡ 0ದಿಂದ 100ರ ವರೆಗಿನ ರೇಂಜ್‌ ಒಳಗೆ ಹರಿದಾಡುವ ಗ್ರಾಫ್. 30ಕ್ಕಿಂತ ಕೆಳಗಿನ ಪ್ರದೇಶ ಓವರ್‌ಸೋಲ್ಡ್‌ ಸಂದರ್ಭಗಳನ್ನೂ 70ಕ್ಕಿಂತ ಮೇಲಿನ ಪ್ರದೇಶ ಓವರ್‌ಬಾಟ್‌ ಸಂದರ್ಭಗಳನ್ನೂ ಸೂಚಿಸುತ್ತದೆ.

        3. Parabolic SAR

        ಶೇರುಬೆಲೆಯ ಏರಿಳಿತದ ಗ್ರಾಫ್ನಲ್ಲಿ ಪ್ರ„ಸ್‌ ಲೈನಿನ ಪಕ್ಕದಲ್ಲಿಯೇ ಡಾಟೆಡ್‌ ತುಂಡುಗೆರೆಗಳನ್ನು ನೀವು ನೋಡಿರಬಹುದು. ಈ ಖಂಡಗಳು ಅಥವಾ Parabolaಗಳು ಟ್ರೆಂಡುಗಳನ್ನು ಮತ್ತು ಅವು ರಿವರ್ಸ್‌ ಆಗುವ ಸ್ಥಾನಗಳನ್ನು ಸೂಚಿಸುತ್ತವೆ. ಪ್ರ„ಸ್‌ ಲೈನಿನ ಮೇಲಕ್ಕೆ ಇರುವ ಪಾರಾಬೋಲಾ ಅಪ್‌ಟ್ರೆಂಡ್‌ ಅಥವಾ ಏರಿಕೆಯನ್ನು ಸೂಚಿಸುತ್ತದೆ ಮತ್ತು ಪ್ರ„ಸ್‌ ಲೈನಿನ ಕೆಳಕ್ಕೆ ಇರುವ ಪಾರಾಬೋಲಾ ಡೌನ್‌ ಟ್ರೆಂಡ್‌ ಅಥವಾ ಇಳಿಕೆಯನ್ನು ಸೂಚಿಸುತ್ತದೆ. ಶೇರು ಬೆಲೆ ಉಯ್ನಾಲೆಯಾಡುವಾಗ, ಏರಿಕೆಯಿಂದ ಇಳಿಕೆಗೆ ಮತ್ತು ಇಳಿಕೆಯಿಂದ ಏರಿಕೆಗೆ ರಿವರ್ಸ್‌ ಹೊಡೆದಾಗ ಈ ಪಾರಾಬೋಲಾಗಳು ಪ್ರ„ಸ್‌ ಲೈನಿನ ಮೇಲಿನಿಂದ ಕೆಳಕ್ಕೂ ಕೆಳಗಿನಿಂದ ಮೇಲಕ್ಕೂ ಸ್ಥಳಾಂತರಗೊಳ್ಳುತ್ತವೆ. ಅಂತಹ ಸಮಯಗಳನ್ನು ಗುರುತಿಸಿ ಬೈ-ಸೆಲ್‌ ಮಾಡಿಕೊಳ್ಳಬಹುದು. ಹಾಂ! ಅಂದ ಹಾಗೆ, Parabolic SARಲ್ಲಿ SAR ಅಂದರೆ Stop and Reversal ಎಂದರ್ಥ. ಹೆಸರು ತುಂಬಾ ಔಚಿತ್ಯಪೂರ್ಣವಾಗಿದೆ. ಅಲ್ಲವೇ?

        ಕಳೆದ ಕೆಲವು ವಾರಗಳಿಂದ ಶೇರು ಟ್ರೇಡಿಂಗ್‌ನಲ್ಲಿ ಟೆಕ್ನಿಕಲ್‌ ಚಾರ್ಟನ್ನು ಯಾವ ಥರ ಉಪಯೋಗಿಸುವುದು ಎಂಬುದನ್ನು ಸವಿವರವಾಗಿ, ಸಚಿತ್ರವಾಗಿ ನೋಡಿದ್ದೇವೆ. ಮುಖ್ಯವಾಗಿ ಶೇರು ಬೆಲೆಯ ಚಲನೆಯಲ್ಲಿ ಯಾವ ರೀತಿಯ ಪ್ಯಾಟನುìಗಳು ಸೃಷ್ಟಿಯಾಗುತ್ತವೆ, ಅವುಗಳನ್ನು ಗುರುತಿಸುವುದು ಹೇಗೆ ಮತ್ತು ಶೇರು ಬೆಲೆ ಚಲನೆಯು ಯಾವ ರೀತಿ ಒಂದು ಸಪೋರ್ಟ್‌ ಮತ್ತು ರೆಸಿಸ್ಟನ್ಸ್‌ಗಳ ಇತಿ-ಮಿತಿಯೊಳಗೇ ಏರಿಳಿಯುತ್ತದೆ; ಶೇರು ಬೆಲೆಯ ಏರಿಳಿತದ ಟ್ರೆಂಡುಗಳನ್ನು ಯಾವ ರೀತಿ ಕೆಲವು ಮುಖ್ಯ ಸೂಚಕಗಳ ಸಹಾಯದಿಂದ ಗುರುತಿಸುವುದು ಹಾಗೂ ಆ ಮೂಲಕ ಲಾಭದಾಯಕ ಶೇರು ಟ್ರೇಡಿಂಗ್‌ ಮಾಡಿಕೊಳ್ಳಬಹುದು ಎಂಬಿತ್ಯಾದಿ ವಿಚಾರಗಳ ಮೇಲೆ ಬೆಳಕು ಹಾಯಿಸಿದ್ದೇವೆ.
        ಇಲ್ಲಿಗೆ ಟೆಕ್ನಿಕಲ್‌ ವಿಶ್ಲೇಷಣೆಯ ಒಂದು ಹಂತ ಮುಗಿದಂತಾಯಿತು. ಎರಡನೆಯ ಹಂತದಲ್ಲಿ ನಾವು ಟ್ರೆಂಡ್‌ಗಳನ್ನು ಗುರುತಿಸುವ ಒಂದು ಸಂಪೂರ್ಣ ವಿಭಿನ್ನವಾದ ಜಪಾನೀಸ್‌ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಲಿದ್ದೇವೆ. ಆ ಕ್ಯಾಂಡಲ್‌ ಸ್ಟಿಕ್‌ ಅಥವಾ ಮೊಂಬತ್ತಿ ವಿಜ್ಞಾನ ಆರಂಭಿಸುವ ಮೊದಲು ಗುರುಗುಂಟಿರಾಯರು ತಮ್ಮ ಆದಾಯಕರ ರಿಟರ್ನ್ ಫೈಲಿಂಗ್‌ ಮಾಡುವುದರ ಬಗ್ಗೆ ಮುಂದಿನವಾರ ಒಂದಿಷ್ಟು ತಿಳಿಯೋಣ.

        ಜುಲೈ ಬಂತಲ್ಲವೇ? ಫಾರ್ಮ್ 16 ನಿಮ್ಮ ಕೈಸೇರಿದೆಯೇ?

        (ಕಾಸುಕುಡಿಕೆ ಈಗ ಹಳೆಯ ಕಂತುಗಳೊಂದಿಗೆ ಹೊಸ ಜಾಲತಾಣ
        www.kasukudike.wordpress.com ನಲ್ಲಿ ಲಭ್ಯ)

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus