Sunday, May 26, 2013
Last Updated: 8:00:22 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಲಂಡನ್‌ಗೆ ಹಾರಿದ ಸುಶೀಲ್‌
    • ಸಾಧನೆಯ ಕನಸನ್ನು ಸಕಾರಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸುಶೀಲ್‌ ಕುಮಾರ್‌ ಲಂಡನ್‌ಗೆ ಪ್ರಯಾಣ ಬೆಳೆಸಿದರು.

      • Udayavani | Jul 04, 2012

        ಲಂಡನ್‌ : ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕುಸ್ತಿಪಟು ಎಂಬ ಸಾಧನೆಯ ಕನಸನ್ನು ಸಕಾರಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಸುಶೀಲ್‌ ಕುಮಾರ್‌ ಬುಧವಾರ ಲಂಡನ್‌ಗೆ ಪ್ರಯಾಣ ಬೆಳೆಸಿದರು.

        ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ ಸುಶೀಲ್‌ ಕುಮಾರ್‌ ರೈಲ್ವೆ ಇಲಾಖೆ ಟಿಕೆಟ್‌ ಆಫೀಸರ್‌ ಹುದ್ದೆಯಿಂದ ಸಹಾಯಕ ವಾಣಿಜ್ಯ ಅಧಿಕಾರಿಯಾಗಿ ಭಡ್ತಿ ಪಡೆದಿದ್ದರು. ಒಂದು ವೇಳೆ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಮತ್ತೂಂದು ಸಾಧನೆ ಮಾಡಿದರೆ ಸುಶೀಲ್‌ ಕುಮಾರ್‌ ರಾಜ್ಯ ರೈಲ್ವೆ ಇಲಾಖೆಯ ಅಧ್ಯಕ್ಷರಾಗಲಿದ್ದಾರೆ.

        ವಿಶ್ವ ಚಾಂಪಿಯನ್‌ ಎನಿಸಿದ ಭಾರತದ ಮೊದಲ ಕುಸ್ತಿಪಟು ಆಗಿರುವ ಸುಶೀಲ್‌, ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲೂ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

        66 ಕೆಜಿ ವಿಭಾಗದ ಫ್ರೀಸ್ಟೈಲ್‌ನಲ್ಲಿ ಸ್ಪರ್ಧಿಸಲಿರುವ ಸುಶೀಲ್‌ ಸಾಧನೆಯ ವಿಶ್ವಾಸದಲ್ಲಿದ್ದಾರೆ. ನನ್ನ ಕುಸ್ತಿಯಿಂದ ಜನತೆ ಸಂತೋಷ ಪಡುತ್ತಾರೆ ಎಂಬುದಾದರೆ ಅದು ನನ್ನ ಶ್ರೇಷ್ಠ ಸಾಧನೆ ಎಂದಿದ್ದಾರೆ.

        ಇಡೀ ಭಾರತವೇ ಲಂಡನ್‌ ಒಲಿಂಪಿಕ್ಸ್‌ ವೀಕ್ಷಿಸಲಿದೆ. ಈಗಾಗಲೇ ಜನರ ಪ್ರೀತಿಯನ್ನು ಗಳಿಸಿದ್ದೇನೆ. ಅವರು ನನ್ನಿಂದ ಇನ್ನಷ್ಟು ಹೆಚ್ಚಿನ ಸಾಧನೆ ಬಯಸುತ್ತಿದ್ದಾರೆ. ಎಲ್ಲರ ಆಶೀರ್ವಾದದಿಂದ ನಾವು ದೇಶ ಹೆಮ್ಮೆ ಪಡುವ ಸಾಧನೆ ಮಾಡುತ್ತೇವೆ ಎಂಬ ವಿಶ್ವಾಸ ಇದೆ ಎಂದು ಸುಶೀಲ್‌ ಕುಮಾರ್‌ ಹೇಳಿದರು.

        ಲಂಡನ್‌ನಲ್ಲಿ ನಮಗೆ ಕಠಿನ ಸ್ಪರ್ಧೆ ಇದೆ. ಅದರಲ್ಲೂ ಪೂರ್ವ ಯೂರೋಪ್‌, ಅಜರ್‌ಬೈಜಾನ್‌ ಮತ್ತು ಟರ್ಕಿ ಸೇರಿದಂತೆ ವಿವಿಧ ದೇಶದ ಸ್ಪರ್ಧಿಗಳಿಂದ ಕಠಿನ ಸ್ಪರ್ಧೆ ಎದುರಿಸಬೇಕಿದೆ. ಆದರೆ ಈ ಬಾರಿ ಚಿನ್ನದ ಪದಕದೊಂದಿಗೆ ತವರಿಗೆ ಮರಳುವ ಗುರಿ ಹೊಂದಿದ್ದೇನೆ ಎಂದು ಸುಶೀಲ್‌ ಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus