ಡಾ| ಎಂ. ಪಾಂಡುರಂಗ ಕಾಮತ್, ಪ್ರೊಫೆಸರ್ ಮತ್ತು ಮುಖ್ಯಸ್ಥರು,ಇಎನ್‌ಟಿ ವಿಭಾಗ | Jul 09, 2012
ಸೈನಸ್‌ಗಳು ಎಂದರೆ ಮುಖದ ಮೂಳೆಗಳಲ್ಲಿ, ಮೂಗಿನ ಸುತ್ತ ಇರುವ ಖಾಲಿ ಜಾಗಗಳು. ಇವು ಕೆನ್ನೆಯ ಮೂಳೆಗಳು, ಹಣೆಯ ಮೂಳೆಗಳ ತನಕ ಹಬ್ಬಿರುತ್ತವೆ. ಇವು ಉರಿಯೂತಕ್ಕೆ ಅಥವಾ ಸೋಂಕಿಗೆ ಒಳಗಾದಾಗ ಸೈನಸೈಟಿಸ್ ತೆೊಂದರೆ ಕಾಣಿಸಿಕೊಳ್ಳುತ್ತದೆ.

ಯಾವುದೇ ಕಾರಣದಿಂದ ಸೈನಸ್‌ಗಳಲ್ಲಿ ಗಾಳಿಯಾಡದೇ, ಅಲ್ಲಿನ ಲೋಳೆಯಂತಹ ಪದಾರ್ಥಗಳು ಹೊರ ಹೋಗದೇ ಇದ್ದರೆ, ಸೈನಸೈಟಿಸ್ ಕಾಣಿಸಿಕೊಳ್ಳಬಹುದು. ಸೈನಸ್‌ನ ದ್ವಾರಗಳು ತಮ್ಮ ಹೊರಪದರ ಅಥವಾ ಆಸುಪಾಸಿನ ಮೂಗಿನ ಸಿಂಬಳ ಹರಿಯುವ ಅಂಗಾಂಶಗಳು ಬಾತುಕೊಂಡಾಗ ಮುಚ್ಚಿಹೋಗುತ್ತವೆ. (ಉದಾ: ಶೀತ, ಅಲರ್ಜಿ, ಮೂಗಿಗೆ ಕಿರಿಕಿರಿ ಉಂಟುಮಾಡುವ ಪದಾರ್ಥಗಳಾದ Oಖಇ ಮೂಗಿನ ಸ್ಪ್ರೆàಗಳು, ಕೋಕ್, ಸಿಗರೇಟು ಸೇವನೆ.) ಮೂಗಿನ ಆಸುಪಾಸಿನಲ್ಲಿ ಗಡ್ಡೆಗಳು ಉಂಟಾದಾಗಲೂ ಸೈನಸ್ ದ್ವಾರ ಮುಚ್ಚಿಕೊಳ್ಳುವ ಸಾಧ್ಯತೆ ಇದೆ.
ಸೈನಸ್‌ಗಳಲ್ಲಿರುವ ಸಿಂಬಳದಂತಹ ಪದಾರ್ಥಗಳು ದಪ್ಪಗಟ್ಟಿದಾಗ, ಸಿಸ್ಟಿಕ್ ಫೈಬ್ರೋಸಿಸ್ ನಂತಹ ರೋಗಗಳಿಂದಾಗಿ, ಸಿಂಬಳದ ಲೋಳೆಯಲ್ಲಿ ನೀರಿನ ಅಂಶ ಕಡಿಮೆ ಆದಾಗ, ನೀರಿನಂಶ ಒಣಗಿಸುವ ಔಷಧಗಳನ್ನು ಸೇವಿಸಿದಾಗ ಅಥವಾ ಗಾಳಿಯಲ್ಲಿ ತೇವಾಂಶ ಕಡಿಮೆ ಆದಾಗ, ಸೈನÓéಗಳಲ್ಲಿ ಲೋಳೆ ದ್ರವದ ಚಲನವನ ಕುಂಠಿತಗೊಳ್ಳುತ್ತದೆ. ಲೋಳೆ ದ್ರವಗಳನ್ನು ಉತ್ಪಾದಿಸುವ ಕೋಶಗಳಲ್ಲಿ ಸಣ್ಣ ಕೂದಲಿನಂತಹ ಅಂಗಾಂಶಗಳು