ವಿಜಯ್ ಭರಮಸಾಗರ | Jul 06, 2012
ಏಳು ಕ್ಯಾಮೆರಾಗಳು, ಪಕ್ಕಾ ಲೊಕೇಶನ್ನು, ಒಬ್ಬ ನಿರ್ದೇಶಕ, ಕಲಾವಿದರು, ತಂತ್ರಜ್ಞರು ಸೇರಿ ಬರೋಬ್ಬರಿ 120 ಮಂದಿ... ಬೆಳಗ್ಗೆ 7.30 ಕ್ಕೆ ಮುಹೂರ್ತ. 8 ಕ್ಕೆ ಆಯಕ್ಷನ್. 9.54 ಕ್ಕೆ ಕಟ್! ಅಲ್ಲಿಗೆ ಎರಡು ತಾಸಿನ ಸಿನಿಮಾ, ಕೇವಲ ಒಂದು ಮುಕ್ಕಾಲು ತಾಸಿಗೇ ಕಂಪ್ಲೀಟ್!! ರಿಯಲಿ ದಟ್ ಈಸ್ ಗ್ರೇಟ್ ಜಾಬ್ ಎಂಬ ಉದ್ಗಾರ. ಇದು "ಒನ್‌ಟೇಕ್ ಸಿನಿಮಾ'ದ ಹೈಲೈಟು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೂಂದು ಹೊಸ ದಾಖಲೆ ಸೇರ್ಪಡೆ.
ಎಂಟು ಗಂಟೆಯಲ್ಲಿದ್ದ ಟೆನನ್ನು , ಹತ್ತು ಗಂಟೆಯಷ್ಟೊತ್ತಿಗೆ ಮಾಯ. ಎಲ್ಲರ ಮೊಗದಲ್ಲೂ ಸಂತಸದ ಅಲೆ. ಕಿವಿಗಡಚಿಕ್ಕುವ ಕೇಕೆ, ಚಪ್ಪಾಳೆಗಳ ಸದ್ದು. ಎತ್ತ ನೋಡಿದರೂ ಹರ್ಷೋದ್ಗಾರ. ಮುಗಿಲು ಮುಟ್ಟಿದ ಸಂಭ್ರಮ. ಕೊನೆಗೂ ಅಂದುಕೊಂಡಿದ್ದನ್ನು ಸಾಧಿಸಿದ ಸಂತಸ. ಒಬ್ಬರನ್ನೊಬ್ಬರು ಬಾಚಿ ತಬ್ಬಿಕೊಂಡ ಖುಷಿಗಂತು ಪಾರವೇ ಇರಲಿಲ್ಲ. ಈ ಅಪರೂಪದ ದೃಶ್ಯ ಕಂಡುಬಂದದ್ದು "ನಮ್ ಏರಿಯಾಲ್ ಇನ್ನೊಂದಿನಾ' ಚಿತ್ರದ ಚಿತ್ರೀಕರಣ, ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ಪೂರೈಸಿದ ಕ್ಷಣದಲ್ಲಿ.
