ಶತಾವಧಾನಿ ಡಾ| ಆರ್. ಗಣೇಶ್ | Jul 08, 2012
ಜಿನೀವಾದ ವಿಜ್ಞಾನ ಸಂಶೋಧನಾಲಯದಲ್ಲಿ ದೇವಕಣ ಅಥವಾ ಹಿಗ್ಸ್ ಬೊಸೋನ್‌ಅನ್ನು ಕಂಡುಹಿಡಿಯುವುದರೊಂದಿಗೆ ಜಗತ್ತಿನ ಉಗಮದ ಮೂಲ ಹುಡುಕುವಲ್ಲಿ ಮತ್ತೂಂದು ಹೆಜ್ಜೆಯನ್ನು ಮುಂದಿರಿಸಿದಂತಾಗಿದೆ. ಆದರೆ, ಭಾರತೀಯ ಜ್ಞಾನಪರಂಪರೆಯಲ್ಲಿ ಜಗತ್ತಿನ ಸೃಷ್ಟಿಯ ಬಗ್ಗೆ ಅನೇಕ ಅನ್ವೇಷಣೆಗಳು ನಿರಂತರವಾಗಿ ನಡೆದುಕೊಂಡು ಬಂದಿವೆ. ಜಗತ್ತಿನ ಸೃಷ್ಟಿಗೆ ಪರಮಾರ್ಥವಿಲ್ಲ ಎಂಬುದು ಆಷೇìಯ ದಾರ್ಶನಿಕರ ಒಂದು ಕಾಣೆR. ಹಾಗಾಗಿ, "ದೇವಕಣ ಅನಾವರಣ'ದಂಥ ಸಂಶೋಧನೆಗಳು ಸತ್ಯಾನ್ವೇಷಣೆಯ ದೀರ್ಘ ಹಾದಿಯ ಒಂದು ಮೈಲುಗಲ್ಲು ಮಾತ್ರ. ಸಾಗಬೇಕಾದ ದಾರಿ ಇನ್ನೂ ದೀರ್ಘವಾಗಿದೆ ಎಂಬುದು ಎಂದೆಂದಿಗೂ ತಿಳಿದುಕೊಳ್ಳಬೇಕಾದ ಸತ್ಯ.
(ಪಿ. ಕೆ. ಗೆ ಹೇಳಿದ ಸಾರಸಂಗ್ರಹ)
ಹುಟ್ಟಿದಂದಿನಿಂದಲೂ ಮನುಷ್ಯನಿಗೆ ತನ್ನ ಹುಟ್ಟು ಹೇಗಾಯಿತು, ಏಕಾಯಿತು ಎಂಬ ಪ್ರಶ್ನೆ ಇದ್ದೇ ಇದೆ. ಅದೇ ಪ್ರಶ್ನೆ ವಿಸ್ತರಿಸಿ ಜಗತ್ತಿನ ಸೃಷ್ಟಿ ಯ ಬಗೆಗಿನ ಕುತೂಹಲವಾಗಿ ಕಾಡಿದ್ದಿದೆ. ಕುತೂಹಲ ಮನುಷ್ಯನ ಸಹಜ ಗುಣ. ಅದನ್ನು ತಣಿಸಲು ಅವನು ಹಲವು ಬಗೆಯ ಸಂಶೋಧನೆಗಳನ್ನು ಮಾಡುತ್ತ ಬಂದಿದ್ದಾನೆ. ಇತ್ತೀಚೆಗೆ "ದೇವಕಣ ಅಥವಾ ಹಿಗ್ಸ್ ಬೋಸೊನ್ ಅನಾವರಣ' ಕ್ಕೆ ಸಂಬಂಧಿಸಿದ ಸಂಶೋಧನೆಗೂ ಈ ಕುತೂಹಲವೇ ಮೂಲವಾಗಿದೆ. ಆದರೆ, ಇಂಥ ಸಂಶೋಧನೆಗಳು ಮನುಷ್ಯನ ಕುತೂಹಲವನ್ನು ತಣಿಸುವ ತತ್‌ಕ್ಷಣದ ಉತ್ತರಗಳಾದಾವೇ ಹೊರತು ಅವೇ ಪರಮಸತ್ಯಗಳಲ್ಲ ಎಂಬ ಅರಿವು ಬಹಳ ಮುಖ್ಯವಾದುದು. ಶ್ರೀಶಂಕರಾಚಾರ್ಯರು ಕೂಡಾ ತಮ್ಮ ಭಾಷ್ಯ ಗ್ರಂಥಗಳಲ್ಲಿ "ಸೃಷ್ಟಿಯ ಮೂಲವನ್ನು ಅರಿತುಕೊಳ್ಳುವುದು ಕಷ್ಟ. ಏಕೆಂದರೆ, ಅದರೊಳಗೆ ಯಾವ ಪರಮಾರ್ಥವಿಲ್ಲ. ಈ ನಿಟ್ಟಿನ ಅನ್ವೇಷಣೆಗಳು ಮನುಷ್ಯನ ಕುತೂಹಲವನ್ನು ತಣಿಸಿಕೊಳ್ಳಲಷ್ಟೇ ಸಹಕಾರಿಯಾಗಬಹುದು' ಎಂದು ಮಾರ್ಮಿಕವಾಗಿ ಉಲ್ಲೇಖೀಸಿದ್ದಾರೆ.
ಭಾರತೀಯ ಜ್ಞಾನ ಪರಂಪರೆಯಲ್ಲಿ ಜಗತ್ತಿನ ಸೃಷ್ಟಿಯ ಬಗ್ಗೆ ಬೇರೆ ಬೇರೆ ರೀತಿಯ ವಿವರಣೆಗಳಿವೆ. ಋಗ್ವೇದದ ಹಿರಣ್ಯಗರ್ಭ ಸೂಕ್ತದಲ್ಲಿ ಬಂಗಾರದ ಮೊಟ್ಟೆಯೊಂದು ಮೊತ್ತಮೊದಲು ಆವಿರ್ಭವಿಸಿತು ಎಂಬ ಉಲ್ಲೇಖವಿದೆ. ಆ ಬಂಗಾರದ ಮೊಟ್ಟೆಯು ಒಡೆದು ಮೇಲ್ಭಾಗ ಆಕಾಶವಾಗಿಯೂ ಕೆಳಭಾಗ ಭೂಮಿಯಾಗಿಯೂ ರೂಪುಗೊಂಡಿತು ಎಂದು ಹೇಳಲಾಗಿದೆ. ವಿಶ್ವಕರ್ಮಸೂಕ್ತದಲ್ಲಿ ಒಬ್ಬ ಶಿಲ್ಪಿಯು ಶಿಲ್ಪವನ್ನು ರೂಪಿಸುವಂತೆ ಪರಮಾತ್ಮನು ಈ ಜಗತ್ತನ್ನು ನಿರ್ಮಿಸಿದ ಎಂದು ಹೇಳಿದೆ. ಪುರುಷಸೂಕ್ತದಲ್ಲಿ ಪರಮಪುರುಷ ಅಥವಾ ಪರಮಾತ್ಮ ತಾನೇ ಯಜ್ಞದಲ್ಲಿ ಆಹುತಿಗೊಂಡು ಜಗತ್ತಿನ ಸೃಷ್ಟಿಗೆ ಕಾರಣನಾದ ಎಂಬ ಮಹಾರೂಪಕಾತ್ಮಕವಾದ ವಿವರಣೆಯಿದೆ. ಆ ಪರಮಾತ್ಮನ ಮನಸ್ಸಿನಿಂದ ಚಂದ್ರನೂ ಕಣ್ಣುಗಳಿಂದ ಸೂರ್ಯನೂ ಕಿವಿಗಳಿಂದ ದಿಕ್ಕುಗಳೂ ಹೊಕ್ಕಳಿನಿಂದ ಅಂತರಿಕ್ಷವೂ ಸಾಕಾರಗೊಂಡವು. ಪರಮಾತ್ಮ ಆಹುತಿಗೊಂಡ ಯಜ್ಞಕ್ಕೆ ವಸಂತ ಋತುವು ತುಪ್ಪವಾಗಿಯೂ ಗ್ರೀಷ್ಮನು ಸಮಿತ್ತು ಆಗಿಯೂ ಶರತ್ತು ಹವಿಸ್ಸು ಆಗಿಯೂ ಸಹಕರಿಸಿದವು ಇತ್ಯಾದಿ ವಿವರಗಳುಂಟು.