ಇರುತ್ತವೆ. ಅವು ಮುಂದೆ-ಹಿಂದೆ ಚಲಿಸುವ ಮೂಲಕ ಈ ದ್ರವ ಸೈನಸ್‌ನಿಂದ ಹೊರಬರುವಂತೆೆ ಮಾಡುತ್ತವೆ. ಈ ಕೂದಲಿನಂತಹ ಅಂಗಾಂಶಗಳು ಧೂಮಪಾನದಂತಹಾ ಮೂಗಿನ ಕಿರಿಕಿರಿಕಾರಕಗಳಿಂದಾಗಿ ಹಾನಿಗೊಂಡರೆ, ಲೋಳೆ ಪದಾರ್ಥಗಳು ಸೈನಸ್‌ನಿಂದ ಹೊರಬೀಳುವುದು ಕಷ್ಟವಾಗಿ, ಅಲ್ಲೇ ಉಳಿಯುತ್ತವೆ ಮತು¤ ಈ ನಿಂತುಬಿಟ್ಟ ಲೋಳೆ ದ್ರವಗಳು ಬ್ಯಾಕ್ಟೀರಿಯಾ ಅಥವಾ ಫಂಗಸ್‌ಗಳ ಸೋಂಕಿಗೆ ಹುಲುಸಾದ ಅವಕಾಶಗಳನ್ನು ಮಾಡಿಕೊಡುತ್ತವೆ.
ಲಕ್ಷಣಗಳು
ಸೈನಸ್‌ನ ಸಾಮಾನ್ಯ ಲಕ್ಷಣಗಳೆಂದರೆ, ತಲೆನೋವು, ಮುಖದಲ್ಲಿ ಮುಟ್ಟಿದರೆ ನೋವು; ಜೊತೆಗೆ ಜ್ವರ. ಇದಲ್ಲದೇ ಮೂಗಿನಲ್ಲಿ ಮಂದವಾದ ಬಣ್ಣರಹಿತ ದ್ರವಸ್ರಾವ, ಮೂಗು ಕಟ್ಟಿದಂತೆ ಭಾಸವಾಗುವುದು, ಗಂಟಲು ಕಟ್ಟುವುದು ಮತು¤ ಕೆಮ್ಮು ಇರಬಹುದು. ಕೆಲವರಲ್ಲಿ ಮುಂದೆ ಬಗ್ಗಿದಾಗ ತಲೆನೋವು ಅಥವಾ ಆ ಭಾಗಗಳು ಭಾರ ಇರುವಂತೆೆ ಭಾಸ ಆಗಬಹುದು. ಅಲರ್ಜಿ ಮೂಲದ ಸೈನಸೈಟಿಸ್‌ನಲ್ಲಿ ಕಣ್ಣಿನ ತುರಿಕೆ, ಪದೇಪದೇ ಸೀನು ಕಾಣಿಸಿಕೊಳ್ಳಬಹುದು.
ಚಿಕಿತೆೆÕ
ಇಪ್ಪತ್ತು ವರ್ಷಗಳ ಹಿಂದೆ ಸೈನಸ್ ಚಿಕಿತ್ಸಾ ತಜ್ಞರು ಸೋಂಕು ತಗುಲಿದ ಪ್ರತಿಯೊಂದು ಸೈನಸ್ ಕುಳಿಯನ್ನೂ ಪ್ರತ್ಯೇಕವಾಗಿ ಶಸ್ತ್ರಕ್ರಿಯೆಗೆ ಗುರಿಪಡಿಸಬೇಕಿತ್ತು. ಆದರೆ ಇಂದು ಎಂಡೊಸ್ಕೋಪಿ ವಿಧಾನದ ಮೂಲಕ ಸೈನಸ್ ಶಸ್ತ್ರಚಿಕಿತ್ಸೆಗೆ ಹೊಸ ದಿಕ್ಕು ನೀಡಲಾಗಿದೆ. ಈಗ ಸೈನಸ್ ಸರ್ಜನ್ ಎಥಾ¾¾ಯಿಡ್ ಸೈನಸ್ ಪ್ರದೇಶದ ಆಸ್ಟಿಯೋ ಮೀಟಲ್ ಕಾಂಪ್ಲೆಕ್ಸ್ ಎಂಬ ಭಾಗದ ಕಡೆ ಗಮನ ಹರಿಸಿದರೆ ಸಾಕು.
