ನವದೆಹಲಿ: ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ ಬೆಂಗಳೂರು ಮತ್ತು ದೆಹಲಿ ಸ್ಫೋಟದ ಆರೋಪಿ, ಶಂಕಿತ ಉಗ್ರ ಫಸೀಹ್ ಮಹಮ್ಮದ್‌ನನ್ನು ಭಾರತದ ವಶಕ್ಕೆ ಪಡೆಯಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.ಬಿಹಾರ ಮೂಲದ ಎಂಜಿನಿಯರ್ ಫಸೀಹ್ ಮಹಮ್ಮದ್ (28) ಮೇಲೆ ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಸ್ಫೋಟ ಮತ್ತು ದೆಹಲಿಯ ಜಾಮಾ ಮಸೀದಿ ಸ್ಫೋಟ ಸೇರಿದಂತೆ ಹಲವಾರು ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಆತನನ್ನು ಭಾರತದ ವಶಕ್ಕೆ ನೀಡಬೇಕೆಂದು ಇಂಟರ್‌ಪೋಲ್ ಮೂಲಕ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದೆ.