Thursday, May 23, 2013
Last Updated: 6:31:38 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಎಲ್ಲರ ಕತೆಯೂ ಶಾಂತತ್ತೆಯದೇ...
    • ಎಲ್ಲರ ಕತೆಯೂ ಶಾಂತತ್ತೆಯದೇ...

      • ಎಸ್‌. ಕೆ. | Jul 13, 2012

        ಅಕ್ಕಾ... ಕೇಳಿದ್ಯಾ... ಶಾಂತತ್ತೆಗೆ ಹುಷಾರಿಲ್ಲ... ಆಸ್ಪತ್ರೆಗೆ ಸೇರಿÕದಾರೆ...!' ಮೊನ್ನೆ ತಂಗಿ ಫೋನ್‌ನಲ್ಲಿ ಹೇಳಿದಾಗ ನಂಬುವುದಕ್ಕೇ ಪ್ರಯಾಸವಾಯ್ತು. ಇತ್ತೀಚೆಗೆ ಊರಿಗೆ ಹೋಗಿದ್ದಾಗ ಕೂಡಾ ಸಮಾರಂಭವೊಂದರಲ್ಲಿ ಕಂಡು ಅವರ ಜೊತೆ ಮಾತಾಡಿದ್ದೆ. ಎಪ್ಪತ್ತರ ಇಳಿವಯಸ್ಸಲ್ಲೂ ಖಳೆ ಖಳೆಯಾಗಿ ಶೋಭಿಸುತ್ತಾ ಉತ್ಸಾಹದಲ್ಲಿ ಊರಲ್ಲೇನು ಕಾರ್ಯಕ್ರಮವಿದ್ದರೂ ಹಾಜರಾಗಿ ಎಲ್ಲರೊಂದಿಗೂ ನಗುನಗುತ್ತಾ ಬೆರೆಯುವ ಸ್ನೇಹಜೀವಿ ಆಕೆ. ಛೆ... ಇದ್ದಕ್ಕಿದ್ದಂತೆ ಏನಾಗಿ ಹೋಯೊ¤à...!
        ""ಬಚ್ಚಲು ಮನೇಲಿ ಕಾಲು ಜಾರೊRಂಡು ಬಿದ್ದು ಸೊಂಟಕ್ಕೆ, ಕಾಲಿಗೆ ಏಟಾಗಿದೆಯಂತೆ... ಪ್ಲಾಸ್ಟರ್‌, ಟ್ರ್ಯಾಕ್ಷನ್‌ ಹಾಕಿ ಆಸ್ಪತ್ರೇಲಿ ಮಲಗ್ಸಿದಾರೆ! ತುcತುc... ಪಾಪ... ಈ ಪ್ರಾಯದಲ್ಲಿ ಹೀಗಾಗ್ಬಾರ್ದಿತ್ತು ಕಣೇ...!' ತಂಗಿ ಸವಿವರಣೆ ನೀಡಿದ್ದಳು.

        ಹಳ್ಳಿ ಮನೇಲಿ ಯಾವತ್ತೂ ಮಗನ ಜೊತೆಗಿರೋ ಶಾಂತತ್ತೆ ಮಗಳ ಬಲವಂತಕ್ಕೆ ಅವಳಿರೋ ಮಂಗಳೂರಿಗೆ ಬಂದಿದ್ದರು. "ಲಾಲ್‌ಬಾಗ್‌'ನ ವಸತಿ ಸಮುತ್ಛಯದ ಮನೆಯೊಂದರಲ್ಲಿ ವಾಸವಾಗಿರೋ ಶಾಂತತ್ತೆಯ ಮಗಳು-ಅಳಿಯ ಉದ್ಯೋಗದ ನಿಮಿತ್ತ ಬೆಳಿಗ್ಗೆ ಒಂಬತ್ತು ಗಂಟೆಗೆ ಮನೆ ಬಿಟ್ಟರೆ ಮೊಮ್ಮಕ್ಕಳೂ ಅದೇ ಸಮಯಕ್ಕೆ ಸ್ಕೂಲು-ಕಾಲೇಜಿಗೆ ಹೊರಡುತ್ತಾರೆ. ಸಂಜೆ ಎಲ್ಲರೂ ಮನೆ ಸೇರುವವರೆಗೂ ಶಾಂತತ್ತೆ ಏಕಾಂಗಿ. ಸದ್ಯ, ಈ ಘಟನೆ ನಡೆದದ್ದು ಭಾನುವಾರದಂದು. ಪರಿವಾರದ ಸದಸ್ಯರೆಲ್ಲ ಮನೆಯಲ್ಲೇ ಇದ್ದರು. ಶಾಂತತ್ತೆ ಬಚಾವ್‌... ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗೋ ವ್ಯವಸ್ಥೆಯಾಯ್ತು. ಯಾರೂ ಇಲೆªà ಇರೋ ಹೊತ್ತಲ್ಲೇನಾದ್ರೂ ಹೀಗಾಗಿದ್ರೆ ಪರಿಸ್ಥಿತಿ ಇನ್ನೂ ಕಠಿಣವಾಗಿರಿ¤ತ್ತು!

        ಇಂದಿನ ದಿನಗಳಲ್ಲಿ ಅದೂ ನಗರಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಉದ್ಯೋಗದ ಸಲುವಾಗಿ ದಿನವಿಡೀ ಮನೆಯ ಹೊರಗೇ ಇರೋದು ಸರ್ವಸಾಮಾನ್ಯ. ಅವರವರ ಕ್ಷೇತ್ರದಲ್ಲಿ ಅವರವರದೇ  ಚಟುವಟಿಕೆಗಳಲ್ಲಿ ನಿರತರಾಗಿರುವವರಿಗೆ ಬದುಕಿನ ಆಚೆಈಚೆ ನೋಡುವ ತಾಳ್ಮೆ-ವ್ಯವಧಾನವಿರದಷ್ಟು ಯಾಂತ್ರಿಕವಾಗಿರುತ್ತದೆ ಇಂದಿನ ದಿನಗಳು. ಎಷ್ಟೋ ಮನೆಗಳಲ್ಲಿ ಇವರನ್ನೇ ಅವಲಂಬಿಸಿರೋ ವೃದ್ಧ ಮಾತಾಪಿತರು, ಅತ್ತೆ-ಮಾವ ಇರುತ್ತಾರೆ. ಜೊತೆಗಿದ್ದವರಿಗೆ ತೀರಾ ಕಿರಿಕಿರಿ ಅನ್ನಿಸದಿದ್ದ ರೀತಿ ಜೀವಿಸಬೇಕಾದರೆ ವಯಸ್ಸಾದವರು, ಅಶಕ್ತರು ಏನು ಮಾಡಬೇಕು ? ಹೇಗೆ ತಮ್ಮನ್ನು ತಾವೇ ರಕ್ಷಿಸಿಕೊಳ್ಳಬೇಕು? ಈ ನಿಟ್ಟಿನಲ್ಲಿ ಕೆಲವು ನಿಯಮಗಳನ್ನಾದರೂ ಪಾಲಿಸೋಣವೆ? ಅವುಗಳನ್ನು ನಿತ್ಯ ದಿನಚರಿಯಲ್ಲಿ ಅಳವಡಿಸಿಕೊಳ್ಳೋಣವೇ?

        . ತಮ್ಮ ಆರೋಗ್ಯ, ವಯಸ್ಸು , ತಾಕತ್ತಿಗೆ ಹೊಂದಿಕೊಳ್ಳುವ ಕೆಲಸ-ಕಾರ್ಯಗಳನ್ನಷ್ಟೇ ಮಾಡಿ. "ನಾ ಮೊದಲು ಎಲ್ಲಾ ಮಾಡ್ತಿರ್ಲಿಲ್ವಾ... ಸುಮ್ನೆà ಕೂತ್ಕೊಂಡು ಹ್ಯಾಗಿರ್ಲಿ...?' ಅನ್ನೋ ಅತೀ ಉತ್ಸಾಹ ತೋರಿಸಿ ಅಪಾಯ ತಂದುಕೊಳ್ಳೋದು ಬೇಡ. (ಉದಾ: ಭಾರ ಎತ್ತೋದು, ಮೇಜು, ಮಂಚ, ಬೀರು ಮುಂತಾದುವುಗಳನ್ನು ಆಚೀಚೆ ಜರುಗಿಸೋದು, ಸ್ಟೂಲ್‌, ಕುರ್ಚಿಯ ಮೇಲೆ ನಿಂತು ಬಲೆ, ಕಸ ಹಚೊÂàದು, ಸ್ವತ್ಛ ಮಾಡೋದು, ಶೆಲ್ಫಿನಿಂದ ಭಾರವಾದ ವಸ್ತುಗಳನ್ನು ಕೆಳಗಿಳಿಸೋದು... ಇತ್ಯಾದಿ)
        . ಕೂತಲ್ಲಿಂದ, ಮಲಗಿದಲ್ಲಿಂದ ದಡಬಡ ಎದ್ದು ಕಾಲಿಗೆ ಪಂಚೆ ತೊಡರಿಕೊಂಡೋ ಸೀರೆಯ ನೆರಿಗೆ ಸಿಕ್ಕಿಯೋ ಎಡವಿ ಬಿದ್ದು ಕೈಕಾಲು ಮುರೊRಂಡವರಿದ್ದಾರೆ. ಫೋನ್‌ ಬಂದರೂ ಅಷ್ಟೆ , ಓಡಬೇಕಾಗಿದ್ದೇನೂ ಇಲ್ಲ. ಸ್ಥಿರವಾಣಿ ಹತ್ತಿಪ್ಪತ್ತು ಸಲವಾದ್ರೂ ಟ್ರಿಣ್‌ಗುಟ್ಟುತ್ತೆ. ಇಲ್ಲಾ... ಬೇಕಾದೋರು ಪುನಃ ಪ್ರಯತ್ನ ಮಾಡೇ ಮಾಡ್ತಾರೆ ಬಿಡಿ!

        .ಹೆಚ್ಚಾಗಿ ಈಗಿನ ಮನೆಗಳಲ್ಲೆಲ್ಲಾ ನೆಲಕ್ಕೆ ಟೈಲ್ಸ್‌ ಹಾಸಿರುತ್ತಾರೆ. ಬಗೆ ಬಗೆಯ ರಂಗು, ವಿನ್ಯಾಸದಿಂದ ಮಿರಿಮಿರಿ ಮಿಂಚುವ ಇವುಗಳ ಮೇಲೆ ನೀರು, ಪಾನೀಯ, ಎಣ್ಣೆ , ಹಣ್ಣಿನ ಸಿಪ್ಪೆ ಇತ್ಯಾದಿ ಚೆಲ್ಲಿದ್ದರೆ ಬೇಗನೇ ಗೊತ್ತಾಗೋದಿಲ್ಲ. ನಡೆಯುವಾಗ ಹೆಜ್ಜೆಯಗತಿ ನಿಧಾನವಾಗಿರೋದೇ ಪ್ರಧಾನವಾಗಲಿ! ಆದಷ್ಟು ಇಂತಹ ತೊಂದರೆಗಳು ನಿಮ್ಮಿಂದಾಗದಂತೆ ಜಾಗರೂಕರಾಗಿರಿ. ಅಕಸ್ಮಾತ್‌ ಆದಲ್ಲಿ ತತ್‌ಕ್ಷಣ ಸ್ವತ್ಛ ಮಾಡೋದನ್ನು ಮರೆಯಬೇಡಿ.

        .ಮನೆಯಲ್ಲೊಬ್ಬರೇ ಇದ್ದಾಗ ಟಿ.ವಿ. ನೋಡುತ್ತಲೋ ಓದುತ್ತಲೋ ಏನಾದರೂ ಬಾಯಲ್ಲಿ ಮೆಲ್ಲುತ್ತಾ ಇರೋ ಚಪಲ ಕೆಲವರಿಗೆ. ವಯಸ್ಸಾದ ಮೇಲೆ ಚಟುವಟಿಕೆಗಳೂ ಸೀಮಿತವಾಗಿದ್ದಲ್ಲಿ ಬಾಯಿ ಬಯಸಿದರೂ ದೇಹ ಮೊದಲಿನಂತೆ ಎಲ್ಲವನ್ನೂ ಜೀರ್ಣಿಸಿಕೊಳ್ಳುವುದಿಲ್ಲ! ಇದರಿಂದ ನೀವು ಅನಾರೋಗ್ಯಪೀಡಿತರಾಗುತ್ತೀರಲ್ಲದೆ ಜೊತಗಿದ್ದವರನ್ನು ತೊಂದರೆಗೀಡು ಮಾಡುತ್ತೀರಿ ಅನ್ನುವುದು ನೆನಪಿರಲಿ.

        .ಈಗಾಗಲೇ ರಕ್ತದೊತ್ತಡ, ಮಧುಮೇಹ, ಮಂಡಿ, ಹೃದಯ ಸಂಬಂಧಿ ಕಾಯಿಲೆಗಳಿಗೆ ದಿನಾ ಮಾತ್ರೆ ನುಂಗೋ "ನಿತ್ಯ ರೋಗಿ' ನೀವಾಗಿದ್ದರಂತೂ ಖಂಡಿತವಾಗಿ ವೈದ್ಯರು ಹೇಳಿದಂತೆ ಮಾತ್ರೆ ಸೇವಿಸುವುದನ್ನು ಬಿಡಬೇಡಿ. ಡಾಕುó ಹೇಳಿದ "ಪಥ್ಯದೂಟ'ಕ್ಕೆ ಬದ್ಧರಾಗಿರೋದು ಅಷ್ಟೇ ಮುಖ್ಯ.
        .ಮನೆಯಲ್ಲಿದ್ದಾಗ ತಿಂಡಿ, ಊಟ, ಪಾನೀಯಕ್ಕಾಗಿ ಅಡುಗೆ ಮನೆಗೆ ಹೊಕ್ಕರೂ ಹೊರಗೆ ಬರುತ್ತಾ ಗ್ಯಾಸ್‌ ಸರಿಯಾಗಿ ಆರಿಸಿದ್ದೀರಾ ಇಲ್ಲವಾ ಅಂತಾ ಮತ್ತೂಮ್ಮೆ ಪರೀಕ್ಷಿಸಿಕೊಳ್ಳಿ. ವಿದ್ಯುತ್‌ ಉಪಕರಣಗಳನ್ನು ಬಳಸಿದರೂ ಅಷ್ಟೆ. ಕೆಲಸವಾದ ತಕ್ಷಣ ಆಫ್ ಮಾಡಲು ಮರೆಯಬೇಡಿ.

        . ಮನೆಯಲ್ಲಿ ಒಬ್ಬರೇ ಇದ್ದಾಗ ಹೊರಗಿನಿಂದ ಕರೆಗಂಟೆ ಮೊಳಗಿದರೂ ಅಷ್ಟೆ . ಕಿಟಕಿ - ಕೀ ಹೋಲ್‌ನ ಮೂಲಕ ನೋಡಿ ಪರಿಚಿತರನ್ನು ಕಂಡರಷ್ಟೇ ಬಾಗಿಲು ತೆರೆಯಿರಿ. ಕೇಬಲ್‌ ಅಪರೇಟರ್‌, ಯಾವುದೇ ಬಿಲ್‌ ಕೊಡೋಕೆ ಬರೋರು, ಮನೆಯ ಬಾಗಿಲಿಗೆ ಬಂದು ಪಾತ್ರೆ, ಬಟ್ಟೆ ಮಾರಾಟ ಮಾಡೋರು... ಯಾವ ಹುತ್ತದಲ್ಲಿ ಯಾವ ಹಾವೋ... ಈ ವೇಷ ಹೊತ್ತು ಬರೋ "ಗೋಮುಖ ವ್ಯಾಘ್ರ'ರಿಂದಲೇ ಒಂಟಿ ಮನೆಯಲ್ಲಿರೋರ ಮೇಲೆ ಹಲ್ಲೆ , ಕೊಲೆ, ದರೋಡೆ-ಸುಲಿಗೆ ನಡೆದಿರುವುದು ದಿನಾ ಪೇಪರ್‌, ಟಿ.ವಿ.ಗಳಲ್ಲಿ ಕಂಡು-ಕೇಳಿ ಬರುವುದು ಗೊತ್ತೇ ಇದೆ!

        .ವಿನಾ ಕಾರಣ ಮನೆಯಲ್ಲಿರೋ ಎಳೇ ಸದಸ್ಯರ ವ್ಯವಹಾರ, ವಿಚಾರಗಳಲ್ಲಿ ಮೂಗು ತೂರಿಸಬೇಡಿ. ಅಭಿಪ್ರಾಯ, ಅನಿಸಿಕೆ, ಸಲಹೆ, ಉಪದೇಶಗಳನ್ನು ಯಾರಾದರೂ ಬಯಸಿದರಷ್ಟೇ ನೀಡಲು ಹೋಗಿ.
        .ಸಂಜೆಯ ಹೊತ್ತು ಲಘು ನಡಿಗೆ-ವಾಯುವಿಹಾರ ಒಳ್ಳೆಯ ಅಭ್ಯಾಸ. ಸ್ತ್ರೀಯಾಗಿದ್ದಲ್ಲಿ ಕಿವಿ-ಕತ್ತು-ಕೈಗಳಿಗೆ ತೊಡುವ ಚಿನ್ನದಾಭರಣ ಒಡವೆಗಳ ಬಗ್ಗೆ ನಿಗಾ ಇರಲಿ. (ಇವುಗಳು ಆದಷ್ಟು ಮಿತವಾಗಿರಲಿ. ನೋಡೋರ ಕಣ್ಣು ಕುಕ್ಕುವಂತಹ ಪ್ರದರ್ಶನವಂತೂ ಬೇಡವೇ ಬೇಡ...!) ಹಾಗೇ ದುಡ್ಡಿರೋ ಪರ್ಸ್‌, ಮೊಬೈಲ್‌ ಫೋನ್‌ ತೆಗೊಂಡರೂ ಅಷ್ಟೆ... ಮಳೆ-ಗಾಳಿ, ಗಲಾಟೆ-ಮುಷ್ಕರ, ಕತ್ತಲೆಯಿರೋ ಸಂದರ್ಭಗಳಲ್ಲಿ "ವಾಕ್‌' ಹೋಗದಿರೋದೇ ವಾಸಿ. ಮನೆಯೊಳಗೇ ನಾಲ್ಕು ಹೆಜ್ಜೆ ನಡೆಯೋದೋ, ಲಘು ವ್ಯಾಯಾಮಗಳನ್ನು ಮಾಡೋದು ಕ್ಷೇಮ.

