- ಸಕಲೇಶಪುರ-ಚಿಕ್ಕಮಗಳೂರು, ಕೆಂಗೇರಿ-ಮಳವಳ್ಳಿ ಮಾರ್ಗಕ್ಕೆ ಸಮ್ಮತಿ- ರಾಜ್ಯದ ಯೋಜನೆಗಳಿಗೆ ಹಣ ಬಿಡುಗಡೆಗೆ ಮನವಿ: ಕೆ.ಎಚ್.ಮುನಿಯಪ್ಪಉದಯವಾಣಿ ಪ್ರತಿನಿಧಿಯಿಂದನವದೆಹಲಿ: ಕರ್ನಾಟಕದ ಎರಡು ರೈಲ್ವೆ ಯೋಜನೆಗಳಿಗೆ ಕೇಂದ್ರ ಹಣಕಾಸು ಆಯೋಗ ಸಮ್ಮತಿ ಸೂಚಿಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.ಇಲ್ಲಿನ ತಮ್ಮ ನಿವಾಸದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಕಲೇಶಪುರ-ಚಿಕ್ಕಮಗಳೂರು ಹಾಗೂ ಕೆಂಗೇರಿ-ಮಳವಳ್ಳಿ ರೈಲ್ವೆ ಯೋಜನೆಗೆ ಹಣಕಾಸು ಆಯೋಗ ತಾತ್ವಿಕ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.ಕೇಂದ್ರ ಸರ್ಕಾರ ಸಹಭಾಗಿತ್ವದ ಯೋಜನೆಗಳಿಗೆ ರಾಜ್ಯ ಸರ್ಕಾರ ಉತ್ತಮ ಸಹಕಾರ ನೀಡುತ್ತಿರುವುದರಿಂದ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಆದ್ಯತೆಯಲ್ಲಿ ಹಣ ಬಿಡುಗಡೆ ಮಾಡಬೇಕೆಂದು ಹಣಕಾಸು ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾರನ್ನು ಒತ್ತಾಯಿಸಿದ್ದೇನೆ ಎಂದೂ ಮುನಿಯಪ್ಪ ಹೇಳಿದರು.ಹುಬ್ಬಳ್ಳಿ-ಅಂಕೋಲ ರೈಲ್ವೆ ಮಾರ್ಗದ ಬಗ್ಗೆ ಪರಿಸರ ಇಲಾಖೆಯ ತಕರಾರುಗಳಿರುವುದು ನಿಜ. ಆದರೆ ಪರಿಸರಕ್ಕಾಗುವ ಹಾನಿಯನ್ನು ಕಡಿಮೆ ಮಾಡಿ, ಇಲಾಖೆಯ ಅನುಮತಿ ಪಡೆದು ಈ ಯೋಜನೆಯನ್ನು ಜಾರಿಗೊಳಿಸಿಯೇ ಸಿದ್ಧ ಎಂದೂ ಸಚಿವರು ಘೋಷಿಸಿದರು.