ಮಂಗಳವಾರ ಬೆಳ್ಳಂಬೆಳಗ್ಗೆ ಹನುಮಂತನಗರ ಸಮೀಪದ ಶಾಮಣ್ಣ ಗಾರ್ಡನ್ ಕಲರ್‌ಫುಲ್ ಆಗಿತ್ತು. ಅಲ್ಲಿ ವಾಸವಾಗಿದ್ದವರೆಲ್ಲರೂ ತಮ್ಮ ಏರಿಯಾದಲ್ಲಿ ನಡೆಯುತ್ತಿರುವ ದಾಖಲೆ ಚಿತ್ರ ಯಶಸ್ಸು ಕಾಣಲಿ ಅಂತಾನೇ ಪ್ರಾರ್ಥಿಸಿದ್ದರು. ಅಷ್ಟೇ ಅಲ್ಲ, ಚಿತ್ರತಂಡಕ್ಕೆ ಸಹಕರಿಸಿ, ಸಕ್ಸಸ್ ಆಗಲು ಮೂಲ ಕಾರಣರಾದರು. ಕೇವಲ ಎರಡು ಗಂಟೆಯಲ್ಲಿ ಏರಿಯಾ ಹುಡುಗರ ಕಥೆ ಬಿಚ್ಚಿಟ್ಟ ಚಿತ್ರತಂಡಕ್ಕೆ ಎಲ್ಲರೂ "ಜೈಹೋ' ಅಂದರು. ನಿರ್ದೇಶಕ ಅರವಿಂದ್ ಕೌಶಿಕ್, "ಕಟ್ ಇಟ್' ಎನ್ನುತ್ತಿದ್ದಂತೆಯೇ, ಅತ್ತ ನಿರ್ಮಾಪಕ ಅಣಜಿ ನಾಗರಾಜ್ ಕಣ್ಣಲ್ಲಿ ಆನಂದಭಾಷ್ಪ. ನಟರಾದ ಪಯಣ ರವಿಶಂಕರ್, ಪಟ್ರೆ ಅಜಿತ್, ಗುಂಡ್ರಗೋವಿ ಸತ್ಯ, ಚೇತನ್‌ಚಂದ್ರ, ರೂಪಿಕಾ, ಕೈಲಾಶ್, ವೃಷಭ್, ರಘು ಶಿವಮೊಗ್ಗ, ರವಿತೇಜ ಮತ್ತು ಅಚ್ಯುತ ಮೊಗದಲ್ಲೂ ವರ್ಲ್ಡ್ಕಪ್ ಗೆದ್ದಷ್ಟೇ ಖುಷಿ. ಆಗ ಅಲ್ಲಿ ಮೌನವೇ ಮಾತಾಗಿತ್ತು. ಅವರ ಖುಷಿಯೇ ಎಲ್ಲವನ್ನೂ ಹೇಳುತ್ತಿತ್ತು. "ಈಗಷ್ಟೇ ಪೂಜೆ ಆಯ್ತು. ಆಗಲೇ ಕುಂಬಳಕಾಯಿನಾ'? ಅನ್ನೋ ಜನರು ಕ್ಷಣಕಾಲ ತಬ್ಬಿಬ್ಟಾಗಿದ್ದೂ ದಿಟ. "ಕನ್ನಡದಲ್ಲಿ ಇದುವರೆಗೆ ಯಾರೂ ಮಾಡದ್ದನ್ನು ನಾವು ಮಾಡಿದ್ದೇವೆ ಅನ್ನೋ ಅಹಂ ಇಲ್ಲದೆ, ನಾವೇನನ್ನೂ ಮಾಡಿಲ್ಲ. ಕೇವಲ ಇದೊಂದು ಪ್ರಯತ್ನ. ಹಾಗಂತ ಇದನ್ನು ಸಾಮಾನ್ಯ ಪ್ರಯತ್ನ ಎನ್ನವಂತಿಲ್ಲ. ಸಾಮಾನ್ಯ ಚಿತ್ರವೂ ಅಲ್ಲ. ಅನ್ನೋ ಚಿತ್ರತಂಡದ ಮಾತು ನಿಜಕ್ಕೂ ಗ್ರೇಟ್ ಎನಿಸಿದ್ದು ಸುಳ್ಳಲ್ಲ. ಇಂತಹ ಅಪರೂಪದ ಸಾಧನೆ ಮಾಡಿ ಕನ್ನಡ ಚಿತ್ರರಂಗದ ಇತಿಹಾಸ ಪುಟ ಸೇರಿದ "ನಮ್ ಏರಿಯಾಲ್ ಇನ್ನೊಂದಿನಾ' ಕುರಿತು ಅಣಜಿ ನಾಗರಾಜ್ ಹೇಳಿಕೊಂಡಿದ್ದು ಹೀಗೆ...