        .ಓದೋದು, ಸಂಗೀತ ಆಲಿಸೋದು, ಕೈಲಾದ ಸಣ್ಣಪುಟ್ಟ ಕೆಲಸ ಕಾರ್ಯ ಮಾಡೋದು, ಟಿ.ವಿ.ಯಲ್ಲಿ ಪ್ರಸಾರವಾಗೋ ಒಳ್ಳೆ ಕಾರ್ಯಕ್ರಮಗಳನ್ನು ವೀಕ್ಷಿಸೋದು ಮಾತ್ರವಲ್ಲದೆ ಮೊದಲಿಂದಲೂ ರೂಢಿಸಿಕೊಂಡು ಬಂದ ಒಳ್ಳೆ ಹವ್ಯಾಸ, ಅಭಿರುಚಿಗಳನ್ನು ಸಂಸಾರ ತಾಪತ್ರಯ, ಕೆಲಸದ ಒತ್ತಡದಿಂದ ಬದಿಗೊತ್ತಿದ್ದರೆ ಅವುಗಳಿಗೆ ಪುನಃಶ್ಚೇತನ ಕೊಟ್ಟರೆ ಒಂಟಿತನದಲ್ಲೂ ಸುಖೀಯಾಗಿರಬಹುದು!
        .ಸುಮ್ಮನೇ ಕೂರೋದು, ಮಲಗೋದು... ಇಲ್ಲವೇ ಹಿಂದೆಂದೋ ನಡೆದ ಕಹಿ ಘಟನೆಗಳು, ಕಷ್ಟ-ನಷ್ಟ , ನೋವು ಸಂಕಟಗಳನ್ನೆಲ್ಲಾ ನೆನೆದು ಚಿಂತಿಸುತ್ತ ಕಾಲಹರಣ ಮಾಡೋದು. ಇದರಿಂದೇನು ಲಾಭ-ಸುಖ? ಜೀವನದ ಗತದಾಳದೊಳಗೆ ಸುಖ-ಸಂತೋಷ, ನಗು ಖುಷಿ ಕೊಟ್ಟ ಹಲವಾರು ಅವಿಸ್ಮರಣೀಯ ಪ್ರಸಂಗಗಳೂ ಇರಬಹುದಲ್ಲವೆ? ಒಳ್ಳೆ ಸ್ನೇಹಿತರು, ಬಂಧುಗಳ ಜೊತೆಗಿನ ಒಡನಾಟದಲ್ಲಿ ಸಂದುಹೋದ ಉತ್ತಮ ಅಂಶಗಳೂ ನೆನಪಿನ ಹೊತ್ತಗೆಯಲ್ಲಿ ಭದ್ರವಾಗಿರಬಹುದಲ್ಲವೆ? ಅವುಗಳನ್ನೂ ಪುನಃ ಮೆಲುಕು ಹಾಕುತ್ತಾ ಮನದಲ್ಲಿ ಆಹ್ಲಾದ ಕಾಣಬಹುದು. ತಮ್ಮ ಪಾಡಿಗೆ ದೇವರ ನಾಮ ಹಾಡಿಕೊಳ್ಳುವುದು, ದೇವರ ಭಜನೆ ಮಾಡೋದು, ಸ್ತೋತ್ರ, ಶ್ಲೋಕಗಳನ್ನು ಪಠಿಸುವುದರಿಂದಲೂ ಮನಸ್ಸು ಅರಳುತ್ತದೆ. ಪ್ರಶಾಂತವಾಗುತ್ತದೆ. (ಮೌನ ಧ್ಯಾನ ಮಾಡಲು ಸಾಧ್ಯವಾದರೆ ಅತ್ಯುತ್ತಮ!)
        ಬಾಳ ದಾರಿ ಬಹಳಷ್ಟು ಸವೆಸಿದ್ದಾಗಿದೆ. ನಮ್ಮ ಕರ್ತವ್ಯ-ಜವಾಬ್ದಾರಿ, ಹೊಣೆಗಾರಿಕೆಗಳನ್ನು ಸಾಕಷ್ಟರ ಮಟ್ಟಿಗೆ ಸಮರ್ಪಕವಾಗಿ ನಿರ್ವಹಿಸಿದ್ದಾಗಿದೆ. ಮುಂದೆಲ್ಲವೂ ದೈವಚಿತ್ತವಿದ್ದಂತಾಗಲಿ ಅನ್ನೋ ತೃಪ್ತಿ, ನಿರ್ಲಿಪ್ತ ಚಿತ್ತವಿರಲಿ. ಮುಂದಿನ ದಿನಗಳು ನೆಮ್ಮದಿಯಿಂದ ಸಾಗಲಿ. ಬಾಳ ಸಂಜೆ ಸಹನೀಯವಾಗಿರಲಿ ಅಲ್ಲವೆ?

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      • Copyright @ 2009 Udayavani.All rights reserved.
      • Designed & Hosted By 4cplus