Thursday, June 20, 2013
Last Updated: 12:50:22 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬೈಕ್‌ಗೆ ಕಾರು ಢಿಕ್ಕಿ : ಸವಾರ ಗಾಯ
    • ಪರಾರಿಯಾಗಲೆತ್ನಿಸಿದ ಕಾರಿಗೆ ಕಟಪಾಡಿಯಲ್ಲಿ ಪೊಲೀಸರು ತಡೆಯೊಡ್ಡಿರುವುದು.

      • Udayavani | Jul 04, 2012

        ಪರಾರಿಯಾಗಲೆತ್ನಿಸಿದ ಕಾರಿಗೆ ತಡೆಯೊಡ್ಡಿದ ಬೆಂಗಾವಲು ಪಡೆ ಪೊಲೀಸರು

        ಕಾಪು : ರಾಷೀrಯ ಹೆದ್ದಾರಿ 66ರ ಪಾಂಗಾಳ ವಿದ್ಯಾವರ್ಧಕ ಶಾಲೆಯ ಮುಂಭಾಗದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಕಾರು ಢಿಕ್ಕಿ ಹೊಡೆದು ಬೈಕ್‌ ಸವಾರರೋರ್ವರು ಗಂಭೀರ ಗಾಯಗೊಂಡ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

        ಇನ್ನಂಜೆ ಗ್ರಾ. ಪಂ ನ ಮಾಜಿ ಅಧ್ಯಕ್ಷ, ಪಾಂಗಾಳ ಗುಡ್ಡೆಯ ಸುಧಾಕರ ಡಿ. ಅಮೀನ್‌ ಗಂಭೀರ ಗಾಯಗೊಂಡ ಬೈಕ್‌ ಸವಾರರಾಗಿದ್ದು, ಗಾಯಾಳನ್ನು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

        ಗಾಯಾಳು ಸುಧಾಕರ ಅಮೀನ್‌ ತನ್ನ ಹೀರೋ ಹೋಂಡಾ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಕಾರು ಹಿಂದಿನಿಂದ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗವೂ ನಜ್ಜುಗುಜ್ಜಾಗಿದೆ.

        ಕಾರು ಚಾಲಕ ಹುಬ್ಬಳ್ಳಿ ವಿದ್ಯಾನಗರದ ನಿವಾಸಿ ಮೃತ್ಯುಂಜಯನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಈತ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಾಪು ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

        ಕಾರನ್ನು ಬೆಂಬತ್ತಿ ಹಿಡಿದ ಬೆಂಗಾವಲು ಪೊಲೀಸರು : ಪಾಂಗಾಳದಲ್ಲಿ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್‌ ಸವಾರನನ್ನು ಗಾಯಗೊಳಿಸಿದ ಕಾರು ಚಾಲಕ ತನ್ನ ಕಾರನ್ನು ಘಟನಾ ಸ್ಥಳದಲ್ಲಿ ನಿಲ್ಲಿಸದೇ ಪರಾರಿಯಾಗಲೆತ್ನಿಸಿದನು. ಇದೇ ವೇಳೆ ಹೆದ್ದಾರಿ ಸಂಚಾರದಲ್ಲಿದ್ದ ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆಯ ಬೆಂಗಾವಲು ಪೊಲೀಸ್‌ ವಾಹನದಲ್ಲಿದ್ದ ಪೊಲೀಸರು ಅಪಘಾತ ನಡೆಸಿ ಪರಾರಿಯಾಗಲೆತ್ನಿಸಿದ ಕಾರಿಗೆ ಕಟಪಾಡಿ - ಶಿರ್ವ ರಸ್ತೆಯಲ್ಲಿ ತಡೆಯೊಡ್ಡಿ ಸಾರ್ವಜನಿಕರಿಂದ ಶ್ಲಾಘನೆಗೊಳಗಾದರು.



        ನಜ್ಜುಗುಜ್ಜಾಗಿರುವ ಬೆೈಕ್‌ 

        ಅವಿವಾಹಿತ : ಆತ್ಮಹತ್ಯೆ

        ಕಟಪಾಡಿ ಏಣಗುಡ್ಡೆ ಗ್ರಾಮದ ಜೆ. ಎನ್‌. ನಗರ ನಿವಾಸಿ ಮಹೇಶ್‌ ಸುವರ್ಣ (28) ಜು. 4ರಂದು ಮುಂಜಾನೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
        ಅವಿವಾಹಿತರಾಗಿದ್ದ ಇವರು ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ.
        ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus