Friday, May 24, 2013
Last Updated: 12:53:17 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಾಸ್‌ ಟಯ್ಲರ್‌ ಶತಕ ವ್ಯರ್ಥ
    • ವಿಂಡೀಸ್‌ಗೆ 24 ರನ್‌ ಜಯ
    • ಮಾರ್ಲಾನ್‌ ಸಾಮ್ಯುಯೆಲ್ಸ್‌ ಅವರ ಭರ್ಜರಿ ಹೊಡೆತದ ಶೈಲಿ .

      • Udayavani | Jul 15, 2012

        ಸೇಂಟ್‌ ಕಿಟ್ಸ್‌ : ಆಲ್‌ರೌಂಡ್‌ ಆಟದ ಪ್ರದರ್ಶನ ನೀಡಿದ ವೆಸ್ಟ್‌ಇಂಡೀಸ್‌ ತಂಡವು ನ್ಯೂಜಿಲಂಡ್‌ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ 24 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಪಡೆದ ವೆಸ್ಟ್‌ಇಂಡೀಸ್‌ ಸರಣಿಯನ್ನು ತನ್ನದಾಗಿಸಿಕೊಂಡಿದೆ.


        ಅಗ್ರ ಕ್ರಮಾಂಕದ ಬ್ಯಾಟ್ಸ್‌ಮೆನ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡರೂ ಸ್ಯಾಮುಯೆಲ್ಸ್‌, ಕೈರನ್‌ ಪೊಲಾರ್ಡ್‌ ಅವರ ಸಮಯೋಚಿತ ಆಟದಿಂದಾಗಿ ವೆಸ್ಟ್‌ಇಂಡೀಸ್‌ 49.5 ಓವರ್‌ಗಳಲ್ಲಿ 264 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ನಾಯಕ ರಾಸ್‌ ಟಯ್ಲರ್‌ ಅವರ ಶತಕದ ಹೊರತಾಗಿಯೂ ನ್ಯೂಜಿಲಂಡ್‌ ತಂಡವು 49.3 ಓವರ್‌ಗಳಲ್ಲಿ 240 ರನ್ನಿಗೆ ಸರ್ವಪತನ ಕಂಡು ಸೋಲನ್ನು ಒಪ್ಪಿಕೊಂಡಿತು. ಸರಣಿಯ ಅಂತಿಮ ಪಂದ್ಯ ಸೋಮವಾರ ನಡೆಯಲಿದೆ.


        ಗೆಲುವಿನ ಕ್ರೆಡಿಟ್‌ ವೆಸ್ಟ್‌ಇಂಡೀಸ್‌ಗೆ ಸಲ್ಲುತ್ತದೆ. ಒತ್ತಡದಲ್ಲಿಯೂ ಅವರು ಚೆನ್ನಾಗಿ ಆಡಿದ್ದಾರೆ ಎಂದು ಶತಕವೀರ ರಾಸ್‌ ಟಯ್ಲರ್‌ ಹೇಳಿದ್ದಾರೆ. ನಮ್ಮ ಆರಂಭ ಉತ್ತಮವಾಗಿತ್ತು. ಆದರೆ ಒಳ್ಳೆಯ ಅವಕಾಶವನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದವರು ತಿಳಿಸಿದರು.

        ಕೆಳ ಕ್ರಮಾಂಕದ ಆಟಗಾರರು ಉತ್ತಮ ಬ್ಯಾಟಿಂಗ್‌ ನೀಡಿರುವುದು ಒಳ್ಳೆಯ ವಿಷಯವಾಗಿದೆ. ಸರಣಿ ಸಾಗುತ್ತಿದ್ದಂತೆ ನ್ಯೂಜಿಲಂಡ್‌ನ‌ ನಿರ್ವಹಣೆ ಕೂಡ ಉತ್ತಮಗೊಳ್ಳುತ್ತಿದೆ. ಆದರೂ ನಾವು ತಾಳ್ಮೆ ಪ್ರದರ್ಶಿಸಿರುವುದು ಉತ್ತಮವಾಗಿದೆ ಎಂದು ವೆಸ್ಟ್‌ಇಂಡೀಸ್‌ ನಾಯಕ ಡ್ಯಾರನ್‌ ಸಮ್ಮಿ ಹೇಳಿದ್ದಾರೆ.


        ನ್ಯೂಜಿಲಂಡಿನ ರನ್‌ ವೇಗಕ್ಕೆ ಕಡಿವಾಣ ಹಾಕಿದ ಸುನೀಲ್‌ ನಾರಾಯಣ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸುನೀಲ್‌ ತನ್ನ 10 ಓವರ್‌ಗಳ ದಾಳಿಯಲ್ಲಿ 20 ರನ್ನಿಗೆ ಎರಡು ವಿಕೆಟ್‌ ಕಿತ್ತಿದ್ದರು.

        ವಿಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಮೊದಲ 7 ಓವರ್‌ ಮುಗಿದಾಗ ತಂಡ 3 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ಮಾರ್ಲಾನ್‌ ಸಾಮ್ಯುಯೆಲ್ಸ್‌ ತಂಡವನ್ನು ಆಧರಿಸಿದರು. ತಾಳ್ಮೆಯ ಆಟದ ಪ್ರದರ್ಶನ ನೀಡಿದ ಸಾಮ್ಯುಯೆಲ್ಸ್‌ 46 ರನ್‌ ಹೊಡೆದರು. ಅವರ ವಿಕೆಟ್‌ ಪತನದ ಬಳಿಕ ಮತ್ತೆ ನ್ಯೂಜಿಲಂಡ್‌ ಮೇಲುಗೈ ಸಾಧಿಸಿತು. 105 ರನ್ನಿಗೆ 5ನೇ ವಿಕೆಟ್‌ ಪತನವಾಗಿತ್ತು.

        ಆದರೆ ಡೆವೋನ್‌ ಥಾಮಸ್‌, ಡ್ಯಾರನ್‌ ಸಮ್ಮಿ ಮತ್ತು ಆಂದ್ರೆ ರಸೆಲ್‌ ಅವರ ಬೆಂಬಲದಿಂದ ಕೈರನ್‌ ಪೊಲಾರ್ಡ್‌ ಪಂದ್ಯದ ಚಿತ್ರಣ ಬದಲಿಸಿದರು. ವೈಯಕ್ತಿಕವಾಗಿ ಅರ್ಧಶತಕ ದಾಖಲಿಸಿದ ಅವರು ತಂಡದ ಮೊತ್ತ 250ರ ಗಡಿ ದಾಟಲು ನೆರವಾದರು.

        8ನೇ ಓವರಿನಲ್ಲಿ 1 ವಿಕೆಟಿಗೆ 50 ರನ್‌ ಗಳಿಸುವ ಮೂಲಕ ನ್ಯೂಜಿಲಂಡ್‌ ಉತ್ತಮ ಆರಂಭ ಪಡೆದಿದ್ದರೂ ಆ ಬಳಿಕ ವೇಗಿ ಟಿನೂ ಬೆಸ್ಟ್‌ ದಾಳಿಗೆ ಕುಸಿಯಿತು. ರಾಸ್‌ ಟಯ್ಲರ್‌ ಶತಕ ದಾಖಲಿಸಿದ್ದು ನ್ಯೂಜಿಲಂಡ್‌ ಇನ್ನಿಂಗ್ಸ್‌ನ ವಿಶೇಷವಾಗಿತ್ತು. 115 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 5 ಸಿಕ್ಸರ್‌ ನೆರವಿನಿಂದ 110 ರನ್‌ ಹೊಡೆದರು.

        ಟಿನೊ ಬೆಸ್ಟ್‌ 46 ರನ್ನಿಗೆ 4 ವಿಕೆಟ್‌ ಪಡೆದರೆ ಅಂತಿಮ 10 ಓವರ್‌ಗಳಲ್ಲಿ ನ್ಯೂಜಿಲಂಡ್‌ ಗೆಲ್ಲಲು 70 ರನ್‌ ಬೇಕಾಗಿದ್ದ ವೇಳೆ ದಾಳಿಗೆ ಇಳಿದ ಸುನೀಲ್‌ ನಾರಾಯಣ್‌ ಎರಡು ವಿಕೆಟ್‌ ಕಿತ್ತು ಮಿಂಚಿದರು.

        ಸಂಕ್ಷಿಪ್ತ ಸ್ಕೋರು:

        ವೆಸ್ಟ್‌ಇಂಡೀಸ್‌ 49.5 ಓವರ್‌ಗಳಲ್ಲಿ 264 ಆಲೌಟ್‌ (ಸಾಮ್ಯುಯೆಲ್ಸ್‌ 46, ಕೈರನ್‌ ಪೊಲಾರ್ಡ್‌ 56, ಡೆವೋನ್‌ ಥಾಮಸ್‌ 37, ಡ್ಯಾರನ್‌ ಸಮ್ಮಿ 26, ಆಂದ್ರೆ ರಸೆಲ್‌ 27, ಟಿಮ್‌ ಸೌಥಿ 53ಕ್ಕೆ 3, ಜೇಕಬ್‌ ಓರಮ್‌ 42ಕ್ಕೆ 3);

        ನ್ಯೂಜಿಲಂಡ್‌ 49.3 ಓವರ್‌ಗಳಲ್ಲಿ 240 ಆಲೌಟ್‌
        (ನಿಕೋಲ್‌ 35, ರಾಸ್‌ ಟಯ್ಲರ್‌ 110, ಟಿ. ಲಾಥಮ್‌ 32, ಟಿನೊ ಬೆಸ್ಟ್‌ 46ಕ್ಕೆ 4, ಸುನೀಲ್‌ ನಾರಾಯಣ್‌ 20ಕ್ಕೆ 2).

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus