ಮೂಡಬಿದಿರೆ : ಪುತ್ತಿಗೆ ಗ್ರಾಮದ ಸಂಪಿಗೆ ಎಂಬಲ್ಲಿನ ಸ.ನಂ. 511ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪು ಕಲ್ಲಿನ ಕೋರೆಗೆ ಮೂಡಬಿದಿರೆ ತಹಶೀಲ್ದಾರ್ ಕೆ. ಮುರಳೀಧರ ಅವರು ಸೋಮವಾರ ಧಾಳಿ ನಡೆಸಿ ಕೋರೆಯಲ್ಲಿ ನಡೆಯುತ್ತಿದ್ದ ಕಲ್ಲು ಕಡಿಯುವ ಕೆಲಸವನ್ನು ನಿಲ್ಲಿಸಿದರು.ಸಂಪಿಗೆಯ ನಾಗೇಶ್, ಭಾಸ್ಕರ ಕೋಟ್ಯಾನ್ ಮತ್ತು ಕುಟ್ಟಿ ಮೂಲ್ಯ ಅವರು ಈ ಕಲ್ಲಿನ ಕೋರೆಯು ಕೆಲವು ಸಮಯದಿಂದ ನಡೆಯುತ್ತಿತ್ತೆನ್ನಲಾಗಿದೆ. ಕೋರೆಯ ಜಮೀನು ಮತ್ತು ಕಲ್ಲು ಕಡಿವ ಕುರಿತಾದ ದಾಖಲೆಪತ್ರಗಳನ್ನು ಐದು ದಿನಗಳ ಒಳಗಾಗಿ ತಮಗೆ ಸಲ್ಲಿಸಬೇಕು ಎಂದು ಸಂಬಂಧಿತರಿಗೆ ತಹಶೀಲ್ದಾರ್ ನೋಟೀಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.