ಪ್ರಸಿದ್ಧವಾದ ನಾಸದೀಯ ಸೂಕ್ತವು ಸೃಷ್ಟಿಯು ಅಮೇಯವಾದುದು, ಅಚಿಂತ್ಯವಾದುದು ಎಂದು ಹೇಳುತ್ತದೆ. ಈ ಸೃಷ್ಟಿಯ ರಹಸ್ಯವನ್ನು ಸರ್ವಾಧ್ಯಕ್ಷನಾದ ಪರಮಾತ್ಮನಿಗೂ ಅರಿಯಲು ಸಾಧ್ಯವಾಗಲಿಲ್ಲವಂತೆ. ಆಗ ದೇಶ-ಕಾಲಗಳ ವಿಭಾಗ ಇರಲಿಲ್ಲ. ಇತ್ತು, ಇದೆ, ಇರಲಿದೆ ಹಾಗೂ ಅಲ್ಲಿ , ಇಲ್ಲಿ , ಎಲ್ಲಿ ಮುಂತಾದ ಕಲ್ಪನೆಗಳಿರಲಿಲ್ಲ. ಇಂಥ ಸಂಕೀರ್ಣ ಸ್ಥಿತಿಯಲ್ಲಿ ಜಗತ್ತಿನ ಮೂಲದ ರಹಸ್ಯವನ್ನು ಪರಮಾತ್ಮನಿಗೂ ತಿಳಿಯಲಾಗಲಿಲ್ಲ ಎನ್ನುವುದರ ಮೂಲಕ ಇದರ ನಿಗೂಢತೆಯನ್ನು ಇನ್ನಷ್ಟು ಗಾಢವಾಗಿಸಲಾಗಿದೆ.
ಸೃಷ್ಟಿಯ ಮೊದಲು ಬಯಕೆ ಇತ್ತು, ಆ ಬಯಕೆಯೇ ಸೃಷ್ಟಿಗೆ ಕಾರಣವಾಯಿತು ಎಂಬುದೊಂದು ವೇದೋಕ್ತಿ : ಕಾಮಸ್ತದಗ್ರೇ ಸಮವರ್ತತಾಧಿ.
ಬಯಕೆಗೆ ಕಾರಣವಾಗುವುದು ಮನಸ್ಸು . ಹಾಗಾಗಿ, ಮನಸ್ಸು ಎಲ್ಲದಕ್ಕೂ ಮೂಲ. ಆದುದರಿಂದಲೇ ಬಯಕೆಯನ್ನು "ಮನಸಿಜ' ಎನ್ನುವುದೂ ಇದೆ. ಬಯಕೆಯಿಂದಲೇ ಜಗತ್ತು. ಹಾಗಾಗಿ, ಕಾಮವೇ ಈ ಜಗತ್ತಿನ ಆದಿ. ಕಾಮಕ್ಕೆ ಮನಸ್ಸು ಮೂಲ. ಮನಸ್ಸಿಗೆ ಮೂಲ ಆದಿ ಚೈತನ್ಯ. ಈ ಚೈತನ್ಯವೇ ಸ್ವಯಂಭೂ. ಇದು ವೈದಿಕ ದರ್ಶನ.
ಉಪನಿಷತ್ತುಗಳು ಕೂಡಾ ಇದೇ ಧಾಟಿಯ ವಿವರಣೆಯನ್ನು ನೀಡುತ್ತವೆ. ಪುರಾಣಗಳಲ್ಲಿ ಬರುವ ಸೃಷ್ಟಿಯ ವಿವರಣೆಯಂತೂ ನಮಗೆಲ್ಲ ಪರಿಚಿತವಾಗಿರುವಂಥಾದ್ದು.
ಶಿವ ಪುರಾಣಗಳು ಶಿವನನ್ನೇ ಸೃಷ್ಟಿಯ ಮೂಲವೆಂದು ಕರೆದರೆ ವಿಷ್ಣಾ$Ìದಿ ಪುರಾಣಗಳಲ್ಲಿ ವಿಷ್ಣುವೇ ಎಲ್ಲದಕ್ಕೂ ಮೂಲ ಎಂದೂ ದೇವೀ ಪುರಾಣಗಳು ದೇವಿಯನ್ನು ಆತ್ಯಂತಿಕ ಶಕ್ತಿಯೆಂದು ಹೇಳಿವೆ.
ಸೃಷ್ಟಿಯಲ್ಲಿ ಸಾತ್ತಿ$Ìಕ ಸೃಷ್ಟಿ , ರಾಜಸ ಸೃಷ್ಟಿ ಮತ್ತು ತಾಮಸ ಸೃಷ್ಟಿಗಳೆಂಬ ಮೂರು ವಿಧಗಳಿವೆ. ಸಾತ್ತಿ$Ìಕ ಸೃಷ್ಟಿಯಲ್ಲಿ ದೇವತೆಗಳು ಉದ್ಭವಿಸಿದರು. ಮನಸ್ಸು , ಬುದ್ಧಿ , ಇಂದ್ರಿಯಗಳು ರಾಜಸ ಸೃಷ್ಟಿಯ ವಿಭಾಗಕ್ಕೆ ಸೇರುತ್ತವೆ. ಪಂಚ ಭೂತಾತ್ಮಕವಾದ ಶರೀರ, ಸ್ಥಾವರ- ಜಂಗಮ ಪ್ರಪಂಚವು ತಾಮಸ ಸೃಷ್ಟಿಗಳೆನಿಸಿಕೊಳ್ಳುತ್ತವೆ.
ಬೌದ್ಧ , ಜೈನ, ಸಾಂಖ್ಯ ಮುಂತಾದ ದರ್ಶನಗಳಲ್ಲಿಯೂ ಸೃಷ್ಟಿಯ ಬಗ್ಗೆ ಅನ್ಯಾನ್ಯ ಪರಿಕಲ್ಪನೆಗಳಿವೆ. ಸಾಂಖ್ಯ ದಾರ್ಶನಿಕರು ಹೇಳುವಂತೆ ಅವ್ಯಕ್ತವೇ ಸೃಷ್ಟಿಯ ಮೂಲ. ಅವ್ಯಕ್ತದಿಂದ ಮಹತ್ತಣ್ತೀ ಉದ್ಭವಿಸಿತು. ಅದೇ ಮುಂದಕ್ಕೆ ಅಹಂಕಾರ ತಣ್ತೀವಾಯಿತು. ಸೃಷ್ಟಿಯ ಬಳಿಕ ಸಂಭವಿಸುವ ಇಷ್ಟಾನಿಷ್ಟಗಳಿಂದಾಗಿ ರಾಗದ್ವೇಷಾದಿಗಳಂಥ ಒತ್ತಡಗಳು ಉದ್ಭವಿಸುತ್ತವೆ. ಇದು ದುಃಖಕ್ಕೆ ಕಾರಣವಾಗುತ್ತದೆ ಎಂಬುದು ಆಧ್ಯಾತ್ಮಿಕವಾದ ಒಂದು ವಿವರಣೆ.
ನಿಜವಾಗಿ ನಮ್ಮ ಆಷೇìಯ ಜ್ಞಾನ ಪರಂಪರೆಯಲ್ಲಿ ಜಗತ್ತು ಇದೆ ಮತ್ತು ಇಲ್ಲ ಎಂಬ ಎರಡೂ ವಿಚಾರಗಳು ಪ್ರಮುಖವಾಗಿರುವಂಥವು. ವೇದಾಂತ ಅಂತಿಮವಾಗಿ ಸೃಷ್ಟಿಯ ಅಸ್ತಿತ್ವವನ್ನು ನಿರಾಕರಿಸುತ್ತದೆ. ಶಾಂಕರ, ಬೌದ್ಧ ದರ್ಶನಗಳು ಜಗತ್ತು "ಪರಮಾರ್ಥವಾಗಿ ಇಲ್ಲ , ಅದು ಸಾಪೇಕ್ಷ ' ಎಂದೇ ಪ್ರತಿಪಾದಿಸುತ್ತವೆ. ಆದರೆ, ಜೈನ, ಶೈವ, ವೈಷ್ಣವ, ಶ್ರೀವೈಷ್ಣವ, ನ್ಯಾಯ-ವೈಶೇಷಿಕ ದರ್ಶನಗಳು ಜಗತ್ತು "ಇದೆ' ಎಂದು ಪ್ರತಿಪಾದಿಸುತ್ತವೆ. ವೇದಗಳ ಸಾರಗಳಂತಿರುವ ಉಪನಿಷತ್ತುಗಳು ಕೂಡ, "ಕಣ್ಣು ತೆರೆದರೆ ಜಗತ್ತು. ಕಣ್ಣು ಮುಚ್ಚಿದರೆ ಇಲ್ಲ' ಎಂದು ಮಾರ್ಮಿಕವಾಗಿ ಹೇಳುತ್ತವೆ. ಎಲ್ಲ ಇರುವುದು ನಮ್ಮ ಮನಸ್ಸಿನಲ್ಲಿ.
ಉದಾಹರಣೆಗೆ ನಮಗೆ ಪರಿಚಿತರಾದ ಯಾರೋ ಇದ್ದಾರೆ ಎಂದು ಭಾವಿಸೋಣ. ಅವರು ಪರಿಚಿತರಾಗಿರುವುದರಿಂದ ನಮ್ಮ ಮನಸ್ಸಿನಲ್ಲಿ ಇದ್ದಾರೆ. ಪರಿಚಿತರಾಗುವವರೆಗೂ ಅವರು ನಮ್ಮ ಜಗತ್ತಿನ ಭಾಗವಾಗಿರಲಿಲ್ಲ. ದೂರದ ಆಸ್ಟ್ರೇಲಿಯಾದಲ್ಲಿ ರಿಚರ್ಡ್‌ಸನ್ ಇದ್ದಾನಾದರೆ ಅವನು ನಮಗೆ ಪರಿಚಿತನಾಗಿದ್ದರೆ ನಮ್ಮ ಮನಸ್ಸು ಅವನನ್ನು ಊಹಿಸಿಕೊಳ್ಳುತ್ತದೆ. ಇಲ್ಲದಿದ್ದರೆ ಇಲ್ಲ. ಹಾಗಾಗಿ, ನಾವು ನಿದ್ರಿಸಿದಾಗ ಜಗತ್ತು ಇಲ್ಲ. ನಿದ್ದೆಯಿಂದೆದ್ದಾಗ ಮತ್ತೆ ಜಗತ್ತು ಸಾಕಾರಗೊಳ್ಳುತ್ತದೆ. ಇದನ್ನೇ ನಿತ್ಯ ಪ್ರಳಯ ಎನ್ನುವುದುಂಟು.
ಕ್ರಿಕೆಟ್‌ನ ಬಗ್ಗೆ ನನಗೆ ಆಸಕ್ತಿಯಿಲ್ಲ ಎಂದು ಭಾವಿಸುವಿರಾದರೆ ಸಚಿನ್ ತೆಂಡುಲ್ಕರ್ ಶತಕ ಪೂರೈಸಿದ ಸಂಗತಿ ನನಗೆ ಮುಖ್ಯವಾಗುವುದಿಲ್ಲ. ಅದನ್ನು ಕೇಳಿದ ನಾನು "ಹೌದಾ!' ಎಂದಷ್ಟೇ ಉದ್ಗರಿಸಿ ಸುಮ್ಮನಾಗುತ್ತೇನೆ. ಆದರೆ, ಅದರ ಬಗ್ಗೆ ಆಸಕ್ತಿ ಇರುವವರು ಸಚಿನ್ ತೆಂಡುಲ್ಕರ್‌ನ ಪ್ರತೀ ಆಟಗಳನ್ನು ಕಣ್ಣೆದುರು ತಂದುಕೊಳ್ಳುತ್ತ ವಿವರಿಸುತ್ತಾರೆ. ಹಾಗಾಗಿ, ಯಾವುದೇ ವಿಷಯದ ಕುರಿತ ನಿರಾಸಕ್ತಿ ಅಥವಾ ಉದಾಸೀನತೆ ಇದೆ ಎಂಬ ಮಾತ್ರಕ್ಕೆ ಆ ವಿಷಯದ ಅಸ್ತಿತ್ವವಿಲ್ಲ ಎಂಬುದಕ್ಕೆ ಅನ್ಯರ ದೃಷ್ಟಿಯಿಂದ ಪುರಾವೆಯಿಲ್ಲ. ಆದರೆ, ನಮ್ಮ ಮಟ್ಟಿಗಂತೂ ಅದೇ ಹೌದು. ಹೀಗಾಗಿ, ಇದೊಂದು ಅತ್ಯಂತ ಸಾಪೇಕ್ಷ ಪ್ರಪಂಚ. ಜಗತ್ತು, ಸೃಷ್ಟಿ ಇತ್ಯಾದಿಗಳನ್ನು ನಾವು ನಮ್ಮ ಊಹೆಯ ಪರಿಧಿಯೊಳಗೆ ತಂದುಕೊಂಡು ಪರಿಭಾವಿಸುತ್ತೇವೆಯೇ ಹೊರತು ಅವುಗಳ ಸ್ಥಿತಿಯ ಕುರಿತ ಆತ್ಯಂತಿಕ ಸತ್ಯ ಅದಾಗಿರಲಾರದು. ಈ ಉಕ್ತಿಯು "ಹಿಗ್ಸ್ ಬೋಸನ್' ಎಂಬ ದೇವಕಣದ ಸಂಶೋಧನೆಗೂ ಅನ್ವಯಿಸುತ್ತದೆ. ಸೃಷ್ಟಿ ಎಂಬುದು ನಿರಂತರ ಅಥವಾ ಸೃಷ್ಟಿಯ ಮೂಲ ನಿಗೂಢ ಎಂದು ವಿಶ್ವಾಸಪಡುವ ವೇದಾಂತಿಗಳ ದೃಷ್ಟಿಯಲ್ಲಿ ಇದು ತಲುಪಬೇಕಾದ ದೀರ್ಘ ಹಾದಿಯ ಒಂದು ಬಿಂದು ಮಾತ್ರ. ಅದರಾಚೆಗೂ ದಾರಿ ವಿಸ್ತಾರವಾಗಿದೆ. ಆದರೆ, ಆಧುನಿಕ ವಿಜ್ಞಾನಕ್ಕೆ ಮಾತ್ರ ಇಂಥ ಒಂದೊಂದು ಹಂತಗಳೂ ಮುಖ್ಯವೆನಿಸುತ್ತವೆ.