ಅನುಮಾನ ಮತ್ತು ಆರಂಭ!
"ಹದಿನೆಂಟು ಗಂಟೆಗಳಲ್ಲಿ ಶಿವರಾಜ್‌ಕುಮಾರ್ ಅವರ "ಸುಗ್ರೀವ' ನಿರ್ಮಿಸಿ, ಕನ್ನಡದಲ್ಲೊಂದು ದಾಖಲೆ ಬರೆದಿದ್ದಾಗಿತ್ತು. ಮುಂದೇನು ಅನ್ನೋ ಪ್ರಶ್ನೆ ಇತ್ತು. ಕೇವಲ ಎರಡು ತಾಸಿನಲ್ಲೊಂದು ಚಿತ್ರ ಮಾಡಿದರೆ ಹೇಗೆ ಅನ್ನೋ ವಿಷಯವನ್ನು ನಿರ್ದೇಶಕ ಅರವಿಂದ್ ಕೌಶಿಕ್ ಮುಂದಿಟ್ಟರು. ಸಾಧ್ಯನಾ? ಅನ್ನೋ ಅನುಮಾನದಲ್ಲೇ ಶುರುವಾದ ಚರ್ಚೆ ಕೊನೆಗೆ ಸಾಧ್ಯವಾಗಿಸಿದೆ. ನಿರ್ದೇಶಕರು ಏರಿಯಾ ಹುಡುಗರ ಕಥೆ ಹೇಳಿ ಅದಕ್ಕೊಂದು ಚೌಕಟ್ಟು ಹಾಕಿಕೊಟ್ಟರು. ಎಲ್ಲವನ್ನೂ ಪ್ಲ್ರಾನ್ ಪ್ರಕಾರ ಮಾಡಿದರು. ಒಳ್ಳೆಯ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯಿತು. ತಿಂಗಳುಗಟ್ಟಲೆ ರಿಹರ್ಸಲ್ ನಡೆಯಿತು. ಆ ಎಲ್ಲಾ ಪರಿಶ್ರಮದಿಂದ ಇಂದು ಅಂದುಕೊಂಡಿದ್ದನ್ನು ಮಾಡಿ ಮುಗಿಸಿದ್ದೇವೆ. ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸಲ್ಲಬೇಕು' ಎಂದು ನಿಟ್ಟುಸಿರು ಬಿಟ್ಟ ಅಣಜಿ, ಇದೇ ತಿಂಗಳಲ್ಲಿ ರಿಲೀಸ್ ಮಾಡುವ ಯೋಚನೆಯೂ ಇದೆ ಎಂದರು. ನಿರ್ದೇಶಕ ಅರವಿಂದ್ ಕೌಶಿಕ್ ಕಟ್ ಇಟ್ ಎನ್ನುತ್ತಿದ್ದಂತೆ, ಕ್ಯಾಮೆರಾಮೆನ್ ಪ್ರಸಾದ್ ಅವರ ಬಳಿ ಹೋಗಿ ಎಲ್ಲಾ ಓಕೆನಾ ಅಂತ ಕೇಳಿದರಂತೆ. ಪ್ರಸಾದ್ ಸೂಪರ್ ಎನ್ನುತ್ತಿದ್ದಂತೆಯೇ ಕ್ಷಣಕಾಲ ಮೈಮರೆತು ನಿಂತುಬಿಟ್ಟರಂತೆ. "ಇದು ನನ್ನೊಬ್ಬನಿಂದ ಸಾಧ್ಯವಾಗಿಲ್ಲ. ಟೀಮ್ ವರ್ಕ್‌ನಿಂದ ಆಗಿದೆ. ಎಲ್ಲರಲ್ಲೂ ಒಂದೇ ಯೋಚನೆ ಇದ್ದುದರಿಂದ ಸಾಧ್ಯವಾಗಿದೆ. ಇಲ್ಲಿ ಏರಿಯಾದ ಎಂಟು ಮಂದಿ ಅಬ್ಬೆಪಾರಿ ಹುಡುಗರ ಕಥೆ ಹೇಳಿದ್ದೇನೆ. ಎರಡು ಗಂಟೆಯಲ್ಲಿ ಹೇಗಿದ್ದ ಹುಡುಗರು ಹೇಗೆಲ್ಲಾ ಆಗ್ತಾರೆ ಅನ್ನೋದೇ ಕಾನ್ಸೆಪುr ಎಂದರು ಕೌಶಿಕ್.