ಆಸ್ಟಿಯೋ ಮೀಟಲ್ ಕಾಂಪ್ಲೆಕ್ಸ್ ಎಂದರೆ ಎದುರಿನ ಸೈನಸ್, ಎಥಾ¾ಯಿಡ್ ಸೈನಸ್ ಹಾಗೂ ಮ್ಯಾಕ್ಸಿಲ್ಲರಿ ಸೈನಸ್‌ಗಳ ನಡುವೆ ಗಾಳಿ ಹಾಗೂ ಲೋಳೆಯತಹಾ ಪದಾರ್ಥಗಳ ಚಲನೆಗೆ ಹಾದಿ ಮಾಡಿಕೊಡುವ ಪರಸ್ಪರ ಹೊಂದಿಕೊಂಡಿರುವ ಸಂಪರ್ಕ ಇರುವ ಸೀಳುಗಳು. ಇಲ್ಲಿ ಅಡ್ಡಿ ಉಂಟಾದ ಬಳಿಕವೇ ಮ್ಯಾಕ್ಸಿಲ್ಲರಿ, ಫ್ರಂಟಲ್ ಹಾಗೂ ಎಥಾ¾ಯಿಡ್ ಸೈನಸ್‌ಗಳು ಸೋಂಕಿಗೆ ತುತ್ತಾಗುವುದು. ಈಗ ಎಂಡೋಸ್ಕೋಪಿ ಸರ್ಜರಿಯ ವೇಳೆ ಈ ಉಂಟಾಗಿರುವ ಅಡ್ಡಿಯನ್ನು ಮಾತ್ರ ತೆೆಗೆದು ಹಾಕಲಾಗುತ್ತದೆ. ಹಾಗಾಗಿ, ರೋಗಿ ಶೀಘ್ರ ಗುಣಮುಖನಾಗುವುದು ಸಾಧ್ಯವಾಗುತ್ತದೆ.
ಎಂಡೋಸ್ಕೋಪಿಕ್ ಸೈನಸ್ ಸರ್ಜರಿ ಅತ್ಯಾಧುನಿಕವಾದ, ಕನಿಷ್ಠ ಶಸ್ತ್ರಕ್ರಿಯೆ ಇರುವ, ಹೊರಗೆ ಗಾಯಗಳು ತೋರುವಂತಿರದ ಶಸ್ತ್ರಕ್ರಿಯಾ ವಿಧಾನ. ಇದಕ್ಕೆ ವಿಶಿಷ್ಟವಾದ ಚಿಕ್ಕ ಗಾತ್ರದ ಮೂಗಿನ ಎಂಡೋಸ್ಕೋಪ್‌ಗ್ಳನ್ನು ಬಳಸಲಾಗುತ್ತದೆ. ಬೇರೆ ವೈದ್ಯಕೀಯ ಚಿಕಿತ್ಸೆಗಳು ಮೂಗಿನ ಅಡ್ಡಿಯನ್ನು ಹೋಗಲಾಡಿಸಲು ವಿಫಲಗೊಂಡಾಗ, ಈ ವಿಧಾನವನ್ನು ಬಳಸಲಾಗುತ್ತದೆ. ಶಸ್ತ್ರಚಿಕಿತ್ಸೆಗೆ ಸ್ಥಳೀಯ ಅನಸ್ತೇಶಿಯಾ ಸಾಕೇ ಅಥವಾ ಪೂರ್ಣ ದೇಹಕ್ಕೆ ಅನಸ್ತೇಶಿಯಾ ಬೇಕೇ ಎಂಬುದನ್ನು ರೋಗಿಯ ಜೊತೆ ಚರ್ಚೆಯ ಬಳಿಕ ವೈದ್ಯರು ನಿರ್ಧರಿಸುತ್ತಾರೆ. ಈ ವಿಧಾನ ರೋಗಿ ಹೆಚ್ಚು ಗಾಯಗಳು, ಮುಖದ ವಿರೂಪ ಇಲ್ಲದೇ ಶೀಘ್ರ ಗುಣಮುಖನಾಗಲು ಸಹಕಾರಿ.
ಸರ್ಜರಿಗೆ ಮುನ್ನ ರೋಗಿ ರೋಗದ ಕೂಲಂಕಷ ತಪಾಸಣೆಗೆ ಒಳಗಾಗಬೇಕಾಗುತ್ತದೆ. ಸಿ.ಟಿ. ಸ್ಕ್ಯಾನ್ ಮೂಲಕ ವೈದ್ಯರು ಮೂಗಿನ ಸಂರಚನೆ ಹಾಗೂ ಸೈನಸ್ ತೆೊಂದರೆಯ ಅಗಾಧತೆಯನ್ನು ವಿವರವಾಗಿ ತಪಾಸಣೆೆ ನಡೆಸಬಲ್ಲರು. ಸಾಮಾನ್ಯ ಕ್ಷ-ಕಿರಣ ಬಿಂಬಗಳು ಕೆಲವೊಮ್ಮೆ ತಪಾಸಣೆೆಯ ಹಾದಿ ತಪ್ಪಿಸುವ ಸಾಧ್ಯತೆಗಳಿರುತ್ತವೆ. ಆದರೆ ಕಂಪ್ಯೂಟೆಡ್ ಟೊಮೊಗ್ರಫಿ ಬಿಂಬ ಬಹಳ ನಿಖರವಾಗಿರುತ್ತದೆ. ಇದಲ್ಲದೇ ಅಗತ್ಯವಿರುವ ಇತರ ಪ್ರಯೋಗಾಲಯ ತಪಾಸಣೆೆಗಳನ್ನೂ ನಡೆಸಲಾಗುತ್ತದೆ. ಚಿಕಿತ್ಸೆಯ ಬಗ್ಗೆ ರೋಗಿಯ ಜೊತೆ ಚರ್ಚಿಸಿ, ತಥ್ಯಗಳನ್ನು ಆತನಿಗೂ ಮನವರಿಕೆ ಮಾಡಿಕೊಡಲಾಗುತ್ತದೆ.
ಸೈನಸ್ ಸರ್ಜರಿ ಅತ್ಯಾಧುನಿಕ ಮಾನಿಟರಿಂಗ್ ಉಪಕರಣಗಳ ನೆರವಿನೊಂದಿಗೆ ನಡೆಯುತ್ತದೆ. ಎಂಡೋಸ್ಕೋಪಿಗೆ ಬಳಸುವ ಟೆಲೆಸ್ಕೋಪಿನ ಜೊತೆೆ ವೈದ್ಯಕೀಯ ವಿಡಿಯೋ ಕ್ಯಾಮರಾ ಅಳವಡಿಸಿ, ಬಿಂಬಗಳನ್ನು ವೈದ್ಯರು ಗಮನಿಸುತ್ತಾ ಶಸ್ತ್ರಕ್ರಿಯೆ ನಡೆಯುತ್ತದೆ. ಸರ್ಜರಿಗೆ ಸುಮಾರು ಒಂದರಿಂದ ಮೂರು ತಾಸುಗಳ ಅವ— ತಗುಲಬಹುದು.
ಶಸ್ತ್ರಕ್ರಿಯೆಯ ಬಳಿಕ ಇಂದು ಹಿಂದಿನಂತೆ ಉದ್ದವಾದ ಗೇಜ್ ಟೇಪುಗಳ ಬ್ಯಾಂಡೇಜ್ ಅಗತ್ಯವಿಲ್ಲ. ಬದಲಾಗಿ ಸರಳವಾದ ಜೆಲ್‌ನಂತಹ ಮೃದು ಪರಿಕರಗಳಿಂದ ಮಾಡಿದ ಸಣ್ಣ ಗಾತ್ರದ ಬ್ಯಾಂಡೇಜ್‌ಗಳು ಇಂದು ಲಭ್ಯವಿದೆ. ಇವು ರೋಗಿಗೂ ಆರಾಮದಾಯಕ.