ಸೃಷ್ಟಿ-ದೃಷ್ಟಿ ವಾದ ಮತ್ತು ದೃಷ್ಟಿ-ಸೃಷ್ಟಿವಾದಗಳೆಂಬ ಎರಡು ವಾದಗಳಿವೆ. ಮೊದಲನೆಯದು ವಾಸ್ತವವಾದವಾದರೆ ಎರಡನೆಯದು ಆದರ್ಶವಾದ. ಜಗತ್ತಿದ್ದಂತೆ ನಾವು ಕಾಣುತ್ತೇವೆ ಎಂಬುದು ಮೊದಲನೇ ವಾದದ ತಾತ್ಪರ್ಯವಾದರೆ ನಾವು ಕಂಡಂತೆ ಜಗತ್ತು ಎಂಬುದು ಎರಡನೇ ವಾದದ ಸಾರಾಂಶ. ಸಾಂಪ್ರದಾಯಿಕ ಭೌತ ಶಾಸ್ತ್ರವು ಮೊದಲ ವಾದಕ್ಕೆ ಮಾದರಿಯಾದರೆ ಆಧುನಿಕ ಭೌತ ಶಾಸ್ತ್ರವು ಎರಡನೇ ವಾದಕ್ಕೆ ಮಾದರಿ. ಮೊದಲನೆಯದು ದ್ವೆ„ತ ದೃಷ್ಟಿ. ಎರಡನೆಯದು ಅದ್ವೆ„ತ ದೃಷ್ಟಿ. ಎರಡಕ್ಕೂ ಯುಕ್ತವಾದ ಬೆಲೆ ಉಂಟು, ಪ್ರಯೋಜನವೂ ಉಂಟು.
ಆ್ಯಟಮ್‌ನ್ನು ಪರಮಾಣು ಎಂದು ಕರೆದು ಇದು ಸೃಷ್ಟಿಯ ಆತ್ಯಂತಿಕ ಮೂಲವೆಂದು ವಿಜ್ಞಾನ ಹೇಳುತ್ತದೆ. ಆದರೆ, ಪರಮಾಣುವಿಗೆ ಆಕಾರ, ತೂಕ, ಆಯಾಮ ಎಲ್ಲವೂ ಇದೆ. ಆದರೆ, ನಮ್ಮ ಜ್ಞಾನಮೂಲಗಳಲ್ಲಿ ಹೇಳಲಾಗುವ ಪರಮಾಣು ವಿಜ್ಞಾನದ ಆ್ಯಟಮ್ ಅಲ್ಲ. ಅದು "ನಿರವಯವಿ'ಯಾದುದು. ಅಂದರೆ, ಅದಕ್ಕೆ ಆಕಾರವಿಲ್ಲ, ತೂಕವಿಲ್ಲ, ಆಯಾಮಗಳಿಲ್ಲ. ಅಂಥ ಎರಡು ಪರಮಾಣುಗಳು ಸೇರಿ ದ್ವೆ„ಣುಕವಾಗುತ್ತದೆ, ಮೂರು ದ್ವ„ಣುಕಗಳು ಸೇರಿ ತùಣುಕವಾಗುತ್ತದೆ, ನಾಲ್ಕು ತùಣುಕಗಳು ಸೇರಿ ಚತುರಣುಕಗಳಾಗುತ್ತವೆ. ಹೀಗೆ ಸಾವಯವಿಯಾಗಿ ಜಗತ್ತು ಮುಂದುವರಿಯುತ್ತದೆ ಎಂಬುದು ನ್ಯಾಯ-ವೈಶೇಷಿಕದ ವಿವರಣೆ. ಅಲ್ಲದೆ, ಹೀಗಾಗುವುದಕ್ಕೆ ಈಶ್ವರ ಸಂಕಲ್ಪವೇ ಕಾರಣ ಎಂದು ಆ ದರ್ಶನದ ನಂಬಿಕೆ. ಜೈನ ಗ್ರಂಥಗಳ ಪ್ರಕಾರ ಇದು ತನ್ನಿಚ್ಛೆಯಂತೆ ಸಂಭವಿಸುತ್ತದೆ. ಮೀಮಾಸಕರು ಜಗತ್ತನ್ನು ಅನಂತವಾಗಿ ಅನಾದಿಯಾಗಿ ಕಲ್ಪಿಸಿದ್ದಾರೆ. ವೇದಾಂತ ದರ್ಶನಗಳು ಈ ಅಳತೆಗೆ ಸಿಗದ ಸೃಷ್ಟಿಯನ್ನು "ನಾವು ನೆನೆದಾಗ ಇದೆ ಮರೆತಾಗ ಇಲ್ಲ' ಎಂದು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿವೆೆ