Udayavani | Jul 06, 2012
ಕನ್ನಡದಲ್ಲಿ ವಿಶೇಷ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಹಾರರ್- ಥ್ರಿಲ್ಲರ್ ಸಿನೆಮಾ ಭವ. ಪ್ರಕಾಶ್ ಕಾಬೆಟ್ಟು ನಿರ್ದೇಶನದ ಭವ ಚಲನಚಿತ್ರ ಇದೇ ಜು. 13ರಂದು ಚಿತ್ರಮಂದಿರಗಳಿಗೆ ಲಗ್ಗೆ ಇರಿಸಲಿದೆ. ಹಾರರ್ ಚಿತ್ರವಾಗಿದ್ದರೂ ಕುಟುಂಬ ಸಹಿತರಾಗಿ ವೀಕ್ಷಿಸಬಹುದಾದ ರೀತಿಯಲ್ಲಿ ಭವ ತಯಾರಾಗಿದ್ದು, ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.
ಪ್ರಾರಂಭದ 40 ನಿಮಿಷಗಳ ಬಳಿಕ ಚಿತ್ರಕ್ಕೆ ವಿಶೇಷ ತಿರುವು ಲಭಿಸುತ್ತದೆ. ವೀಕ್ಷಕ ಕೊನೆಯ ತನಕ ಕ್ಲೈಮಾಕ್ಸನ್ನು ಊಹಿಸಲಾರ, ಹೀಗಾಗಿ ಚಿತ್ರ ಅಂತಿಮ ಕ್ಷಣದ ತನಕ ಆಕರ್ಷಣೆಯನ್ನು ಉಳಿಸಿಕೊಳ್ಳುವ ಗುಣ ಹೊಂದಿದೆ ಎನ್ನುತ್ತಾರೆ
ನಿರ್ದೇಶಕ ಪ್ರಕಾಶ್ ಕಾಬೆಟ್ಟು. ಹೆಚ್ಚಿನ ಪ್ರಮಾಣದ ಆಪ್ಟಿಕಲ್ ಇಲ್ಯೂಶನ್ ಮೂಲಕ ಥ್ರಿಲ್ ನೀಡಲು ಈ ಚಿತ್ರದಲ್ಲಿ ಪ್ರಯತ್ನಿಸಲಾಗಿದೆ. ಹಿಂಸಾತ್ಮಕ ಮತ್ತು ವಿಕೃತ ದೃಶ್ಯಗಳಿಗೆ ಅವಕಾಶವೇ ನೀಡದೆ ಕೇವಲ ಕಂಪ್ಯೂಟರ್ ಗ್ರಾಫಿಕ್ಸ್ ಮತ್ತು
ವಿವರಣೆಯ ತಂತ್ರಗಾರಿಕೆಯ ಮೂಲಕ ಪ್ರೇಕ್ಷಕನಿಗೆ ಥ್ರಿಲ್, ಮನೋರಂಜನೆ ಒದಗಿಸಲು ಪ್ರಯತ್ನಿಸಲಾಗಿದೆ.
ರಕ್ತಪಾತಗಳಿಲ್ಲದೆಯೂ ಹಾರರ್ ಸಿನೆಮಾ ಮಾಡಲು ಸಾಧ್ಯ ಎನ್ನುವುದಕ್ಕೆ ಭವ ಒಂದು ಉದಾಹರಣೆ ಎನ್ನುತ್ತಾರೆ ಪ್ರಕಾಶ್.
ರಂಗಕಲೆಯಲ್ಲಿ ಪಳಗಿದ ಕಲಾವಿದರು ಹಾಗೂ ಹೊಸ ಮುಖಗಳನ್ನು ಭವದಲ್ಲಿ ಕಾಣಬಹುದು. ಚಿತ್ರದಲ್ಲಿ ಎರಡು ಹಾಡುಗಳಿವೆ. ರಾಜೇಶ್ ಭಟ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುಂದೆ ಬಗೆಬಗೆಯ ಫಿಕÏನ್ ಸಿನೆಮಾಗಳನ್ನು ತಯಾರಿಸುವ ಯೋಜನೆ ಪ್ರಕಾಶ್ ಕಾಬೆಟ್ಟು ಅವರಿಗಿದೆ.