Friday, May 24, 2013
Last Updated: 12:57:09 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮುಂಬೈನಲ್ಲಿ ಭಾರಿ ಮಳೆ: ಕಟ್ಟಡ ಕುಸಿದು 1 ಸಾವು
      • Udayavani | Jul 04, 2012

        ಮುಂಬೈ: ವಾಣಿಜ್ಯ ಮಹಾನಗರಿಯಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗುತ್ತಿ¤ದ್ದು, ಉಪನಗರ ಮಲಾಡ್‌ನ‌ಲ್ಲಿ ನಾಲ್ಕು ಮಹಡಿಯ ಕಟ್ಟಡ ಕುಸಿದು ಒಂದು ಸಾವು ಸಂಭವಿಸಿದೆ.

        ಇದೇ ವೇಳೆ ನಗರದಲ್ಲಿ, ಹೊರವಲಯದ ಥಾಣೆ ಮತ್ತು ರಾಯಗಡ ಜಿಲ್ಲೆಯಲ್ಲಿ ಮಳೆ ಮುಂದುವರಿದ ಪರಿಣಾಮ ರೈಲು ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ಮೈಲುದ್ಧದ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

        ಕೆಲ ಮಾರ್ಗಗಳಲ್ಲಿ ಸ್ಥಳೀಯ ಬೆಳಗ್ಗೆ ರೈಲುಗಳು 20-25 ನಿಮಿಷ ವಿಳಂಬವಾಗಿ ಸಂಚರಿಸುತ್ತಿದ್ದರಿಂದ ಕೆಲಸಕ್ಕೆ ಹೋಗುವ ಲಕ್ಷಾಂತರ ಪ್ರಯಾಣಿಕರಿಗೆ ತೊಂದರೆಯುಂಟಾಗಿದೆ.

        ಮುಂಬಯಿ ವಿಮಾನ ನಿಲ್ದಾಣದಲ್ಲಿ ಪೂರ್ವಾಹ್ನ ಕೆಲವು ತಾಸುಗಳ ವಿಮಾನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಪ್ರತಿಕೂಲ ಹವಾಮಾನದಿಂದಾಗಿ ಮೂರು ವಿಮಾನಗಳ ಸಂಚಾರವನ್ನು ಇತರ ಕಡೆಗಳಿಗೆ ವರ್ಗಾಯಿಸಲಾಗಿದೆ.

        ಸಮುದ್ರದಲ್ಲಿ ಪ್ರಬಲ ಮಾರುತಗಳು ಬೀಸುತ್ತಿದ್ದರಿಂದ ಆಳೆತ್ತರಸ ಅಲೆಗಳು ಸೃಷ್ಟಿಯಾಗುತ್ತಿದ್ದು, ಮೀನುಗಾರರಿಗೆ ಮೀನುಗಾರಿಕೆಗೆ ತೆರಳಬಾರದೆಂದು ಸಲಹೆ ನೀಡಲಾಗಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus