Udayavani | Jul 15, 2012
ಕಾಪು: ಮುಗ್ಧತೆ ನಿಸರ್ಗದ ಕೊಡುಗೆ. ಪ್ರಕೃತಿ ಮಾತೆಯನ್ನು ಪೂಜಿಸುವ ರೀತಿಯಲ್ಲಿ ಪೂಜೆಗೊಳ್ಳುವ ಮಹಿಳೆಯರಿಗೆ ಸೌಂದರ್ಯ, ಮುಗ್ಧತೆ, ನಾಚಿಕೆ ಮತ್ತು ಆಶ್ಚರ್ಯ ಪ್ರಕೃತಿಯ ಕೊಡುಗೆಯೇ ಆಗಿದೆ. ಇವೆಲ್ಲವೂ ಒಂದಾಗಿ ಇರುವ ಮಹಿಳೆಯರನ್ನು ನೊಡುವುದೇ ಒಂದು ಕುತೂಹಲ ಎಂದು ಖ್ಯಾತ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಹೇಳಿದರು.
ಉಚ್ಚಿಲ ಶೀÅ ನಾರಾಯಣಗುರು ಕ್ಷೇತ್ರದ ತುಂಬೆ ಕರ್ಕೇರ ಸಭಾಭವನದಲ್ಲಿ ಕಾಪು ಜೇಸಿಐನ ಆತಿಥ್ಯದಲ್ಲಿ ರವಿವಾರ ಜರಗಿದ ಜೇಸಿ ವಲಯ 15ರ ಜೆಸಿರೆಟ್ ಮತ್ತು ಯುವ ಜೇಸಿ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು ಮಹಿಳಾ ಸಬಲೀಕರಣ ಮತ್ತು ಸಮಾಜದ ಇಂದಿನ ಪರಿಸ್ಥಿತಿಯ ಕುರಿತು ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಮಹಿಳೆ ಪುರುಷರಿಗೆ ಸಮಾನಾಗಿ ಬೆಳೆಯುತ್ತಿದ್ದಾಳೆ. ಆದರೆ ಸಮಾಜದಲ್ಲಿ ಆಕೆ ಬೆಳೆಯುತ್ತಾ ಹೋದಂತೆ ಆಕೆಯ ಮೇಲಿನ ದೃಷ್ಟಿಕೋನವೂ ಬದಲಾಗುತ್ತಿದೆ. ಮಹಿಳೆಗೆ ಸಮಾಜದಲ್ಲಿ ಮಾತೆಯ ಸ್ಥಾನಮಾನವಿದ್ದು, ಇದನ್ನು ಉಳಿಸಿಕೊಳ್ಳಬೇಕಾದರೆ ಪ್ರಾಕೃತಿಕವಾಗಿ ದೊರಕಿರುವ ವೈಶಿಷ್ಟÂತೆಗಳನ್ನು ಆಕೆ ಉಳಿಸಿಕೊಳ್ಳುವುದು ಅನಿವಾರ್ಯ ಎಂದರು.
ಕರಾವಳಿ ಜಿಲ್ಲೆಗಳು ಧಾರ್ಮಿಕ ಕ್ಷೇತ್ರಗಳ ದೀÌಪವಿದ್ದಂತೆ : ಕರಾವಳಿ ಜಿಲ್ಲೆಗೆ ಭಾರತದ ಭೂಪಟದಲ್ಲಿ ವಿಶೇಷ ಸ್ಥಾನಮಾನವಿದೆ. ಇಲ್ಲಿನ ಧಾರ್ಮಿಕ ಕೇಂದ್ರಗಳು ವಿಶ್ವ ವಿಖ್ಯಾತಿ ಹೊಂದಿವೆ. ಇಲ್ಲಿ ವಿವಿಧ ಸಮುದಾಯಗಳ ಜನರು ಏಕತೆಯಲ್ಲಿ ಅನೇಕತೆ ಪ್ರದರ್ಶಿಸುತ್ತಿದ್ದಾರೆ. ಕರಾವಳಿ ಸರ್ವಧರ್ಮಿಯರ ಸಂಗಮ ಕ್ಷೇತ್ರವಾಗಿದ್ದು, ಧಾರ್ಮಿಕ ಕ್ಷೇತ್ರಗಳ ದೀÌಪವಿದ್ದಂತೆ ಎಂದು ಹಂಸಲೇಖ ಬಣ್ಣಿಸಿದರು.
ದುಡ್ಡು ಮತ್ತು ಬ್ಲಿಡ್ ಒಂದೆಡೆ ಇರಬಾರದು: ಸಮಾಜದಲ್ಲಿ ದುಡ್ಡೇ ದೊಡ್ಡಪ್ಪ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ದುಡ್ಡು ಮತ್ತು ಬ್ಲಿಡ್ಡು ಒಂದೆಡೆ ಇದ್ದಾಗ ಸಮಾಜ ಹಾಳಾಗುತ್ತದೆ. ದುಡ್ಡು ಒಂದೇ ಕಡೆ ಇದ್ದರೆ ಅದು ದೇಶದ ಪ್ರಗತಿಗೆ ಮಾರಕವಾಗಿ ಬಿಡುತ್ತದೆ. ಇನ್ನು ಮನುಷ್ಯನ ದೇಹದಲ್ಲಿ ಬ್ಲಿಡ್ ಒಂದೇ ಕಡೆ ಇದ್ದರೆ ಅದು ಆತನ ದೇಹವನ್ನು ಕೆಡಿಸುತ್ತದೆ. ಈ ನಿಟ್ಟಿನಲ್ಲಿ ದುಡ್ಡು ಮತ್ತು ಬ್ಲಿಡ್ಡು ಒಂದೆಡೆ ಇರಬಾರದೆನ್ನುವುದು ನನ್ನ ಅಭಿಪ್ರಾಯ ಎಂದರು.
ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನಾ. ಸತ್ಯ ಮಾತನಾಡಿ, ಕರಾವಳಿ ಜಿಲ್ಲೆಗಳು ಸಂಪದ್ಭರಿತವಾದ ಜಿಲ್ಲೆಗಳಾಗಿವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಸಹಿತ ಎಲ್ಲ ಪ್ರಕಾರಗಳ ಕಲೆಗಳಿಗೂ ಪ್ರೋತ್ಸಾಹ ನೀಡುವ ಕರಾವಳಿ ಜಿಲ್ಲೆ ದೇಶಕ್ಕೆ ಮಾದರಿ ಎಂದರು.
ಸಾಹಿತ್ಯ ನಿರ್ದೇಶಕ ಹಂಸಲೇಖ ಮತ್ತು ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನಾ. ಸತ್ಯ ಅವರನ್ನು ಮುಖ್ಯ ಅತಿಥಿಯಾಗಿದ್ದ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಸಮ್ಮಾನಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ಅನುಪ್, ಯುವ ಜೇಸಿ ವಿಭಾಗದ ರಾಷ್ಟ್ರೀಯ ನಿರ್ದೇಶಕ ಸದಾನಂದ ನಾವಡ, ಜೇಸಿರೆಟ್ ವಿಭಾಗದ ನಿರ್ದೇಶಕಿ ಪೂರ್ಣಿಮಾ ನಾಯಕ್, ಜೇಸಿಐನ ನಿಕಟ ಪೂರ್ವ ವಲಯಾಧ್ಯಕ್ಷ ಆಶಿತ್ ಕುಮಾರ್, ಪೂರ್ವ ವಲಯಾಧ್ಯಕ್ಷ ವೈ. ಸುಕುಮಾರ್, ವಲಯ ಉಪಾಧ್ಯಕ್ಷ ರಾಜೇಶ್ ಆಚಾರ್ಯ, ಪ್ರಕಾಶ್ ಪೂಜಾರಿ, ಪ್ರಕಾಶ್ ನೆಲ್ಯಾಡಿ, ಅಬ್ದುಲ್ ಅಜೀಜ್, ಕಾಪು ಜೇಸಿಐನ ಅಧ್ಯಕ್ಷ ಶಿವಣ್ಣ ಬಾಯಾರ್, ಸಮ್ಮೇಳನದ ಕಾರ್ಯಕ್ರಮ ನಿರ್ದೇಶಕ ರಮೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.