ಇದು ಪ್ರಯೋಗಾತ್ಮಕ ಸಿನಿಮಾ ಅಲ್ಲ. ಪ್ರೇಕ್ಷಕರು ಎಂಜಾಯ್ ಮಾಡಬಹುದಾದಂತಹ ಪಾತ್ರಗಳನ್ನು ಗುಡ್ಡೆ ಹಾಕಿ ಅದಕ್ಕೆ ಕಮರ್ಷಿಯಲ್ ಟಚ್ ಕೊಟ್ಟಿದ್ದೇನೆ. ಮೊದಲು ಭಯವಿತ್ತು. ನನ್ನೆಲ್ಲಾ ಕಲಾವಿದರು, ತಂತ್ರಜ್ಞರು ಕೊಟ್ಟ ಧೈರ್ಯ ಮತ್ತು ಸಹಕರಿಸಿದ ರೀತಿ ನನಗೆ ಧೈರ್ಯ ಕೊಡು¤. ಎಲ್ಲರೂ ಸಾಥ್ ನೀಡಿದ್ದಕ್ಕೆ ಈ ಚಿತ್ರ ಮಾಡಲು ಸಾಧ್ಯವಾಗಿದೆ. ಅಣಜಿ ಮತ್ತು ಟೀಮ್‌ಗೆ ಥ್ಯಾಂಕ್ಸ್ ಎಂದರು ಕೌಶಿಕ್. ರವಿಶಂಕರ್, ಅಜಿತ್, ಸತ್ಯ, ರೂಪಿಕಾ, ಚೇತನ್‌ಚಂದ್ರ, ಕೈಲಾಶ್, ವೃಷಭ್, ರಘು ಶಿವಮೊಗ್ಗ, ರವಿತೇಜ ಮತ್ತು ಅಚ್ಯುತ ಅನುಭವ ಹಂಚಿಕೊಂಡರು. ಚಿತ್ರಕ್ಕೆ ಎರಡು ರೆಡ್ ಕ್ಯಾಮೆರಾ, ಐದು 5ಡಿ ಕ್ಯಾಮೆರಾ ಮತ್ತು ಒಂದು ಗೋಫೊÅà ಚಿಕ್ಕ ಕ್ಯಾಮೆರಾವನ್ನೂ ಬಳಸಿಕೊಳ್ಳಲಾಗಿದೆ. ಏಳು ಕ್ಯಾಮೆರಾಗಳಿಗೊಬ್ಬ ಕ್ಯಾಮೆರಾಮೆನ್. ಪ್ರಸಾದ್ ಪ್ರಧಾನ ಛಾಯಾಗ್ರಾಹಕ. ಇವರೊಂದಿಗೆ ಸೇಫ್ಟಿ ಪ್ರಕಾಶ್ ಕೂಡ ಕೈ ಜೋಡಿಸಿದ್ದು ವಿಶೇಷ.
ಇನ್ನು ಸ್ಟನ್‌ಶಿವು ಅವರ ಸ್ಟಂಟ್ ಮತ್ತು ದೇವಾನಂದ್ ಅವರ ನೃತ್ಯ ನಿರ್ದೇಶನವಿದೆ. ಅರ್ಜುನ್ ಜನ್ಯ ಸಂಗೀತವಿದೆ.